Wednesday, August 29, 2018

ನಂಜುಂಡಿ (2003)


ಚಲನಚಿತ್ರ: ನಂಜುಂಡಿ (2003)
ಸಾಹಿತ್ಯ: ಹಂಸಲೇಖ 
ಸಂಗೀತ"ನಾದಬ್ರಹ್ಮ" ಹಂಸಲೇಖ
ಗಾಯಕರು: ಮಧು ಬಾಲಕೃಷ್ಣನ್, ನಂದಿತಾ 
ನಿರ್ದೇಶನ: ಎಸ್. ಆರ್. ಬ್ರದರ್ಸ್ 
ನಟನೆ: ಶಿವರಾಜ್ ಕುಮಾರ್, ಡೆಬಿನಾ, ಉಮಾಶ್ರೀ 



ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಿರೋ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಮನಸ್ಸಿನಿಂದ ಮನಸನು ಬೆಳಗಬೇಕು ಮಾನವ...
ಮೇಲು ಕೀಳು ಭೇದ ನಿಲ್ಲಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ..
ನೀ.. ತಿಳಿಯೋ...  ನೀ.. ತಿಳಿಯೋ..

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ..
ಓ..ಹೋ... ಹೋ... ಹೊ.. ಒಒಓ...
ಓ...ಹೋ... ಹೋ... ಹೊ... ಒಒಓ...
ಓ..ಹೋ... ಹೋ... ಹೊ.. ಒಒಓ...
ಓ...ಹೋ... ಹೋ... ಹೊ... ಒಒಓ...

ಆಸೆ ಹಿಂದೆ  ದುಖಃ ಎಂದರೂ...
ರಾತ್ರಿ ಹಿಂದೆ ಹಗಲು ಎಂದರೂ...
ವೇಷವೆಂದೂ ಹೊರೆ ಎಂದರೂ...
ಹಬ್ಬ ಅದಕೆ ಹೆಗಲು ಎಂದರೂ....
ಎರಡು ಮುಖದ ನಮ್ಮ ಜನುಮದ.. ವೇಷಾವಳಿ...
ಕಳೆದು ಹಾಲ್ ಬೆಳಕ ಕುಡಿವುದೇ.. ದೀಪಾವಳಿ...

ದೀಪದಿಂದ ದೀಪವ ಹಚ್ಚಬೇಕು ಮಾನವ...
 ಪ್ರೀತಿಯಿಂದ ಪ್ರೀತಿ ಹಂಚಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ...
ನೀ.. ತಿಳಿಯೋ... ನೀ.. ತಿಳಿಯೋ...
ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...

ಮಣ್ಣಿನಿಂದ ಹಣತೆಯಾದರೇ...
ಬೀಜದಿಂದ ಎಣ್ಣೆಯಾಯಿತು....
ಅರಳೆಯಿಂದ ಬತ್ತಿಯಾದರೇ....
ಸುಡುವ ಬೆಂಕಿ ಜ್ಯೋತಿಯಾಯಿತು...
ನಂದಿಸುವುದು ತುಂಬಾ ಸುಲಭವೋ....
ಹೇ... ಮಾನವ...
ಆನಂದಿಸುವುದು ತುಂಬಾ ಕಠಿಣವೊ...
ಹೇ.. ದಾನವ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ...
ಭೇದವಿಲ್ಲ ಬೆಂಕಿಗೆ.. ದ್ವೇಷವಿಲ್ಲ ಬೆಳಕಿಗೆ...
ನೀ.. ತಿಳಿಯೋ...  ನೀ.. ತಿಳಿಯೋ...

ದೀಪದಿಂದ ದೀಪವ ಹಚ್ಚಬೇಕು ಮಾನವ...
ಪ್ರೀತಿಯಿಂದ ಪ್ರೀತಿ ಹಂಚಲೂ....


No comments:

Post a Comment