Thursday, August 30, 2018

ಶೃಂಗಾರ ಕಾವ್ಯ (1993)





ಚಲನಚಿತ್ರ : ಶೃಂಗಾರ ಕಾವ್ಯ (1993)
ಸಂಗೀತ & ಸಾಹಿತ್ಯ : ಹಂಸಲೇಖ 
ಗಾಯಕರು: ಎಸ್ ಪಿ ಬಾಲಸುಬ್ರಹ್ಮಣ್ಯಂ, ಚಿತ್ರಾ 
ನಿರ್ದೇಶನ: ಎಸ್. ಮಹೇಂದರ್ 
ನಟರು: ರಘುವೀರ್, ಸಿಂಧು 


ಓಹೊಹೊ ಓಹೊ ... ಅಹಹಾ ಹಹ
ಓ ಮೇಘವೆ ಮೇಘವೆ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ 

ಓ ಮೇಘವೆ ಮೇಘವೆ ಹೋಗಿ ಬಾ
ಈ ಓಲೆಯ ಅವನಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ
ಓ ಮೇಘವೆ........

ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳತಿ  ಓದುವೆಯ
ಮುಗಿಲ ಬಾನಗಳ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳೆಯ  ಓದುವೆಯ
ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ
ಇದು ಓದೋ ಓಲೆಯಲ್ಲ ಬರೆದುಕೊ
ನನ್ನ ಜೀವ ನಿನ್ನದೆ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
ಈ ಕಂಗಳ ಮುಂಬಾಗಿಲ ಬಾ
ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ

ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ
ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ
ವನವೇ ಕಾನನವೇ ಹೂಬನವೇ ಹಸಿರೇ
ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ
ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ
ಒಂದೇ ಜೀವ ಜೋಡಿ ಒಡಲಲಿ
ಈ ಕಂಗಳ ಮುಂಬಾಗಿಲ ಬಾ
ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ
ಈ ಕಂಗಳ ಮುಂಬಾಗಿಲ ಬಾ
ತೆರೆಯುವೆ ಬಂದು ನೀ ಸೇರಿಕೋ

ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ

********************************************************************************

ಜೀವನವೆಲ್ಲವೂ ನಾ

ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಪಿ.ಬಿ 

ಆ ಆ ಆ  ಹಾಹಾಹಾಹಾ ,
ಆ ಆ ಆ  ಹಾಹಾಹಾಹಾ
ಲಲಲ ಲಲಲಲ ಲಲಲಲ ಲಾ ಲಾ 

ಜೀವನವೆಲ್ಲವೂ ನಾ ಹಾಡುವೆ,
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, 
ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,
ಹಾಡಿನ ಮಡಿಲಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, 
ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,
ಹಾಡಿನ ಮಡಿಲಲಿ ನಾ ಬಾಳುವೆ

ಮಧುರ ಮಧುರವೀ  ಕನ್ನಡನಾಡ,
ನುಡಿವ ಬಾಯಿಗಿದು ವೇದ
ವಿನಯ ವಿನಯವೀ ಕನ್ನಡ ಭಾವಾ, 
ಕರುಣೆ ನಾಡಿಗಿದು ಜೀವಾ
ಇಲ್ಲಿ ಬಾನಾಡಿ ನುಡಿಯುವ ಸ್ವರವೇ, 
ನನ್ನ ಪದವಾಗಿದೆ......... ಹೋ
ಇಲ್ಲಿ ಜನನಾಡಿ ಮೀಟುವ ಶ್ರುತಿಗೆ, 
ನನ್ನ ಪದ ಸೇರಿದೆ
ಧರಣೆ ಆಕಾಶ, ತೆರೆಸೋ ಆವೇಶ,
ಧರಣೆ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ, 
ಹಾಡಿನ ನೆರಳಲಿ  ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ,
ಮಣ್ಣ ಋಣ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,
ಹಾಡಿನ ಮಡಿಲಲಿ ನಾ ಬಾಳುವೆ

ಚಲುವೆ ಚಲುವೆ ಈ ಕೊಡಗಿನ ನಾರಿ, 
ಚಲುವಿಗಿವಳೇ  ಸರಿಸಾಟಿ   . . ಆಹಾ... ಓಹೋ
ಸುಮತಿ ಸುಮತಿ ಈ ನಾಡಿನ ಬೆಡಗಿ, 
ಇವಳಿಗ್ಯಾರು ಪೈಪೋಟಿ .... ಅಹಹಾ .... ಓಹೋಹೋ
ಇಂಥ ಊರಲ್ಲಿ  ಲಭಿಸಿದ ಸ್ನೇಹ, 
ಸ್ವರ್ಗ ಸನ್ಮಾನವೊ,...... ಹೋ
ಇಂಥ ಊರಲ್ಲಿ  ಫಲಿಸಿದ ಪ್ರೇಮ ಧೈವ ಸಾಕಾರವೋ,.......
ಧರಣೆ ಆಕಾಶ, ತೆರೆಸೋ ಆವೇಶ,
ಧರಣೆ ಆಕಾಶ, ತೆರೆಸೋ ಆವೇಶ
ತರುವ ಕಸ್ತೂರಿ ಜನ ನನ್ನವರು

