ಬಾಳುವಂತ ಹೂವೇ
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯಕರು : ಡಾ. ರಾಜ್‍ಕುಮಾರ್
ನಿರ್ದೇಶನ: ಟಿ. ಎಸ್. ನಾಗಾಭರಣ್
ನಟನೆ: ರಾಜ್ ಕುಮಾರ್, ಮಾಧವಿ, ಗೀತಾ
ಬಾಳುವಂತ ಹೂವೆ ಬಾಡುವ ಆಸೆ ಏಕೆ..?
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ..?
ಕವಲು ದಾರಿಯಲ್ಲಿ ಬಾಳು ಸಾಧ್ಯವೆ...
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ...
ಬಾಳುವಂತ ಹೂವೆ, ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ, ಅಳುವ ಆಸೆ ಏಕೆ?
ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು...
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು...
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ...
ಮದ್ಯ ಮನಗಳಿಂದ ಚಿಂತೆ ಬೇಳೆವುದಂತೆ...
ಅಂಕೆಯಿರದ ಮನಸನು ದಂಡಿಸುವುದು ನ್ಯಾಯ...
ಮೂಖ ಮುಗ್ಧ ದೇಹವ ಹಿಂಸಿಸುವುದು ಹೇಯ...
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು...
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು....
ಬಾಳುವಂತ ಹೂವೆ, ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ, ಅಳುವ ಆಸೆ ಏಕೆ?
ಬಾಳ ಕದನದಲ್ಲಿ ಭರವಸೆಗಳು ಬೇಕು...
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು....
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ...
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ...
ಇಲ್ಲಿ ಈಸಬೇಕು ಇದ್ದು ಜಯಿಸಬೇಕು...
ನಾಗರಿಕರಾದಮೇಲೆ ಸುಗುಣರಾಗಬೇಕು..
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ....
ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ..?
ಬಾಳುವಂತ ಹೂವೆ, ಬಾಡುವಾಸೆ ಏಕೆ...
ಹಾಡುವಂತ ಕೋಗಿಲೆ, ಅಳುವ ಆಸೆ ಏಕೆ...
ಕವಲು ದಾರಿಯಲ್ಲಿ ಬಾಳು ಸಾಧ್ಯವೇ...
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ?
********************************************************************************
ಹುಟ್ಟಿದರೆ ಕನ್ನಡ ನಾಡಲಿ
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯಕ : ಡಾ. ರಾಜ್ ಕುಮಾರ್
ಹೇ ಹೇ ಬಾಜೂ.. ಲಾಲ ತಗಡಗ
ಲಾಲ ತಗಗಡ ಹೇ ಹೇ ...
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಟಕಾ ಬಂಡಿ..
ವಿಧಿ ಅಲೆದಾಡಿಸುವ ಬಂಡಿ..
||ಹುಟ್ಟಿದರೇ ಕನ್ನಡ ನಾಡಲ್ಲಿ....||
ಕಾಶೀಲಿ ಸ್ನಾನ ಮಾಡು..ಕಾಶ್ಮೀರ ಸುತ್ತಿ ನೋಡು..
ಜೋಗದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು..
ಅಜಂತ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು..
ಬಾದಾಮಿ ಐಹೊಳೆಯ ಚಂದಾನ ತೂಕ ಮಾಡು..
ಕಲಿಯೋಕೆ ಕೋಟಿ ಬಾಷೆ ಆಡೋಕೆ ಒಂದೇ ಬಾಷೆ..
ಕನ್ನಡ ಕನ್ನಡ ಕಸ್ತೂರಿ ಕನ್ನಡ….
||ಹುಟ್ಟಿದರೇ ಕನ್ನಡ ನಾಡಲ್ಲಿ....||
ದ್ಯಾನಕ್ಕೆ ಭೂಮಿ ಇದು..ಪ್ರೇಮಕ್ಕೆ ಸ್ವರ್ಗ ಇದು..
ಸ್ನೇಹಕ್ಕೆ ಶಾಲೆ ಇದು.. ಜ್ಞಾನಕ್ಕೆ ಪೀಠ ಇದು…
ಕಾಯಕ್ಕೆ ಕಲ್ಪ ಇದು.. ಶಿಲ್ಪಕ್ಕೆ ಕಲ್ಪ ಇದು..
