Wednesday, August 29, 2018

ಒಡ ಹುಟ್ಟಿದವರು (1994)

ಜನಕನ ಮಾತ

ಚಲನ ಚಿತ್ರ: ಒಡ ಹುಟ್ಟಿದವರು (1994)
ನಿರ್ದೇಶನ: ದೊರೈ-ಭಗವಾನ್
ಸಂಗೀತ: ಉಪೇಂದ್ರ ಕುಮಾರ್ 
ಸಾಹಿತ್ಯ : ವಿಜಯನಾರಸಿಂಹ 
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ 
ನಟನೆ: ಡಾ. ರಾಜಕುಮಾರ್, ಅಂಬರೀಷ್, ಮಾಧವಿ, ಶ್ರೀಶಾಂತಿ 


ಜನಕನ ಮಾತ ಶಿರದಲಿ ಧರಿಸಿದ (ಆಆಆ..ಆಆಆ..)
ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ ಓ...  ತ್ಯಾಗವೆ ನಿಜ ಧರ್ಮ
ಮನೆಯಲಿ ಬಿರುಕು ಬದುಕಿಗೆ ಕೆಡಕು
ಎನ್ನುವ ಈ....  ನೀತಿ ಓ...  ತಿಳಿದರೆ ಸುಖ ಶಾಂತಿ
ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ ಓ...  ತ್ಯಾಗವೆ ನಿಜ ಧರ್ಮ
(ಆಅಅಅ... ಆಅಅಅ... )
ಸಿರಿ ಸುಖ ಧೂಳು ಎನಿಸಿ ದೊರೆತನ ದೂರ ಇರಿಸಿ
ಚಪಲತೆ ಎಲ್ಲ ತ್ಯಜಿಸಿ ಅರಿವಿನ ದೀಪ ಉರಿಸಿ
ನಡೆದನು ರಾಮ ವಿರಾಗಿ....  ತಂದೆಯ ಆಣತಿಯಾಗಿ
ರಾಮನು ಪ್ರೇಮದ ಮೂರ್ತಿ ಸತಿ ಸೀತೆಯು ರಾಮನ ಸ್ಪೂರ್ತಿ
ಭೂಮಿಯ ಗೆದ್ದರೆ ರಾಜ್ಯ ಮನದಾಸೆಯ ಗೆದ್ದವ ಪೂಜ್ಯ
ಬದುಕೆ ವಿಧಿ ಸೂತ್ರವು.... , ಮಾನವ ನೆಪ ಮಾತ್ರವು (ಓಓಓಓಓ) 
ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ ಓ...  ತ್ಯಾಗವೆ ನಿಜ ಧರ್ಮ
(ಹೂಂ ಹೂಂ ಹೂಂ ಹೂಂ ಹೂಂ ಆಆಆಆಅ)
ತನು ಸುಖ ಒಂದೆ ಕೋರಿ ಇತಿ ಮಿತಿ ಮಣ್ಣಿಗೆ ತೂರಿ
ಮತಿ ಭ್ರಮೆ ಹೊಂದುತ ಜಾರಿ ಪತನದ ಅಂಚನು ಸೇರಿ
ಲಕ್ಷ್ಮಣರೇಖೆಯ ಮೀರಿ...  ನೀತಿಯು ನೀಡಿತು ದಾರಿ
ಯೋಗವು ಪುಣ್ಯದ ರೂಪ ಅನುರಾಗವು ಬಾಳಿನ ದೀಪ
ಬಯಸುತ ಅಣ್ಣನ ಪ್ರೇಮ ಬಳಿ ಬಂದನು ಪ್ರೀತಿಯ ತಮ್ಮ
ಬದುಕೆ ವಿಧಿ ಸೂತ್ರವು..... , ಮಾನವ ನೆಪ ಮಾತ್ರವು
ಜನಕನ ಮಾತ ಶಿರದಲಿ ಧರಿಸಿದ
ಅನುಪಮ ರಘುರಾಮ ಓ...  ತ್ಯಾಗವೆ ನಿಜ ಧರ್ಮ (ಅಆಆಆಆ )
ತ್ಯಾಗವೆ ನಿಜ ಧರ್ಮ (ಅಆಆಆಆ )ತ್ಯಾಗವೆ ನಿಜ ಧರ್ಮ (ಅಆಆಆಆ
ಓಓಓ ಓಓಓ ಆಆ ಆಆ ಆ ಹೂಂಹೂಂ  ಹೂಂ 

