Thursday, August 30, 2018

ಚಂದ್ರಮುಖಿ ಪ್ರಾಣಸಖಿ (1999)


ಮನಸೇ ಓ ಮನಸೇ 

ಚಲನಚಿತ್ರ: ಚಂದ್ರಮುಖಿ ಪ್ರಾಣಸಖಿ (1999)
ಸಂಗೀತ ಮತ್ತು ಸಾಹಿತ್ಯ : ಕೆ ಕಲ್ಯಾಣ್ 
ಗಾಯಕರು: ಕೆ. ಎಸ್. ಚಿತ್ರಾ, ಬದ್ರಿಪ್ರಸಾದ್ 
ನಿರ್ದೇಶನ: ಸೀತಾರಾಮ್ ಕಾರಂತ್ 
ನಟರು: ರಮೇಶ್ ಅರವಿಂದ್, ಪ್ರೇಮಾ, ಭಾವನಾ ರಾವ್ 

ಮನಸೇ ಓ ಮನಸೇ ಎಂಥ ಮನಸೇ
ಮನಸೇ ಎಳೆ ಮನಸೇ
ಮನಸೇ ಓ ಮನಸೇ ಎಂಥ ಮನಸೇ
ಮನಸೇ ಒಳ ಮನಸೇ
ಮನಸೇ ನಿನ್ನಲಿ ಯಾವ ಮನಸಿದೆ,
ಯಾವ ಮನಸಿಗೆ ನೀ ಮನಸು ಮಾಡಿದೆ
ಮನಸಿಲ್ಲದ ಮನಸಿನಿಂದ ಮನಸು ಮಾಡಿ
ಮಧುರ ಮನಸಿಗೆ .......

ಮನಸು ಕೊಟ್ಟು ಮನಸನ್ನೇ ಮರೆತುಬಿಟ್ಟೆಯ
ಮನಸು ಕೊಟ್ಟು ಮನಸೊಳಗೆ ಕುಳಿತುಬಿಟ್ಟೆಯ

ಮನಸೇ ಓ ಮನಸೇ ಎಂಥ ಮನಸೆ ಮನಸೇ ಎಳೆ ಮನಸೇ

ಓ ಮನಸೇ ಒಂದು ಮನಸಲೆರಡು ಮನಸು ಎಲ್ಲ ಮನಸ ನಿಯಮ
ಓ ಮನಸೇ ಎರಡು ಹಾಲು ಮನಸಲೊಂದೇ ಮನಸು ಇದ್ದರೆ ಪ್ರೇಮ
ಮನಸಾಗೋ ಪ್ರತಿ ಮನಸಿಗೂ ಮನಸೋತಿರುವ,
ಎಳೆ ಮನಸು ಎಲ್ಲ ಮನಸಿನ ಮನಸೇರೋಲ್ಲ
ಕೆಲ ಮನಸು ನಿಜ ಮನಸಿನಾಳದ ಮನಸ,
ಹುಸಿ ಮನಸು ಅಂತ ಮನಸ್ಸನ್ನೆ ಮನಸೆನ್ನೋಲ್ಲ
ಮನಸೇ ಮನಸೇ ಹಸಿ ಹಸಿ ಮನಸೇ,
ಮನಸು ಒಂದು ಮನಸಿರೋ ಮನಸಿನ ತನನನ
ತಿರುಗೋ ಮನಸಿಗೂ ಮರುಗೊ ಮನಸಿದೆ,
ಬರದ ಮನಸಿಗೂ ಕರಗೋ ಮನಸಿದೆ
ಮೈ ಮನಸಲಿ ಮನಸಿದ್ದರೆ ಮನಸು ಮನಸ ಹಿಡಿತವಿದ್ದರೆ
ಮುಮ್ಮಲ ಮನಸಿದ್ದರು ಮುಳುಗೇಳದು ಮನಸು
ಮನಸೆಲ್ಲೋ ಮನಸು ಮಾಡೋ ಮನಸಾ ಮನಸು     

