Thursday, August 30, 2018

ರಿಕ್ಕಿ (2016)



ಓ ಬೇಬಿ


ಚಲನ ಚಿತ್ರ: ರಿಕ್ಕಿ (2016)
ನಿರ್ದೇಶನ: ರಿಷಬ್ ಶೆಟ್ಟಿ 
ಸಂಗೀತ: ಅರ್ಜುನ್ ಜನ್ಯ 
ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಟಿಪ್ಪು, ಅನುರಾಧ ಭಟ್ 
ನಟನೆ: ರಕ್ಷಿತ್ ಶೆಟ್ಟಿ, ಹರಿಪ್ರಿಯಾ


ಹೆಣ್ಣು : ಯಾವೂರ ಗೆಳೆಯ ಇವ ಬಾಲ್ಯಾದ ಹರೆಯ
ಎದೆಯ ತುಂಬಿದೆದೆಯ ಇಣುಕಿ ಕಸಿದುಕೊಂಡ ಹೃದಯ

Oh baby once again 
I wanna play with you 
I wanna sing with you 
I wanna stay with you 
Oh baby once again

ಗಂಡು : ನಿನ್ನ ಕಂಡ ಒಂದು ಖುಷಿಯೇ ಸಾಕು
ಹದಿನೈದು ವರ್ಷದ ಬೆಳಕು ಬಂದಂತೆ
ಹೆಣ್ಣು : ನದಿಯೊಳಗೆ ಹೆಜ್ಜೆ ಸಪ್ಪಳ ಕೇಳಿ
ನಾಚುವ ಮೀನಿನಂತೆ ನಾ ನಿಂತೇ
ಗಂಡು : ಒಂದು ಸವಿ ಜೇನ ಸಂಜೆ ಮೈತುಂಬಿಕೊಂತು
ಹೆಣ್ಣು : ಆಹ್ವಾನ ಕಳಿಸಿದ್ದೆ ನಾನೇ ಇವತ್ತು

Oh baby once again 
I wanna play with you 
I wanna sing with you 
I wanna stay with you 
Oh baby once again

ಗಂಡು : ನಿನ್ನ ಅಂದ ಒಂದು ಅಧ್ಭುತ ವಿಷಯ
ಅದರೊಳಗೆ ಪ್ರವೇಶವಿದೆಯ ಸಂಗಾತಿ
ಹೆಣ್ಣು : ನಿನ್ನ ತೋರುಬೆರಳ ತುದಿಯ
ತಾಕಿ ತೊಳೆರಡು ಸೇರೋದ್ ಬಾಕಿ ದಿನ ಪೂರ್ತಿ
ಗಂಡು : ಆಸೆಯೋಳಗಿಂದ ಟಿಸಿಲು ಮಳೆಯೋಳಗು ಬಿಸಿಲು
ಹೆಣ್ಣು : ಕಾಲುಂಗ್ರ ತೊಡಿಸಂತು ಮೇಲೆ ಮುಗಿಲು

Oh baby once again 
I wanna play with you 
I wanna sing with you 
I wanna stay with you 
Oh baby once again

ಹೆಣ್ಣು : ಯಾವೂರ ಗೆಳೆಯ ಇವ ಬಾಲ್ಯಾದ ಹರೆಯ
ಎದೆಯ ತುಂಬಿದೆದೆಯ ಇಣುಕಿ ಕಸಿದುಕೊಂಡ ಹೃದಯ


*********************************************************************************

ಜೀವ ನೀನು ಜೀವಾ ನೀನು

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ರಾಜೇಶ್ ಕೃಷ್ಣನ್ 


ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ
ನಿನಿರದೆ ನೀನಿರದೆ ನಾಳೆಗಳು ಎಲ್ಲಿದೆ
ಕಾಣದೆ ಹೇಗಿರಲಿ ಹೇಳು ನೀನೆ ಹೇಳು
ಸಾಲದು ಬರಿ ನೆನೆಪುಗಳು
ಸಾಯಿಸೋದು ಬಾಳಿಸೋದು
ಎರಡೂ ನಿನ್ನ ಕೈಯಲ್ಲಿದೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ

ನೀ ಮಾತಾಡದೆ ಹೋದಾಗ ತಕ್ಷಣ
ನಾ ಬಾಯಿದ್ದರೂ ಮೂಗಾನೆ
ನೀ ಬರಲಾರೆ ಎಂದಾಗ ಯಾತರ
ನಾ ಒಪ್ಪಿಸಲಿ ನನ್ನನ್ನೇ
ಕಾಗದ ಬರೆದು ಬರೆದು ಹುಟ್ಟಿದಾ ಪ್ರೀತಿ ಇದು 
ಬಾರೆ ಬೇಗ ಬಾರೆ ಕಾಯೋದಿಕ್ಕೆ ಕಷ್ಟ ಕಣೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ

ನೀ ಮುದ್ದಾಡಿದ ಚಿತ್ರಗಳೇ ಕಣ್ಣಿಗೆ
ನಾ ಎಲ್ಲೆಲ್ಲಿಯು ನೋಡಿದರೂ
ನೀ ನಿದ್ದೆಯಲಿ ಕನವರಿಸಿ ಉಸಿರಿದ
 ಆ ಮೆಲ್ಲುಸಿರೇ ನನ್ನುಸಿರು
ನಗುವು ನೀನೆ ಕಣೆ ಅಳುವು
ನೀನೆ ಕಣೆ ಸತ್ತು ಬಿಡುವೆ 
ನಾನು ಸಾಯೊ ಮುಂಚೆ ಬಂದು ಸೇರೆ
ಜೀವ ನೀನು ಜೀವಾ ನೀನು
ಎಲ್ಲಿ ಹೋದೆ ಹೇಳದೆ ಕೇಳದೆ

*********************************************************************************

ಮಲಗೆ ಮಲಗೆ

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಕಾರ್ತೀಕ್, ಅಂಕಿತಾ ಕುಂದು


ಗಂಡು :  ಮಲಗೆ ಮಲಗೆ ಹೇಯ್ ಮಲಗೆ ಮಲಗೆ
ಎದೆಯ ಒಳಗೆ ಎದೆಯ ಒಳಗೆ
ನನ್ನ ಪಯಣ ನೀ ಸೆಳೆದ ಕಡೆಗೆ
ಇರಲಿ ಗಮನ ಈ ಮರುಳನಡೆಗೆ
ನೀನು ಕಂಡ ಕನಸಿನ ಮನೆಯಲಿ
ಒಂದು ಕೊಣೆ ನನಗಿರಲಿ
ಸಾವಿರಾರು ಸವಿ ಸವಿ ಬಯಕೆಗೆ
ಹೇಗೆ ನಾನು ವಿವರಣೆ ಬರೆಯಲಿ
ಮಲಗೆ ಮಲಗೆ ಹೇಯ ಮಲಗೆ ಮಲಗೆ
ಎದೆಯ ಒಳಗೆ ಎದೆಯ ಒಳಗೆ

ಗಂಡು : ನೀ ಇಲ್ಲದಾಗ ನೋವು ಅಪಾರ
ಹೆಣ್ಣು : ಹೀಗೆಲ್ಲಾ ಪ್ರೀತಿ ಅಲ್ಲಾ ಸಸಾರ
ಗಂಡು : ನಿನ್ನನು ಕನಸಿನ ಕಿಂಡಿಯಿಂದಾನೆ ನೋಡುವೆ
ಹೆಣ್ಣು : ಒಲವನು ಹೃದಯದ ಕೊಂಡಿಯಿಂದಾನೆ ದೋಚುವೆ
ಗಂಡು : ನೀನು ಎಂಬಾ ಒಲವಿನ ಒಗಟನು
ಎಷ್ಟು ಅಂತ ಬಿಡಿಸುತ ಅಲೆಯಲಿ
ಮಲಗೆ ಮಲಗೆ ಹೇಯ ಮಲಗೆ ಮಲಗೆ
ಎದೆಯ ಒಳಗೆ ಎದೆಯ ಒಳಗೆ


ಹೆಣ್ಣು : ನಿನ್ನ ಹಿತಾನೆ ನನ್ನ ಇರಾದೆ
ಗಂಡು : ನಿನ್ನೊಂದಿಗೆನೆ ಎಲ್ಲಾ ತಗಾದೆ
ಹೆಣ್ಣು :  ಕನಸಲಿ ಕೆಣಕುವೇ ಬೇಕು ಬೇಕಂತ ನಿನ್ನನೆ
ಗಂಡು : ಲೋಕದ ನಿಯಮಕೆ ದೂರದಿಂದಾನೆ ವಂದನೆ
ಹೆಣ್ಣು : ಹೀಗೆ ಬಂದು ಹಾಗೆ ಹೋದರೆ ಹೇಗೆ
ನಾನು ವಿರಹವ ಸಹಿಸಲಿ
ಗಂಡು : ಮಲಗೆ ಮಲಗೆ ಹೇಯ ಮಲಗೆ ಮಲಗೆ
ಎದೆಯ ಒಳಗೆ ಎದೆಯ ಒಳಗೆ
ಹೆಣ್ಣು :  ನನ್ನ ಪಯಣ ನೀ ಸೆಳೆದ ಕಡೆಗೆ
ಇರಲಿ ಗಮನ ಈ ಮರುಳನಡೆಗೆ

********************************************************************************

No comments:

Post a Comment