********************************************************************************

ನಂಬಿ ಕೆಟ್ಟವರಿಲ್ಲವೊ

ಸಾಹಿತ್ಯ: ಚಿ.ಉದಯಶಂಕರ್ 
ಹಾಡಿದವರು: ಡಾ.ರಾಜ್‌ಕುಮಾರ್ 


ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ ನೀ ಕೇಳೊ
ನಂಬಿ ಕೆಟ್ಟವರಿಲ್ಲವೊ
ನಂಬಿ ಕೆಟ್ಟವರಿಲ್ಲವೊ ಮಣ್ಣನ್ನು ಎಂದೆಂದೂ
ನಂಬಿ ಕೆಟ್ಟವರಿಲ್ಲವೊ
ಮಣ್ಣಿಂದ ಬಂದ ನಾವು ಮಣ್ಣಲ್ಲೆ ಇರಬೇಕು
ಮಣ್ಣಿಂದ ಬಂದ ನಾವು ಮಣ್ಣಲ್ಲೆ ಇರಬೇಕು
ಮಣ್ಣ ಸೇರೋ ತನಕ ಮಣ್ಣಿನ ಮಗನಾಗು
ನಂಬಿ ಕೆಟ್ಟವರಿಲ್ಲ
ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ ನೀ ಕೇಳೊ
ನಂಬಿ ಕೆಟ್ಟವರಿಲ್ಲವೊ
ಮಣ್ಣಿಂದಲೆ ಅನ್ನ ಮಣ್ಣಿಂದಲೆ ಚಿನ್ನ
ಮಣ್ಣಿಂದಲೆ ತ್ರಾಣ ಮಣ್ಣಿಂದಲೆ ಪ್ರಾಣ
ಮಣ್ಣಿಂದಲೆ ಈ ಲೋಕವು ಬಲು ಚೆನ್ನ
ಮಣ್ಣೆ ಕೊಡುವುದು ಹಸಿರನು ಆ ಹಸಿರೆ ಕೊಡುವುದು ಉಸಿರನು
ಮಣ್ಣೆ ಕೊಡುವುದು ಬದುಕನು ಆ ಬದುಕೆ ಕೊಡುವದು ಬೆಳಕನು
ಮಣ್ಣಿನಿಂದಲೆ ಹಿರಿಯು ಸಾಸಿರ
ಮಣ್ಣಿನಿಂದಲೆ ಹಿರಿಯು ಸಾಸಿರ ಮಣ್ಣಿನಿಂದಲೆ ಗುಡಿಯು ಗೋಪುರ
ನಂಬಿ ಕೆಟ್ಟವರಿಲ್ಲ
ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ ನೀ ಕೇಳೊ
ನಂಬಿ ಕೆಟ್ಟವರಿಲ್ಲವೊ
ಗಂಡು : ಮುಂಗಾರು ಮಳೆ ಚೆಂದ  ತಂಗಾಳಿ ಇನ್ನೂ ಚೆಂದ
           ಭೂತಾಯಿ ನಗು ಚೆಂದ ಹಾಲಕ್ಕಿ ನುಡಿ ಚೆಂದ
           ಸುಗ್ಗಿ ಕಾಲ ಚೆಂದ ಹಿಗ್ಗಿ ಕುಣಿವುದು ಇನ್ನೂ ಚೆಂದ
           ಬೇರೆ ಕೆಲಸವು ಏತಕೆ  ಆ ಚಿಂತೆ ಬಿಡು ಇನ್ನೇತಕೆ
          ಮಣ್ಣ ಮೇಲಿಡು ನಂಬಿಕೆ ನೀ ನಂಬಿದೊಡೆಯಲ್ಲಂಜಿಕೆ
          ನೇಗಿಲನ್ನು ಹಿಡಿಯುವಾತ
          ನೇಗಿಲನ್ನು ಹಿಡಿಯುವಾತ ದೇಶಕೆಲ್ಲ ಅನ್ನದಾತ
          ನಂಬಿ ಕೆಟ್ಟವರಿಲ್ಲ
ಎಲ್ಲರು : ನಂಬಿ ಕೆಟ್ಟವರಿಲ್ಲವೊ ತಮ್ಮಯ್ಯ ನೀ ಕೇಳೊ
            ನಂಬಿ ಕೆಟ್ಟವರಿಲ್ಲವೊ
ಗಂಡು : ಮಣ್ಣಿಂದ ಬಂದ ನಾವು ಮಣ್ಣಲ್ಲೆ ಇರಬೇಕು
            ಮಣ್ಣ ಸೇರೋ ತನಕ ಮಣ್ಣಿನ ಮಗನಾಗು
            ನಂಬಿ ಕೆಟ್ಟವರಿಲ್ಲ
ಎಲ್ಲರು : ನಂಬಿ ಕೆಟ್ಟವರಿಲ್ಲವೊ ಮಣ್ಣನ್ನು ಎಂದೂ
            ನಂಬಿ ಕೆಟ್ಟವರಿಲ್ಲವೊ
********************************************************************************

