Thursday, August 30, 2018

ಡ್ರಾಮಾ (2012)


ಚೆಂದುಟಿಯ ಪಕ್ಕದಲಿ

ಚಲನಚಿತ್ರ: ಡ್ರಾಮಾ (2012)
ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ಸೋನು ನಿಗಮ್ 
ಸಂಗೀತ: ವಿ. ಹರಿಕೃಷ್ಣ 
ನಿರ್ದೇಶನ: ಯೋಗರಾಜ್ ಭಟ್ 
ನಟನೆ: ಯಶ್, ರಾಧಿಕಾ ಪಂಡಿತ್, 
ನೀನಾಸಂ ಸತೀಶ್, ಸಿಂಧು ಲೋಕನಾಥ್ 


ಚೆಂದುಟಿಯ ಪಕ್ಕದಲಿ,
ತುಂಬ ಹತ್ತಿರ ನಿಂತು..
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ..?
ಒಂದೊಳ್ಳೆ ಬೈಯ್ಗುಳವ,
ನೀ ನುಡಿಯುವ ಹಾಗೆ..
ಅತಿ ತುಂಟ ಮಾತೊಂದ ನಾನಾಡ್ಲಾ..?
ಕಿಡಿಗೇಡಿ ಕನಸೊಂದ ಕಟ್ಟಿರ್ಲಾ..?
ತಡಮಾಡದೆ ಸಣ್ಣ ಮುತ್ತಿಡ್ಲಾ..?
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ..?


ಚೆಂದುಟಿಯ ಪಕ್ಕದಲಿ, ತುಂಬ ಹತ್ತಿರ ನಿಂತು..
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ..?
ಒಂದೊಳ್ಳೆ ಬೈಯ್ಗುಳವ, ನೀ ನುಡಿಯುವ ಹಾಗೆ..
ಅತಿ ತುಂಟ ಮಾತೊಂದ ನಾನಾಡ್ಲಾ..?


ಈ ನಿನ್ನ ಹಾಡಿನ ಪೋಲಿ ಸ್ವರವಾಗುವೆನು..
ಹಾಡಿನೋಡೆನ್ನನು ಸ್ಮೈಲ್ ಆದ್ರು ಬರಲಿ..
ನಾಚಿಕೆಯ ನೆಪದಲ್ಲಿ ಒಡದಿರು ನನ್ನಿಂದ..
ನೀ ಮೂಡಿದ ಸಂಪಿಗೆಯ
ಸ್ಮೆಲ್ ಆದ್ರು ಸಿಗಲಿ..
ಕೆನ್ನೆಯಲಿ ಕೆಂಪಾಗಿ ಉಳಿದಿರ್ಲಾ..
ಬೆನ್ನಿನಲಿ ಬೆವರಾಗಿ ನಾನಿರ್ಲಾ..
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ..?

ಚೆಂದುಟಿಯ ಪಕ್ಕದಲಿ..

ಒಮ್ಮೊಮೆ ಯೋಚಿಸುವೆ ಯಾತಕ್ಕೆ ನಾನಾದೆ..
ಎದೆಯೊಳಗೆ ಕುರ್ಚಿಯನು ಕೆತ್ತುವ ಬಡಗಿ..
ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು..
ಇನ್ನೆಷ್ಟು ಚಳಿಗಾಲ ಕಾಯುವುದೇ ಹುಡುಗಿ..
ಸ್ವಪ್ನಕ್ಕೆ ಬೆಡ್ ಶೀಟು ಹೊಚ್ಚಿರ್ಲಾ..
ಚಂದ್ರಂಗೆ ಮೊಂಬತ್ತಿ ಕೊಟ್ಟಿರ್ಲಾ..
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ..?

ಬಿಗಿದಿಟ್ಟ ತಂಬೂರಿ ತಂತಿಯಂತಾಗಿರುವೆ..
ತುಂಡು ಮಾಡೆನ್ನನು ಸೌಂಡ್ ಆದ್ರು ಬರಲಿ..
ನಿನ್ನ ತಲೆ ದಿಂಬಿನ..ಚಿತ್ತಾರವಾಗಿರುವೆ..
ನಿನ್ನ ಕನವರಿಕೆಯಲಿ ಒಂದಾದರು ಸಿಗಲಿ..
ಸಿಗದಂಥ ಕೊನೆ ಸಾಲು ಬಿಟ್ಟಿರ್ಲಾ..
ಯಾವ್ದಕ್ಕೂ ಕೊನೆಗೊಂದು ಡಾಟ್ ಇಡ್ಲಾ..
ಇದು ಯಾವ್ದು ಹೇಳ್ದೇನೆ ಮುಚ್ಚಿಡ್ಲಾ..? 

