Thursday, August 30, 2018

ಕರ್ಪೂರದ ಗೊಂಬೆ (1996)



ತಬ್ಬಲಿಗೆ ಈ ತಬ್ಬಲಿಯ

ಚಲನಚಿತ್ರ : ಕರ್ಪೂರದ ಗೊಂಬೆ (1996) 
ಸಾಹಿತ್ಯ : ನಾದಬ್ರಹ್ಮ" ಹಂಸಲೇಖ"
ಸಂಗೀತ: ಹಂಸಲೇಖ 
ಗಾಯಕರು : ಕೆ. ಎಸ್. ಚಿತ್ರಾ
ನಿರ್ದೇಶನ: ಎಸ್. ಮಹೇಂದರ್ 
ನಟನೆ: ಶೃತಿ, ರಮೇಶ್ ಅರವಿಂದ್, ಶ್ವೇತಾ 



ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ,
ತವರಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ,
ನಗುವಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ,
ತವರಿದೆ ಯಾಕ ಅಳುವೆಯೇ....?

ನನ್ನಯಾ, ಪ್ರೀತಿಯಾ, ಹಕ್ಕಿ ಮನ ಒಲಿಸಿದೆ |
ದೂರ ದೂರ ಕಳಿಸಿದೆ...
ನಿನ್ನಯಾ, ಪ್ರೀತಿಯಾ, ಹಕ್ಕಿಗೆ ಸುದ್ಧಿ ತಲುಪಿಸಿ |
ತರೋ ಹೊರೆ ಹೊರಿಸಿದೆ...
ಹಗಲು ಕಳಿಸಿರುವೇ, ನಾ ಇರುಳ ಒಳಗಿರುವೆ....
ಬೆಳಕು ಬರೊವರೆಗೂ, ನಾ ನಿನ್ನ ಜೊತೆಯಿರುವೆ...

ತಬ್ಬಲಿಗೆ ಈ ತಬ್ಬಲಿಯ,
ತವರಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ,
ನಗುವಿದೆ ಯಾಕ ಅಳುವೆಯೇ....?

ಏನಿದೆ, ಇನ್ನೇನಿದೆ, ನಿನ್ನ ಬಿಟ್ಟು ಏನಿದೇ |
ನೀನೇ ಬದುಕಾಗಿದೆ...
ಕರುಳಿನಾ, ಗೆಳತಿಯೇ, ತಾಯಿಲ್ಲದ ತವರಿಗೆ |
ಅಕ್ಕಾ ತಾನೇ ದೀವಿಗೆ...
ಕಣ್ಣು ನೀನಮ್ಮಾ , ರೆಪ್ಪೇ ನಾನಮ್ಮಾ...
ನಿನ್ನ ಕಣ್ಣೋರೆಸೋ, ತಾಯಿ ನಾನಮ್ಮಾ...
ತಬ್ಬಲಿಗೆ ಈ ತಬ್ಬಲಿಯ,
ನಗುವಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ,
ನಗುವಿದೆ ಯಾಕ ಅಳುವೆಯೇ....?
ಜೋ ಜೋ ಜೋ...ಲಾಲಿ... ಜೋ ಜೋ ಜೋ....
ಜೋ ಜೋ ಜೋ...ಲಾಲಿ... ಜೋ ಜೋ ಜೋ....

ಸಾವಿನಾ, ಸೆರಗಲಿ, ಎಲ್ಲೋ ಒಂದು ಎಳೆಯಿದೆ |
ಬಾಳು ಎಂದು ಸೆಳೆದಿದೆ...
ಭೂಮಿಗೂ, ಬಾಳಿಗೂ, ಅಗೋಚರ ನಂಟಿದೆ |
ತುಂಡಾದರೂ ಅಂಟಿದೆ...
ಸಾವೇ ನಿಜವಿಲ್ಲಿ, ಗುಟ್ಟೇನು ಬಂತಿಲ್ಲಿ....
ನಾವು ನೆಪವಿಲ್ಲಿ, ರಟ್ಟಾಯಿತೋ ಇಲ್ಲಿ....

ತಬ್ಬಲಿಗೆ ಈ ತಬ್ಬಲಿಯ,
ತವರಿದೆ ಯಾಕ ಅಳುವೆಯೇ....?
ಆ....ಆ.....ಆ.....ಆ...
ತಬ್ಬಲಿಗೆ ಈ ತಬ್ಬಲಿಯ,
ನಗುವಿದೆ ಯಾಕ ಅಳುವೆಯೇ....?
ಜೋ ಜೋ ಜೋ...ಲಾಲಿ... ಜೋ ಜೋ ಜೋ....
ಜೋ ಜೋ ಜೋ...ಲಾಲಿ... ಜೋ ಜೋ ಜೋ....


No comments:

Post a Comment