ಜೀವನವೆಲ್ಲವೂ ನಾ ಹಾಡುವೆ,
ಹಾಡಿನ ಗುಂಗಲಿ  ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, 
ಮಣ್ಣ ಋಣಾ  ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,
ಹಾಡಿನ ಋಣದಲಿ ನಾ ಬಾಳುವೆ
ನಿಮ್ಮನು ನಾ ಪ್ರೀತಿಸುವೆ, 
ಮಣ್ಣ ಋಣಾ ತೀರಿಸುವೇ
ಜೀವನವೆಲ್ಲವೂ ನಾ ಹಾಡುವೆ,
ಹಾಡಿನ ಮಡಿಲಲಿ ನಾ ಬಾಳುವೆ

*********************************************************************************

ಅಂಬರ ಚುಂಬಿತ

ಸಾಹಿತ್ಯ: ಹಂಸಲೇಖ 
ಗಾಯಕರು: ಎಸ್.ಪಿ.ಬಿ., ಚಿತ್ರಾ


ಹೊಸ ಗಾಳಿ ಹೊಸ ಗಂಧ  ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ   ಅಭಿತನ ಕೋರಿ ಹಾಡಿದೆ
ಹೊಸ ಗಾಳಿ ಹೊಸ ಗಂಧ  ಹೊಸತನ ಬೀರಿ ಬೀಸಿದೆ
ಹೊಸಗಾನ ಹೊಸಮೇಳ  ಅಭಿತನ ಕೋರಿ ಹಾಡಿದೆ
ನವ ಚೈತ್ರ ನವ ತರುಣ
ನವ ಚೈತ್ರ ನವ ತರುಣ
ಬದುಕಿನ ತುಂಬ ತುಂಬಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ   
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ  
ಇದು ಋಷಿ ವಾಣಿಯೊ
ಇದು ಅನುರಾಗದನುಭಾವವೋ
ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ  ಇದು ಋಷಿ ವಾಣಿಯೊ

ಹೊಸ ದಾಹ ಹೊಸ ಮೋಹ  ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಹೊಸ ದಾಹ ಹೊಸ ಮೋಹ ಗರಿಗರಿ ಬೀರಿ ಹಾಡಿದೆ
ಹೊಸ ಮೈತ್ರಿ ಹೊಸ ಬೆಸುಗೆ ಕಲರವಮಾಡಿ ಕಾಡಿದೆ
ಹೊಸ ಮಾತು ಹೊಸ ಮುತ್ತು ಹೊಸ ಮಾತು ಹೊಸ ಮುತ್ತು
ಬದುಕಿನ ತುಂಬ ತುಂಬಿದೆ
ಅಂಬರ ಚುಂಬಿತ ಅಂಬರ ಚುಂಬಿತ
ಅಂಬರ ಚುಂಬಿತ ಪ್ರೇಮ ಪ್ರೇಮ  
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ
ಇದು ಅನುರಾಗದನುಭಾವವೋ
ಅಂಬರ ಚುಂಬಿತ ಪ್ರೇಮ ಪ್ರೇಮ  
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ ಇದು ಋಷಿ ವಾಣಿಯೊ

ಹೊಸ ಧೈರ್ಯ ಹೊಸ ಹುರುಪು   ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ       ಹಸಿಹಸಿರಾಗಿ ಮೂಡಿದೆ
ಹೊಸ ಧೈರ್ಯ ಹೊಸ ಹುರುಪು  ಝರಿಝರಿಯಾಗಿ ಓಡಿದೆ
ಹೊಸ ನೋಟ ಹೊಸ ಪಾಠ      ಹಸಿಹಸಿರಾಗಿ ಮೂಡಿದೆ
ಹೊಸದೆಲ್ಲ ಸವಿ ಬೆಲ್ಲ
ಹೊಸದೆಲ್ಲ ಸವಿ ಬೆಲ್ಲ
ಬದುಕಿನ ತುಂಬ ಸೇರಿದೆ
ಅಂಬರ ಚುಂಬಿತ ಅಂಬರ ಚುಂಬಿತ  
ಅಂಬರ ಚುಂಬಿತ ಪ್ರೇಮ ಪ್ರೇಮ
ನಿರ್ಮಲ ಮನಸಿನ ಕಾವ್ಯ ನಾಮ    
ಇದು ಕವಿ ವಾಣಿಯೊ  ಇದು ಋಷಿ ವಾಣಿಯೊ
ಇದು ಅನುರಾಗದನುಭಾವವೋ
ಅಂಬರ ಚುಂಬಿತ ಪ್ರೇಮ ಪ್ರೇಮ  
ನಿರ್ಮಲ ಮನಸಿನ ಕಾವ್ಯ ನಾಮ
ಇದು ಕವಿ ವಾಣಿಯೊ  ಇದು ಋಷಿ ವಾಣಿಯೊ