ಚೆಂದುಟಿಯ ಪಕ್ಕದಲಿ, ತುಂಬ ಹತ್ತಿರ ನಿಂತು..
ಗುರಿ ಇಟ್ಟು ಕಾಡಿಗೆಯ ಬೊಟ್ಟಿಡ್ಲಾ..?
ಒಂದೊಳ್ಳೆ ಬೈಯ್ಗುಳವ, ನೀ ನುಡಿಯುವ ಹಾಗೆ..
ಅತಿ ತುಂಟ ಮಾತೊಂದ ನಾನಾಡ್ಲಾ..?

*******************************************************************************

ಹಂಬಲದ ಹೂವನ್ನು

ಸಾಹಿತ್ಯ: ಜಯಂತ್ ಕಾಯ್ಕಣಿ
ಗಾಯನ:ಸುನಿತಾ ಗೋಪುರಾಜ್ , 


ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ, 
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, 
ಸ್ವಪ್ನವನು ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ , 
ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..

ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ, 
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, 
ಸ್ವಪ್ನಗಳ ತಂದಿರುವ ವ್ಯಾಪಾರಿ..

ಹಿಡಿಯಷ್ಟು ಹೃದಯದಲಿ ಹಿಡಿಸಲಾಗದೆ ಹೋದ 
ಮೌನವನು ಶ್ರುತಿ ಮಾಡೋ ವ್ಯಾಯಮವೇಕೆ..
ಅಚ್ಚು-ಮೆಚ್ಚಾಗಿರುವ ಈ ಭಾವ ಸರಿತೆಯಲಿ 
ಅಚ್ಚಿನ ದೋಷಗಳು ಮೈದೂರಬೇಕೇ…
ಹರಿವಾಗ ಈ ಬಾಳು ನದಿಯಾಗಿ, 
ಇರಬೇಕೇ ನೀ ಸಣ್ಣ ಸುಳಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ..

ಹಂಬಲದ ಹೂವನ್ನು…..

ಚಂದಿರನ ಮೊಗದಲ್ಲಿ ಕಂಬನಿಯ ಕಲೆಗಳಿವೆ, 
ಉಂಟಲ್ಲ ಅದರಲ್ಲಿ ನಮಗೊಂದು ಪಾಠ..
ಈ ಪುಟ್ಟ ಕಂಗಳಲಿ, ಲೋಕವೇ ಬಿಂಬಿಸಲಿ, 
ಮೋಹದಲಿ ಸಂಕುಚಿತ-ವಾದೀತೆ..ನೋಟ..
ಬಾಡೀತೆ ಈ ಜೀವ ಬಿಡಿಯಾಗಿ, 
ಬದುಕನ್ನೇ ನೋಡೋಣ ಇಡಿಯಾಗಿ..
ಬೇಕೇನು ಈ ಪ್ರೀತಿ ಇತ್ಯಾದಿ..


ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ, 
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ, 
ಸ್ವಪ್ನಗಳ ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ , 
ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..

*********************************************************************************

ತುಂಡ ಹೈಕಳ ಸಹವಾಸ

ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ವಿಜಯ್ ಪ್ರಕಾಶ್ 

ಹೇ.. ಆಹಿಹೈ.. ಅಯಿಯಾಯಿ ಆಯಿ ಆಯಿ ಆಯಿ ಆಯಿ ಆಯಿ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ತುಂಡ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಒಬ್ಬ ಟಿ ಕೆ ಎಂಕಟೇಶ ಒಬ್ಬ ಕ್ವಾಟಲೇ ಸತೀಶ
ಹೆಂಗೋ ಮೊನ್ನೆ ತಾನೇ ಪಿಯುಸಿ ಮುಗ್ಸವರೆ
ಊರ ಹಾಳು ಮಾಡೋದಕ್ಕೆ ರಿಸರ್ಚು ನಡ್ಸವರೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ 
ಇನ್ನು ಕೇಳಿದರೆ ಕಿವಿ ಹೊಯ್ತವೆ \೨\ ||ಪ||

ತುಂಡ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ಒಬ್ಬ ಟಿ ಕೆ ಎಂಕಟೇಶ ಒಬ್ಬ ಕ್ವಾಟಲೇ ಸತೀಶ.
ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾ ದಯ್ಯಾ
ದಯ್ಯಾರೇ ದಯ್ಯಾ ದಯ್ಯಾ ದಯ್ಯಾ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ ದಯ್ಯಾ ರೇ...

