ಹಾಯಾಗಿ ಕುಳಿತಿರು ನೀನು
ಚಲನಚಿತ್ರ: ಹಾಲು ಜೇನು (1982)ಸಾಹಿತ್ಯ : ಸಾಹಿತ್ಯ ರತ್ನ "ಚಿ. ಉದಯಶಂಕರ್"
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು : ಗಾನ ಗಂಧರ್ವ "ಡಾ. ರಾಜಕುಮಾರ್"
ನಿರ್ದೇಶನ: ಸಿಂಗೀತಂ ಶ್ರೀನಿವಾಸ್ ರಾವ್
ನಟನೆ: ರಾಜ್ ಕುಮಾರ್, ಮಾಧವಿ, ರೂಪಾ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ,

ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ....
ಪಬಬಂ ಪಬಬಂ ಪಬಬಂ...
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ,
ಮಹಾರಾಣಿಯ ಹಾಗೆ....
ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ...
ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ...
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ,
ಮಹನೀಯರಲ್ಲವೇ....
ನೆನ್ನೆಯ ತನಕ ನೀನೆ ದುಡಿದೆ,
ಈ ಸಂಸಾರಕೆ ಜೀವ ತೈದೆ....
ಈ ದಿನವಾದರು ನಿನ್ನ, ಸೇವೆಯ ಮಾಡುವೆ ಚಿನ್ನ...
ಪಬಬಂ ಪಬಬಂ ಪಬಬಂ...
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ,
ಮಹಾರಾಣಿಯ ಹಾಗೆ...
ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ....
ತರರಂ ತರರಂ ತರರಂ...
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ...
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ...
ಮನಸನು ಅರಿತು ನೆಡೆಯುತಲಿರಲು,
ಚಿಂತೆಯ ಮಾತೇಕೆ...
ನೀ ನಗುತಿರಲು ನಮ್ಮೀ ಮನೆಗೆ ,
ಆ ಸ್ವರ್ಗವೇ ಜಾರಿದಂತೆ...
ಹೆಂಡತಿ ಸೇವಕಿಯಲ್ಲ, ಗಂಡನು ದೇವರು ಅಲ್ಲ...
ಪಬಬಂ ಪಬಬಂ ಪಬಬಂ....
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ,
ಮಹಾರಾಣಿಯ ಹಾಗೆ...
ಆಯಾಸ ಪಡದಿರು ಇನ್ನು ಕೂಗುತಲೀಗೆ...
ಎಲ್ಲಾ ಕೆಲಸ ಮಾಡಿ ಮುಗಿಸುವೆ,
ನೀನೆ ಆಗ ಮೆಚ್ಚಿಕೊಳ್ಳುವೆ...
ತರರಂ ತರರಂ ತರರಂ...
********************************************************************************
ಹಾಲು ಜೇನು ಒಂದಾದ ಹಾಗೆ
ಸಾಹಿತ್ಯ:ಚಿ.ಉದಯ್ ಶಂಕರ್ ಗಾಯಕರು:ಡಾ.ರಾಜಕುಮಾರ್
ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,
ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,
ನೀ ನಗುತಲಿ ಸುಖವಾಗಿರೆ,ಆನಂದದಾ ಹೊನಲಾಗಿರೆ,ಬಾಳೇ ಸವಿಗಾನ ...
ಹಾಲು ಜೇನು ಒಂದಾದ ಹಾಗೆ,
ನನ್ನಾ ನಿನ್ನಾ ಜೀವನಾ,
ಬಿಸಿಲಾಗಲಿ,ಮಳೆಯಾಗಲಿ,ನೆರಳಾಗಿ
ನಾನು ಬರುವೆನು ಜೊತೆಗೆ,
ಬಿಸಿಲಾಗಲಿ,ಮಳೆಯಾಗಲಿ,ನೆರಳಾಗಿ
ನಾನು ಬರುವೆನು ಜೊತೆಗೆ,
ಸವಿ ಮಾತಲಿ ಸುಖ ನೀಡುವೆ ಎಂದೆಂದಿಗೂ ಹೀಗೆ,
ಹೂವಾಗಲಿ ಈ ಮೊಗವರಳಿ,ಸಂತೋಷದ ಪರಿಮಳ ಚೆಲ್ಲಿ,
ಹೂವಾಗಲಿ ಈ ಮೊಗವರಳಿ,ಸಂತೋಷದ ಪರಿಮಳ ಚೆಲ್ಲಿ,ಹಾಯಾಗಿರು.
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,
ಈ ತಾವರೆ ಮೂಗವೇತಕೆ,ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ,
ಈ ತಾವರೆ ಮೂಗವೇತಕೆ,ಮೂಗ್ಗಾದ ಹಾಗೆ ಸೊರಗಿದೆ ಚೆಲುವೆ,
ಇಂದೇತಕೆ ಈ ಮೌನವು ಹೀಗೇಕೆ ನೀನಿರುವೆ,
ನೀನೇತಕೆ ಬಾಡುವೆ ಕೊರಗಿ,ನಾನಿಲ್ಲವೇ ಆಸರೆಯಾಗಿ,
ನೀನೇತಕೆ ಬಾಡುವೆ ಕೊರಗಿ,ನಾನಿಲ್ಲವೇ ಆಸರೆಯಾಗಿ, ಹಾಯಾಗಿರು
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,
ನೀ ನಗುತಲಿ ಸುಖವಾಗಿರೆ,ಆನಂದದಾ ಹೊನಲಾಗಿರೆ,ಬಾಳೇ ಸವಿಗಾನ ...
ಹಾಲು ಜೇನು ಒಂದಾದ ಹಾಗೆ,ನನ್ನಾ ನಿನ್ನಾ ಜೀವನಾ,
*********************************************************************************
No comments:
Post a Comment