ಸೋಲೇ ಗೆಲುವೆಂದು

ರಚನೆ: ಗೀತಪ್ರಿಯ  
ಗಾಯಕರು: ಡಾ. ರಾಜಕುಮಾರ್ 


ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ...
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು, ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು, ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ದೇಹವ ಸವೆಸುತ ಪರಿಮಳ ಕೊಡುವ, ಗಂಧವು ನೋವಿಗೆ ನರಳುವುದೇ
ತನ್ನನೆ ದಹಿಸುತ ಬೆಳಕನು ತರುವ, ದೀಪವು ಅಳಲನು ಹೇಳುವುದೇ
ನಿನ್ನಯ ಸಹನೆಗೆ ಹೋಲಿಕೆ ಧರೆಯು
ಕರುಣೆಯು ನಿನ್ನಲಿ ಮೈದುಂಬಿರಲು ಈ ಜನ್ಮ ಸಾರ್ಥಕವೂ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಗಾಳಿಯ ಭೀಕರ ಧಾಳಿಗೆ ಪರ್ವತ, ಸ್ಥೈರ್ಯವನೆಂದಿಗು ಕಳೆಯುವುದೇ
ಸುಖ ಸಂಸಾರಕೆ ದುಡಿಯುವ ಹೆಣ್ಣು, ಸ್ವಾರ್ಥಕೆ ಮನಸನು ನೀಡುವಳೇ
ನಿಂದನೇ ಮಾತಿಗೆ ಕುಂದದೆ ಇರುವ
ಮಮತೆಯ ಮೂರ್ತಿಯೆ ನೀನಾಗಿರಲು ಜೀವನ ಪಾವನವೂ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು, ಅಳುವೂ ನಗುವು, ಎಲ್ಲ ಆ ದೇವನ ಕೊಡುಗೆ
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
********************************************************************************

