ಕೂರಕ್ ಕುಕ್ಕ್ರಳ್ಳಿ ಕೆರೆ
ಚಲನಚಿತ್ರ: ನೆನಪಿರಲಿ (2005)ಸಾಹಿತ್ಯ & ಸಂಗೀತ: "ನಾದಬ್ರಹ್ಮ" ಹಂಸಲೇಖ...
ಗಾಯಕರು : ಡಾ || ಎಸ್. ಪಿ. ಬಾಲಸುಬ್ರಹ್ಮಣ್ಯಂ
ನಿರ್ದೇಶನ: ರತ್ನಜ
ನಟನೆ: ಪ್ರೇಮ್, ವಿದ್ಯಾ ವೆಂಕಟೇಶ್, ವರ್ಷಾ
ಅರೆ ಯಾರ್ರಿ ಹೆದರ್ಕೊಳ್ಳೋರು,ಬೆದರ್ಕೊಳ್ಳೋರು,
ಪೇಚಾಡೋರು, ಪರದಾಡೋರು ,
ಮರಗಳ್ ಮರೆನಲ್ ಮಾತಾಡೋರು,
ಮಾರ್ನಿಂಗ್ ಷೋನಲ್ ಪಿಸುಗುಟ್ಟೋರು,
ಮೈಸೂರಂತ ಜಿಲ್ಲೇಲಿದ್ದು,
ಕಣ್ಣಿಗ್ ಬೇಕಾದ್ ನೋಟ ಇದ್ದು,
ಹಳೆ ರಾಜರು ಅಪ್ಪಣೆ ಇದ್ದು,
ಪ್ರೀತಿ ಮಾಡೋಕ್ ಜಾಗ್ಗಳಿದ್ದು ಕದ್ದು ಮುಚ್ಚಿ ಓಡಾಡ್ತಿರಲ್ರಿ,
ಬನ್ರಿ ನೋಡ್ರಿ, ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲೀರಿ......
ಕೂರಕ್ ಕುಕ್ಕ್ರಳ್ಳಿ ಕೆರೆ..... ವ್ಹಾ... ವ್ಹಾ...
ತೇಲ ಕಾರಂಜಿ ಕೆರೆ .....ವ್ಹಾ... ವ್ಹಾ...

ಲವ್ವಿಗೆ ಈ ಲವ್ವಿಗೆ...
ಚಾಮುಂಡಿ ಬೆಟ್ಟ ಇದೆ, ಕನ್ನಂಬಾಡಿ ಕಟ್ಟೆ ಇದೆ,
ಲವ್ವಿಗೆ ನಮ್ ಲವ್ವಿಗೆ...
ಈ ಭಯ ಬಿಸಾಕಿ......
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ..
ಈ ದಿಗಿಲ್ ದಬಾಕಿ.....
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ..
ಬಲ್ಮುರಿಲಿ ಪೂಜೆ ನೆಪ....ವ್ಹಾ... ವ್ಹಾ...
ಎಡ್ಮುರಿಲಿ ಜಪ ತಪ.....ವ್ಹಾ... ವ್ಹಾ...
ಬಲ್ಮುರಿಲಿ ಪೂಜೆ ನೆಪ, ಎಡ್ಮುರಿಲಿ ಜಪ ತಪ,
ಲವ್ವಿಗೆ ನಿರ್ವಿಘ್ನ ಲವ್ವಿಗೆ...
ನಾರ್ತಿನಲ್ಲಿ ಶ್ರೀರಂಗ್ ಪಟ್ನ, ಸೌತಿನಲ್ಲಿ ನಂಜನ್ಗೂಡು,
ಪೂಜೆಗೆ ಲವ್ ಪೂಜೆಗೆ...
ಈ ಭಯ ಬಿಸಾಕಿ......
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
ಈ ದಿಗಿಲ್ ದಬಾಕಿ.....
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
ಗಲಾಟೆನೇ ಇಲ್ಲ ಬನ್ರಿ ಗಂಗೋತ್ರಿಯಲ್ಲಿ...
ಮನಸು ಬಿಚ್ಕೊಳ್ರಿ, ಮರ ಮರ ಮರದ ಮರೇಲಿ..
ಅರಮನೇಲಿ ಅಡ್ಡಾಡುತ ಮೂಡು ತೊಗೊಳ್ರಿ ...
ರಾಜನ್ ಥರಾನೆ ಲವ್ವಲ್ ದರ್ಬಾರ್ ಮಾಡ್ಬಿಡ್ರಿ...
