Thursday, August 30, 2018

ಅಮೃತವರ್ಷಿಣಿ (1996)


ತುಂತುರು.. ಅಲ್ಲಿ ನೀರ ಹಾಡು

ಚಲನಚಿತ್ರ: ಅಮೃತವರ್ಷಿಣಿ (1996)
ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಚಿತ್ರಾ 
ಸಂಗೀತ: ದೇವಾ
ನಿರ್ದೇಶನ: ದಿನೇಶ್ ಬಾಬು 
ನಟನೆ: ರಮೇಶ್ ಅರವಿಂದ್, ಸುಹಾಸಿನಿ, ಶರತ್ ಬಾಬು 


ತುಂತುರು.. ಅಲ್ಲಿ ನೀರ ಹಾಡು,
ಕಂಪನ.. ಇಲ್ಲಿ ಪ್ರೀತಿ ಹಾಡು..
ತುಂತುರು.. ಅಲ್ಲಿ ನೀರ ಹಾಡು,
ಕಂಪನ.. ಇಲ್ಲಿ ಪ್ರೀತಿ ಹಾಡು..
ಹಗಲಿರಲೀ.. ಇರುಳಿರಲೀ..
ನೀನಿರದೇ.. ಹೇಗಿರಲೀ..
ನನ್ನ ತುಂಬು ಹೃದಯ ನೀ ತುಂಬಿದೆ..
ನಿನ್ನ ಈ ತುಂಬು ಪ್ರೀತಿಯನೂ..
ಕಣ್ಣ ಹಾಡಂತೆ ಕಾಯುವೆನೂ..

ತುಂತುರು.. ಅಲ್ಲಿ ನೀರ ಹಾಡು,
ಕಂಪನ.. ಇಲ್ಲಿ ಪ್ರೀತಿ ಹಾಡು..

ಗಗನದ ಸೂರ್ಯ ಮನೆ ಮೇಲೆ..
ನೀ ನನ್ನ ಸೂರ್ಯ ಹಣೆ ಮೇಲೆ..
ಚಿಲಿಪಿಲಿ ಹಾಡು ಎಲೆ ಮೇಲೆ..
ನಿನ್ನ ಪ್ರೀತಿ ಹಾಡು ಎದೆ ಮೇಲೆ..
ಗಾಳಿ ಗಾಳಿ ತಂಪು ಗಾಳಿ,
ಊರ ತುಂಬಾ ಇದೆಯೋ..
ನಿನ್ನ ಹೆಸರ ಗಾಳಿಯೊಂದೆ..
ನನ್ನ ಉಸಿರಲ್ಲಿದೆಯೋ..
ನಮ್ಮ ಪ್ರೀತಿ ಬೆಳಗೋ ಇತಿಹಾಸವೂ..
ನಿನ್ನ ಸಹಚಾರವೇ ಚೈತ್ರ..
ಅಲ್ಲಿ ನನ್ನ ಇಂಚರ ಅಮರ..

ತುಂತುರು.. ಅಲ್ಲಿ ನೀರ ಹಾಡು,
ಕಂಪನ.. ಇಲ್ಲಿ ಪ್ರೀತಿ ಹಾಡು..

ಚೆಲುವನೆ ನಿನ್ನಾ ಮುಗುಳು ನಗೆ,
ಹಗಲಲು ಶಶಿಯು ಬೇಡುವನೂ..
ರಸಿಕನೆ ನಿನ್ನಾ ರಸಿಕತೆಗೆ,
ಮದನನು ಮರುಗಿ ಸೊರಗುವನೂ..
ತಾಯಿ ತಂದೆ ಎಲ್ಲ ನೀನೆ,
ಯಾಕೆ ಬೇರೆ ನಂಟು..
ಸಾಕು ಎಲ್ಲಾ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು..
ಜಗವೆಲ್ಲ ಮಾದರಿ, ಈ ಪ್ರೇಮವೇ..
ನನ್ನ ಎದೆಯಾಳೋ ಧಣಿ ನೀನೇ..
ನಿನ್ನ ಸಹಚಾರಿಣಿ ನಾನೇ..

ತುಂತುರು.. ಅಲ್ಲಿ ನೀರ ಹಾಡು,
ಕಂಪನ.. ಇಲ್ಲಿ ಪ್ರೀತಿ ಹಾಡು..
ತುಂತುರು.. ಅಲ್ಲಿ ನೀರ ಹಾಡು,
ಕಂಪನ.. ಇಲ್ಲಿ ಪ್ರೀತಿ ಹಾಡು..
ಹಗಲಿರಲೀ.. ಇರುಳಿರಲೀ..
ನೀನಿರದೇ.. ಹೇಗಿರಲೀ..
ನನ್ನ ತುಂಬು ಹೃದಯ ನೀ ತುಂಬಿದೆ..
ನಿನ್ನ ಈ ತುಂಬು ಪ್ರೀತಿಯನೂ..
ಕಣ್ಣ ಹಾಡಂತೆ ಕಾಯುವೆನೂ..
ನಿನ್ನ ಈ ತುಂಬು ಪ್ರೀತಿಯನೂ..
ಕಣ್ಣ ಹಾಡಂತೆ ಕಾಯುವೆನೂ..


*******************************************************************************

ಈ ಸುಂದರ ಬೆಳದಿಂಗಳ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಚಿತ್ರಾ 

ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ
ಈ ಕಂಪಿನ ಅಂಗಳದಲಿ
ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು
ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ.....

