Thursday, August 30, 2018

ನ್ಯಾಯವೇ ದೇವರು (1971)

ಚಲನಚಿತ್ರ: ನ್ಯಾಯವೇ ದೇವರು (1971)
ಗಾಯಕರು: ಪಿ.ಬಿ. ಶ್ರೀನಿವಾಸ್ 
ರಚನೆ: ಚಿ.ಉದಯಶಂಕರ್ 
ಸಂಗೀತ: ರಾಜನ್ ನಾಗೇಂದ್ರ 
ನಿರ್ದೇಶನ: ಎಸ್. ಸಿದ್ದಲಿಂಗಯ್ಯ 
ನಟರು: ಡಾ. ರಾಜಕುಮಾರ್, ಬಿ ಸರೋಜಾದೇವಿ 


ಆಕಾಶವೇ ಬೀಳಲಿ ಮೇಲೆ
ನಾನೆಂದು ನಿನ್ನವನು
ಭೂಮಿಯೇ ಬಾಯ್ ಬಿಡಲಿ ಇಲ್ಲೇ
ನಾನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ
ಈ ಜೀವ ನಿನಗಾಗಿ


ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ
ನೀನಡಿಯ ಇಡುವೆಡೆಯೇ ಒಲವಿನ ಹೂಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯ ಚೆಲ್ಲು ಚೆಲುವೆ 


ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು


ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆರಂಗು ಆರತಿಯಾಯ್ತು
ಇನ್ನ್ನೀಗ ಎರಡೂ ಜೀವ ಬೆರೆತು ಸ್ವರ್ಗವಾಯ್ತು


ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು


No comments:

Post a Comment