ಇವರು ಕಾಲು ಇಟ್ರು ಅಂದ್ರೆ ಅದೇ ರೋಡು
ಈ ನನ್ನ ಮಕ್ಳಿಗೆ ಬಯೋಡಾಟ ಬೇರೆ ಕೇಡು
ಯೌವ್ವನದ ಹೊಳೆಯಲ್ಲಿ ಹಳೆ ಬೋಟು
ಬೋಟಲ್ಲಿ ನೋರಾಎಂಟು ಹಳೆ ತೂತು
ಬೆಳಗಾಗೆದ್ದು ಬೆಟ್ಟಕ್ಕೆ ದಾರ ಕಟ್ಟಿ ಎಳ್ದವರೇ
ಓಡುತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವರೇ
ಅನಾಸಿನ್ನು ತಿಂದರು ತಲೆ ನೋಯ್ತವೆ 
ಚಿಂತೆಲಿ ಊಟ ಬಿಟ್ರೆ ಗ್ಯಾಸು ಅಯ್ತವೆ \೨\ ||ಪ ||

ಎಂಕಟೇಶ ಅ ಅ ಅ ಅ ಸತೀಶ ಅ ಅ ಅ ಅ
ಎಂಕಟೇಶ ಸತೀಶ ಅ ಅ ಅ   
ಎಂಕಟೇಶ ಅ ಅ ಅ ಸತೀಶ ಅ ಅ ಅ

ದೊಡ್ಡೋರು ಕೊಡೋದಿಲ್ಲ ಪರ್ಮಿಸನ್ನು
ಕಾಂಪೌಂಡು ಹಾರುತವೆ ಜೆನೆರೆಸನ್ನು ಜೆನರೆಷನ್ನು….
ಬೇಕಿಲ್ಲ ಪ್ರಳಯಕೆ ಕಾಯೋದಿನ್ನು
ತುಂಡ ಹೈಕಳು ಮುಳುಗಿಸ್ತಾರೆ ಊರನ್ನು
ಮೀಸೆ ಗಿಸೆ ಬಂದಾಗೆ ಹಗಲು ರಾತ್ರಿ ರಾದ್ದಾಂತ
ಬಿಳಿ ಗಡ್ಡ ಬಂದಾಗ ಹೇಳಿದ್ದೆಲ್ಲಾ ವೇದಾಂತಾ
ಪ್ರತಿ ಎಂಡಿನಲ್ಲೂ  ಸ್ಟಾರ್ಟು ಇರ್ತವೆ 
ಪರಮಾತ್ಮ ಮಾಡೋ ಕೆಲ್ಸ ಇಂತವೇ \೨ ಸಲ\ ||ಪ||

