ತಂಗಾಳಿ ತಂದೆಯಾ ನನ್ನ ಬಾಳಲಿ
ಚಲನಚಿತ್ರ: ಲವ್ ಗುರು (2009)
ಸಾಹಿತ್ಯ: ವಿಜಯಶಂಕರ್
ಸಂಗೀತ: ಜೋಷುವಾ ಶ್ರೀಧರ್
ಗಾಯಕರು: ಬೆನ್ನಿ ದಯಾಳ್
ನಿರ್ದೇಶನ: ಪ್ರಶಾಂತ್ ರಾಜ್
ನಟರು: ರಾಧಿಕ ಪಂಡಿತ್, ತರುಣ್ ಚಂದ್ರ
ತಂಗಾಳಿ ತಂದೆಯಾ ನನ್ನ ಬಾಳಲಿ
ಸಂಗಾತಿ ಆಗುವ ಸವಿಗನಸಲಿ
ಕೈಜಾರಿ ಹೋದೆಯ ನನ್ನ ಪ್ರೀತಿಯ
ಮಣ್ಣಲ್ಲಿ ಹೂತೆಯ ನಗುತ ನಗುತ
ಕುಂತು ನಿನ ಕಾಲ ಕೆಳಗೆ
ನಾ ಹೂವು ಹಿಡಿದಂತ ಘಳಿಗೆ
ನಿನಗೇಕೆ ನನ್ನ ಪ್ರೀತಿ ಗೊತ್ತೇ
ಆಗದೆ ಹೋಯ್ತು
ಎಷ್ಟೊಂದು ಸಾರಿ ನಾ
ಮನಸನ್ ತೆರೆದೆ ನಿನ್ಮುಂದೆ
ಒಂದೊಂದು ಸಾರಿನು
ಅರಿಯದೇಕೆ ನೀ ಹೋದೆ
ಈ ಹಣೆಯಲ್ಲಿ ನಿನ್ನ ಒಲವ ಗೀಚಿಲ್ಲ ಬ್ರಹ್ಮ
ನಿಂಗೆ ಅನಿಸಿಲ್ಲವೇನು ನಿಂಗಾಗೆ ಬಂದೋನು ನಾನು
ಈ ನನ್ನ ಕಣ್ಣ ಭಾಷೆ ಓದೇ ಇಲ್ಲ ನೀನೇಕೆ
ಈ ಗಾಳಿ ಕಾಣಲ್ಲ ಅನುಭವವುಂಟು ಸುಳ್ಳಲ್ಲ
ಈ ಪ್ರೀತಿ ಹೀಗೇಕೆ ಹೇಳದೆ ತಿಳಿಯೋದೇ ಇಲ್ಲ
ಈ ನಿಜ ಅರಿಯೋ ಮುನ್ನ ಕಳೆದು ಕುಂತೆ ನಾ ನಿನ್ನ
******************************************************************************
ಯಾರು ಕೂಡ ನಿನ್ನ ಹಾಗೆ
ಸಾಹಿತ್ಯ: ವಿಜಯಶಂಕರ್
ಗಾಯಕರು: ಕಾರ್ತಿಕ್, ಬೆನ್ನಿ ದಯಾಳ್
ಓ....ಹೋ......
ಯಾರು ಕೂಡ ನಿನ್ನ ಹಾಗೆ
ಪೀಡಿಸಿಲ್ಲ ನನ್ನ ಹೀಗೆ
ನಾನು ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ
ಯಾವುದು ಕನಸು ಯಾವುದು ನನಸು
ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ
ಎಚ್ಚರ ಉಳಿದೆ ಇಲ್ಲ
ನೂರೆಂಟು ರೀತಿಯ ನೆನಪಿನ ಬಳ್ಳಿ
ಮೆಲ್ಲಗೆ ಮೂಡಿದೆ ಎದೆಯಲ್ಲಿ
ಎಂದೆಂದೂ ಬಾಡದ ಕನಸಿನ ಹೂವು
ನಿನ್ನ ಧ್ಯಾನದಲಿ ಅರಳಿ
ಕಣ್ಣಲೆ ಮಾತಾಡುತ ಸರಿಯಾಗಿ ಹೇಳು
ಇದು ಏನು ಅಂತ
ನಿಂತಲ್ಲಿ ಕೂತಲ್ಲಿ ಸಂತಸದಂತ
ಸುಂದರ ಮೋಹಕೆ ಮರುಳಾದೆ
ಬೇರೇನೂ ಬೇಕಿಲ್ಲ ನಿನ್ನನು ಕಂಡು
ಎಲ್ಲ ತಾರೆಗಳ ತೊರೆದೆ
ಮಾತನು ಮರೆಮಾಚುತ ಸವಿಯಾದ
ಭಾವ ನಿನಗೂನು ಬಂತ..
********************************************************************************
No comments:
Post a Comment