Thursday, August 30, 2018

ಭಾಗ್ಯದ ಲಕ್ಷ್ಮೀ ಬಾರಮ್ಮ (1986)

ಚಲನಚಿತ್ರ : ಭಾಗ್ಯದ ಲಕ್ಷ್ಮೀ ಬಾರಮ್ಮ (1986)
ಸಂಗೀತ : ಸಿಂಗೀತಂ ಶ್ರೀನಿವಾಸರಾವ್ 
ರಚನೆ : ಚಿ. ಉದಯಶಂಕರ್ 
ಗಾಯಕರು : ಡಾ. ರಾಜಕುಮಾರ್ 
ನಿರ್ದೇಶನ: ಸಿಂಗೀತಂ ಶ್ರೀನಿವಾಸರಾವ್ 
ನಟರು: ಡಾ. ರಾಜಕುಮಾರ್, ಮಾಧವಿ   


ಯಾವ ಕವಿಯು ಬರೆಯಲಾರ‌
ಒಲವಿನಿಂದ, ಕಣ್ಣೋಟದಿಂದ‌
ಹೃದಯದಲ್ಲಿ ನೀ ಬರೆದ‌
ಈ ಪ್ರೇಮ ಗೀತೆಯ..

ಯಾವ ಕವಿಯು ಬರೆಯಲಾರ...

ನಿನ್ನ ಕವಿತೆ ಎಂಥ ಕವಿತೆ
ರಸಿಕರಾಡೊ ನುಡಿಗಳಂತೆ
ಮಲ್ಲೆ ಹೂವು ಅರಳಿದಂತೆ
ಚಂದ್ರಕಾಂತಿ ಚೆಲ್ಲಿದಂತೆ
ಜೀವ ಜೀವ ಅರಿತು ಬೆರೆತು
ಸುಖವ ಕಾಣುವಂತೆ... 

ಯಾವ ಕವಿಯು 

ಪ್ರೇಮ ಸುಮವು ಅರಳುವಂತೆ
ಪ್ರಣಯ ಗಂಧ ಚೆಲ್ಲುವಂತೆ
ಕಂಗಳೆರಡು ದುಂಬಿಯಾಗಿ
ಭ್ರಮರಗೀತೆ ಹಾಡುವಂತೆ
ಜೇನಿಗಾಗಿ ತುಟಿಗಳೆರಡು
ಸನಿಹ ಸೇರುವಂತೆ ... 

ಯಾವ ಕವಿಯು

No comments:

Post a Comment