Monday, August 27, 2018

ಶ್ರಾವಣ ಬಂತು (1984)


 ಚಲನ ಚಿತ್ರ : ಶ್ರಾವಣ ಬಂತು (1984)
ನಿರ್ದೇಶನ: ಸಿಂಗೀತಂ ಶ್ರೀನಿವಾಸ್ ರಾವ್ 
ಸಂಗೀತ: ಎಂ. ರಂಗಾ ರಾವ್ 
ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು : ರಾಜ್‌ಕುಮಾರ್, ವಾಣಿ ಜಯರಾಮ್  
ನಟನೆ: ರಾಜ್ ಕುಮಾರ್, ಊರ್ವಶಿ, ಶ್ರೀನಾಥ್ 


ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ
ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ ||ಪ||

ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ
ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ||೨||

ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ
ಯುಗವೊಂದು ದಿನವಾಗಿ ದಿನವೊಂದು ಕ್ಷಣವಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ||೨||

ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ
ಗುಡುಗಿಂದ ಸದ್ಧಾಗಿ ಮಳೆಬಂದು ತಂಪಾಗಿ||೨||

ಸಂತೋಷ ಹೆಚ್ಚಾಗಿ ನವಿಲೂನ್ದು ಹುಚ್ಚಾಗಿ
ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ

ಶ್ರಾವಣ ಮಾಸ ಬಂದಾಗ ಆನಂದ ತಂದಾಗ
ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ||೨||

*********************************************************************************

ಇದೇ ರಾಗದಲ್ಲಿ

ಸಾಹಿತ್ಯ: ಚಿ. ಉದಯಶಂಕರ್
ಗಾಯನ: ರಾಜ್ ಕುಮಾರ್, ವಾಣಿ ಜಯರಾಂ

 ಆ...ದಪದಮ  ಆ....ರಿಸರಿದ
ಆ....ಮನಿಸದ ಮಪದ ಮಪಮರಿ

ಇದೇ ರಾಗದಲ್ಲಿ ಇದೇ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ

ಆ  ಯಮುನೆಯಲ್ಲಿ ಅಲೆಅಲೆಯು ಹೊಮ್ಮಿ
ಸಂತೋಷದಿಂದ ಬಾನೆಡೆಗೆ ಚಿಮ್ಮಿ
ಆ  ಇರುಳಿನಲಿ ಆ ನೀರಹನಿ ಕಾಲ್ಗೆಜ್ಜೆ ದನಿ ಮಾಡಿರಲು
ಬೆರಗಾದ ಚಂದ್ರನು ಮೈಮರೆತ ಶ್ಯಾಮ

ಪ....ದಪದಮ ಮರಿಪಮಪದ ಸದರಿಸ
ಆ...ಪಮರಿಸಗರಿಸ ದದಪಮ ಪಸದ
ಪಮರಿಸದ ಸಸದಪಮ ಪಡಸ
ಸ, ರಿಮಪದಮಪದ x3

ಮಧುಮಾಸವೆಂದು ಮಾಮರವು ತೂಗಿ
ಕೊಳಲಂತೆ ಆಗ ಕೋಗಿಲೆಯು ಕೂಗಿ
ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ
ಕಾಲ ಮರೆತು ಹೋದವು ಭುವಿಗೆ ಜಾರಿ ಬಂದವು

ಇದೇ ರಾಗದಲ್ಲಿ ಇದೇ ತಾಳದಲ್ಲಿ
ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ

********************************************************************************

ಬಾನಿನ ಅಂಚಿಂದ ಬಂದೆ 

ಸಾಹಿತ್ಯ: ಚಿ. ಉದಯಶಂಕರ್  
ಗಾಯಕರು: ಡಾ. ರಾಜಕುಮಾರ್, ವಾಣಿ ಜಯರಾಂ  

ಗಂ: ಮೂಡಣದ ಅರಮನೆಯ ಕದವು ತೆರೆಯುತಿರೆ   
ಬಾಲ ರವಿ ನಸುನಗುತ ಇಣುಕಿ ನೋಡುತಿರೆ   
ಆಕಾಶ ಕೆಂಪಾಗಿ, ಭುವಿಯೆಲ್ಲ ರಂಗಾಗಿ   
ನಲಿಯುತ, ಕುಣಿಯುತ, ಬರುತಿರಲು ಉಷೆ,
ಮರೆಯಾದಳು ನಿಶೆ   ।।

