ಓ ನಲ್ಮೆಯ ನಾವಿಕನೆ
ಚಲನಚಿತ್ರ: ಜಂಗ್ಲಿ (2009)ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕರು: ಎಂ. ಡಿ. ಪಲ್ಲವಿ
ಸಂಗೀತ: ವಿ. ಹರಿಕೃಷ್ಣ
ನಿರ್ದೇಶನ: ಸೂರಿ
ನಟರು: ವಿಜಯ್, ಐಂದ್ರಿತಾ ರೇ
ಓ ನಲ್ಮೆಯ ನಾವಿಕನೆ
ಎಂದು ನಿನ್ನ ಆಗಮನ
ನೀ ಎಲ್ಲಿಯೇ ಅಡಗಿದರು
ಅಲ್ಲೇ ನನ್ನ ಈ ಗಮನ
ಈ ಪ್ರೀತಿಯ ಪರಿಣಾಮ
ನಿನಗೂ ಕೂಡ ಹೀಗೆನಾ
ಕರೆದುಬಿಡು ನನ್ನ ನೀ ಬೇಗ
ಬರೆದುಕೊಡು ಎಲ್ಲ ಆವೇಗ
ಮಿರುಗುತಿದೆ ಜೀವ ನೋಡೀಗ
ಏನು ಕಾರಣ ನನ್ನ ಪಾಡಿಗಿಲ್ಲಿ
ನಾನು ನಿನ್ನ ಹಾಡು ಹಾಡಲೇನು
ನಿನ್ನ ಊರಿನಿಂದ ಬಂದ ತಾರೆಯನ್ನೇ ನೋಡಲೇನು
ಹಚ್ಚಿಕೊಂಡ ಹುಚ್ಚಿ ನಾನು ನೀನು ಹೀಗೆನಾ?
ನಡೆಯುತಿರುವಾಗ ಜೊತೆ ನೀನು
ಹಿಡಿದುಕೊಳಲೇನು ಕೈಯನ್ನು
ತಡೆಯದಿರು ಯಾವ ಮಾತನ್ನು ನೀನು ಈ ದಿನ
ಬೇರೆ ಏನು ಕಾಣಲಾರೆ ಒಮ್ಮೆ ನೀನು ಕಂಡ ಮೇಲೆ
ಬಾಕಿ ನೂರು ಮಾತನೆಲ್ಲ ಮೌನದಲ್ಲೇ ಅಂದಮೇಲೆ
ಮೋಹದಲ್ಲಿ ಮೂಕಿ ನಾನು ನೀನು ಹೀಗೆನಾ?
*********************************************************************************
ನೀನೆಂದರೆ ನನ್ನೊಳಗೆ
ಸಾಹಿತ್ಯ: ಜಯಂತ್ ಕಾಯ್ಕಿಣಿ ಗಾಯಕರು: ಸೋನು ನಿಗಮ್
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ..
ಓ ಜೀವವೇ ಹೇಳಿಬಿಡು.. ನಿನಗೂ ಕೂಡ ಹೀಗೇನಾ..
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ಏನೋ ಒಂದು ಸಂಚಲನ...
ತಂದೆನು ಪಿಸು ಮಾತು ಜೇಬಲ್ಲಿ, ಕಂಡೆನು ಹಸಿ ಮಿಂಚು ಕಣ್ಣಲ್ಲಿ,
ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈಮನ..
ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು..
ನಿನ್ನ ನೆರಳು ಸುಳಿಯುವಲ್ಲೂ ಹೂವ ತಂದು ಸುರಿಯಲೇನು..
ನಂಬಿ ಕೂತ ಹುಂಬ ನಾನು.. ನೀನು ಹೀಗೇನಾ..
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ..
ಹೂವಿನ ಮಳೆ ನೀನು ಕನಸಲ್ಲಿ, ಮೋಹದ ಸೆಲೆ ನೀನು ಮನಸಲ್ಲಿ..
ಮಾಯದ ಕಲೆ ನೀನು ಎದೆಯಲ್ಲಿ, ಒಲಿದ ಈ ಕ್ಷಣ..
ನಿನ್ನ ಗುಂಗಿನಿಂದ ನನ್ನ, ಬಂದು ಪಾರು ಮಾಡು ನೀನು..
ಒಂದೇ ಕನಸು ಕಾಣುವಾಗ, ನಾನು ನೀನು ಬೇರೆ ಏನು..
ಶರಣು ಬಂದ ಚೋರ ನಾನು.. ನೀನು ಹೀಗೇನಾ..
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ..
ಓ ಜೀವವೇ ಹೇಳಿಬಿಡು.. ನಿನಗೂ ಕೂಡ ಹೀಗೇನಾ..
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ಆಹಾ...! ಏನೋ ಒಂದು ಸಂಚಲನ...
No comments:
Post a Comment