Thursday, August 30, 2018

ಪರಶುರಾಮ (1989)



ನಗುತ ನಗುತ ಬಾಳು ನೀನು

ಚಲನ ಚಿತ್ರ: ಪರಶುರಾಮ (1989)
ನಿರ್ದೇಶನ: ವಿ. ಸೋಮಶೇಖರ್ 
ಸಂಗೀತ: ಹಂಸಲೇಖ 
ಸಾಹಿತ್ಯ: 
ಗಾಯಕರು : ರಾಜ್ ಕುಮಾರ್  
ನಟನೆ: ರಾಜ್ ಕುಮಾರ್, ವಾಣಿ ವಿಶ್ವನಾಥ್, ಪುನೀತ್ 


ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ದೀಪ ನಿನ್ನ ನಗು ದೇವರ ರೂಪ ನೀನೇ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು

ಹೂವು ನಕ್ಕಾಗಾ ತಾನೇ ಅಂದ ಇರುವುಧು ದುಂಬಿ ಬರುವುಧು
ಚಂದ್ರ ನಕ್ಕಾಗಾ ತಾನೇ ಬೆಳಕು ಬರುವುಧು ಕಡಲು ಕುಣಿವುಧು

ಸೂರ್ಯಣಾಡೋ ಜಾರೋ ಆಟ ಬಾನು ನಗಲಂತೆ
ಬೀಸೋ ಗಾಳಿ ತೂಗೊ ಪೈರು ಭೂಮಿ ನಗಲಂತೆ
ದೇವರು ತಂದ ಸೃಷ್ಟಿಯ ಅಂದ ಎಲ್ಲರೂ ನಗಲಂತೆ
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ

ಆಕಾಶದ ಆಚೆ ಎಲ್ಲೋ ದೇವರು ಇಲ್ಲವೋ ಹುಡುಕ ಬೇಡವೋ
ಆ ಮಾಯಾಗಾರ ತಾನು ಗಿರಿಯಲಿಲ್ಲವೋ ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವುನು ಒಂದಾಗಿ
ತಂಪಿನಲ್ಲೂ ಕಂಪಿನಲ್ಲೂ ಬರುವನು ಹಿತವಾಗಿ
ಸಂತಸದಲ್ಲಿ ಸಂಬ್ರಮದಲ್ಲಿ ಮಕ್ಕಳ ನಗುವಾಗಿ

ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಬಾಳಿನ ಧೀಪಾ ನಿನ್ನ ನಗು ದೇವರ ರೂಪ ನೀನೇ ಮಗು
ನಗುತ ನಗುತ ಬಾಳು ನೀನು ನೂರು ವರುಷಾ
ಎಂದು ಹೀಗೆ ಇರಲಿ ಇರಲಿ ಹರುಷಾ ಹರುಷಾ
ಉಲ್ಲಾಸದ ಶುಭ ದಿನಕೆ ಸಂತೋಷವೇ ಉಡುಗೊರೆಯು ||೩||



*********************************************************************************

No comments:

Post a Comment