ಆ ಮೋಡ ಬಾನಲ್ಲಿ ತೇಲಾಡುತ
ಚಲನಚಿತ್ರ: ಧ್ರುವ ತಾರೆ (1985)ನಿರ್ದೇಶನ: ಎಂ. ಎಸ್. ರಾಜಶೇಖರ್
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಚಿ. ಉದಯಶಂಕರ್,
ಗಾಯನ:ಬೆಂಗಳೂರು ಲತಾ, ಡಾ.ರಾಜ್, ವಾಣಿಜಯರಾಂ
ನಟನೆ: ರಾಜ್ ಕುಮಾರ್, ಗೀತಾ, ದೀಪಾ
ಅಹ...ಹ...ಹ....ಲ..ಲ..ಲಾ.....
ಲತಾ: ಆ ಮೋಡ ಬಾನಲ್ಲಿ ತೇಲಾಡುತ
ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಲತಾ :ನನ್ನ ನೋಡುವ ಚಿಂತೆ ನಿನ್ನ ಕಾಡಿದೆಯಂತೆ
ನನ್ನ ಪ್ರೀತಿಗೆ ಸೋತೆ ಎಂದು ಹೇಳಿದೆಯಂತೆ
ನೀನೆ ನನ್ನ ಪ್ರಾಣವೆಂದು ನೀನು ಅಂದ ಮಾತನಿಂದು ನಲ್ಲ ಹೇಳಿದೆ
ರಾಜ್: ಆ ಮೋಡ ಬಾನಲ್ಲಿ ತೇಲಾಡುತ
ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ
ನನ್ನ ಪ್ರೀತಿಗೆ ಸೋತೆ ಎಂದು ಹೇಳಿದೆಯಂತೆ
ನೀನೆ ನನ್ನ ಪ್ರಾಣವೆಂದು ನೀನು ಅಂದ ಮಾತನಿಂದು ನಲ್ಲ ಹೇಳಿದೆ
ರಾಜ್: ಆ ಮೋಡ ಬಾನಲ್ಲಿ ತೇಲಾಡುತ
ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ
ಗಂಡು : ನೂರು ಜನ್ಮವು ತಂದ ನಮ್ಮ ಈ ಅನುಬಂಧ
ಸ್ನೇಹ ಪ್ರೀತಿಯು ತಂದ ಇಂಥ ಮಹದಾನಂದ
ಎಂಥ ಚೆನ್ನ ಎಂಥ ಚೆನ್ನ ಎಂದ ನಿನ್ನ ಮಾತು ಚಿನ್ನ ಇಂದು ಹೇಳಿದೆ
ಜಯರಾಂ: ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಸ್ನೇಹ ಪ್ರೀತಿಯು ತಂದ ಇಂಥ ಮಹದಾನಂದ
ಎಂಥ ಚೆನ್ನ ಎಂಥ ಚೆನ್ನ ಎಂದ ನಿನ್ನ ಮಾತು ಚಿನ್ನ ಇಂದು ಹೇಳಿದೆ
ಜಯರಾಂ: ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ವಾಣಿ : ನಿನ್ನ ನೋಟವೆ ಚೆನ್ನ ನಿನ್ನ ಪ್ರೇಮವೆ ಚೆನ್ನ
ನಿನ್ನ ನೆನಪಲಿ ಚಿನ್ನ ನೊಂದು ಬೆಂದರು ಚೆನ್ನ
ನಿನ್ನ ನೆನಪಲಿ ಚಿನ್ನ ನೊಂದು ಬೆಂದರು ಚೆನ್ನ
ಕಲಹ ಚೆನ್ನ ವಿರಹ ಚೆನ್ನ ಸನಿಹ ಚೆನ್ನ ಎಂದ ನಿನ್ನ ಮಾತನ್ನು ಹೇಳಿದೆ
ಇಬ್ಬರು : ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಡಾ.ರಾಜ್‍ಕುಮಾರ್ : ನನಗೇ ಹೇಳಿದೆ
ವಾಣಿ ಜಯರಾಂ: ನನಗೇ ಹೇಳಿದೆ
ಇಬ್ಬರು : ಆಹ ಆಹಹ, ಹುಂಹುಂ ಹೂಂಹುಂಹೂಂ
ಇಬ್ಬರು : ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ
ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ
ಡಾ.ರಾಜ್‍ಕುಮಾರ್ : ನನಗೇ ಹೇಳಿದೆ
ವಾಣಿ ಜಯರಾಂ: ನನಗೇ ಹೇಳಿದೆ
ಇಬ್ಬರು : ಆಹ ಆಹಹ, ಹುಂಹುಂ ಹೂಂಹುಂಹೂಂ
*********************************************************************************
ಆ ರತಿಯೇ ಧರೆಗಿಳಿದಂತೆ
ಸಾಹಿತ್ಯ : ಚಿ. ಉದಯಶಂಕರ್
ಗಾಯನ : ಡಾ.ರಾಜ್‍ಕುಮಾರ್, ಬೆಂಗಳೂರು ಲತಾ
ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ
ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ
ಮಾಮರ ತೂಗುತ ಚಾಮರ ಹಾಕುತ ಪರಿಮಳ ಎಲ್ಲೆಡೆ ಚೆಲ್ಲುತಿರೆ