ಗಂ: ಬಾನಿನ ಅಂಚಿಂದ ಬಂದೆ ಬಳಿ ನಿಂದೆ   
ಬೆಳಕನ್ನು ಚೆಲ್ಲುತ್ತ ಉದಯರಾಗ ಹಾಡುತಿರುವೆ ।।೨ ಸಲ।।

ಗಂ: ಹೆಜ್ಜೆ ಇಡಲು ನಿನ್ನ ಗೆಜ್ಜೆ ನಗಲು,
ನಾದ ತೇಲಿ ಮೊಗ್ಗು ಹೂವಾಗಿದೆ
ಹೆ:  ಹೂವು ನಗಲು ಅದರ ಜೇನ ಒಡಲು,
ಕಂಡು ದುಂಬಿ ಅಲ್ಲಿ ಹಾರಾಡಿದೆ  ।।
ಗಂ: ಬೆಳಕು ಮೂಡುತಿದೆ 
ಹೆ:  ಸೊಗಸು ಕಾಣುತಿದೆ  ।।೨ ಸಲ।।
ಗಂ: ಹೊಸದು ಜೀವ ತುಂಬುವಂತೆ

ಹೆ:  ಬಾನಿನ ಅಂಚಿಂದ ಬಂದೆ ನಿನ್ನ ಕಂಡೆ 
ಒಲವಿಂದ ಇಂಪಾಗಿ ಉದಯರಾಗ ಆಡುತಿರುವೆ

ಹೆ:  ಎಲೆಯ ಮೇಲೆ ಹಿಮದ ಮಣಿಯ ಸಾಲು,
ಬೆಳಕ ಕಂಡು ಹೊಳೆವ ಮುತ್ತಾಗಿದೆ
ಗಂ: ಮರದ ಮೇಲೆ ಕುಳಿತ ಗಿಳಿಯ ಸಾಲು,
ಮುಗಿಲ ಕಡೆಗೆ ಚಿಮ್ಮಿ ಹಾರಾಡಿದೆ  ।।
ಹೆ:  ಕಡಲ ಅಲೆ ಅಲೆಯು 
ಗಂ:  ಚಿಮ್ಮಿ ಕುಣಿಯುತಿರೆ ।।೨ ಸಲ।।
ಹೆ:  ಭುವಿಯ ಅಂದ ಕಾಣಲೆಂದು

ಗಂ: ಬಾನಿನ ಅಂಚಿಂದ ಬಂದೆ ಬಳಿ ನಿಂದೆ   
ಬೆಳಕನ್ನು ಚೆಲ್ಲುತ್ತ ಉದಯರಾಗ ಹಾಡುತಿರುವೆ   

ಬಾನಿನ ಅಂಚಿಂದ ಬಂದೇ.....

*********************************************************************************

ಹೊಸ ಬಾಳಿನ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ಡಾ. ರಾಜ್ ಕುಮಾರ್ 
.

ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ ||ಪಲ್ಲವಿ||

ಆ ಸ್ವರ್ಗದ ಬಾಗಿಲು ತೆರೆದಿದೆ
ಇಂದು ಈ ಶುಭವೇಳೆಯಲಿ
ಆ ದೇವತೆಗಳು ಉಲ್ಲಾಸದಿ ಬಂದು
ನಿಮ್ಮನು ಹರಸುತಲಿ
ಇದು ಬ್ರಹ್ಮನು ಬೆಸೆದಾ ಅನುಬಂಧ
ಅನುಗಾಲವು ನೀಡಲಿ ಆನಂದ  ||ಪಲ್ಲವಿ||

ಈ ಹಚ್ಚನೆ ಹಸುರಿನ ತೋರಣವು
ಸುಸ್ವಾಗತವೆಂದೂ ಹೇಳುತಿದೆ
ಈ ಮಂಗಳ ವಾದ್ಯವು ಮೊಳಗಿರಲು
ಶುಭಕಾರ್ಯದ ಸಂಭ್ರಮ ಕಾಣುತಿದೆ ಓರುತಿದೆ
ಜನುಮ ಜನುಮದಾ ಸ್ನೇಹವಿದು ||೨ ಸಲ||
ಸಂಸಾರ ಬಾಳಿಗೆ ನಾಂದಿಯಿದು  |ಪಲ್ಲವಿ|

