Thursday, August 30, 2018

ಎಕ್ಸ್ ಕ್ಯೂಸ್ ಮಿ..(2003)





ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ

ಚಲನಚಿತ್ರ: ಎಕ್ಸ್ ಕ್ಯೂಸ್ ಮಿ.. (2003)
ನಿರ್ದೇಶನ: ಪ್ರೇಮ್ 
ಸಂಗೀತ: ಆರ್. ಪಿ. ಪಟ್ನಾಯಕ್
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ರಾಜೇಶ್ ಕೃಷ್ಣನ್ 
ನಟನೆ: ಅಜಯ್ ರಾವ್, ಸುನಿಲ್ ರಾವ್, ರಮ್ಯ 


ಪ್ರೀತಿಗೆ ಜನ್ಮ ನೀಡಿದ ಬ್ರಹ್ಮ
ಭೂಮಿಗೆ ತಂದು ಎಸೆದ
ಹಂಚಲು ಹೋಗಿ ಬೇಸರವಾಗಿ
ಹಂಚಿಕೋ ಹೋಗಿ ಎಂದ
ಕೊನೆಗೂ ಸಿಗದೇ ಪ್ರೀತಿ

ಬದುಕು ರಣಭೂಮಿ
ಜಯಿಸಲಿ ಪ್ರೇಮಿ 

ಅವನ ಅವಳ ಬದುಕು ಮುಗಿದರೂನು
ಅವರ ಪ್ರೀತಿ ಗುರುತು ಸಾಯದಿನ್ನು
ಬಿರುಗಾಳಿಗೆ ಸೂರ್ಯ ಹಾರಿ ಹೋದರು
ಪ್ರೀತಿಯು ಹಾರದು
ಈ ಜಗದ ಎಲ್ಲ ಗಡಿಯಾರ ನಿಂತರು
ಪ್ರೀತಿಯು ನಿಲ್ಲದು 

ಬದುಕು ಸುಡುಭೂಮಿ
ನಡುಗನು ಪ್ರೇಮಿ 

ಯಮನು ಶರಣು ಎನುವ ಪ್ರೀತಿ ಮುಂದೆ
ಧನಿಕ ತಿರುಕ ಪ್ರೀತಿ ಮುಂದೆ ಒಂದೆ
ಹಳೆ ಗಾದೆ ವೇದಾಂತ ಬೂದಿಯಾದರು
ಪ್ರೀತಿಯು ಸಾಯದು
ತಿರುಗಾಡುವ ಭೂಮಿಯು ನಿಂತೆ ಹೋದರು
ಪ್ರೀತಿಯು ನಿಲ್ಲದು 

ಬದುಕು ಮರುಭೂಮಿ
ಮಳೆ ಹನಿ ಪ್ರೇಮಿ

********************************************************************************

ಬ್ರಹ್ಮ ವಿಷ್ಣು ಶಿವ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯನ: ಪ್ರೇಮ್ ಮತ್ತು ಸಂಗಡಿಗರು  


ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ
ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ
ಬಾಳಿಗೆ ಒಂದೆ ಮನೆ ಬಾಳೆಗೆ ಒಂದೆ ಗೊನೆ
ಭೂಮಿಗೆ ದೈವ ಒಂದೇನೆ ತಾಯಿ
ದಾರಿಗೆ ಒಂದೆ ಕೊನೆ ರಾಗಿಗೆ ಒಂದೆ ತೆನೆ
ಸೃಷ್ಟಿಸೋ ಜೀವೆ ಒಂದೇನೇ ತಾಯಿ

ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ
ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ

ಜಗದೊಳಗೆ ಮೊದಲು ಜನಿಸಿದಳು
ಹುಡುಕಿದರೆ ಮೂಲ ಸಿಗದಯ್ಯಾ
ದಡವಿರದ ಕರುಣೆ ಕಡಲಿವಳು
ಗುಡಿಯಿರದ ದೇವಿ ಇವಳಯ್ಯ
ಮನಸು ಮಗು ತರ ಪ್ರೀತಿಯಲಿ
ಹರಸೊ ಹಸು ತರ ತ್ಯಾಗದಲಿ
ಜಗ ತೂಗೊ ಜನನಿ ಜೀವದ ಜೀವ ತಾಯಿ

ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ
ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ

ಪದಗಳಿಗೆ ಸಿಗದ ಗುಣದವಳು
ಬರೆಯುವುದು ಹೇಗೆ ಇತಿಹಾಸ
ಬದುಕುವುದ ಕಲಿಸೊ ಗುರು ಇವಳು
ನರಳುವಳೋ ಹೇಗೊ ನವಮಾಸ
ಗಂಗೆ ತುಂಗೆಗಿಂತ ಪಾವನಳು
ಬೀಸೊ ಗಾಳಿಗಿಂತ ತಂಪಿವಳು
ಜಗ ತೂಗೊ ಜನನಿ ಜೀವದ ಜೀವ ತಾಯಿ

ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೊ
ಆಮ್ಮ ನೀನೆ ದೈವ ಅಂತ ಕಾಲು ಮುಗಿದರೊ

*********************************************************************************

ಸಾರಿ ಸಾರಿ..

ಸಾಹಿತ್ಯ; ವಿ. ನಾಗೇಂದ್ರ ಪ್ರಸಾದ್ 
ಗಾಯನ: ಟಿಪ್ಪು, ನಂದಿತಾ 


ಗಂ : ಸಾರಿ ಸಾರಿ..ನಿನ್ನ್ ಕನ್ಸಲ್ ಬರ್ತೀನ್ ಸಾರಿ
ಹೆ : ನಾನ್ ಮಲಗೋದಿಲ್ಲ ಸಾರಿ
ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ
ಹೆ : ನಾ ಕೇಳೋದಿಲ್ಲ ಸಾರಿ
ಗಂ : ಎಲ್ಲಾರ ಹಾಗೆ ನಾನು ಖಾಲಿ
        ಪೋಲಿ ಪೋರ ಅಲ್ವೇ ಅಲ್ಲ ರೀ
       ಸಾರಿ ಸಾರಿ ಸಾರಿ ಸಾರಿ.. ಸಾರಿ...ಸಾರಿ..

ಗಂ : ಸಾರಿ ಸಾರಿ..ನಿನ್ನ್ ಕನ್ಸಲ್ ಬರ್ತೀನ್ ಸಾರಿ
ಹೆ : ನಾನ್ ಮಲಗೋದಿಲ್ಲ ಸಾರಿ
ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ
ಹೆ : ನಾ ಕೇಳೋದಿಲ್ಲ ಸಾರಿ

ಗಂ : ಏಳುವ ವೇಳೆಗೆ ಕಾಫಿಗೆ ಶುಗರ್ ಆಗುವೆ
ಹೆ : ಸಕ್ಕರೆ ಇಲ್ಲದ ಕಾಫಿಯ ನಾ ಕುಡಿಯುವೆ
ಗಂ : ಸಿಗ್ನಲ್ ನಲ್ಲಿ ಬಿಕ್ಷೆ ಬೇಡೋ ನೆಪದಲ್ಲ್ ಬರ್ತೀನಿ
ಹೆ : ಚಿಲ್ಲರೆ ಇಲ್ಲ ಮುಂದಕ್ ಹೋಗೋ ಪೊರ್ಕಿ ಅಂತೀನಿ
ಗಂ : ಡೈಲಿ ಪ್ರೀತಿ ಪಾಠ ಮಾಡೋ ಲೆಕ್ಚರ್ ಆಗ್ತೀನಿ
ಹೆ : ನಿನ್ನ ಕ್ಲಾಸು ಬಂದ್ರೆ ಸಾಕು ಪಿಕ್ಚರ್ ಗ್ ಹೊಡ್ತೀನಿ
ಗಂ : ಬಿಡೇ ಬರೀ ಡವ್ವೆ...ಸಾರಿ ಸಾರಿ..