*********************************************************************************

ಕನ್ನಡ ಗಂಗೆಯಲಿ


ಸಾಹಿತ್ಯ: ಹಂಸಲೇಖ 
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ 


ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ

ಒಲವಿನ ಶೃತಿಯಿರಲು, ಮನಬಯಸಿದ ಸತಿಯಿರಲು
ಸರಳತೆ ಸವಿಯಿರಲು, ನಿಜ ಗೆಳೆಯರು ಜೊತೆಯಿರಲು
ಸ್ವರ್ಗದ ಕನಸೇತಕೆ, ಮುಕ್ತಿಯ ಭ್ರಮೆಯೇತಕೆ, ಬದುಕಿಗೇ
ಹೊನ್ನಿನ ಹೊರೆಯೇತಕೆ, ಕೀರ್ತಿಯ ಸೆರೆಯೇತಕೆ, ಬದುಕಿಗೇ
ಸುಂದರ ಸಂಸಾರ ಸವಿ ಸಾಲದೆ

ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ

ಕಲೆಗಳ ತವರಿರಲು, ಕವಿ ಋಷಿಗಳ ಬಲವಿರಲು
ಕಲಿಕೆಯ ಕಡಲಿರಲು, ಗುರಿತಲುಪಿಸೊ ಹಡಗಿರಲು
ನಿತ್ಯವು ಹೊಸ ಸಾಧನೆ, ಸತ್ಯವೆ ಆಲೋಚನೆ, ಬದುಕಿಗೇ
ಸ್ನೇಹವೆ ಸಹಚಾರಿಯೋ, ಪ್ರೇಮವೇ ಸಹಪಾಠಿಯೋ, ಬದುಕಿಗೇ
ಸುಂದರ ಸಂಸಾರ ಸವಿ ಸಾಲದೆ

ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ
ಗಂಧದ ಕಂಪಿನಲಿ, ಹಾಡುವೆ ನಾನೀಗ, ಹಾಡುವೆ ನಾನೀಗ
ಜೀವನ ಗಾಯನ ಪಾವನವೊ, ದೇವರ ವರದಿಂದ
ಕನ್ನಡ ಗಂಗೆಯಲಿ ಮೀಯುವೆ ನಾನೀಗ, ಮೀಯುವೆ ನಾನೀಗ

*********************************************************************************

ಶೃಂಗಾರ ಕಾವ್ಯ ಬರೆದನು

ಸಾಹಿತ್ಯ: ಹಂಸಲೇಖ  
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ


ಶೃಂಗಾರ ಕಾವ್ಯ ಬರೆದನು   ಸಂಗೀತ ಸಾರ ಸುರಿದನು
ಶೃಂಗಾರ ಕಾವ್ಯ ಬರೆದನು   ಸಂಗೀತ ಸಾರ ಸುರಿದನು
ಉಸಿರ ಹಿಡಿದ ತಂತಿ ಕಡಿದ  ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು  ಸಂಗೀತ ಸಾರ ಸುರಿದನು
ಕಲೆಗಾರ ಕಡೆದು ಕರುಬಿದ  ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ ಬೆಳೆಗಾರ ಬರವ ಬರಿಸಿದ
ಕನಸು ಸುರಿದಾ ಕಣ್ಣೇ ತೆಗೆದ ಇನ್ನು ಶೂನ್ಯ ಗಾನವೇ
ಶೃಂಗಾರ ಕಾವ್ಯ ಬರೆದನು  ಸಂಗೀತ ಸಾರ ಸುರಿದನು
ಉಸಿರ ಹಿಡಿದ ತಂತಿ ಕಡಿದ ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು  ಸಂಗೀತ ಸಾರ ಸುರಿದನು
ವರವಾಗಿ ಒಲವ ತಂದನು  ಮರವಾಗೊ ಗಿಡವ ಕಡಿದನು
ಶುಭವಾಗಲೆಂದು ನುಡಿದನು  ಸುಖಕಾಣುವಾಗ ಮುನಿದನು
ಜಯವ ತಡೆದ ಭಯವ ಸುರಿದ  ಇನ್ನು ಶೋಕ ಗಾನವೇ
ಶೃಂಗಾರ ಕಾವ್ಯ ಬರೆದನು  ಸಂಗೀತ ಸಾರ ಸುರಿದನು
ಉಸಿರ ಹಿಡಿದ ತಂತಿ ಕಡಿದ  ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು


*********************************************************************************

No comments:

Post a Comment