ಎ... ರಂಗನತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು...
ಮುಡುಕು ತೊರೇಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು...
ಕಾಳಿದಾಸನೆ ಇಲ್ ರಸ್ತೆ ಆಗವ್ನೆ...
ಪ್ರೀತಿ ಮಾಡೋರ್ಗೆ ಸರಿ ದಾರಿ ತೋರ್ ತಾನೇ...
ಕೆ ಆರ್ ಎಸ್ ಲಿ ಕೆಫೆ ಮಾಡಿ, ಬ್ಲಫ್ಫಿನಲ್ಲಿ ಬಫೆ ಮಾಡಿ,
ಲವ್ವಿಗೆ ರಿಚ್ ಲವ್ವಿಗೆ...
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿ ಕೊಪ್ಪಲ್,
ಲವ್ವಿಗೆ ಈ ಲವ್ವಿಗೆ...
ಈ ಭಯ ಬಿಸಾಕಿ......
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
ಈ ದಿಗಿಲ್ ದಬಾಕಿ.....
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
ಜಾತಿ ಕೆಟ್ರು ಸುಖ ಪಡ್ಬೇಕ್ ಪ್ರೀತಿ ಮಾಡಮ್ಮ...
ನಾಳೆ ಆಗೋದು ಇಂದೇ ಆಗೇ ಹೋಗ್ಲಮ್ಮ ....
ಕದ್ದು ಮುಚ್ಚಿ ಪ್ರೀತಿ ಮಾಡೋ ಕಳ್ಳ ಲವ್ವಮ್ಮ ...
ಸತ್ಯ ಹೇಳಮ್ಮ, ನಿಜವಾದ್ ಪ್ರೀತಿ ಮಾಡಮ್ಮ...
ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ....
ಮನುಜ ಮತ ವಿಶ್ವ ಪಥ ಅಂತ ಹೇಳಮ್ಮ....
ತೀರ್ಥ ಹಳ್ಳಿಲಿ ಕುವೆಂಪು ಹುಟ್ಟಿದ್ರು ....
ವಿಶ್ವ ಪ್ರೇಮನ ಮೈಸೂರ್ಗೆ ತಂದ್ಕೊಟ್ರು....
ಮೈಸೂರು ಕೂಲಾಗಿದೆ, ಬೃಂದಾವನ ಗ್ರೀನಾಗಿದೆ,
ಲವ್ವಿಗೆ ಸ್ವೀಟ್ ಲವ್ವಿಗೆ......
ನರಸಿಂಹಸ್ವಾಮಿ ಪದ್ಯ ಇದೆ, ಅನಂತ್ ಸ್ವಾಮಿ ವಾದ್ಯ ಇದೆ,
ಸಾಂಗಿಗೆ ಲವ್ ಸಾಂಗಿಗೆ.....
ಈ ಭಯ ಬಿಸಾಕಿ......
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
ಈ ದಿಗಿಲ್ ದಬಾಕಿ.....
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ ..
******************************************************************************
ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ
ಸಾಹಿತ್ಯ: ಹಂಸಲೇಖ ಗಾಯಕರು: ವಿಜಯ್ ಏಸುದಾಸ್
ಅಜಂತ ಎಲ್ಲೋರ ಚಿತ್ತಾರ ಶಿಲೆಯಲ್ಲಿ
ಅದೆಲ್ಲ ನಾ ಕಂಡೆ ಅದೆಲ್ಲ ನಾ ಕಂಡೆ
ಈ ತಾಜಾ ತರುಣಿಯಲ್ಲಿ ಈ ತಾಜಾ ತನುವಿನಲ್ಲಿ
ಬೇಲೂರ ಬಾಲೇರ ಭಾರ ಕಂಬಗಳಲ್ಲಿ