ಗಂ : ಸಾರಿ ಸಾರಿ..ನಿನ್ನ್ ಕನ್ಸಲ್ ಬರ್ತೀನ್ ಸಾರಿ
ಹೆ : ನಾನ್ ಮಲಗೋದಿಲ್ಲ ಸಾರಿ
ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ
ಹೆ : ನಾ ಕೇಳೋದಿಲ್ಲ ಸಾರಿ

ಗಂ : ತುಂತುರು ಮಳೆಯಲಿ ನೆನೆಸದೆ ಕೊಡೆಯಾಗುವೆ
ಹೆ : ಕೊಡೆಯನು ಹಿಡಿಯಲು ಹುಡುಗರ ಕ್ಯೂ ಇಲ್ಲವೇ
ಗಂ : ನೀನು ಸ್ನಾನ ಮಾಡುವಾಗ ಸೋಪು ನಾನೇ ಕಣೆ
ಹೆ ; ನನ್ನ ಸೋಕಿ ಜರಿ ಬಿದ್ರೆ ಅದಕೆ ನೀನೆ ಹೊಣೆ
ಗಂ : ಸೀರೆ ನೆರಿಗೆ ಹಾಕುವಾಗ ನಾನೇ ಕನ್ನಡಿಯೇ
ಹೆ : ಕದ್ದು ನೋಡೋದ್ ಗೊತಾಗೊದ್ರೆ ನೀನು ಪುಡಿಪುಡಿಯೇ
ಗಂ : ಬಿಡೇ ಬರೀ ಡವ್ವೆ..ಸಾರಿ ಸಾರಿ..

ಗಂ : ಸಾರಿ ಸಾರಿ..ನಿನ್ನ್ ಕನ್ಸಲ್ ಬರ್ತೀನ್ ಸಾರಿ
ಹೆ : ನಾನ್ ಮಲಗೋದಿಲ್ಲ ಸಾರಿ
ಗಂ : ನೀನ್ ಕೇಳಿದ್ ಕೊಡ್ತೀನ್ ಸಾರಿ
ಹೆ : ನಾ ಕೇಳೋದಿಲ್ಲ ಸಾರಿ
ಗಂ : ಎಲ್ಲಾರ ಹಾಗೆ ನಾನು ಖಾಲಿ
       ಪೋಲಿ ಪೋರ ಅಲ್ವೇ ಅಲ್ಲ ರೀ
       ಸಾರಿ ಸಾರಿ ಸಾರಿ ಸಾರಿ..
       ಸಾರಿ...ಸಾರಿ..ಸಾರಿ......

*********************************************************************************

ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯನ: ಆರ್.ಪಿ. ಪಟ್ನಾಯಕ್, ನಂದಿತಾ 


ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ 
ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ
ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ 
ಎಕ್ಸ್ ಕ್ಯೂಸ್ ಮಿ ನಾ ಪ್ರೇಮಿ ನೀ ಲುಕ್ ಮಿ 
ಯು ಕ್ಯಾಚ್ ಮಿ ಯು ಮ್ಯಾಚ್ ಮಿ
ಯು ಯುಸ್ ಮಿ ಯು ಲವ್ ಮಿ ಬಾರಮ್ಮಿ..
ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ 
ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ
ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ

ಹುಡುಗೀರ ನೋಟ ಯಾಕೆ ಹೀಗಿದೆ
ಸೂರ್ಯಾನೆ ಸುಟ್ಟು ಹೋಗೋ ಹಾಗಿದೆ
ದೂಳಾಯ್ತು ಮೂರು ಲೋಕ ಹುಡುಗರು ಯಾವ ಲೆಕ್ಕ
ಆದ್ರೂನು ಪ್ರೀತಿ ಮಾಡ್ತೀವೇ..ಎಕ್ಸ್ ಕ್ಯೂಸ್ ಮಿ
ಹೋಗೋ ಲೋಫರ್..

ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ
ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ
ನಾ ಪ್ರೇಮಿ ನೀ ಲುಕ್ ಮಿ ಯು ಕ್ಯಾಚ್ ಮಿ ಯು ಮ್ಯಾಚ್ ಮಿ
ಯು ಯುಸ್ ಮಿ ಯು ಲವ್ ಮಿ ಬಾರಮ್ಮಿ..