ಮಧುರ ಈ ಕ್ಷಣ

ರಚನೆ: ಎಂ. ಏನ್. ವ್ಯಾಸರಾವ್  
ಗಾಯಕರು: ಡಾ.ರಾಜ, ಮಂಜುಳಾ ಗುರುರಾಜ್


ಗಂ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
      ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
      ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ
ಹೆ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
      ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ
ಗಂ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಗಂ: ಮಧುಚಂದ್ರ ಕಂಡೇ ನಾನು ನಲಿ ತೋಳಿನಲ್ಲೇ
      ಮಧುಮಾಸ ತಂದೆ ನೀನು ಋತು ವರ್ಷದಲ್ಲೆ
      ಬಿಡಲಾರೆ ಎಂದು ನಿನ್ನ ಓ ಮುದ್ದು ನಲ್ಲೆ
ಹೆ: ಮಳೆಗಾಗಿ ಕಾದು ನಿನ್ನ ನಾವಿಲಾದೆ ನಾನು
     ಒಲವನ್ನೆ ಧಾರೆ ಎರೆದ ಮುಗಿಲಾದೆ ನೀನು
     ಶೃಂಗಾರ ಲಾಸ್ಯದೊಳಗೆ ರಸಕಾಮದೇನು
ಗಂ: ಮಡದಿ ನಿನ್ನ ನುಡಿಯ ಕೇಳಿ ಕರಗಿ ಹೋದೆ ನಾ
ಹೆ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಗಂ: ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ
       ಆಹ್  ಅಹ್  ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಹೆ: ಕುಡಿಮೀಸೆ ಹೈದಾ ನೀನು ಕನ್ನಡದ ಕಂದ
     ಪತಿಯಾಗಿ ಪಡೆದೆ ನಿನ್ನ ಶ್ರೀ ರಾಮಚಂದ್ರ
     ಇರುವಂತೆ ರವಿಯು ಧರೆಗೆ ನನಗಿಂದು ನೀವೆ
ಗಂ: ಕರುನಾಡ ಚಲುವೆ ನೀನು ಸೊಗಸಾದ ಅಂದ
       ಎದೆಯಾಸೆ ನುಡಿವಾ ನಿನ್ನ ಈ ಕಣ್ಣೆ ಚಂದ
       ಮನ ತುಂಬಿ ಬಂದೇ ನೀನು ಅನುರಾಗದಿಂದ
ಹೆ: ಒಲಿದಾ ಜೋಡಿ ಹೃದಯ ಕೂಡಿ ನಲಿವ ಸಂಭ್ರಮ
ಗಂ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಹೆ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
ಗಂ: ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಸಿದೆ ಮಿಲನ
ಹೆ: ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
********************************************************************************

ನಾನು ನಾನು ನೀನು

ರಚನೆ: ಎಂ. ಏನ್. ವ್ಯಾಸರಾವ್   
ಗಾಯಕರು: ಡಾ.ರಾಜ, ಮಂಜುಳಾ  ಗುರುರಾಜ್, ಎಸ್ಪಿಬಿ, ಸಂಗೀತ ಕಟ್ಟಿ 