ಗಗನದ ಅಂಚಲಿ ರಂಗನು ಚೆಲ್ಲುತ ಸಂಧ್ಯೆಯು ನಾಟ್ಯವ ಆಡುತಿರೆ
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ ಕೋಗಿಲೆಯು ನಲಿಯುತಿದೆ
ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಗಗನದ ಅಂಚಲಿ ರಂಗನು ಚೆಲ್ಲುತ ಸಂಧ್ಯೆಯು ನಾಟ್ಯವ ಆಡುತಿರೆ
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ ಕೋಗಿಲೆಯು ನಲಿಯುತಿದೆ
ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಪ್ರೇಮದ ಭಾವಕೆ ಪ್ರೀತಿಯ ರಾಗಕೆ ಮೌನವೆ ಗೀತೆಯ ಹಾಡುತಿರೆ
ಸರಸದ ಸ್ನೇಹಕೆ ಒಲವಿನ ಕಾಣಿಕೆ ನೀಡಲು ಅಧರವು ಅರಳುತಿರೆ
ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು ಪ್ರೇಮಿಗಳು ನಲಿಯುತಿರೆ
ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
ಸರಸದ ಸ್ನೇಹಕೆ ಒಲವಿನ ಕಾಣಿಕೆ ನೀಡಲು ಅಧರವು ಅರಳುತಿರೆ
ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು ಪ್ರೇಮಿಗಳು ನಲಿಯುತಿರೆ
ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ
********************************************************************************
ನ್ಯಾಯವೆಲ್ಲಿ ಅಡಗಿದೆ
ಚಿತ್ರಗೀತೆ : ಚಿ. ಉದಯಶಂಕರ್
ಗಾಯನ : ಡಾ ರಾಜ್, ಎಸ್.ಜಾನಕಿ

ನ್ಯಾಯವೆಲ್ಲಿ ಅಡಗಿದೆ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
ಯಾರ ಕೇಳಿ ಬಾನಿನಿ೦ದ ಸೂರ್ಯಬಿಸಿಲ ಚೆಲ್ಲುವ
ಯಾರಿಗಾಗಿ ವಾಯುದೇವ ಗಾಳಿಯಾಗಿ ಬೀಸುವ
ಯಾರ ಕರೆಗೆ ಮೇಘರಾಜ ಮಳೆಯ ಸುರಿಸುವ
ಯಾವ ಮನುಜ ನದಿಯ ನೀರ ತನ್ನದೆನ್ನುವಾ

ನೊ೦ದ ಜನರ ಮನಸು ಇ೦ದು ಸಿಡಿದು ಕೆರಳಿ ನಿ೦ತಿದೆ
ನೊ೦ದ ಜನರ ಮನಸು ಇ೦ದು ಸಿಡಿದು ಕೆರಳಿ ನಿ೦ತಿದೆ
ಸಹನೆ ಎ೦ಬ ಮಾತು ಇ೦ದು ನಮಗೆ ಮರೆತು ಹೋಗಿದೆ
ದರ್ಪದಿ೦ದಾ ಜನರ ತುಳಿವ ಕಾಲವೆ೦ದೋ ಮುಗಿದಿದೆ
ಹಿ೦ಸೆಯಿ೦ದಾ ಸಾಧುಜನರ ಮನದಿ ರೋಷ ಉಕ್ಕಿದೆ
ಸ೦ಘಶಕ್ತಿ ಸಿ೦ಹಶಕ್ತಿಯಾಗಿ ನುಗ್ಗಿದೇ
ಜನರ ಶಕ್ತಿಗೆದುರು ನಿಲುವ ಶಕ್ತಿ ಎಲ್ಲಿದೇ
ನೊ೦ದ ಜನರ ಮನಸು ಇ೦ದು ಸಿಡಿದು ಕೆರಳಿ ನಿ೦ತಿದೆ
ಸಹನೆ ಎ೦ಬ ಮಾತು ಇ೦ದು ನಮಗೆ ಮರೆತು ಹೋಗಿದೆ
ದರ್ಪದಿ೦ದಾ ಜನರ ತುಳಿವ ಕಾಲವೆ೦ದೋ ಮುಗಿದಿದೆ
ಹಿ೦ಸೆಯಿ೦ದಾ ಸಾಧುಜನರ ಮನದಿ ರೋಷ ಉಕ್ಕಿದೆ
ಸ೦ಘಶಕ್ತಿ ಸಿ೦ಹಶಕ್ತಿಯಾಗಿ ನುಗ್ಗಿದೇ
ಜನರ ಶಕ್ತಿಗೆದುರು ನಿಲುವ ಶಕ್ತಿ ಎಲ್ಲಿದೇ
ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
ರೈತನನ್ನು ಅನ್ನದಾತ ಎ೦ದು ಹಾಡಿ ಕುಣಿವರೆ
ಮಣ್ಣ ನ೦ಬಿದಾ ಜನರ ಬಾಯ್ಗೆ ಮಣ್ಣ ಹಾಕಬೇಡಿರೀ
ನಮ್ಮ ದೇಶಕೇ ಪ್ರಾಣದ೦ತೆ ರೈತ ಜನರು ಅರಿಯಿರೀ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿದೆ
ದುಡಿವ ಜನರ ಹೊಟ್ಟೆ ಮೇಲೆ ಹೊಡೆಯಬೇಡಿರಿ
ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
