Thursday, August 30, 2018

ತವರಿಗೆ ಬಾ ತಂಗಿ (2002)


ತಂಗಿ ನಿನ್ನ ನಗುವಲೊಂದು

ಚಲನಚಿತ್ರ : ತವರಿಗೆ ಬಾ ತಂಗಿ (2002) 
ಸಾಹಿತ್ಯ & ಸಂಗೀತ: ಹಂಸಲೇಖ.
ನಿರ್ದೇಶನ: ಓಂ ಸಾಯಿ ಪ್ರಕಾಶ್ 
ಗಾಯಕರು : ಮಧು ಬಾಲಕೃಷ್ಣನ್
ನಟನೆ: ಶಿವರಾಜ್ ಕುಮಾರ್, ರಾಧಿಕಾ, ಅನು ಪ್ರಭಾಕರ್ 


ಬಾರಾ ಬಳೆಗಾರ ತಾರಾ ಮಂಧಾರ
ಹೊಂಬಾಳೆ ತುಂಬ್ಯಾಳೆ...
ಹೊಂಬಾಳೆ ತುಂಬ್ಯಾಳೆ ಹಸಿರು ಗಾಜು ಬಳೆಯ
ತೊಡಿಸಿ ಹಾಡಿ ಹಸೆಯ....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....
ತಂಗಿ ನಿನ್ನ ಕಣ್ಣಲೊಂದು ಪುಟ್ಟ ಕನಸಿದೆ....
ಆ ಕನಸಿಗಾಗಿ ತವರು ಕಾದಿದೆ....
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ,
ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....
ಈ... ಈ ತವರು ಬೆಳಗಲು....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ....

ಅಕ್ಕ-ತಂಗಿಯ ಫಲ, ಮುದ್ದು ಗಂಗೆ ನಾರಿಯ ಫಲ,
ಹೆತ್ತು ತಾರೆ ಚೆದ್ದುಳ್ಳ ಚೆಲುವ ರಾಣಿಯ... ರಾಣಿಯ...

ಸಾವಿರ ನೋವಿರಲಿ, ಚೀರುವ ಚಿಂತಿರಲಿ...
ತವರೆ ಬೆಚ್ಚಗೆ, ಅವರೆ ಮೆಚ್ಚುಗೆ | ಮೊದಲ ಹೆರಿಗೆಗೆ...
ಈ ಸೀತಾಫಲ, ಈ ನಾರಿಫಲ....
ಸೋಕು ಮೆಲ್ಲಗೆ, ಇಂಥ ಕಂದನ | ತಾರೆ ಮಡಿಲಿಗೆ...
ನೀನು ಅತ್ತು ಕುಡಿದ ಬೆಳ್ಳಿ ಲೊಳ್ಳೆ ಇಲ್ಲಿದೆ, ಲೊಳ್ಳೆ ಇಲ್ಲಿದೆ...
ನಿನ್ನ ಮಗುವ ಹಸಿವಿನಳುವ ಕೇಳೆ ಕಾದಿದೆ, ಕೇಳೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ....
ಆ ನಗುವಿಗಾಗಿ ತವರು ಕಾದಿದೆ.... -

ಸೊಂಟಕ್ಕೆ ಬೆಳ್ಳಿ, ದಾರದ ಬೆಳ್ಳಿ ಮಾವ ನೀಡುವ....
ಹಾಲಿನ್ ಕಡಗ, ಹಾಲಿನ್ ಗೆಜ್ಜೇ ಮುಯ್ಯೀ ಮಾಡುವ...
ಶಿರದ ಮ್ಯಾಲೆ ನಿನ್ನ ತೊಟ್ಟಿಲ ಹೊತ್ತು ತಂದು ಕೊಡುವಾ....

ಈ ಮಗುವಿಗೆ ನೆರಳಾಗುವ ಆ ತಂದೆಗೆ ಮನವು ಕರಗದೆ...
ಕಣ್ಣ ಕವಿದಿರೋ, ಗ್ರಹಣ ಕಳೆಯದೆ...
ಈ ಮಕ್ಕಳು ಸಂಧಾನದ ದೇವತೆಗಳು...
ಅಪ್ಪ ಎನ್ನುತ, ಅಮ್ಮ ಎನ್ನುತ, ತಂದು ಬೆಸೆವರು....
ಇನ್ನು ನಿನ್ನ ಬಾಳಿಗೆಂದು ದೃಷ್ಟಿಯಾಗದು, ವಿಘ್ನ ಬಾರದು...
ನಿನ್ನ ಮಗುವ ಪುಣ್ಯ ನಿನ್ನ ನೆತ್ತಿ ಕಾವುದು, ಕುಂಕುಮಾ ನಗುವುದು...
ತಂಗಿ ನಿನ್ನ ಹೆಸರಲಿ, ನಿನ್ನ ಅಣ್ಣನುಸಿರಿದೇ...ಏ...
ಈ ತವರು ಬೆಳಗಲು....

