
ಸಾಹಿತ್ಯ: ರಘು ದೀಕ್ಷಿತ್ & ವಿ. ಮನೋಹರ್
ಸಂಗೀತ: ರಘು ದೀಕ್ಷಿತ್
ಗಾಯಕರು: ರಘು ದೀಕ್ಷಿತ್, ಹರಿಚರಣ್
ನಟರು: ಧನುಶ್, ಅನಿತಾ ಭಟ್
ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಎನ್ನ ಕರುಣದಿ ಕಾಯೋ ಮಹದೇಶ್ವರ
ಹೇ ಶಂಕರ ಪ್ರೇಮಾಂಕುರ
ಆದ ನಂತರ ನೆಮ್ಮದಿ ದೂರ
ಯಾಕೀಥರ ಹೇಳು ಪ್ರೇಮಾಂಬೊದೆ ಹುನ್ನಾರ
ಇದರಿಂದ ಶಾಂತಿ ಸಂಹಾರ
ಒಮ್ಮೆ ಚಂದದಿ ನೋಡೋ ಮಹದೇಶ್ವರ
ಶಂಭೋ ಹುಂಬರು ನಂಬೋ ಈ ಪಂಜರ
take a break now when listening to the song
praying to the lord when he is all around
protect this world o mahadeshwara
supreme divine shambho hara hara.....
ಈ ಪ್ರೇಮವು ದೇವರ ಹಾಗೆ
ನನ್ನೊಳ ಮನಸು ಪರಿಶುದ್ಧ ಗಂಗೆ
ಹುಸಿ ಮಾಡದೆ ನಾನಿಟ್ಟ ನಂಬಿಕೆ
ಉಸಿರಾಗುತಾಳೆ ಈ ನನ್ನ ಜೀವಕೆ
ಈ ಪ್ರೇಮದಿಂದ ವ್ಯಸನವು ಥರ ಥರ
ಬದುಕಿನ ಗತಿ ಬದಲಿಸೋ ಗಡಿಯಾರ
ನಿನ್ನ ಪೂಜೆಗೆ......
ಓ ಪ್ರೇಮವೇ ನಿನಗೆ ಪ್ರಣಾಮ
ನಿನ್ನಿಂದಲೆ ಈ ಲೋಕ ಕ್ಷೇಮ
ಓಂಕಾರ ರೂಪಿ ಈ ನನ್ನ ಪ್ರೇಮ
ಸಾವಿಲ್ಲದಾ ಚೈತನ್ಯಧಾಮ
ಈ ಮುಗ್ದ ಹೃದಯದಿ ಚಿಗುರಿದೆ ಸಡಗರ
ಗುನುಗುನಿಸಲಿ ಸುಮಧುರ ಝೇಂಕಾರ
ನಿನ್ನ ಪೂಜೆಗೆ ಬಂದೆ ಮಹದೇಶ್ವರ
ಇವನ ಕರುಣದಿ ಕಾಯೋ ಮಹದೇಶ್ವರ
ಶಂಭೋ ಯಾರಿವನ್ಯಾರೋ ಮಹದೇಶ್ವರ
ಪ್ರೇಮ ದೇವರು ಎಂದ ಪ್ರೇಮೇಶ್ವರ
ಬೇರೇನನು ನಾ ಬೇಡೆನು ಈ ಪ್ರೇಮವ ಕಾಪಾಡು ನೀನು
ಈ ಪ್ರೇಮಿಯ ಆಸೆ ಈಡೇರಿಸೋ ಹರ
ಇನ್ನಾಗಲಿ ಬಾಳು ಬಂಗಾರ.....
No comments:
Post a Comment