ಡಾ.ರಾಜ: ನಾನು ನಾನು ನೀನು ಹಾಲು ಜೇನು ಭೂಮಿ ಬಾನು
           ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ಎಸ್ಪಿಬಿ : ನಾನು ನಾನು ನೀನು ಹಾಲು ಜೇನು ಭೂಮಿ ಬಾನು
           ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ಡಾ.ರಾಜ: ಒಳ್ಳೆ ಕವನ ಜನಿಸೋದು ಭಾಷೆ ಭಾವ ಸೇರಿ
ಎಸ್ಪಿಬಿ : ಆಹ್ಹಾ.. ಒಳ್ಳೆ ಹಾಡು ಅರಳೋದು ರಾಗ ತಾಳ ಸೇರಿ
ಹೆಣ್ಣು : ಸ್ನೇಹ ಎಂದು ಜನಿಸೋದು ಮನಸು ಮನಸು ಸೇರಿ
          ಹೊಸ ಬಾಳು ಎಂದು ಅರಳೋದು ಪ್ರೀತಿ ಪ್ರೇಮ ಸೇರಿ
ಡಾ.ರಾಜ: ಇಲ್ಲಿ ಮೇಲಿಲ್ಲಾ ಕೀಳಿಲ್ಲಾ ನೋವು ಬೇವು ಇಲ್ಲಾ.. ನಾನು ನೀನೇ
ಎಸ್ಪಿಬಿ :ನೀನು ನಾನೇ
ಹೆಣ್ಣು :  ನೀನು ನಾನೇ ನಾನು ನೀನೇ
ಡಾ.ರಾಜ: ಇನ್ನು ಬಾಳೆಲ್ಲ ಸುಖ ತಾನೇ
ಹೆಣ್ಣು : ನಾನು ನಾನು ನೀನು ಹಾಲು ಜೇನು ಭೂಮಿ ಬಾನು
          ನಾನು ನಾನು ನೀನು ಹಾಲು ಜೇನು ಭೂಮಿ ಬಾನು
         ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ಡಾ.ರಾಜ: ಎರಡು ಕಣ್ಣು ನೋಡೋದು ಒಂದೇ ನೋಟ ತಾನೇ
ಎಸ್ಪಿಬಿ :  ಈ ಎರಡು ಪಾದ ತುಳಿಯೋದು ಒಂದೇ ದಾರಿ ತಾನೇ
ಹೆಣ್ಣು : ಜೋಡಿ ಹಸ್ತ ಬೇಡೋದು ಒಂದೇ ದೇವರ ತಾನೇ
         ಈ ಜೋಡಿ ಹೃದಯ ಮಿಡಿಸೋದು ಒಂದೇ ಬಯಕೆ ತಾನೇ
ಡಾ.ರಾಜ: ನಿಮ್ಮ ಮುದ್ದಾದ ಜೋಡಿನಾ ಬ್ರಹ್ಮ ಕೂಡಿ ಹಾಕಿ ಹಾಡಿ ಎಂದಾ.. ಬಾಳಿ ಎಂದಾ
ಎಲ್ಲರು : ಬಾಳಿ ಎಂದಾ.. ಹಾಡಿ ಎಂದಾ ..
ಡಾ.ರಾಜ:ಇನ್ನೂ ಬಾಳೆಲ್ಲಾ ಅಂದ ಚೆಂದ
             ನಾನು ನಾನು ನೀನು ಹಾಲು ಜೇನು ಭೂಮಿ ಬಾನು
ಎಸ್ಪಿಬಿ : ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ...
ಎಲ್ಲರು :  ನಾನು ನಾನು ನೀನು ಹಾಲು ಜೇನು ಭೂಮಿ ಬಾನು
          ಪ್ರೀತಿ ನಮ್ಮ ನೀತಿ ನಾವು ಬಯಸೊಲ್ಲ ಬೇರೇನೂ... 
********************************************************************************