ತಂಗಿ ನಿನ್ನ ಮಗುವಿನಲ್ಲೂ ಒಂದು ನಗುವಿದೆ...
ಆ ನಗುವು ನಮ್ಮ ಅಮ್ಮನಂತಿದೆ...
ತಂಗಿ ನಿನ್ನ ಮಗುವೇ ನಮ್ಮ ತಾಯಿ ಆಗಿದೆ...
ಈ ತವರ ಬಳ್ಳಿ ಕಲ್ಪವಾಗಿದೆ...
ನೀನು ಆಡಿ ಬೆಳೆದಂಥ ತೊಟ್ಟಿಲಿಲ್ಲಿದೆ, ತೊಟ್ಟಿಲಿಲ್ಲಿದೆ...
ನಿನ್ನ ಮಗುವ ನಗುವಿನಾಟ ನೋಡೆ ಕಾದಿದೆ, ನೋಡೆ ಕಾದಿದೆ...
ಎಲ್ಲ ಜನುಮದಲ್ಲಿಯೂ, ನನ್ನ ತಂಗಿ ಆಗು ನೀ....ಈ...
ಈ ತವರು ಬೆಳಗಲು....

********************************************************************************

ಘಳಿ ಘಳಿ ಘಳಿಗೆ

ಸಾಹಿತ್ಯ : ಹಂಸಲೇಖ 
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್


ಘಳಿ ಘಳಿ ಘಳಿಗೆ ಘಳಿ ಘಳಿ ಘಳಿಗೆ ನಾನರೆ ಘಳಿಗೆ
ಕಾಡದಿರಲಾರೆ ಕಾಡದಿರಲಾರೆ ನಾ ನಿನ್ನರೆ ಘಳಿಗೆ
ಅಡಿಗಡಿಗಡಿಗೆ ಅಡಿಗಡಿಗಡಿಗೆ ನಾನಡಿಗಡಿಗೆ
ಸೋಲದಿರಲಾರೆ ಸೇರದಿರಲಾರೆ ನಾ ನಿನ್ನಡಿಗಡಿಗೆ
ಘಳಿ ಘಳಿ ಘಳಿಗೆ..                ಘಳಿ ಘಳಿ ಘಳಿಗೆ..
ಆ ಬಾಳೆ ಬನದೊಳಗೆ ಕೂಡಾಯ್ತು ಕಣ್ಣೊಳಗೆ
ಈ ಬಾಳ ಬನದೊಳಗೆ ಮಾತಾಯ್ತು ಮನದೊಳಗೆ
ದುಂಬಿಗಿನ್ನು ಸಿಹಿಯೂಟ ಮೆಲ್ಲ ಮೊಗ್ಗಿನ ಮೊಗದೊಳಗೆ
ನಿದಿರೆಗಿನ್ನು ಜೂಟಾಟ ಹಗಲು ಕಾಣೊ ಕನಸೊಳಗೆ
ಆ ಊಟ..             ಈ ಆಟ..
ಬೇಕಾಯ್ತು ಮನಗಳಿಗೆ || ಘಳಿ ಘಳಿ ಘಳಿಗೆ ||
ನರಗೊಂಬೆ ನಡು ಒಳಗೆ ಬಳುಕಾಯ್ತು ಈ ನಡಿಗೆ
ಪ್ರಿಯವಾದ ತೋಳೊಳಗೆ ಬಿಗಿಯಾಯ್ತು ಮೈಯುಡುಗೆ
ಅರ್ಧನಾರಿ ಪರಮೇಶ ಆಗೋವಾಸೆ ಒಳಗೊಳಗೆ
ಮನ್ಮಥಯ್ಯನ ಉಪದೇಶ ಕೇಳುವಾಸೆ ಕಿವಿಗಳಿಗೆ
ಆ ಆಸೆ..            ಈ ಆಸೆ..
ಬೇಕಾಯ್ತು ಎದೆಯೊಳಗೆ || ಘಳಿ ಘಳಿ ಘಳಿಗೆ ||

*********************************************************************************

ಜಾಣಮರಿ ಪಾಪು ಮರಿ

ಸಾಹಿತ್ಯ: ಹಂಸಲೇಖ 
ಗಾಯಕರು: ಕೆ. ಎಸ್. ಚಿತ್ರಾ/ಮಧು ಬಾಲಕೃಷ್ಣನ್  


ಓ... ಓ... ಓ... ಓ.. ಓ ..
ಆಆಆ... ಆಆಆ... ಲಲಲಲಲಲ...

ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ 
ಆ...  ನಿದಿರಮ್ಮನ ತೋಟಲಿ ಸೇರಿಕೋ 
ಆ...  ಕನಸಮ್ಮನ ಊರಲಿ ಆಡಿಕೋ 
ನಾ... ಹಾಡುವೇ ಲಾಲಿಯಾ ... ಲಾಲಿಯಾ

ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ

ಅಮ್ಮ ಇದ್ದಿದ್ರೆ ನಾವು ಹೀಗೆ ಇರ್ತೀದ್ವಾ 
ಅಪ್ಪಾ ಇದ್ದೀರೇ ನಾವು ಚಿಂತೆ ಮಾಡಿದ್ವಾ 
ಅಮ್ಮನು ಅಪ್ಪನು ಇಲ್ಲದ ಆ ಶಿವ 
ನನ್ನ ನಿನ್ನ ಕಂಡರೆ ಕರುಬುವ 
ಓದಿಕೋ ಬರೆದುಕೊ ... 
ಓದಿಕೋ ಬರೆದುಕೊ ...
ಲೋಕವ ತಿಳಿದುಕೋ ... 
ನಾ ಹಾಡುವೆ ಲಾಲಿಯಾ... 

ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ

ಜೀವ ನೀನಮ್ಮ ನನ್ನ ಪ್ರಾಣ ನೀನಮ್ಮ 
ನಾನು ಇರೋದೇ ನಿನ್ನ ಕಾವಲಿಗಮ್ಮ 
ತಾಯಿ ಇಲ್ಲದ ತಬ್ಬಲಿ ಅಲ್ಲ ನೀ 
ಅಣ್ಣನ ಕಣ್ಣಲಿ ಅಮ್ಮನ ಕಾಣು ನೀ 
ಗುಂಡಿಗೆ ಸದ್ದಲ್ಲಿ ನಿನ್ನದೇ ಕೂಗಿದೆ ಕೇಳಿ.. ಕೇಳಿಕೊ.. 
ನಾ ಹಾಡುವೇ  ಲಾಲಿಯಾ ... ಲಾಲಿಯಾ

ಜಾಣಮರಿ ಜಾಣಮರಿ 
ಪಾಪು ಮರಿ ಪಾಚೊ ಮರಿ 

********************************************************************************

ತವರಿಗೆ ಬಾ ತಂಗಿ

ಸಾಹಿತ್ಯ : ಹಂಸಲೇಖ 
ಗಾಯನ : ಮಧು ಬಾಲಕೃಷ್ಣನ್  


ಅಣ್ಣಾ... ಅಣ್ಣಾ... ಅಣ್ಣಾ... ಅಣ್ಣಾ...

ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ 
ಕೊಟ್ಟ ಹೆಣ್ಣು  ಕುಲಕ್ಕೆ ಹೊರಗಂತೆ 
ಅತ್ತೆ ಮನೆ ತೊಟ್ಟಾದರೂ ಸರಿಯಂತೆ
ಗಂಡ ಬಲ್ಲೆನೇನು ಅಣ್ಣ ತಂಗಿ ಮಾತು
ಕೋಪ ನುಂಗಬೇಕೇ ತವರು ತಾನೇ ಸೋತು
ಬಾಲ್ಯ ಚಂದವನ್ನ ಬಾಳು ಚಿಂತೆಯಮ್ಮಾ
ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ

ಅಪವಾದರಾಗುವಂತೆ ದೇವರನು ಬಿಡದಂತೆ 
ಆಗಸನ ಮಾತು ಅರಸಗೆ ಶೂಲ 
ಕೆಡಿಸಿತು ಶಂಕೆ ಸೀತೆಯ ಬಾಳ 
ಮನಸಿಗೆ ಸಾಕ್ಷಿ ಮನಸಂತೆ 
ಮನಸಿಗೆ ಮಾತೆ ಬರದಂತೆ 
ಅಣ್ಣಾ.. ಅಣ್ಣಾ... ಅಣ್ಣಾ.. ಅಣ್ಣಾ. 
ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ

ಕಣ್ಣಲ್ಲಿ ಕಣ್ಣಿಟ್ಟು ಸಾಕಿದೆ ನೀ ಉಸಿರಿಟ್ಟು 
ತವರಿನ ಉಸಿರ ಹಿಂಡುವರಲ್ಲಾ ... 
ತವರಿನ ನಿದಿರೆ ಕದಿಯುವರಲ್ಲಾ... 
ಹೆಣ್ಣಿಗೆ  ದೈವ ಪತಿಯಂತೆ 
ನಿಂದೆಗೆ ದೇವರೇ ಗತಿಯಂತೆ 
ಕೊಟ್ಟ ಹೆಣ್ಣು ಕುಲಕ್ಕೆ ಹೊರಗಂತೇ 
ಅತ್ತೆ ಮನೆ ತೊಟ್ಟಾದರೂ ಸರಿಯಂತೆ

ತವರಿಗೆ ಬಾ ತಂಗಿ ತವರಿಗೆ ಬಾ ತಂಗಿ 


*********************************************************************************

No comments:

Post a Comment