ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಚಲನಚಿತ್ರ: ಬೆಳ್ಳಿ ಕಾಲುಂಗುರ (1992)ಸಾಹಿತ್ಯ: ಪ್ರೊ. ದೊಡ್ಡ ರಂಗೇಗೌಡ
ಗಾಯಕರು: ಎಸ್ ಪಿ ಬಾಲಸುಬ್ರಹ್ಮಣ್ಯಂ
ಸಂಗೀತ: ಹಂಸಲೇಖ
ನಿರ್ದೇಶನ: ಕೆ. ವಿ. ರಾಜು
ನಟರು: ಮಾಲಾಶ್ರಿ, ಸುನಿಲ್, ತಾರಾ
ಓ...
ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ ಕೇಳು ನೀನು
ಧೂರಮೆಯ ಆಧಾರ ಈ ಕಲೆಯ ಸಿಂಗಾರ
ಬಂಗಾರ ತೇರೇರಿ ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು
ಕೇಳಿಸದೆ .....
ಗಾಳಿಯೇ ಆದೇಶ ಮೇಘವೇ ಸಂದೇಶ
ಪ್ರೇಮಕೆ ಸಂಕೇತ ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿವೆ
ನೀನಿರೆ ರಂಗೋಲಿ ಸಂಗಾತಿ ಸುವ್ವಾಲಿ
ನವರಸವು ಮೈತಾಳಿ ಜೀವನದ ಜೋಕಾಲಿ
ಯುಗಯುಗದಲು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು
ಕೇಳಿಸದೆ.....
******************************************************************************
ಬೆಳ್ಳಿ ಕಾಲುಂಗುರ
ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್ ಜಾನಕಿ, ಚಿತ್ರಾ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ ಓ.....
ಲಾಲಾ.....
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ
ಬಂಧನವಾಗಿದೆ ಬಂಧನವಾಗಿದೆ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬಾಳ ಕಡಲಲಿ ಪ್ರೇಮ ನದಿಗಳ
ಸಂಧಿ ಸಮಯದಲಿ
ಮಿಂಚುವ ಮಿನುಗುವ ಸಾಕ್ಷಿ
ಈ ಕಾಲುಂಗುರ
ನಾದಗಡಲಲಿ ವೇದ ಘೋಷದ
ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಆದಿ ಕಾಲದ ವೇದ ಮೂಲದ ಸತಿಯ ಆಭರಣ
ಚೆಲುವಿಗೆ ಒಲವಿಗೆ ಗೌರವ ಕಾಲುಂಗುರ
ಐದು ಮುತ್ತುಗಳಾರು ಮುಡಿವಳೋ ಅವಳೆ ಮುತ್ತೈದೆ
ಸಿಂಧೂರ ಮಾಂಗಲ್ಯ ಮೂಗುತಿ ಓಲೆ ಕಾಲುಂಗುರ
ಹೃದಯ ತೆರೆದು ಉಸಿರೊಡೆಯ ತರದು
ಗಂಡು ಹೆಣ್ಣಿಗೆ ನೀಡುವ ಆಣೆಯ ಉಡುಗೊರೆ
ಬೆಳ್ಳಿ ಕಾಲುಂಗುರ.......