ಒಸಿ ಚಾಕ್ಲೇಟೆ ಬೇಕು ಕೋನು ಐಸ ಕ್ರೀಮೆ ಬೇಕು
ಕಾರು ಎಸಿನೆ ಬೇಕು ಎಲ್ಲ ಒಸಿನೆ ಬೇಕು
ಶೋ ರೂಮಿಂದ ಚೂಡಿದಾರ ಬೇಕು ಇವರಿಗೆ
ನಾವ್ ಕೊಡ್ಸಲ್ಲ ಅಂದ್ರೆ ಸಾಕು ಟಾಟ ಪ್ರೀತಿಗೆ
ಹೂ ನೀಡೋದು ವೇಸ್ಟು ನಾವು
ಲವ್ ಮಾಡೋದು ವೇಸ್ಟು ನಾವು
ಹಾರ್ಟ್ ನೀಡಿದ್ದು ಸುಳ್ಳು ನಾವು ಹುಡುಗೀಗೆ..ಎಕ್ಸ್ ಕ್ಯೂಸ್ ಮಿ
ಹೋಗೋ ಚಪ್ಪರ್..

ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ
ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ
ನಾ ಪ್ರೇಮಿ ನೀ ಲುಕ್ ಮಿ ಯು ಕ್ಯಾಚ್ ಮಿ ಯು ಮ್ಯಾಚ್ ಮಿ
ಯು ಯುಸ್ ಮಿ ಯು ಲವ್ ಮಿ ಬಾರಮ್ಮಿ..

ಬಾರಿ ನಾಜೂಕು ನೀವು ನೀವು ನೀಡೋದು ನೋವು
ಬಾರಿ ಚಾಲಾಕು ನೀವು ಪ್ಯಾದೆ ಆಗೋದ್ವಿ ನಾವು
ನಾವ್ ಮಾಡೋದು ಯಾಕೆ ಇಸ್ತ್ರಿ ನಮ್ಮ ಬಟ್ಟೆಗೆ
ನೀವ್ ಬೀಳ್ಬೇಕು ಅಂತ ತಾನೇ ನಮ್ಮ ಬುಟ್ಟಿಗೆ
ಕೊಕ್ ಕುಡ್ಸಿದ್ದು ವೇಸ್ಟು ನಾವು
ಫಿಲ್ಮ್ ತೋರ್ಸಿದ್ದು ವೇಸ್ಟು ನಾವು
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡುಗೀರೆ..ಏಯ್ ಕಳಚ್ಕೊಳೆ ಲೇ...

ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ
ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ ಎಕ್ಸ್ ಕ್ಯೂಸ್ ಮಿ
ನಾ ಪ್ರೇಮಿ ನೀ ಲುಕ್ ಮಿ ಯು ಕ್ಯಾಚ್ ಮಿ ಯು ಮ್ಯಾಚ್ ಮಿ
ಯು ಯುಸ್ ಮಿ ಯು ಲವ್ ಮಿ ಬಾರೋಲೋ....

*******************************************************************************

ರೋಡಿಗಿಳಿ ರಾಧಿಕ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯನ: ಆರ್.ಪಿ. ಪಟ್ನಾಯಕ್, ಗುರುಕಿರಣ್ 


ರೋಡಿಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ
ಲೌ ಅವ್ನ್ ಬಾಯ್ಗೊಸಿ ನೀರ್ ಬಿಡ್ರಲ
ನಿಗರ್ಕೊಂಬುಟಾನು
ಲೌ ಹಾಡ್ನಾಗೆ ವಸಿ ದಂ ಇರ್ಲಿ ರಿದಂ ಇರ್ಲಿ!!

ಸಿಸ್ಯ ಎರ್ಡೆಟ್ ಹಾಕಲೇ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

ಇದು ಹಾರ್ಟು ಕರಿಯೋ ಗ್ಯಾಂಗು ನೀ ಆಗಬೇಡ ರಾಂಗು
ಡೈಲಿ ಡವ್ ಹೊಡಿ ಅನ್ನುವ ಪೋಕರಿಗಳಿಗೆ ಸ್ಮೈಲನ್ನು ಬಿಸಾಕು
16 ಆಗಿದ್ರು ಸಾಕು ಲವ್ ಸಿಂಬಲ್ಗೆ ವೋಟು ಹಾಕು
ಇದು ಹೋಲಿ ಡೇ ಹಾಲಿಡೆ ಜಾಲಿಡೆ ಲವ್ ಮಾಡೇ ಗೋಳನ್ನು ಬಿಟ್ಟಾಕು
ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ
ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾರಮ್ಮ
ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ
ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ

ನೀನ್ ಕೋಟಿ ಬಣ್ಣದ ಚಿಟ್ಟೆ ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ
ನಮ್ಮ ನಿದ್ದೆ ಕೆಡಿಸಿ ತಣ್ಣೀರ್ ಕುಡಿಸೋ ಬಿಂಕದ ವೈಯಾರಿ
ಇದು ಟಾರು ಇರುವ ರೋಡು ಉಳ್ಕೊಲ್ಲ ಸೊಂಟ ಆಡು
ನಿನ್ನ ಚಮಕ್ಕು ಗಿಮಿಕ್ಕು ಎಲ್ಲಾರು ನೋಡಲಿ ಚಂದಿರ ಚಕೋರಿ!!
ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾರಮ್ಮ
ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾ
ಬಾ ಬಾರೆ....ಲೇಯ್ ಅದ್ ನನ್ ಡವ್ವೋ

ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ...ಅರೆ....ಚಿಂದಿ ಮಾಡೇ ಚಂದ್ರಿಕಾ
ಟಪಾನ್ಗುಚಿ ಆಡು ಬಾರೆ 

*********************************************************************************

ಪ್ರೀತ್ಸೆ ಅಂತ ಪ್ರಾಣ ತಿನ್ನೋ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಗಾಯನ : ಬಾಂಬೆ ಜಯಶ್ರೀ


ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ
ನನ್ನೇ ಪ್ರೀತಿ ಮಾಡು ಅಂತ ಹೇಳಿ ಕೊಟ್ಟೋರ್ ಯಾರೋ

ಇದೇನೋ ನಿನ್ನ ನೋಟ, ಇದೇನಾ ಪ್ರೀತಿ ಆಟ
ಅದೆಲ್ಲಿ ಅಂತ ನಾನು ನಿನ್ನ ಹೇಗೆ ಹುಡುಕಲಿ
ನೀನೆ ಮೊದಲನೇ ಬಾರಿಗೆ, ಬಂದೆ ಹೃದಯದ ಊರಿಗೆ
ಇಳಿದೆ ಮನಸಿನ ಬೀದಿಗೆ, ನೀನ್ಯಾರು?
ನಮ್ಮ ಮೊದಲನೇ ಭೇಟಿಗೆ, ನೀನು ಹೇಳುವ ವೇಳೆಗೆ
ನಾನು ಬರುವುದು ಎಲ್ಲಿಗೆ, ನೀನ್ಯಾರು?
ನನ್ನ ನೋಡೇ ಅಂತ ಹಿಂದೆ ಅಲೆದೊನು ನೀನೇ
ನಿನ್ನ ನೋಡೋ ಆಸೆ ನನಗೆ ಬಾ ಬೇಗನೆ

ಪ್ರೀತ್ಸೆ ಅಂತ..

ನೀನು ಕರೆಯುವೆ ನನ್ನನೇ, ಹೇಗೆ ಇರುವುದು ಸುಮ್ಮನೆ
ನಾನು ಹುಡುಕಿದೆ ನಿನ್ನನೇ, ನೀನ್ಯಾರು?
ಎಲ್ಲಾ ಹುಡುಗರ ಕಣ್ಣನೆ, ಕದ್ದು ನೋಡುವೆ ಮೆಲ್ಲನೆ
ಎಲ್ಲೂ ಕಾಣದ ಚೋರನೆ, ನೀನ್ಯಾರು?
ನಿನಗಾಗೇ ಕಾದೆ ನೀನೆತಕೆ ಬರದೆ ಹೋದೆ
ನೀನಿರದೆ ನಾಳೆ ಹುಡುಗ ನನಗೇನಿದೆ 

ಪ್ರೀತ್ಸೆ ಅಂತ..

*********************************************************************************

ಪ್ರೀತಿ ಏಕೆ ಭೂಮಿ ಮೇಲಿದೇ?

ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್  
ಗಾಯನ: ಉಷಾ, ಆರ್.ಪಿ. ಪಟ್ನಾಯಕ್

ಪ್ರೀತಿ ಏಕೆ ಭೂಮಿಮೇಲಿದೇ?
ಬೇರೆ ಎಲ್ಲು ಜಾಗವಿಲ್ಲದೇ
ನನ್ನೆ ಏಕೆ ಪ್ರೀತಿ ಮಾಡಿದೆ?
ನಿನ್ನ ಹಾಗೆ ಯಾರು ಇಲ್ಲದೆ 
ಪ್ರೀತಿಸಲೂ ಕಾರಣವಹೇಳುವೆಯಾ
ಪ್ರೀತಿಸಲು ಕಾರಣವೆ ಈ ಹೃದಯ
ಪ್ರೀತಿ ಹೀಗೆ ಗಾಳಿ ಹಾಗೆ 
ಹಿಡಿಯಲು ಆಗದು ಅನುಭವ ತರುವುದು 

ಪ್ರೀತಿ ಏಕೆ ಭೂಮಿಮೇಲಿದೆ?
ಬೇರೆ ಎಲ್ಲು ಜಾಗವಿಲ್ಲದೆ 

ನಾನೀದಿನ ಏನಾದೆನೂ? ನಾನೀಗಲೇ ಅವಳಾದೆನು
ನಾನೇತಕೆ ನೀರಾದೆನೂ? ಅವನಿಂದಲೇ ಹೇಗಾದೆನು
ಕಾಣಿಸದು.. ಕೂಗಿದರು ಕೇಳಿಸದು
ಮಾತಿರದು ಮೌನವಿದು ಪ್ರೇಮಾ 

ಪ್ರೀತಿ ಏಕೆ ಭೂಮಿಮೇಲಿದೇ?
ಬೇರೆ ಎಲ್ಲು ಜಾಗವಿಲ್ಲದೇ 

ನೀ ನನ್ನಲೆ ಬೆರೆತಂತಿದೆ
ಈ ಲೋಕವೇ ನಿಂತಂತಿದೆ
ಈ ಅನಿಸಿಕೆ ನನಗೂ ಇದೆ
ಈ ಕಂಪನ ಹೋಸದಾಗಿದೆ!
ವೇದವಿದು ಓದಿದರು ಮುಗಿಯದಿದು
ಜೀವವಿದು ಸಾವಿರದ ಪ್ರೇಮಾ! 

ಪ್ರೀತಿ ಏಕೆ ಭೂಮಿಮೇಲಿದೇ?
ಬೇರೆ ಎಲ್ಲು ಜಾಗವಿಲ್ಲದೇ
ನನ್ನೆ ಏಕೆ ಪ್ರೀತಿ ಮಾಡಿದೆ?
ನಿನ್ನ ಹಾಗೆ ಯಾರು ಇಲ್ಲದೆ
ಪ್ರೀತಿಸಲೂ ಕಾರಣವಹೇಳುವೆಯಾ
ಪ್ರೀತಿಸಲು ಕಾರಣವೆ ಈ ಹೃದಯಾ
ಪ್ರೀತಿ ಹೀಗೆ ಗಾಳಿ ಹಾಗೆ 
ಹಿಡಿಯಲು ಆಗದು ಅನುಭವ ತರುವುದು

ಅ ಅ ಅ ಅ ಅ ಆ 

*********************************************************************************

ತೊಟ್ಟಿಲು ತೂಗೋಳಿಗೆ

ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್  
ಗಾಯನ: ಪ್ರೇಮ್, ಮಧುಕರ್ 


ಅ ಅ ಅ ಅ ಅ ಅ ಅ ಅ ಆ ಆ
ಅ ಅ ಅ ಅ ಅ ಅ ಅ ಅ ಆ ಆ
ತೊಟ್ಟಿಲು ತೂಗೋಳಿಗೆ
ಚಟ್ಟವ ಕಟ್ಟೊದೇಗೆ?
ಹೋದಳೊ ಬಂದಾ ಊರಿಗೆ! ಅ ಆ
ಹಾಲು ಕೊಟ್ಟೊಳಿಗೆ ಬೆಂಕಿ ಹಚ್ಚೊದೇಗೆ... 
ಕರುಣೆ ಇಲ್ಲಾ ಶಿವನಿಗೇ! ಆ ಆ 


*********************************************************************************

No comments:

Post a Comment