ರೈತನನ್ನು ಅನ್ನದಾತ ಎ೦ದು ಹಾಡಿ ಕುಣಿವರೆ
ಮಣ್ಣ ನ೦ಬಿದಾ ಜನರ ಬಾಯ್ಗೆ ಮಣ್ಣ ಹಾಕಬೇಡಿರೀ
ನಮ್ಮ ದೇಶಕೇ ಪ್ರಾಣದ೦ತೆ ರೈತ ಜನರು ಅರಿಯಿರೀ
ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿದೆ
ದುಡಿವ ಜನರ ಹೊಟ್ಟೆ ಮೇಲೆ ಹೊಡೆಯಬೇಡಿರಿ
ಅವರ ಶಾಪದಿ೦ದ ನಾಳೆ ನರಳಬೇಡಿರಿ
*********************************************************************************
ಓ ನಲ್ಲೆ ಸವಿನುಡಿಯ ಹೇಳೆ
ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಡಾ.ರಾಜ್, ವಾಣಿ ಜೈರಾಂ

ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ ಮಾತಲ್ಲಿ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ
ನಿನ್ನಾ ನಯನದಲ್ಲಿ ಏನೋ ಕಾ೦ತಿ ನನ್ನ ಸೆಳೆವ೦ತೆ
ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ
ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ
ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ
ಮರೆಯೊಳಗೆ ಅಡಗಿರುವ ಹಸುಮಗುವು ನಗುವ ನಿಮ್ಮ ನುಡಿಗೆ
ಓ ನಲ್ಲಾ ಸವಿನುಡಿಯ ಹೇಳಿ ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ
ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ
ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ
ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ
ಮರೆಯೊಳಗೆ ಅಡಗಿರುವ ಹಸುಮಗುವು ನಗುವ ನಿಮ್ಮ ನುಡಿಗೆ
ಓ ನಲ್ಲಾ ಸವಿನುಡಿಯ ಹೇಳಿ ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ
ಕ೦ದಾ ಮನೆಗೆ ಬ೦ದ ಸುಖವ ತ೦ದ ನಮ್ಮ ಬಾಳಲ್ಲಿ
ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ
ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ
ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ
ಮಗನಿರುವ ಸಡಗರದಿ ಇನಿಯನನು ಮರೆಯಬೇಡ ಚೆಲುವೆ
ಓ ನಲ್ಲೇ ಸವಿನುಡಿಯ ಹೇಳೆ ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ
ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ
ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ
ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ
ಮಗನಿರುವ ಸಡಗರದಿ ಇನಿಯನನು ಮರೆಯಬೇಡ ಚೆಲುವೆ
ಓ ನಲ್ಲೇ ಸವಿನುಡಿಯ ಹೇಳೆ ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ
ಓ ನಲ್ಲೆ ಓ ನಲ್ಲಾ
ಓ ನಲ್ಲೆ ಓ ನಲ್ಲಾ
ಓ ನಲ್ಲೆ ಓ ನಲ್ಲಾ
*********************************************************************************
No comments:
Post a Comment