ದಿನ....ದಿನ.......ಕ್ಷಣ ಕ್ಷಣ ಚಿನ್ನ ನನ್ನ
ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ
ಕಣ್ಣ ಅಂಚಲೇ ನಗಿಸಿರುವೆ
ಒಲವೆ........ ಒಲವೆ ನಿನ್ನ ನಲಿವೊಂದೆ
ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ
ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ
ಜಗವ ಕೊಳ್ಳೋ ಮನಸು ನನ್ನದು

ಸಮ....ಸಮ......ಸರಿಗಮ ಸಮಾಗಮ
ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ ಇನ್ನು
ಮಾತು ಬರಿ ತೊದಲು ಉಸಿರೇ.....
ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ 
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ...
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ......

ಈ ಸುಂದರ......


********************************************************************************


ಮನಸೇ ಈ ಬದುಕು ನಿನಗಾಗಿ 

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕ: ಎಸ್ ಪಿ ಬಾಲಸುಬ್ರಹ್ಮಣ್ಯಂ


ಮನಸೇ ಈ ಬದುಕು ನಿನಗಾಗಿ ಬವಣೆ ನಿನಗಾಗಿ 
ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ 

ನಿನ್ನ ಒಂದು ಮಾತು ಸಾಕು ಮರುಮಾತು ಎಲ್ಲಿ 
ನಿನ್ನ ಒಂದು ಆಣತಿ ಸಾಕು ನಾ ಅಡಿಗಳಲ್ಲಿ 
ನಿನ್ನ ಒಂದು ಹೆಸರೇ ಸಾಕು ಉಸಿರಾಟಕಿಲ್ಲಿ   
ನಿನ್ನ ಒಂದು ಸ್ಪರ್ಶ ಸಾಕು ಈ ಜನುಮದಲ್ಲಿ 
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಕ್ಷಮಿಸೆ......

ನನ್ನ ಪ್ರೀತಿ ಗಂಗೆ ನೀನು ಮುಡಿಸೇರಲೆಂದೇ
ಸಮಯಗಳ ಸರಪಳಿಯಲ್ಲಿ ಕೈ ಗೊಂಬೆಯಾದೆ 
ನನ್ನ ಬಾಳ ಪುಟಕೆ ನೀನು ಹೊಸ ತಿರುವು ತಂದೆ
ನಿನ್ನ ಮರೆತು ಹೋದರೆ ಈಗ ಬದುಕೇಕೆ ಮುಂದೆ
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ
ಮನಸೇ ಮನಸ ಹರಿಸೆ.....


********************************************************************************


ಭಲೇ ಭಲೇ ಚೆಂದದ ಚೆಂದುಳ್ಳಿ

ಸಾಹಿತ್ಯ: ಕೆ. ಕಲ್ಯಾಣ್ 
ಗಾಯನ:ಎಸ್. ಪಿ. ಬಾಲಸುಬ್ರಹ್ಮಣ್ಯಂ 


ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆಯಿದೆ
ನನ್ನ ಶಿಲ್ಪ ಚೆಲುವೆ ಇವಳ ಮುಂದೆನ್ನ ಬದುಕಿದೆ.....

ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ಭಲೇ ಭಲೇ ಚೆಂದದ ಚೆಂದುಳ್ಳಿ ಹೆಣ್ಣು ನೀನು 
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ ತಾನೇನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯೇ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು 

ತಂಪು ತಂಗಾಳಿಯು ತಂದಾನ ಹಾಡಿತ್ತು
ಕೇಳೋಕೆ ನಾ ಹೋದರೆ
ನಿನ್ನ ಈ ಸರಿಗಮ ಕೇಳಿತು
ಸಮಸಮ ಹಂಚಿತು
ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತ್ತು
ನೋಡೋಕೆ ನಾ ಬಂದರೆ
ನಿನ್ನದೇ ತಕಥೈ ಕಂಡಿತು ತಕಧಿಮಿ ಹೆಚ್ಚಿತು
ಅಲ್ಲೊಂದು ಸುಂದರ ತೋಟವಿದೆ
ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ
ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
ಎಲ್ಲ ಸಾಲಲ್ಲೂ ಇಣುಕೋ ಅಕ್ಷರ ನಿಂದೇನ
ಉತ್ತರ ಇಲ್ಲದ ಸಿಹಿ ಒಗಟು
ನಿನ್ನಂದ ನಿನ್ನಂದ ನಿನ್ನಂದವೇ.....

ಅತ್ತ ಕಾಳಿದಾಸ ಇತ್ತ ರವಿವರ್ಮ
ನಿನ್ನ ಹಿಂದೆ ಬಂದರೂ
ಅಂದವ ಹೊಗಳಲು ಸಾಧ್ಯವೇ
ನಿನ್ನ ಮುಂದೆ ಮೌನವೇ
ಅತ್ತ ಊರ್ವಶಿಯು ಇತ್ತ ಮೇನಕೆಯು
ನಿನ್ನ ನಡೆ ಕಂಡರೆ
ನಡುವೆ ಉಳುಕುತ್ತೆ ಅಲ್ಲವೇ ನಿನ್ನ ಬಿಟ್ಟರಿಲ್ಲವೆ
ಅಲ್ಲೊಂದು ರಾಜರ ಬೀದಿಯಿದೆ
ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆಯಿದೆ
ಇಲ್ಲಿ ಎಂತೆಂಥ ಕನಸೋ ಕಾವಲಿದೆ
ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ
ಹತ್ತಿರ ಇದ್ದರೂ ಬಲು ಎತ್ತರ ಎತ್ತರ
ನಿನ್ನಂದ ನಿನ್ನಂದವೇ......

********************************************************************************

No comments:

Post a Comment