ಚೆಲುವಿನ ಭಾರಾನೋ ಚೆಲುವಿನ ಭಾರಾನೋ
ಈ ತಾಜಾ ತರುಣಿಯಲ್ಲಿ ಸೊಂಪಾದ ಪಾದಗಳಲ್ಲಿ
ಮಂದವಾಗಿ ಬಳುಕುವಂಥ ನಾರಿ ಇವಳ
ಅಂದ ನೋಡ ನಿಂತಾಗ ಚಂದ ನೋಡ ನಿಂತಾಗ
ಯಾರೋ ನೀನು ಎಂದು ಕೇಳುತಾವೆ
ಇವಳ ಪೊಗರಿನ ಹೃದಯ ಪಾಲಕಿಯರು
ನಾಟ್ಯದಂತೆ ನಡೆಯುವಾಗ ನಡೆಯುವಾಗ
ಅತ್ತಲಾಡಿ ಇತ್ತಲಾಡಿ ಇತ್ತಲಾಡಿ ಅತ್ತಲಾಡಿ
ಕೀಲು ಕೊಟ್ಟ ಕುದುರೆಯಂತಾಯಿತಲ್ಲ
ನನ್ನೀ ಸುಂದರಿ ಸೊಂಟ ಪೀಠ ಸೊಂಟ ಪೀಠ
ಸೊಗ್ಗುಂಟು....ಸಿಗ್ಗುಂಟು
ಸೊಗ್ಗುಂಟು ಸಿಗ್ಗುಂಟು
ಈ ಸಜೀವ ಬೊಂಬೆಯಲ್ಲಿ
ಅಣುಕುಂಟು ದೊಣುಕುಂಟು
ಈ ತಾಜಾ ತರುಣಿಯಲ್ಲಿ
ಈ ನಾರಿ ನಡುವಿನಲ್ಲಿ
ಕಣ್ಣಿನಲ್ಲೇ ಕಣ್ಣನಿಟ್ಟು ನೋಡಿದಾಗ
ಬೆದರುತಾಳೆ ಬೆದರುತಾಳೆ
ಬೆದರುಗೊಂಬೆ ಆಗುತಾಳೆ
ಮಾತು ಬೇಡ ಮುತ್ತು ನೀಡು ಮುತ್ತು ನೀಡು
ಎಂದರಿವಳು ಅದರುತಾಳೆ ಅಂತದುಂಟ ಅನ್ನತಾಳೆ
ಅಪ್ಪಿಕೊಂಡರೆ ಬಳ್ಳಿಯಂತೆ ಬಳ್ಳಿಯಂತೆ
ಮೈಯನೆಲ್ಲಾ ಹಬ್ಬುತಾಳೆ ಉಸಿರುಗಟ್ಟಿ ಉಬ್ಬುತಾಳೆ
ಉಸಿರಿನಲ್ಲಿ ಮಾತನಾಡಿ ಮಾತನಾಡಿ
ತುಟಿಯ ತಂಪು ಮಾಡಿದಾಗ
ತಣಿಯುತಾಳೆ ಮಣಿಯುತಾಳೆ
ಎಲ್ಲಕ್ಕೂ.....ಆಶ್ಚರ್ಯ.....
ಎಲ್ಲಕ್ಕೂ ಆಶ್ಚರ್ಯ ಪಡುತಾಳೆ ಕ್ಷಣದಲ್ಲಿ
ಆಶ್ಚರ್ಯ ತುಳುಕೈತೆ ಆಶ್ಚರ್ಯ ತುಳುಕೈತೆ
ಈ ತಾಜಾ ತರುಣಿಯಲ್ಲಿ ಈ ಕಾರಂಜಿ ಕಣ್ಣಿನಲ್ಲಿ
ನಾನೊಂದು titanic ಬೋಟಾದೆ ಸುಖದಲ್ಲಿ
ಒಡೆದೋದೆ ಮುಳುಗೋದೆ ಒಡೆದೋದೆ ಮುಳುಗೋದೆ
ಈ ತಾಜಾ ತರುಣಿಯಲ್ಲಿ ಈ ಕನ್ಯಾ ಕಡಲಿನಲ್ಲಿ
ಲ ಲ ಲ ......
*******************************************************************************
ಒಲವು ಒಂಟಿಯಲ್ಲ
ಸಾಹಿತ್ಯ: ಹಂಸಲೇಖ
ಹೇ ಭಾವಗಳ ವನವೇ
ನೀವಿರದೆ ನಾನಿಲ್ಲ
ನಾನಿರದೇ ನೀವಿಲ್ಲ
ಪ್ರೀತಿ ನನ್ನ ಹೆಸರು....
ನೆನಪಿರಲಿ ನೆನಪಿರಲಿ....
ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ
ಒಂಟಿ ಪ್ರೇಮಿಯಲ್ಲ ಹೂವು ದುಂಬಿ ಹಾಡು ಅದು.....
ನೆನಪಿರಲಿ ನೆನಪಿರಲಿ.....
ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ
ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು....
ನೆನಪಿರಲಿ ನೆನಪಿರಲಿ.....