*********************************************************************************

ಬೊಂಬೆ ಆಡ್ಸೋನು ಮೇಲೆ

ಸಾಹಿತ್ಯ : ಯೋಗರಾಜ ಭಟ್

ಗಾಯನ : ವಿ.ಹರಿಕೃಷ್ಣ

ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಲಗಾಮು ದೇವರ ಕೈಯಲ್ಲಿ ನಾವೇನ್ ಮಾಡೋಣ
ಎಲ್ಲಾರು ಮುಖಮುಚ್ಕೊಂಡು ಡ್ರಾಮಾ ಆಡೋಣ
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಒಂದು ಎಡಗಾಲು ಒಂದು ಬಲಗಾಲು
ಒಮ್ಮೆ ಅದು ಮುಂದೆ ಒಮ್ಮೆ ಇದು ಹಿಂದೇ
ಹುಟ್ಟಿಂದ ಚಟ್ಟಕ್ಕೇ.. ಎಷ್ಟಪ್ಪ ಮೆಟ್ಟಿಲು
ಯಾತಕ್ಕೆ ನೀ ಬಂದೇ ಹೇಳಲೇ ಓ.. ಬೋಂಬೆ
ಪ್ರಪಂಚವೆಲ್ಲಿ ಮನುಷ್ಯ ತುಂಬಾ ಸಣ್ಣ ಆಸಾಮಿ
ಅವನಿರದೇ ಹೋದರೂ ತಿರುಗುತ್ತಪ್ಪಾ ಈ ಭೂಮಿ
ಕಾಲಾನೇ ನಮ್ಮ ಕೈಯಲ್ಲಿಲ್ಲಾ ನಾವೇನ್ ಮಾಡೋಣ
ಗಡಿಯಾರ ಕಟ್ಟಿಕೊಂಡು ಡ್ರಾಮ್ ಮಾಡೋಣ
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಲಗಾಮು ದೇವರ ಕೈಯಲ್ಲಿ ನಾವೇನ್ ಮಾಡೋಣ
ಎಲ್ಲಾರು ಮುಖಮುಚ್ಕೊಂಡು ಡ್ರಾಮಾ ಆಡೋಣ
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಇಡ್ಲಿಗೆ ತುದಿ ಯಾವ್ದು ಮುದ್ದೆಗೆ ಬುಡ ಯಾವ್ದು
ಗುಂಡೀಲಿ ಹೆಣ ಯಾವ್ದು ಹುಂಡೀಲಿ ಹಣ ಯಾವ್ದು
ಪ್ರೇಮ ಕೇಸರಿ ಬಾತು ಕಾಮ ಖಾರಾ ಬಾತು
ಜೀವನ ಚೌ ಚೌ ಆಯ್ತು ಯಾಕೆ ದೂಸ್ರಾ ಮಾತು
ಉಪ್ಪನ್ನು ತಿಂದಮೇಲೆ ಬಿಪಿ ಬರದೇ ಇರ್ತಾದಾ
ಉಪ್ಪಿನಕಾಯೀ ಅಂತ ಲೈಫು ತಿನ್ನದೇ ಇರೋಕಾಯ್ತದಾ
ನಾಲ್ಗೇನೆ ನಮ್ ಕೈಲಿಲ್ಲಾ ನಾವೇನ್ ಮಾಡಾಣಾ
ಅವ್ನು ಬರ್ಕೊಟ್ಟ ಡೈಲಾಗ್ ಹೇಳಿ ಡ್ರಾಮಾ ಆಡೋಣಾ
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಒಂದೊಂದು ಮುಸುಡೀಲು ನೂರೆಂಟು ಕಲರ್ರು
ಇಲ್ಲೊಬ್ಬ ಸೂಪರ್ರು ಅಲ್ಲೊಬ್ಬ ಲೋಫರ್ರು
ಲೋಕದ ಮೆಟಾಡೋರು ಓಡಿಸುತಾ ದೇವ್ರು
ಸುಸ್ತಾಗಿ ಮಲಗೋವ್ನೆ ಯಾರಪ್ಪ ಎಬ್ಬಸೋರು
ಯಾವಾನ ಬಿಟ್ಟು ಹೋದ ಹಳೇ ಚಪ್ಲಿ ಈ ಬಾಳು
ಹಾಕ್ಕೋಂಡು ಹೋಗು ಮಗನೇ ನಿಲ್ಲಬೇಡ ನೀನೆಲ್ಲೂ
ಭಗವಂತಾ ರೋಡಲ್ಲಿ ಸಿಕ್ರೆ ನಾವೇನ್ ಮಾಡೋಣ
ಅವನೀಗೂ ಬಣ್ಣ ಹಚ್ಚಿ ಡ್ರಾಮಾ ಆಡೋಣಾ
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ಬೊಂಬೆ ಆಡ್ಸೋನು ಮೇಲೆ ಕುಂತವ್ನು ನಮ್ಗೆ ನಿಮ್ಗೆ ಯಾಕೆ ಟೆನ್ಶನ್ನು
ದೇಹಾನೆ ಟೆಂಪರ್ವರಿ ನಾವೇನ್ ಮಾಡೋಣ
ಮಣ್ಣಲ್ಲಿ ಹೋಗೋಗಂಟಾ ಡ್ರಾಮಾ ಆಡೋಣ

********************************************************************************

ಹೇಳಿಬಿಡು ಹುಡುಗಿ

ಸಾಹಿತ್ಯ : ಯೋಗರಾಜ  ಭಟ್ 
ಗಾಯನ : ಯೋಗರಾಜ  ಭಟ್


ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು 
ತಿಳಿ ನೀಲಿ ಕನಸ , ಬರಿ ಪೋಲಿ ಕನಸ.