ಬೆನ್ನಿನ ಹಿಂದೆ

ರಚನೆ: ಶ್ರೀ.ರಂಗ  
ಗಾಯಕರು:  ಎಸ್ಪಿಬಿ, ಸಂಗೀತ ಕಟ್ಟಿ 

ಹೆಣ್ಣು : ಬೆನ್ನಿನ ಹಿಂದೆ ಬಂದು ನೀನು ಕೆನ್ನೆಗೆ ಮುತ್ತಿಡುವಾಗ
          ಬೆನ್ನಿನ ಹಿಂದೆ ಬಂದು ನೀನು ಕೆನ್ನೆಗೆ ಮುತ್ತಿಡುವಾಗ ಹಾಂ...
         ಮೀಸೆಯೂ ಚುಚ್ಚಿ ಆಸೆಯೂ ಹೆಚ್ಚಿ ಮಿಂಚಿನ ಹಾಗೆ ಮೈ ಕೈ ಎಲ್ಲಾ
         ಜುಮ್ಮ  ಎಂದಿತು ನಲ್ಲ ಈ ಬಾಲೆಯ ಬಯಕೆಯ ನೀ ತಣಿಸು ಬಾ ಇನಿಯ
ಗಂಡು : ತೊಂಡೆಯ ಹಣ್ಣ ತುಟಿಯ ಹೆಣ್ಣಾ ಬಳುಕೋ ಸೊಂಟ ಸಣ್ಣ
           ಬಿಂಕದ ನಿನ್ನ ಜಿಂಕೆಯ ಕಣ್ಣ ನೋಟಕೆ ನಾನು ಸೋತು ಹೋದೆ ನಲ್ಲೆ
           ನಿನ್ನಾಸೆಯ ಬಲ್ಲೇ, ವ್ಯಯ್ಯಾರದ ದಂತದ ಮೈಯ್ಯವಳೇ ಬಾ ಬಳಿಗೆ...
ಹೆಣ್ಣು : ಪ್ರಾಯ ಉಕ್ಕಿ ಹರಿದು ಬಿಸಿ ತಂದಾಗ
         ಪ್ರಾಯ ಉಕ್ಕಿ ಹರಿದು ಬಿಸಿ ತಂದಾಗ ಇದು ಚೆಲ್ಲಾಟದ ವಯಸು
         ತುಟಿಯ ಅಂಚಿಗೆ ತುಟಿ ತಂದಾಗ ಆಂ.. ಹೊಸ ರೋಮಾಂಚನ ಸೊಗಸು
         ಸತಿ ನಾನಲ್ಲವಾ ಪತಿ ನೀನಲ್ಲವಾ ರತಿ ಮನ್ಮಥರು ನಾವಾಗುವಾ
        ಇನಿಯಾ ಬಾ ಸನಿಹಾ..
ಗಂಡು : ತೊಂಡೆಯ ಹಣ್ಣ ತುಟಿಯ ಹೆಣ್ಣಾ ಬಳುಕೋ ಸೊಂಟ ಸಣ್ಣ
           ಬಿಂಕದ ನಿನ್ನ ಜಿಂಕೆಯ ಕಣ್ಣ ನೋಟಕೆ ನಾನು ಸೋತು ಹೋದೆ ನಲ್ಲೆ
          ನಿನ್ನಾಸೆಯ ಬಲ್ಲೇ, ವ್ಯಯ್ಯಾರದ ದಂತದ ಮೈಯ್ಯವಳೇ ಬಾ ಬಳಿಗೆ...
ಗಂಡು : ಗಾಳ ಹಾಕಿ ಸೆಳೆವ ನೀಳ ಜಡೆಯೋಳೆ..
           ಗಾಳ ಹಾಕಿ ಸೆಳೆವ ನೀಳ  ಜಡೆಯೋಳೆ.. ನೀ ನುಡಿದಂತೆ ನಾ ನಡೆವೆ
           ತಾಳ ಹಾಕಿ ಕುಣಿಸಿ ಕಣ್ಣು ಹೊಡೆಯೊಳೆ, ನೀ ಕೇಳಿದ್ದು ಕೊಡುವೇ
          ಸರಸ ಆಡೋಣ ಬಾ ಸಿನಿಮಾ ನೋಡೋಣ ಬಾ
          ಜೊತೆ ಒಂದಾಗಿ ಸೇರೋಣ ಬಾ....  ಚೆಲುವೆ ಬಾ ಬಳಿಗೆ
ಹೆಣ್ಣು : ಬೆನ್ನಿನ ಹಿಂದೆ ಬಂದು ನೀನು ಕೆನ್ನೆಗೆ ಮುತ್ತಿಡುವಾಗ
ಗಂಡು :  ಬಿಂಕದ ನಿನ್ನ ಜಿಂಕೆಯ ಕಣ್ಣ ನೋಟಕೆ ನಾನು ಸೋತು ಹೋದೆ ನಲ್ಲೆ
ಹೆಣ್ಣು :  ಜುಮ್ಮ  ಎಂದಿತು ನಲ್ಲ ಈ ಬಾಲೆಯ ಬಯಕೆಯ ನೀ ತಣಿಸು ಬಾ ಇನಿಯ
ಗಂಡು : ಓಯ್.. ದಂತದ ಮೈಯ್ಯವಳೇ ಬಾ ಬಳಿಗೆ...
ಇಬ್ಬರು : ಲಾಲಾಲ  ಲಾಲಾಲ  ಲಾಲಾಲ
*********************************************************************************

No comments:

Post a Comment