*********************************************************************************
ಒಂದೇ ಒಂದು ಕಣ್ಣಾ
ಸಾಹಿತ್ಯ: ಹಂಸಲೇಖ ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ನಿನ್ನ ನೋವ ಜೋತೆಯೆಂದು ನಾನಿರುವೆ ನಿನ್ನಾಣೆ
ರಾತ್ರಿಯ ಬೆನ್ನಿಗೆ,ಬೆಳ್ಳನೆ ಹಗಲು,
ಚಿಂತೆಯ ಹಿಂದೆಯೇ ಸಂತಸ ಇರಲು
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ಚಿಂತೆಯಲ್ಲೇ ನಿನ್ನಾ ಮನ ದೂಡಿದರೆ ನಿನ್ನಾಣೆ
ನೋವಿನ ಬಾಳಿಗೆ,ಧ್ಯರ್ಯವೇ ಗೆಳೆಯಾ,
ಪ್ರೇಮದ ಜೋಡಿಗೆ, ತಾಕದು ಪ್ರಳಯಾ,
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ದಾಹ ನೀಗೋ ಗಂಗೆಯೇ ದಾಹ ಎಂದು ಕುಂತರೆ,
ಸುಟ್ಟು ಹಾಕೋ ಬೆಂಕಿಯೇ ತನ್ನ ತಾನೇ ಸುಟ್ಟರೆ,
ದಾರಿ ತೋರೋ ನಾಯಕ ಒಂಟಿ ಎಂದು ಕೊಂಡರೆ,
ಧ್ಯರ್ಯ ಹೇಳೋ ಗುಂಡಿಗೆ ಮೂಕವಾಗಿ ಹೋದರೆ,
ಸೂರ್ಯನಿಲ್ಲ ಪೂರ್ವದಲ್ಲಿ,ಚಂದ್ರನಿಲ್ಲ ರಾತ್ರಿಯಲಿ,
ದಾರಿಯಿಲ್ಲ ಕಾಡಿನಲ್ಲಿ,ಆಸೆಯಿಲ್ಲ ಬಾಳಿನಲಿ,
ನಂಬಿಕೆ ತಾಳುವ,ಅಂಜಿಕೆ ನೀಗುವಾ,ಶೋಧನೆ ಸಮಯ,ಚಿಂತಿಸಿ ಗೆಲ್ಲುವಾ,
ಒಂದೇ ಒಂದು ಕಣ್ಣಾ ಬಿಂದು ಜಾರಿದರೆ ನನ್ನಾಣೆ
ಮೂಡಣದಿ ಮೂಡಿ ಬಾ, ಸಿಂದೂರವೇ ಆಗಿ ಬಾ,
ಜೀವಧಾರೆ ಆಗಿ ಬಾ,ಪ್ರೇಮ ಪುಷ್ಪ ಸೇರು ಬಾ,
ಬಾನಗಳ ತುಂಬಿ ಬಾ,ಆಸೆಗಳ ತುಂಬು ಬಾ,
ಸಿಂಗಾರವೇ ತೇಲಿ ಬಾ,ಸಂತೋಷವಾ ನೀಡು ಬಾ,
ಪ್ರೇಮದಾಸೆ ನನ್ನಾ ನಿನ್ನಾ ಬಂದಿಸಿದೆ ನನ್ನಾಣೆ,
ಸಂತಸದ ಕಣ್ಣಾ ರೆಪ್ಪೆ ಸಂದಿಸಿದೆ ನನ್ನಾಣೆ,
ದೇವರ ಗೂಡಿಗೂ ಬಿನ್ನಗಳಿರಲು, ಬಾಳಿನ ನಡೆಗೂ ಅಡ್ಡಿಗಳಿರಲು,
ಭೂಮಿಯಾಗಿ ನಾನಿರುವೆ,ಚಿಂತೆ ಬೇಡ ನನ್ನಾಣೆ,
ನಿನ್ನಾ ನೋವ ಮೇರುಗಿರಿಯ,ನಾ ಹೊರುವೆ ನಿನ್ನಾಣೆ
*********************************************************************************
ಹೆಣ್ಣು : ಮಾಮ ಮಾಮ ಚಂದಮಾಮಾ
ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು
ರಾಮಾ ರಾಮಾ ಗೊಂಬೆ ರಾಮಾ
ಕೋಡಿ ಬೀಳೋ ಕೆರೆಯ ಹಾಗೆ
ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು
ರಾಮಾ ರಾಮಾ ಗೊಂಬೆ ರಾಮಾ
ಕೋಡಿ ಬೀಳೋ ಕೆರೆಯ ಹಾಗೆ
ಬಂದು ಸೇರೋ ಕಣಿವೆಯಾಗೆ
ಮೋಟುದ್ದ ಜಡೆಯನು
ನಾನೀಟುದ್ದ ಹೆಣೆದನು
ಸ್ಯಾವಂತಿ ಮುಡಿದೆನು ಚಿನ್ನಾ
ಸ್ಯಾವಂತಿ ಮುಡಿದೆನು ಚಿನ್ನಾ
ಹಾಲ್ಗೆನ್ನೆಗರಿಸಿನ
ಕೈ ಗೋರಂಟಿ ಬರಿಸಿ ನಾ
ಕೈ ಗೋರಂಟಿ ಬರಿಸಿ ನಾ
ಹಾಲ್ ಕಾಸಿ ಕಾದೆನು ನಿನ್ನಾ
ರಾತ್ರಿ ಪೂರಾ ಕಾದು ಕಾದು ಯವ್ವಿ ಯವ್ವಿಯೋ
ಕಾಣ್ತಾವಲ್ಲೋ ನಾಕು ಐದು ಯವ್ವಿ ಯವ್ವಿಯೋ
ಯಾಕೆ ಕುಂತೆ ಏನು ಚಿಂತೆ ಪ್ರೀತಿಸೋ ನನ್ನಾ..