ನಾಟ್ಯಕ್ಕೆ ನಾಡಿ ಇದು.. ನಾಡಾಂತರಂಗವಿದು..
ಕುವೆಂಪು ಬೇಂದ್ರೆ ಇಂದ .. ಕಾರಂತ ಮಾಸ್ತಿ ಇಂದ..
ಧನ್ಯವೀ ಕನ್ನಡ.. ಕಾಗಿನ ಕನ್ನಡ..
||ಹುಟ್ಟಿದರೇ ಕನ್ನಡ ನಾಡಲ್ಲಿ....||
ಬಾಳಿನ ಬೆನ್ನು ಹತ್ತಿ. ನೂರಾರು ಊರು ಸುತ್ತಿ..
ಏನೇನೊ ಕಂಡ ಮೇಲು.. ನಮ್ಮೂರೇ ನಮಗೆ ಮೇಲು..
ಕೈಲಾಸರನ್ನ ಕಂಡ ನಮಗೆ.. ಕೈಲಾಸ ಯಾಕೆ ಬೇಕು.
ದಾಸರ ಕಂಡ ನಮಗೆ.. ವೈಕುಂಟ ಯಾಕೆ ಬೇಕು..
ಮುಂದಿನ ನನ್ನ ಜನ್ಮ.. ಬರದಿಟ್ಟನಂತೆ ಬ್ರಹ್ಮ..
ಇಲ್ಲಿಯೇ ಇಲ್ಲಿಯೇ ಎಂದಿಗೂ ನಾನ್ ಇಲ್ಲಿಯೇ…
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು..
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ..
ಇದು ವಿಧಿಯೋಡಿಸುವ ಬಂಡಿ..
ಬದುಕಿದು ಜಟಕಾ ಬಂಡಿ..
ವಿಧಿ ದಡ ಸೇರಿಸುವ ಬಂಡಿ..
********************************************************************************
ಹೆ: ಆಗುಂಬೆಯಾ ಪ್ರೇಮಸಂಜೆಯಾ
ಗಂ: ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಗಂ: ಆಗುಂಬೆಯಾ ಪ್ರೇಮಸಂಜೆಯಾ
ಹೆ: ಆಗುಂಬೆಯಾ ಪ್ರೇಮಸಂಜೆಯಾ
ಗಂ: ಮರೆಯಲಾರೆ ನಾನು ಎಂದಿಗೂ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ
ಏನು ಮಾಯಾವೋ
ಆಗುಂಬೆಯಾ ಪ್ರೇಮ
ರಚನೆ: ಹಂಸಲೇಖ
ಗಾಯಕರು: ಡಾ. ರಾಜಕುಮಾರ್, ಮಂಜುಳಾ ಗುರುರಾಜ್
ಗಂ: ಅಂಬರದ ಅಂಜುರದಿ ನೇಸರನು
ಅಂಗೈಯ್ಯಿಗೆ ಹತ್ತಿರದಿ ನೇಸರನು
ಕಾಸಗಳ ಕುಂಕುಮದ ನೇಸರನು
ಬಾನಗಲ ಭೀಗುವಲ್ಲಿ ನೇಸರನು
ಕಣ್ಣ ತುಂಬ ತುಂಬಿಕೊಂಡ
ಅಂಗೈಯ್ಯಿಗೆ ಹತ್ತಿರದಿ ನೇಸರನು
ಕಾಸಗಳ ಕುಂಕುಮದ ನೇಸರನು
ಬಾನಗಲ ಭೀಗುವಲ್ಲಿ ನೇಸರನು
ಕಣ್ಣ ತುಂಬ ತುಂಬಿಕೊಂಡ
ಬಾಳತುಂಬ ಸೇರಿಕೊಂಡ
ಗಂ: ಆಗುಂಬೆಯಾ ಪ್ರೇಮಸಂಜೆಯಾ
ಗಂ: ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ...
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ...
ಓ ಗೆಳತಿಯೆ... ಗೆಳತಿಯೆ
ಹೆ: ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳೆಯೆನೆ.... ಓ ಗೆಳೆಯೆನೆ...