ಓ ಮನಸೇ ಮನಸು ಮನಸಲಿದ್ದರೇನೆ ಅಲ್ಲಿ ಮನಶ್ಶಾಂತಿ
ಓ ಮನಸೇ ಮನಸು ಮನಸ ಕೇಳಿ ಮನಸು ಕೊಟ್ಟರೆ ಮನಸ್ಸಾಕ್ಷಿ
ಮನಸಾರೆ ಮನಸಿಟ್ಟು ಹಾಡುವ ಮನಸು,
ಮನಸೂರೆ ಆಗೋದು ಮನಸಿಗೂ ಗೊತ್ತು
ಮನಸಿದ್ದರೆ ಮಾರ್ಗ ಅಂತ ಹೇಳುವ ಮನಸು,
ಮನ್ನಿಸುವ ಮನಸಲ್ಲಿ ಮನಸಿಡೋ ಹೊತ್ತು
ಮನಸೇ ಮನಸೇ ಬಿಸಿ ಬಿಸಿ ಮನಸೇ,
ಮನಸು ಒಂದು ಮನಸಿರೋ ಮನಸಿನ ಧಿರನನ
ತುಮುಲ ಮನಸಿಗೂ ಕೋಮಲ ಮನಸಿದೆ,
ತೊದಲು ಮನಸಿಗೂ ಮೃದುಲ ಮನಸಿದೆ
ಮನಸಿಚ್ಚೆ ಮನಸ ಒಳಗೆ ಮನಸ್ವೇಚ್ಚೆ
ಮನಸ ಹೊರಗೆ ಮನಸ್ಪೂರ್ತಿ ಮನಸ ಪೂರ್ತಿ ಇರುವುದೇ ಮನಸು
ಮನಸೆಲ್ಲೋ ಮನಸು ಮಾಡೊ ಮನಸಾ ಮನಸು........ 

ಮನಸೇ ಓ ಮನಸೇ, ಮನಸೇ ಎಳೆ ಮನಸೇ, ಮನಸೇ ಒಳ ಮನಸೇ

******************************************************************************

ನೆನಪುಗಳ ಮಾತು ಮಧುರ 

ಸಾಹಿತ್ಯ & ಸಂಗೀತ: ಕೆ. ಕಲ್ಯಾಣ್  
ಗಾಯಕರು: ಎಸ್ ಪಿ ಬಿ, ಚಿತ್ರ  


ನೆನಪುಗಳ ಮಾತು ಮಧುರ
ಮೌನಗಳ ಹಾಡು ಮಧುರ
ಕನಸೇ ಇರಲಿ ನನಸೆ ಇರಲಿ
ಪ್ರೀತಿ ಕೊಡುವ ಕನಸೇ ಮಧುರ

ಸಾವಿರ ಹೂಗಳ ಹುಡುಕಿದರೂ
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೆ
ಸಾವಿರ ಹೃದಯವ ಹುಡುಕಿದರೂ
ಅಳತೆ ಬೇರೆ ಸೆಳೆತ ಬೇರೆ ಪ್ರೀತಿಯೊಂದೆ
ತಿಂಗಳ ಬೆಳಕನು ಹಿಡಿದು
ಗಾಳಿಗೆ ಸವರೋ ಪ್ರೀತಿ
ಗಾಳಿಯ ಗಂಧವ ಕಡೆದು
ಅಂದವ ಹೆಣೆಯೋ ಪ್ರೀತಿ
ಸಂಖ್ಯೆ ಇರದೇ ಗುಣಿಸೋ ಪ್ರೀತಿ
ನಿದ್ದೆ ನುಂಗಿ ಕುಣಿಸೋ ಪ್ರೀತಿ
ಶಬ್ದವಿರಲಿ ಶಬ್ದವಿರಲಿ
ಪ್ರೀತಿ ಕೊಡುವ ಶಬ್ದ ಮಧುರ 

ಸಾವಿರ ಹಾಡನು ಹುಡುಕಿದರೂ
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೆ 
ಸಾವಿರ ಪ್ರೇಮಿಯ ಹುಡುಕಿದರೂ
ತವಕ ಬೇರೆ ಪುಳಕ ಬೇರೆ ಪ್ರೀತಿಯೊಂದೆ
ನದಿಗಳ ಕಲರವಗಳಲಿ ಅಲೆಗಳು ತೊಯೋ ಪ್ರೀತಿ
ಅಲೆಗಳ ಹೊಸತನ ಕಡೆದು ಕಲೆಗಳ ಹೆಣೆಯೋ ಪ್ರೀತಿ
ಚಿಲುಮೆಯಂತೆ ಚಿಮ್ಮೋ ಪ್ರೀತಿ
ಒಲುಮೆಯೊಳಗೆ ಕಾಯ್ಸೋ ಪ್ರೀತಿ
ಸ್ವಾರ್ಥವಿರಲಿ ಸ್ವಾರ್ಥವಿರಲಿ ಪ್ರೀತಿ
ಕೊಡುವ ಸ್ವಾರ್ಥ ಮಧುರ   


********************************************************************************

ಅರಳು  ಹುಣ್ಣಿಮೆ ಹರಳು ಹುಣ್ಣಿಮೆ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಮ್ 

ಆ...............