ಈ ಶ್ರಾವಣ ಮಾಸವು ತಂದಾ
ಉಡುಗೊರೆ ಉಲ್ಲಾಸವ ತರಲಿ
ಆ ಮಂಜುನಾಥನ ಕೃಪಾಕಟಾಕ್ಷವು
ಎಂದೆಂದೂ ನಿಮಗಿರಲಿ ಒಂದೇ ವರುಷದ ಅವಧಿಯಲೀ
ಎಂದೆಂದೂ ನಿಮಗಿರಲಿ ಒಂದೇ ವರುಷದ ಅವಧಿಯಲೀ

ಹಸುಕಂದನು ಮಡಿಲಲಿ ನಗುತಿರಲಿ  |ಪಲ್ಲವಿ|

*********************************************************************************

ಮೇರಿ ಮೇರಿ ಮೇರಿ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ರಾಜ್ ಕುಮಾರ್


ಆಹಾ...ಲಲಲ... ಲಲಲಾ...
ಲಲಲಲ...ಹೇ ಹೇ ಹೇ..
ಮೇರಿ ಮೇರಿ ಮೇರಿ |೪|
ಐ ಲವ್ ಯೂ ಅಂದು ಇಂದು ಮುಂದು
ಇನ್ನು ಎಂದೆಂದು ನಾನು ನಿನಗಾಗಿ ನೀನು ನನಗಾಗಿ

ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ ಐ ಲವ್ ಯೂ
ನನ್ನ ರೂಪ ಎಂದೋ ಕಂಡ ನೆನಪೂ ಬಾರದೇ?
ನನ್ನ ಮಾತು ಎಲ್ಲೋ ಕೇಳಿದ ಹಾಗೆ ತೋರದೇ?
ನನ್ನ ಸೇರಿ ಹಾಡಿ ಆಡಿದ ಕನಸೂ ಮೂಡದೇ?
ನಿನ್ನ ಮನವೂ ನನ್ನ ಸ್ನೇಹ ಬೇಕು ಎನ್ನದೇ?
ಈ ನನ್ನ ಪ್ರೇಮ, ಸುಳ್ಳಲ್ಲ ಜಾಣೆ,
ಆನಂದವೆಲ್ಲಾ ನೀ ಒಲಿದರೇನೆ |೨ ಸಲ|
ನಿನ್ನನು ಕಾಣಲೆ, ಸೇರಲು ಇಲ್ಲಿಗೆ ನಾ ಬಂದೆ

ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ ಐ ಲವ್ ಯೂ

ಬಾನಿನಿಂದ ಸೂರ್ಯನೆಂದೂ ಬೇರೆಯಾಗದು
ಭೂಮಿಯಿಂದ ಜಾರಿ ಕಡಲು ದೂರ ಹೋಗದು
ನನ್ನ ನಿನ್ನ ಪ್ರೀತಿ ಸ್ನೇಹ ಎಂದೂ ಮಾಸದು
ಯಾವ ಶಕ್ತಿ ಬಂದರೂನೂ ಬೇರೆ ಮಾಡದು
ನಿಜವಾದ ಪ್ರೇಮ ಧ್ರುವತಾರೆಯಂತೆ
ಅನುರಾಗವೆಂದು ಸುಧೆ ಹೀರಿದಂತೆ
ನಿಜವಾದ ಪ್ರೇಮ ಧ್ರುವತಾರೆಯಂತೆ
ಅನುರಾಗವೆಂದು ಸುಧೆ ಹೀರಿದಂತೆ
ಈ ನುಡಿ ಹೇಳಲೆ, ನೆನಪನು ತುಂಬಲೆ ನಾ ಬಂದೆ

ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ
ಮೇರಿ ಮೇರಿ ಮೇರಿ ಐ ಲವ್ ಯೂ ಐ ಲವ್ ಯೂ

ಅಂದು ಇಂದು ಮುಂದು ಇನ್ನು ಎಂದೆಂದೂ
ನಾನು ನಿನಗಾಗಿ ನೀನು ನನಗಾಗಿ |೨ ಸಲ|
ಲಾಲಾಲಾ...ಲಾಲಾಲಾ...


*********************************************************************************

No comments:

Post a Comment