ಪ್ರಾಯದ ಮೇಲೆ ದಿಬ್ಬಣ ಹೊರಟು ಜೀವನವ ಸುತ್ತಿ
ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತಿ
ಮೋರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ
ಎಲ್ಲ ಸುಂದರವೆಂದು ನೋಡೋ ಒಳಗನ್ಣೆ ಪ್ರೀತಿ
ನಿದಿರೆಯಾದರು ಅಲ್ಲಿಲ್ಲಿಲ್ಲ ಪ್ರೀತಿ ಇಲ್ಲದ ಅಣುಕಣವಿಲ್ಲ
ಪ್ರೀತಿ ಪಾಠವಲ್ಲ ಪ್ರಣಯದೂಟವಲ್ಲ.......
love is soul but not one
love is one but not alone
love is God but not a stone
ಹತ್ತಿರದಲ್ಲಿ ನಿಂತರೆ ಅಲ್ಲಿ ಬಳ್ಳಿಗೆ ಸಹವಾಸ
ರೆಪ್ಪೆಯೆ ತೆರೆದ ಕಣ್ಣುಗಳೆಂದೂ ಮಾಡವು ಉಪವಾಸ
ಬಯಸುವುದನ್ನೇ ತಪ್ಪು ಎಂದರೆ ಮನಸಿಗೆ ಅವಮಾನ
ಕ್ಷಣಿಕ ಸುಖಕ್ಕೆ ಸೋಲದಿದ್ದರೆ ಮೋಹಕೂ ಅಪಮಾನ :-)))
ಸ್ನೇಹಕ್ಕೆ ಎಂದು ಪ್ರೀತಿಯೇ ಗೆಳೆಯ
ಪ್ರೀತಿಗೆ ಎಂದು ಸತ್ಯವೇ ಹೃದಯ
ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ......
I am love, love is life
I am love, love is feel
I am love, love is beauty
ನಾನು ಮೋಹವಲ್ಲ ವ್ಯಾಮೋಹವಲ್ಲ
ಸುಖದ ಬಲೆಯಲಿ ಅಲೆಯುವ ಅಶ್ವವಲ್ಲ
ಮಾಯಾ ಜಿಂಕೆಯಲ್ಲ ಆಸೆಯೆಂದು ಪ್ರೀತಿಯಲ್ಲ
love is soul but not one
love is one but not alone
love is God but not a stone
********************************************************************************
ಯಾಹು ಯಾಹೂ!!
ಸಾಹಿತ್ಯ: ಹಂಸಲೇಖ ಗಾಯಕರು: ಕೆ. ಎಸ್. ಚಿತ್ರಾ
ಯಾಹು ಯಾಹೂ!!
ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಶ್ಪಕೂಲಕ್ಕು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ
ಯಾಹು ಯಾಹೂ!!
ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕ್ಕು ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಶ್ಪಕೂಲಕ್ಕು ಹಬ್ಬ!
ಈ ... ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆಹನಿ. ಇಲ್ಲಿದೆ ಬಿಸಿಲ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ
ಹೃದಯ ಬಯಸುವ ಸುಖದ ಚಿತ್ರಕೆ
ಕಣ್ಗಳೆ ಗಾಜಿನ ಪರದೆಯು
ಇಂದು ಉಸಿರಿಗೆ ಹಬ್ಬ ಉಬ್ಬುವೆದೆಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ
ಯಾಹು ಯಾಹೂ!!
ಇಂದು ಮರಳಿಗೆ ಹಬ್ಬ ಉಪ್ಪು ಗಾಳಿಗೂ ಹಬ್ಬ
ಇಂದು ಕಡಲಿಗೆ ಹಬ್ಬ ಅಪ್ಪೊ ಅಲೆಗು ಹಬ್ಬ
ಓ ... ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ. ನೆನಪಿಗೆ. ಋತುಗಳ ಜೂಟಾಟಕೆ
ಸೊಗಸಿನಿಂದಲೆ ಸೊಗಸ ಸವಿಯುವ
ಸೊಗಸಿನಿಂದಲೆ ಸೊಗಸ ಸವಿಯುವ
ಸೊಗಸಿಗೆ ಚೆಲುವಿನ ಹೆಸರಿದೆ
ಇಂದು ಚೆಲುವಿಗೆ ಹಬ್ಬ ಒಳ ಒಲವಿಗು ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗು ಹಬ್ಬ
ಇಲ್ಲಿ ಓಡುತ್ತಿರುವ ವಯಸಿಗು ಹಬ್ಬ
ಯಾಹು ಯಾಹೂ!!
********************************************************************************
No comments:
Post a Comment