ಅರಳು ಹುಣ್ಣಿಮೆ ಹರಳು ಹುಣ್ಣಿಮೆ
ನೀ ಅರುಳು ಮರುಳು ಮಾಡೋ ಹುಣ್ಣಿಮೆ
ಅರಳು ಹುಣ್ಣಿಮೆ ಹರಳು ಹುಣ್ಣಿಮೆ
ನೀ ಕನಸು ಹೀರಿ ಹಾಡೋ ಹುಣ್ಣಿಮೆ
ಯೌವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ 

ಓ....
ಈ ಕಣ್ಣಿಗೆ ಸರಿದೂಗೋ ಕಣ್ಣುಗಳಿಲ್ಲ
ಈ ಹೊಳಪಿಗೆ ಸರಿದೂಗೋ ಬೆಳಕುಗಳಿಲ್ಲ
ನಿನ್ನ ಕಾಂತಿ ಪ್ರಕೃತಿಗೆ ಮೈಕಾಂತಿ
ಈ ನಗುವ ಕಲೆ ಹಾಕೋ ಕೈಗಳು ಇಲ್ಲ
ವೈಯಾರಕೆ ತಲೆ ಹಾಕೋ ನಾಲಿಗೆಯಿಲ್ಲ
ನಿನ್ನ ಸೊಗಸೇ ಈ ವೊಗಸಿಗೆ ಮನಶಾಂತಿ
ನಿನ್ನ ಭಂಗಿಯ ಆ..... ಪ್ರಫುಲ್ಲ ಲಲ್ಲೆಯ ಓ....
ತಾಕೋದೆ ಸಾಹಿತ್ಯ ತೂಗೋದೆ ಸಂಗೀತ 

ಓ...
ಈ ಒನಪನು ಮರೆಮಾಚೋ ರೇಶಿಮೆಯಿಲ್ಲ
ಈ ತಂಪನು ತುಸು ಮಾಸುವ ಮಾಸಗಳಿಲ್ಲ
ನಿನ ಸ್ಪರ್ಶ ಹೂಗಳಲಿ ಮೃದುವಾಸ
ಈ ನಡಿಗೆಯ ಕದಲಿಸೋ ನರ್ತನವಿಲ್ಲ
ಈ ಸ್ಫೂರ್ತಿಯ ಬದಲಿಸೋ ಶಕ್ತಿಗಳಿಲ್ಲ
ನಿನ್ನ ಇರುವಿಕೆ ಹೆಣ್ಗಳಿಗೆ ಉಪವಾಸ
ಸುಮ್ಮನೇತಕೆ...ಆ...ಸುಳ್ಳು ಹೋಲಿಕೆ....
ಓ...  ನೀನಿರುವ ಸುಳ್ಳಲ್ಲು  ನಾನಿರುವೆ ನಿಜವಾಗಲೂ

********************************************************************************


ಒಂದೇ ಒಂದು ಸಾರಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ 


ಮೊದಲ ಪ್ರೇಮ ಪತ್ರವೇ..
ಹೃದಯಗಳಿಗೆ ಸೇತುವೆ..
ಮೊದಲ ಪ್ರಣಯ ಪತ್ರವೇ..
ಕನಸುಗಳಿಗೆ ಸೇತುವೆ..
ತೊದಲ ಪ್ರೇಮದಿ ಪರಿ ಇದು
ಎಲ್ಲಾ ಹುಡುಗರೂ ಎಲ್ಲಾ ಹುಡುಗಿಯರೂ
ಪ್ರೀತಿಗೆ ಸೋಲದೆ ಇರುವರೇ..
ಸೋಲದೆ ಪ್ರೀತಿಯ ಕೊಡುವರೇ...

ಒಂದೇ ಒಂದು ಸಾರಿ ನಿನ್ನ
ಕಂಡ ಒಡನೆ ಮರೆತೇ ನನ್ನ
ಮರೆತು ಕೂಡ ಮರೆಯಲಾರೆ ನಾ ನಿನ್ನ...

ಎಷ್ಟು ಸಾರಿ ನೋಡಿದರೂ
ಎಷ್ಟು ಸಾರಿ ಹಾಡಿದರೂ
ಸವೆಯದಂತ ಸವಿಯ ಕೊಡುವೆ ನಾ ನಿನ್ನ...