ಓ ಗೆಳೆಯೆನೆ.... ಓ ಗೆಳೆಯೆನೆ...
ಓ ಗೆಳೆಯೆನೆ.... ಗೆಳೆಯೆನೆ
ಹೆ: ಮುಗಿಲಾ ಜೊತೆಯಲ್ಲಿ ನೆಲ ಮುದ್ದಾಡೊ ಸಮಯ
ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
ಗಂ: ನದಿಯ ಒಗದಲ್ಲಿ ರವಿ ತಂಪಾಗೊ ಸಮಯ
ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
ಹೆ: ಪ್ರೀತಿ ಸೋಲದಂತೆ ಸ್ನೇಹಾ ಬಾಡದಂತೆ
ಗಂ: ಆ ಆಸೆ ತೀರದಂತೆ ನಾ...
ಹೆ: ಹಕ್ಕಿಗಳ ಅಂತರಂಗ ಹಾಡುತಿದೆ,
ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
ಗಂ: ನದಿಯ ಒಗದಲ್ಲಿ ರವಿ ತಂಪಾಗೊ ಸಮಯ
ಕೊಡುವೆ ನಿನಗೆ ಕೊಡುಗೆ ಈ ನನ್ನಾ ಹೃದಯ
ಹೆ: ಪ್ರೀತಿ ಸೋಲದಂತೆ ಸ್ನೇಹಾ ಬಾಡದಂತೆ
ಗಂ: ಆ ಆಸೆ ತೀರದಂತೆ ನಾ...
ಹೆ: ಹಕ್ಕಿಗಳ ಅಂತರಂಗ ಹಾಡುತಿದೆ,
ಹೂವುಗಳ ವರ್ಣಗಳ ಮಿಂಚುತಿದೆ
ಗಂ: ಗುಡ್ಡಗಳ ತಂಬೆಳರು ಬೀಸುತಿದೆ,
ಗಂ: ಗುಡ್ಡಗಳ ತಂಬೆಳರು ಬೀಸುತಿದೆ,
ಎಲ್ಲ ಮರ ಹಣ್ಣುಗಳು ತೂಗುತಿದೆ
ಹೆ: ಮೂಡಣಕ್ಕೆ ಜೀವ ತಂದ ಪಶ್ಚಿಮಕ್ಕೆ ಭಾವ ತಂದ
ಹೆ: ಮೂಡಣಕ್ಕೆ ಜೀವ ತಂದ ಪಶ್ಚಿಮಕ್ಕೆ ಭಾವ ತಂದ
ಹೆ: ಆಗುಂಬೆಯಾ ಪ್ರೇಮಸಂಜೆಯಾ
ಗಂ: ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ...
ಓ ಗೆಳತಿಯೆ... ಗೆಳತಿಯೆ
ಗಂ: ಮನದಾ ಇರುಳಿನಲಿ ನೀ ಸುರಿದೆ ಹೊಂಗಿರಣ
ಬದುಕೆ ಬನವಾಗಿರಲು ನಿಜ ನೀನೆ ಕಾರಣ
ಹೆ: ಬರದಾ ನಿದಿರೆಯಲಿ ನೀ ಸುರಿದೆ ಕನಸುಗಳ
ಕನಸೆ ನನಸಾಗಿರಲು ನಿಜ ನೀನೆ ಕಾರಣ
ಗಂ: ಓ ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು
ಹೆ: ಇನ್ನು ನಾನು ನೀನು...
ಗಂ: ಏಳು ಬಣ್ಣ ಒಂದು ಮಾಡೊ ನೇಸರನು
ಕೊಂಬೆಗಳ ಬೇಲಿಯಲ್ಲಿ ನಿಂತಿಹನು
ಹೆ: ನಾಳೆಗಳ ಹೊತ್ತು ಕಾಯೊ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು
ಗಂ: ನನ್ನ ನಿನ್ನ ಪ್ರೀತಿ ಕಂಡ ಸೂರ್ಯನೆಲ್ಲಿ ಜಾರಿಕೊಂಡ
ಬದುಕೆ ಬನವಾಗಿರಲು ನಿಜ ನೀನೆ ಕಾರಣ
ಹೆ: ಬರದಾ ನಿದಿರೆಯಲಿ ನೀ ಸುರಿದೆ ಕನಸುಗಳ
ಕನಸೆ ನನಸಾಗಿರಲು ನಿಜ ನೀನೆ ಕಾರಣ
ಗಂ: ಓ ಸಂಜೆ ಹೆಣ್ಣು ನೀನು, ನನ್ನ ಬಾಳ ಜೇನು
ಹೆ: ಇನ್ನು ನಾನು ನೀನು...