ಮಾಮೂಲಿ ಕೋತಿಯ ತಾರುಣ್ಯ ಗೀತೆಯಲಿ 
ಉತ್ತರ ಕಮ್ಮಿ, ಪ್ರಶ್ನೆಯೇ ಜಾಸ್ತಿ..?
ದಾರೀಲಿ ಕೈ ಕಟ್ಟಿ ನಿಂತಿರಲೇ, 
ಹೃದಯಾನ ಸಂಪೂರ್ಣ ಬಿಚ್ಚಿಡಲೇ ...
ಮುಂಗುರುಳ ಸ್ಪ್ರಿಂಗಲ್ಲಿ ಜೋತಾಡಲೇ.. 
ಕಣ್ಣ ರೆಪ್ಪೆಯ ಮೇಲೆ ಮಲಗಿರಲೇ...
ಆಸೆಗಳೆನಿಸಿ ಕೈ-ಬೆರಳು ಸವಿದಿದೆ, 
ಎಲ್ಲಾ ಹೇಳಿದರು ಇನ್ನೇನೋ ಉಳಿದಿದೆ... 

ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು 
ತಿಳಿ ನೀಲಿ ಕನಸ… ಬರಿ ಪೋಲಿ ಕನಸ… 

ಎಲ್ಲಿಯೂ ಹೋಗದ ನಿಂತ ಬಸ್ಸಲ್ಲಿ 
ಸೀಟೊಂದ ಹಿಡಿದವನು ನಾನು.
ಇಳಿ ಸಂಜೆಯಲಿ ನಾನು ನನ್ನ 
ನಂಬರಿಗೆನೆ ಮಾಡುವೆನು ಫೋನು..
ಈ ನಡುವೆ ಹೀಗೆ ಎಲ್ಲಿಯೋ ನೋಡುವೆನು, 
ಎಲ್ಲಿಗೋ ಹೋಗುವೆನು, ಏನನ್ನೋ ಕಾಯುವೆನು..
ನೀ  ಸಿಕ್ಕರು...  ಸಿಗದಿದ್ದರೂ ಎದೆತುಂಬ ಹಾಡುವೆನು….

ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು 
ತಿಳಿ ನೀಲಿ ಕನಸ… ಬರಿ ಪೋಲಿ ಕನಸ

*********************************************************************************

ಡ್ರಾಮಾ ಹಿತವಚನ 

ಸಾಹಿತ್ಯ: ಯೋಗರಾಜ ಭಟ್ಟ  

ಗಾಯನ:ಟಿಪ್ಪು 


ಡ್ರಾಮ್ ತಾನಿನನನ ಒತ್ಲಾ ಹಿತವಚನ..ಹೇ..
ಸಂಡೇ ಆದಮೇಲ್ ಮಂಡೇ ಬರ್ತದೇ
ಟೆಂತ್ ಆದ್ರೇ ಪಿಯು ಬರ್ತದೇ
ಕಾರಿಡಾರ್ಲಿ  ಲೇ ಕಾಲು ಜಾರ್ತದೆ
ಮುಂದೆ ಹೇಳೋಕೆ ನಾಚ್ಕೆ ಆಯ್ತದೇ
ಹಾಳು ಯೌವ್ವನ ಯಾಕೇ ಬರ್ತದೇ
ಲೈಫು ಸಾಲದು ಟೈಮ್ ಪಾಸಿಗೇ
ಸೀದಾ ಮಾಲಕೊಂಡರೂ ಸೊಂಟ ನೋಯ್ತದೇ
ಇಪ್ಪತ್ತಾದರೇ ಹಿಂಗ್ಯಾಕಾಯ್ತದೆ
ಒತ್ತಲ್ ಒತ್ತಲ್ ಒತ್ತಲ್ ಆಸೆ ದುಃಖಕ್ಕೆ ಮೂಲ
ಹೂ ಕಣ್ ಹೂ ಹೇಳ್ ಲಾ ವಾಟ್ ಇಸ್ ದಿಸ್ ನಾನ್ಸೆನ್ಸ್ ಯಾ ??