ಇದೇ ಮೊದಲ ಒಲ ಓಲೆ ಇದು
ಎದೆಯ ತೊದಲ ಕರೆಯೋಲೆ ಇದು
ಕೈ ಹಿಡಿದು ಕಾಪಾಡು ಈ ಪ್ರೀತಿಯನ್ನಾ

ಒಂದೇ ಒಂದು ಸಾರಿ ಹೆಣ್ಣಾ
ಕಂಡ ಒಡನೆ ಮರೆಯೋ ನಿನ್ನ
ಮೆಚ್ಚಿ ನೆಚ್ಚಿಕೊಂಡರೆ ನಾ ಚೆನ್ನ

ಎಷ್ಟೋ ಹುಡುಗೀರ ನೋಡಿದೆ ನಾ
ನಿನ್ನಲೇನೂ ಹೊಸ ಸೆಳೆತ
ಆಗಿನಿಂದ ನನ್ನಲೇನೂ ಕೊರೆತ

ಎಷ್ಟೋ ಹುಡುಗರ ಬಲ್ಲೆನು ನಾ
ಎಲ್ಲ ಹೇಳೋ ಟೊಳ್ಳು ಮಾತಿದು
ಇಂತ ಸುಳ್ಳು ಪೊಳ್ಳು ಎಲ್ಲೂ ನಡೆಯದು

ಈ ನನ್ನ ಮಾತಿನಲ್ಲಿ ಸತ್ಯವಿಲ್ಲ ಅನ್ನೋದಾದರೆ
ಹೃದಯಾನ ಒಮ್ಮೆ ನೋಡು ಜಪವು ನಿನದೆ
ನೀನ ಹುಟ್ಟಿದಾಗಿನಿಂದ ನಿನ್ನ ಹೃದಯ ನೀನೆ ಕಂಡಿಲ್ಲಾ
ಕಾಣದ್ದು ಗೀಚಿದರೆ ಯಾರು ನಂಬಲ್ಲಾ

ಬರೀ ಅಕ್ಷರ ಇಲ್ಲಮ್ಮ
ನನ್ನ ಏದುಸಿರಿದೆಯಮ್ಮ
ಈ ಉಸಿರ ಸಾಲಿಗೆ ಹಾಳೆ ನೀನಮ್ಮಾ

ಹಾಳೆ ಹರಿಬಹುದು ನಾಳೆ ಮರೀಬಹುದು
ಈ ಆಗದ ಹೋಗದ ಮಾಗದ ಕಾಗದ
ಪ್ರೀತಿಯ ಕಾಯುವ ಮೂರ್ಖಳೂ ನಾನಲ್ಲಾ

ಒಂದೇ ಒಂದು ಸಾರಿ ನಿನ್ನ
ಕಂಡ ಒಡನೆ ಮರೆತೇ ನನ್ನ
ಮರೆತು ಕೂಡ ಮರೆಯಲಾರೆ ನಾ ನಿನ್ನಾ...

ಎಷ್ಟೋ ಕವಿಗಳಿಗೆ ಕಾಲೆಳೆದು
ಕಾಲು ತೊಳೆಯೋ ಪ್ರೀತಿ ಅಂತೀರಿ
ಆಮೇಲೆ ಕೈ ತೊಳೆದುಕೊಂಡು ಹೋಗ್ತೀರಿ

ನನ್ನ ಪದಗಳಿವು ಪದವಲ್ಲಾ
ನನ್ನ ಎದೆ ಕರಗ ಇವು
ಒಳಗೆ ನಿಂದೆ ಪ್ರೀತಿ ಅಂತರಂಗವೂ

ಏನೆಂದರೇನು ಪ್ರೀತಿ ಕಣ್ಣು
ಕುರುಡು ಅನ್ನೋದು ಗಾದೆ
ಬೇಕಿಲ್ಲದಿದ್ದರುನು ಬೇಡುತಾ ಇದೆ

ಕಣ್ಣಾಗೊ ಪ್ರೀತಿ ನಂಬಿ
ನಿನ್ನ ಕಣ್ಣ ಓಲೆ ನಾನಮ್ಮಾ
ಕುರುಡಾದರೂನು ನಂದು
ನೇರ ನಡೆಯಮ್ಮ

ಅಂದ ಹೊಗಳೋರು ಸಂಬಂಧ ಹುಡುಕೋರು
ಈ ಪ್ರೀತಿ ಅನ್ನೋರೆಲ್ಲ ಹುಚ್ಚರು
ಯಾರೇನೇ ಅಂದರೂ ನೀ ನನ್ನ ಕೊಂದರು
ನಿನ್ನ ಪ್ರೀತಿಯೊಂದೇ ನನ್ನ ದೇವರು

ತಂದಾನಾನ ತಾನ ನಾ ನಾ
ತಂದಾನಾನ ತಾನ ನಾ ನಾ
ಮರೆತೂ ಕೂಡ ಮರೆಯಲಾರೆ ನಾ ನಿನ್ನಾ..

ಎಷ್ಟು ಸಾರಿ ನೋಡಿದರೂ
ಎಷ್ಟು ಸಾರಿ ಹಾಡಿದರೂ
ಸವೆಯದಂತ ಸವಿಯ ಕೊಡುವೆ ನಾ ನಿನ್ನಾ...

********************************************************************************

No comments:

Post a Comment