Friday, August 31, 2018

ಜನ್ಮ ಜನ್ಮದ ಅನುಬಂಧ (1980)

ಚಲನಚಿತ್ರ: ಜನ್ಮ ಜನ್ಮದ ಅನುಬಂಧ (1980)
ಸಾಹಿತ್ಯ: "ಸಾಹಿತ್ಯರತ್ನ" ಚಿ. ಉದಯಶಂಕರ್ 
ಸಂಗೀತ: ಇಳಯರಾಜ 
ಗಾಯಕರು: ಎಸ್ ಜಾನಕಿ 
ನಿರ್ದೇಶನ: ಶಂಕರ್ ನಾಗ್ 
ನಟರು: ಅನಂತ್ ನಾಗ್, ಆರತಿ  


ಓ......

ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯ.........ಓ ಇನಿಯ......
ನನ್ನನ್ನು ಸೇರಲು ಬಾ ಬಾ
ನನ್ನನ್ನು ಸೇರಲು.....

ನಿನ್ನ ಎಲ್ಲೂ ಕಾಣದೆ ಹೋಗಿ
ನನ್ನ ಜೀವ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ
ಹೀಗೇಕೆ ದೂರ ಓಡಿದೆ
ಓ ಇನಿಯ......ನನ್ನನ್ನು ಸೇರಲು ಬಾ ಬಾ 
ನನ್ನನ್ನು ಸೇರಲು.....

ಓ....

ಏತಕೆ ಹೀಗೆ ಅಲೆಯುತಲಿರುವೆ
ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು
ನೀ ಕಾಣೆ ಏನು ನನ್ನನ್ನು
ಓ ಇನಿಯ.....ನನ್ನನ್ನು ಸೇರಲು ಬಾ ಬಾ
ನನ್ನನ್ನು ಸೇರಲು....


No comments:

Post a Comment