ಡ್ರಾಮ್ ತಾನಿನನನ ಒತ್ಲಾ ಹಿತವಚನ
ಪಂ
ಬುಡ್ಲಾ ಮಂಡ್ಯಾ ರಾಪ್
ತುಂಬಾ ಸಾಣೆ ಹಿದ್ರೆ ಚಾಕು ಇರಲ್ಲ ಹ್ಯಾಂಡ್ಲ್ ಇರ್ತದೇ
ಸುಳ್ಳ್ ಒರಿಜಿನಲ್ ಸತ್ಯ ಡೂಪ್ಲಿಕೇಟ್
ಸಾಂಬ್ರಾಣಿ ಹೋಗೆ ಹಂಗೆ ಮೂರದಿಂದ ಬಾಳು ಎಕ್ಸ್ಟ್ರಾರ್ಡಿನರಿ
ಮೊಟ್ಟೆ ತಿಂದ್ರೆ ಮರಿ ಇಲ್ಲ ಕೋಳಿ ತಿಂದ್ರೆ ಮೊಟ್ಟೆ ಇಲ್ಲ
ಪಾಪ ಮಾಡಿದರೇ ಪೇಮೆಂಟ್ ಇದೆ ಸ್ವಪ್ನಕ್ಕೆ ಬಡ್ಡಿ ಬೀಳತದೆ
ಲೆಕ್ಕ ಬರ್ಕಲಿ ಬರ್ಕಲಿ ಬರ್ಕಲಿ
ಹೂವಿಗೆ ಕೆಲಸ ಇಲ್ಲ ಅರಳುತಾವೆ
ಹುಡುಗರಿಗ ಕೆಲಸ ಇಲ್ಲ ನರಳುತ್ತಾವೆ
ಒಂದಿಷ್ಟ ಹಿಂಗೇ ಹೇಳತೀವಿ ನೀವು  ಮಿಕ್ಕಿದೆನೋ ಮಾಡಕೊಳಿ ನೀವೂ
ಮಕ್ಕಳು ಮಾಡಬೇಡಿ ದೊಡ್ಡೋರಾಯ್ತಾರೆ
ದೊಡ್ಡರಾಗಬೇಡಿ ಮಕ್ಕಳು ಬೈತಾರೇ
ಬ್ಯಾರೇ ಏನ್ ಮಾಡದ್ ಲಾ.. ?
ದಪ್ಪಾ ಆದರೆ ಹೊರರೋರು ಬೈತಾರೆ
ಉದ್ದ ಆದರೆ ಹುಳೋರು ಬೈತಾರೇ
ಡೋಂಟ್ ಡೈ ಯಾ
ಫಾರೆನ್ ಅಲ್ಲಿ ಬ್ಯಾರೇದೇಲ್ಲಾ ಮೊದಲು ಪ್ರೀತಿ ಆಮೇಲೆ
ಇಂಡಿಯಾದಲ್ಲಿ ಪ್ರೀತಿ ಗೀತಿ ಮೊದಲು ಬ್ಯಾರೇದ ಆಮೇಲೆ
ಒತ್ತಲ್ ಒತ್ತಲ್ ಒತ್ತಲ್ ಬ್ಯಾರೇ  ಎಲ್ಲಾನ್ ಹುಟ್ಟಲಾ
ಹೂ ಕಣ್ ಹೂ ಕಣ್ ಹೋಗ್ಲಾ  ವಾಟ್ ಇಸ್ ದಿಸ್ ನಾನ್ಸೆನ್ಸ್ ಯಾ.. ?
ಡ್ರಾಮ್ ತಾನಿನನನ ಒತ್ಲಾ ಹಿತವಚನ

ಗಾದೆ ಮಾತೊಂದ ಸ್ವಲ್ಪ ತಿಳಕಳಿ
ಕೈ ಕೆಸರಾದರೆ ಕೈ ತೊಳಕೊಳ್ಳಿ ಎಕ್ಸ್ಟ್ರಾ ಆರ್ಡಿನರಿ
ಪ್ರೀತಿ ಆದಾಗ್ ಚೂರು ತಡಕೊಳ್ಳಿ ತುಂಬಾ ಆರ್ಡಿನರಿ
ಒಲವು ಒಂದು ದೇವರ ತುರಿಕೆ ಸೊಪ್ಪು ಎಲ್ಲಾರು ಕೆರೆಕೊಳ್ಳಿ
ಬಾಳು ಒಂದು ತೆಂಗಿನ ಕಾಯಿ ಚಿಪ್ಪು ಎಲ್ಲಾರು ಹಿಡಕೊಳ್ಳಿ
ಒತ್ತಲ್ ಒತ್ತಲ್ ಒತ್ತಲ್ ತೆಗಿಯೋ ಬಾಟಲಿ ಮುಚ್ಚಿಲ್ಲಾ
ಹೂ ಕಣ್ ಹೂ ಕಣ್ ಹಾಕಲಾ ಸ್ಟಾಪ್ ದಿಸ್ ನಾನ್ಸೆನ್ಸ್ ಯಾ
ಡ್ರಾಮ್ ತಾನಿನನನ ಒತ್ಲಾ ಹಿತವಚನ

*********************************************************************************

No comments:

Post a Comment