ರಾತ್ರಿ ಪೂರಾ ಕಾದು ಕಾದು ಯವ್ವಿ ಯವ್ವಿಯೋ
ಕಾಣ್ತಾವಲ್ಲೋ ನಾಕು ಐದು ಯವ್ವಿ ಯವ್ವಿಯೋ
ಯಾಕೆ ಕುಂತೆ ಏನು ಚಿಂತೆ ಪ್ರೀತಿಸೋ ನನ್ನಾ..
ಗಂಡು : ಮಾಮ..ಮಾಮ.ಬಂದ ನೋಡು ಗೊಂಬೆ ರಾಮಾ ತಂದ ನೋಡು ಪ್ರೀತಿ ಪ್ರೇಮಾ..
ಹೆಣ್ಣು : ಮೈಯಾಗೆ ಕಚಗುಳಿ ಇದೇನಪ್ಪಾ ಚಳುವಳಿ ನಿಂದೇನೋ ಬಳುವಳಿ ಗೆಳೆಯಾ?
ಗಂಡು: ಕಾಲಿಂದ ಬಿರ ಬಿರ ತಲೆಗೇರೈತಿ ಹರಾ ಹರಾ ಈ ಮತ್ತು ನರ ನರ ಗೆಳತಿ..
ಹೆಣ್ಣು : ಮಿಂಚು ಮಿಂಚು ಕಣ್ಣಿನಂಚು ಯವ್ವಿ ಯವ್ವಿಯೋ
ಗಂಡು: ಮೈಯ ಸೋಕಿ ಕಾದ ಹಂಚು ಯವ್ವಿ ಯವ್ವಿಯೋ
ಸೂತ್ರವಲ್ಲ, ತಂತ್ರವಲ್ಲ ಪ್ರೇಮದ ಮಂತ್ರ ||
ಗಂಡು: ಕಾಡೆಲ್ಲ ಜಗಮಗ ಸಿಂಗಾರ ನಮ್ ಮದುವೆಗಾ ಮೈಯೆಲ್ಲ ವಾಲಗ... ಊದು
ಹೆಣ್ಣು : ಇದೇನಯ್ಯಾ ಗಗಮಗ ಇವೆಲ್ಲಾನೂ ಒಸಗೆಗಾ ಏನೇನು ಸೋಜಿಗ... ಜಾದೂ
ಗಂಡು : ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೋ ಒತ್ತು ಒತ್ತು ಜೋಡಿ ಮುತ್ತು
ಹೆಣ್ಣು: ಹಾಲಿನಂತ ಹುಣ್ಣಿಮೇಲಿ ಮೀಯುವ ಬಾರಾ...
ಹೆಣ್ಣು : ಇದೇನಯ್ಯಾ ಗಗಮಗ ಇವೆಲ್ಲಾನೂ ಒಸಗೆಗಾ ಏನೇನು ಸೋಜಿಗ... ಜಾದೂ
ಗಂಡು : ಈಟು ಹೊತ್ತು ಎಲ್ಲಿ ಇತ್ತು ಯವ್ವಿ ಯವ್ವಿಯೋ ಒತ್ತು ಒತ್ತು ಜೋಡಿ ಮುತ್ತು
ಹೆಣ್ಣು: ಹಾಲಿನಂತ ಹುಣ್ಣಿಮೇಲಿ ಮೀಯುವ ಬಾರಾ...
ಗಂಡು : ಮಾಮ..ಮಾಮ..ಚಂದ ಮಾಮಾ ಬಂದ ನೋಡು ಗೊಂಬೆ ರಾಮಾ ತಂದ ನೋಡು ಪ್ರೀತಿ ಪ್ರೇಮಾ..
ಹೆಣ್ಣು : ಮಾಮ ಮಾಮ ಚಂದಮಾಮಾ ಚಂದವಳ್ಳಿ ಹೆಣ್ಣು ನಾನು ಚಂದವೇನು ನಿನಗೆ ನಾನು
*********************************************************************************
No comments:
Post a Comment