ಗಂ: ಏಳು ಬಣ್ಣ ಒಂದು ಮಾಡೊ ನೇಸರನು
ಕೊಂಬೆಗಳ ಬೇಲಿಯಲ್ಲಿ ನಿಂತಿಹನು
ಹೆ: ನಾಳೆಗಳ ಹೊತ್ತು ಕಾಯೊ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು
ಗಂ: ನನ್ನ ನಿನ್ನ ಪ್ರೀತಿ ಕಂಡ ಸೂರ್ಯನೆಲ್ಲಿ ಜಾರಿಕೊಂಡ
ಗಂ: ಆಗುಂಬೆಯಾ ಪ್ರೇಮಸಂಜೆಯಾ
ಹೆ: ಆಗುಂಬೆಯಾ ಪ್ರೇಮಸಂಜೆಯಾ
ಗಂ: ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ...
ಓ ಗೆಳತಿಯೆ... ಗೆಳತಿಯೆ
********************************************************************************
ಈ ಕಣ್ಣಿಗೂ ಹೆಣ್ಣಿಗೂ
ಸಾಹಿತ್ಯ: ಹಂಸಲೇಖ
ಗಾಯಕರು: ಡಾ. ರಾಜಕುಮಾರ್,
ಮಂಜುಳಾ ಗುರುರಾಜ್
ಗಂಡು : ಆ.. ಹೆಣ್ಣು : ಆ....
ಗಂಡು : ಸ .. ಹೆಣ್ಣು : ರಿ ....
ಗಂಡು : ಸ .. ಹೆಣ್ಣು : ರಿ ....
ಗಂಡು : ಸ .. ಹೆಣ್ಣು : ಗ ....
ಗಂಡು : ರಿ .. ಹೆಣ್ಣು : ಮ....
ಗಂಡು : ಗ .. ಹೆಣ್ಣು : ಪ ....
ಗಂಡು : ನಿ .. ಹೆಣ್ಣು : ಸ ....
ಗಂಡು : ನಿ .. ಹೆಣ್ಣು : ರಿ ....
ಗಂಡು : ಸ .. ಹೆಣ್ಣು : ಗ ....
ಗಂಡು : ರಿ .. ಹೆಣ್ಣು : ಮ ....
ಗಂಡು : ಓ..ಓ....ಓ...ಓ..... ಹೆಣ್ಣು : ಓ..ಓ....ಓ...ಓ.....
ಗಂಡು : ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ ಏನು ಮಾಯಾವೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ ಏನು ಮಾಯಾವೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ಮನದ ಒಳದ ತಿಳಿಯ ಜಲದ ಮೇಲೆ ಮನವೆಸೆದು
ಸಿಗದ ಜಗದ ಸುಖದ ತಳಕೆ ನನ್ನಾ ಬರಸೆಳೆದು
ಅಳುವ ಮೊಗದ ಒಳಗೆ ತೆರೆದ ಎದೆಗೆ ಜೊತೆ ಬೆಸೆದು
ಇಹದ ಪರದ ಜಾನುಮಾಂತರದ ಕಥೆಯ ಪುಟ ತೆರೆದು
ಆಕಸ್ಮಿಕ ಎಂದಳೀ ಚಲುವ ಬಾರೆ
ಅನಿರೀಕ್ಷಿತ ತಂದಳೀ ಒಲವ ಬಾಲೆ
ಚಂದದ ಕನ್ಯೆಯೋ, ದಂತದ ಬೊಂಬೆಯೋ
ಏನು ಮಾಯೆಯೋ
ಸಿಗದ ಜಗದ ಸುಖದ ತಳಕೆ ನನ್ನಾ ಬರಸೆಳೆದು
ಅಳುವ ಮೊಗದ ಒಳಗೆ ತೆರೆದ ಎದೆಗೆ ಜೊತೆ ಬೆಸೆದು
ಇಹದ ಪರದ ಜಾನುಮಾಂತರದ ಕಥೆಯ ಪುಟ ತೆರೆದು
ಆಕಸ್ಮಿಕ ಎಂದಳೀ ಚಲುವ ಬಾರೆ
ಅನಿರೀಕ್ಷಿತ ತಂದಳೀ ಒಲವ ಬಾಲೆ
ಚಂದದ ಕನ್ಯೆಯೋ, ದಂತದ ಬೊಂಬೆಯೋ
