Friday, August 31, 2018

ಅಪ್ಪು (2002)


ಎಲ್ಲಿಂದ ಆರಂಭವೋ


ಚಲನಚಿತ್ರ: ಅಪ್ಪು (2002)
ಸಾಹಿತ್ಯ: ಶ್ರೀರಂಗ 
ಸಂಗೀತ: ಗುರುಕಿರಣ್ 
ಗಾಯಕರು: ಉದಿತ್ ನಾರಾಯಣ್, ಚಿತ್ರಾ 
ನಿರ್ದೇಶನ: ಪೂರಿ ಜಗನ್ನಾದ್ 
ನಟರು: ಪುನೀತ್ ರಾಜ್ ಕುಮಾರ್ , ರಕ್ಷಿತಾ 


ಎಲ್ಲಿಂದ ಆರಂಭವೋ
ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ
ಈ ಪ್ರೀತಿಗೆ ಸೋತೆನಾ.....
i love you....hey i love you 

ಬಾ ಎಂದಿತು ಈ ಯೌವನ,
ಮಾತಾಡಲು ರೋಮಾಂಚನ
ರೋಮಾಂಚನ ಮಾತಾಡಲು,
ಮೈಯೆಲ್ಲವೂ ಆಲಾಪನ
ಈ ಕಲರವ ಈ ಅನುಭವ
ಹೇಗಾಯ್ತೋ ಏನೋ ಕಾಣೆ ನಾ....

ಬೇಲೂರಿನ ಆ ಗೊಂಬೆಗೂ,
ಮಳೆ ಸುರಿಸುವ ಆಗುಂಬೆಗು
ನಡುವಲ್ಲಿದೆ ಈ ಪ್ರೇಮವು,
ಪ್ರತಿ ನಿಮಿಷವು ಹೊಸ ರಾಗವು
ಈ ಸಂಗಮ ಈ ಸಂಭ್ರಮ
ಹೇಗಾಯ್ತೋ ಏನೋ ಕಾಣೆ ನಾ.......


*****************************************************************************

ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ

ಸಾಹಿತ್ಯ: ಶ್ರೀರಂಗ 
ಹಾಡಿದವರು: ಉದಿತ್ ನಾರಾಯಣ್, ಚಿತ್ರ  


ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ

ಬಾರೋ ಬಾರೋ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ 

ನೀನನ್ನ ಬ್ಯೂಟಿ ಏನ್ಜಲು
ಲವ್ವೊಂದೆ ನಮ್ಮ ಬೈಬಲ್ಲು
ಮದುವೆಯ ಬೆಲ್ಲು ಮೊಳಗಿರಲು
ಬೆರಳಿಗೆ ರಿಂಗು ತೊಡಿಸಿರಲು
ಮುತ್ತಂಥ ಜೋಡಿ ನಮ್ಮದು
ಈ ಪ್ರೀತಿ ಎಂದು ಸೋಲದು
ಎಲ್ಲಿ ಹೇಗೆ ಇದ್ದರು ನಾನು ನೀನು
ಇಬ್ಬರು made for each otherಉ

ಲೈಫಲ್ಲಿ ಲವ್ವೇ ಅಮೃತ
ಜೀವನ್ಮೆ ಪ್ಯಾರೆ ಶಾಶ್ವತ
ಹೃದಯದ ಭಾವ ಬೆರೆತಿರಲು
ಒಲವಿನ ಜ್ಯೋತಿ ಬೆಳಗಿರಲು 
ಪ್ರೇಮಕ್ಕೆ ಮೇರೆ ಇಲ್ಲವೊ
ಪ್ರೀತಿಯೇ ಸೃಷ್ಟಿ ಮೂಲವೋ
ಭಾಷೆ ಬೇರೆಯಾದರು
ಜಾತಿಯೇನೆ ಇದ್ದರು ಪ್ರೇಮವು ಒಂದೇ..... 



*******************************************************************************

No comments:

Post a Comment