ಏನು ಮಾಯೆಯೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ಸರಸಿ ಸರಸಿ ಚೆಲುವಿಗೆ ಅರಸಿ ಬಂದಳು ನನ್ನರಸಿ
ಕವನ ಕಾವ್ಯ ನಾಟ್ಯ ಗಮಕ ಕಲೆಗಳ ಸಿಂಗರಿಸೀ
ಕನಸು ಮನಸು ಬದುಕು ಭ್ರಮೆಯ ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು ಒಲವನು ಸಿಂಪಡಿಸೀ
ಆಕಸ್ಮಿಕ ಆದಳೀ ಪ್ರೇಮ ಯೋಗ
ಅನಿರೀಕ್ಷಿತ ಅನಿಸಲಿ ಪ್ರಣಯ ರಾಗ
ಸ್ವರ್ಗಾದಿ ಸ್ಪರ್ಶವು ಸೌಕ್ಯದಿ ಸಂದ್ಯವು
ಏನು ಮಾಯೆಯೋ
ಕವನ ಕಾವ್ಯ ನಾಟ್ಯ ಗಮಕ ಕಲೆಗಳ ಸಿಂಗರಿಸೀ
ಕನಸು ಮನಸು ಬದುಕು ಭ್ರಮೆಯ ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು ಒಲವನು ಸಿಂಪಡಿಸೀ
ಆಕಸ್ಮಿಕ ಆದಳೀ ಪ್ರೇಮ ಯೋಗ
ಅನಿರೀಕ್ಷಿತ ಅನಿಸಲಿ ಪ್ರಣಯ ರಾಗ
ಸ್ವರ್ಗಾದಿ ಸ್ಪರ್ಶವು ಸೌಕ್ಯದಿ ಸಂದ್ಯವು
ಏನು ಮಾಯೆಯೋ
ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ
ಏನು ಮಾಯಾವೋ
********************************************************************************
ಅನುರಾಗದ ಭೋಗಾ
ಸಾಹಿತ್ಯ: ಹಂಸಲೇಖ
ಗಾಯಕರು: ಡಾ. ರಾಜಕುಮಾರ್
ಆಆಆ... ಅನುರಾಗದ ಭೋಗಾ ಸುಖದಾ
ಅನುರಾಗದ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುರಾಗದ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುರಾಗದ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುರಾಗದ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಮನ ಮೋಹನಾಂಗೀ ಮುಖ ತೋರಲೇ ನೀರೇ
ಮನ ಮೋಹನಾಂಗೀ ಮುಖ ತೋರಲೇ ನೀರೇ
ಮನ ಮೋಹನಾಂಗೀ... ಆಅಅಅಅ
ಮನ ಮೋಹನಾಂಗೀ ಮುಖ ತೋರಲೇ ನೀರೇ
ಮನ ಮೋಹನಾಂಗೀ ಮುಖ ತೋರಲೇ ನೀರೇ
ಮನ ಮೋಹನಾಂಗೀ ....ಆಆಆ
ಮನ ಮೋಹನಾಂಗೀ ....
ಧ್ಯಾನ ನಿನ್ನೊಳಗೆ ಎನ್ನ ಸಾಮ್ರಾಜ್ಯ ನೀನೇ
ಅನುರಾಗದ ಭೋಗಾ ಸುಖದಾ
ಅನುಭವವಾ ಮುದವಾ ಪಡೆವಾ ನಲಿವಾ
ಅನುಭವವಾ ಮುದವಾ ಪಡೆವಾ ನಲಿವಾ
********************************************************************************
No comments:
Post a Comment