Thursday, August 30, 2018

ಪ್ರೀತ್ಸೇ (2000)

ಹೋಳಿ ಹೋಳಿ

ಚಲನ ಚಿತ್ರ: ಪ್ರೀತ್ಸೆ (2000)
ನಿರ್ದೇಶನ: ಡಿ. ರಾಜೇಂದ್ರ ಬಾಬು 
ಸಾಹಿತ್ಯ & ಸಂಗೀತ: ಹಂಸಲೇಖ  
ಗಾಯಕರು: ರಾಜೇಶ್ ಕೃಷ್ಣನ್, ಎಸ್.ಪಿ.ಬಾಲಸುಬ್ರಮಣ್ಯಂ, 
ಅನುರಾಧ ಪೌಡ್ವಾಲ್, ಚಿತ್ರಾ 
ನಟನೆ: ಶಿವರಾಜ್ ಕುಮಾರ್, ಉಪೇಂದ್ರ, ಸೋನಾಲಿ ಬೇಂದ್ರೆ 


ಹೋಳಿ ಹೋಳಿ ಹೋಳಿ ಹೋಳಿ
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ
ರಾಗ ರಂಗಿನ ರಂಗು ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ   
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ     
ಓಹೋ ಓಕುಳಿ ಆಡೋಣ

ಹೋಳಿ ಹೋಳಿ ಹೋಳಿ ಹೋಳಿ           
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ           
ರಾಗ ರಂಗಿನ ರಂಗು ರಂಗೋಲಿ

ಅರಿಷಿಣ ಕುಂಕುಮವ ಒಂದು ಕ್ಷಣ ಬೆರೆಸೋಣ 
ಹಸಿರಿನ ಜೊತೆಯಲ್ಲಿ ಒಂದು ಕ್ಷಣ ಇರಿಸೋಣ
ರವಿವರ್ಮ ನಕ್ಕರೆ ಕ್ಷಮಿಸು ಬಣ್ಣದ ಹಬ್ಬ ಅನ್ನೋಣ 
ಓಹೋ ಓಕುಳಿ ಆಡೋಣ
ಹೋಳಿ ಹೋಳಿ ಹೋಳಿ ಹೋಳಿ           
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ

ಬಣ್ಣ ಕಂಡ್ರೆ ಕುಣಿಯೋಣ, ಕುಣಿಯೋಣ       
ಬಳಿಯಲು ಬಂದ್ರೆ ಓಡೋಣ, ಓಡೋಣ
ಬೇಡ ಅನ್ನೋ ಈ ಭಯವೇ, ಈ ಭಯವೇ   
ಬೇಕು ಅನ್ನೋ ಬಿನ್ನಾಣ, ಆಹಾ ಬಿನ್ನಾಣ
ತನುವೆಲ್ಲ ನವರಂಗು                               
ಮನಸೆಲ್ಲ ಬೆಳದಿಂಗಳು   
ಈ ಹಬ್ಬ ಧರೆಗಿತ್ತ                                     
ಕೃಷ್ಣನಿಗೆ ನಮನಗಳು
ಮನೆ ಮನೆಗೊಬ್ಬ                                   
ರಂಗಿನ ರಂಗ ರಂಗಿನ ರಂಗ
ಹುಟ್ಟುವನೆಂದು, ಗೋಕುಲ ರಂಗ           
ಹಿಡಿಯೋ ಹಚ್ಚೋ,  ಹಿಡಿಯೋ ಹಚ್ಚೋ,  ಹಿಡಿಯೋ ಹಚ್ಚೋ

ಹೋಳಿ ಹೋಳಿ ಹೋಳಿ ಹೋಳಿ             
ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ

ಕಣ್ಣಲ್ಲೆ bowling ಮಾಡೊ 
ಕಣ್ಣಲ್ಲೆ batting ಮಾಡೊ
ಗೋಪಿಕಾ ಸ್ತ್ರೀ ನೋಡು     
century ಶ್ರೀ ಕೃಷ್ಣನ ನೋಡು
ಒಂದೆ ದಿನ ಒಂದೇ ball ಒಂದೇ run ಒಂದೇ wicket ಹೊಡಿದ್ರೆ win ಬಿಟ್ರೆ draw
ಬಂತು ball ಬಿತ್ತು bails bowled, clean bowled bowled
ಒಲವು ಚೆಲುವು ಒಂದಾಗಿ               
ನಲಿದಿದೆ ಇಲ್ಲಿ ಹೆಣ್ಣಾಗಿ
ಹೆಣ್ಣ ಕಂಡ ಬಣ್ಣಗಳೆಲ್ಲ                   
ಶರಣು ಅಂದವೋ ಮಂಕಾಗಿ
ಕೃಷ್ಣಯ್ಯ ಬಾರಯ್ಯ ಒಲವಿನ ಹಬ್ಬಕ್ಕೆ 
ಮುದ್ದಿನ ಜೇನಿನ ಚೆಲುವಿನ ಊಟಕ್ಕೆ
ಹಬ್ಬದ ಹಬ್ಬ  ಒಲವಿನ ಹಬ್ಬ 
ಮನೆ ಮನೆ ಹಬ್ಬ  ತುಂಬಿದೆ ಬಾಳಿನ ಹಬ್ಬ ಹಬ್ಬ
ಚೆಲ್ಲೊ  ಚೆಲ್ಲೊ  ಬಣ್ಣ ಚೆಲ್ಲೊ ಬಣ್ಣ ಚೆಲ್ಲೊ

ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ರಾಗ ರಂಗಿನ ರಂಗು ರಂಗೋಲಿ

ಕೋಗಿಲೆ ಕೊಳಲಲ್ಲಿ ಪಂಚಮವ ಹಿಡಿಸೋಣ
ಮಯೂರದ ಮೈಯ್ಯಿಂದ ಲಾಸ್ಯ ಲಯ ಬೆರೆಸೋಣ
ಹದ ಮೀರದಂತ ಹೂಗಳ ಬಣ್ಣದ ಅಡಿಗೆ ಕಲಿಯೋಣ
ಭಾವದ ಹೋಳಿಗೆ ಮಾಡೋಣ

ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ

*********************************************************************************

ಪ್ರೀತ್ಸೆ ಪ್ರೀತ್ಸೆ

ಸಾಹಿತ್ಯ: ಹಂಸಲೇಖ  
ಗಾಯಕರು: ಹೇಮಂತ್ 


ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಮನಸು ಬಿಚ್ಚಿ ನನ್ನ ಪ್ರೀತ್ಸೆ
ಉಸಿರಾಗಿ ಪ್ರೀತ್ಸೆ ಬದುಕಾಗಿ ಪ್ರೀತ್ಸೆ
ನನಗಾಗಿ ಪ್ರೀತ್ಸೆ ನಿನಗಾಗಿ ಪ್ರೀತ್ಸೆ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ

ಸಾವಿರಾರು ದಿನಗಳ ಕೆಳಗೆ ನನ್ನೆದೆಯ ಗರ್ಭದ ಒಳಗೆ
ಉಸಿರಾಡಿತು ಆಸೆಯ ಭ್ರೂಣ ಪಡೆಯಿತು ಪ್ರಾಣ
ಬೆಳೆಯಿತು ಕಲಿಯಿತು ಮುದ್ದಿನ ಮಾತೊಂದ
ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ  ಪ್ರೀತ್ಸೆ ನನ್ನೆ ಪ್ರೀತ್ಸೆ
ಮಾತಾಡ್ತ ಪ್ರೀತ್ಸೆ ಮುದ್ದಾಡ್ತ ಪ್ರೀತ್ಸೆ
ಕಣ್ಣೊರಸಿ ಪ್ರೀತ್ಸೆ ಮಗು ಅಂತ ಪ್ರೀತ್ಸೆ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ

ನಿನ್ನಂದಕೆ ನಾ ಅಭಿಮಾನಿ ನನ್ನೆದೆಗೆ ನೀ ಯಜಮಾನಿ
ನೀನಿಲ್ಲದ ಲೋಕ ಶೂನ್ಯ ಬಾಳು ಬರಡು
ಜನುಮ ದಂಡ ಸೃಷ್ಟಿಯ ಅದ್ಭುತವೇ

ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ  ಪ್ರೀತ್ಸೆ ನನ್ನೆ ಪ್ರೀತ್ಸೆ
ದಯಮಾಡಿ ಪ್ರೀತ್ಸೆ  ಕೃಪೆ ತೋರಿ ಪ್ರೀತ್ಸೆ
ಪ್ರೇಮಿಗಾಗಿ ಪ್ರೀತ್ಸೆ ಪ್ರೀತಿಗಾಗಿ ಪ್ರೀತ್ಸೆ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ

*********************************************************************************

ಸೈ ಸೈ ಪ್ರೀತ್ಸೆ

ಸಾಹಿತ್ಯ: ಹಂಸಲೇಖ  
ಗಾಯಕರು: ಹರಿಹರನ್, ಅನುರಾಧ ಪೌಡ್ವಾಲ್


ಸೈ ಸೈ ಸೈ ಸೈ ಸೈ ಸೈ ಈ ನಯನವು ಸೈ
ಈ ಅಧರವು ಸೈ  ಈ ದಂತದ ಮೈ ರತಿ ದೇವಿಗು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಈ ಸನ್ನೆಯು ಸೈ ಈ ಕಿರುನಗೆ ಸೈ 
ಈ ಪ್ರೀತಯ ಕೈ ಇರೆ ಜಗಕೆ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಮುಂಗುರುಳ ಕರೆಯು ಸೈ ಸೈ  ಕರಿ ಹುಬ್ಬ ಹಬ್ಬ ಸೈ ಸೈ  
ಎದೆಗಾರನೆದುಗು ಎದೆ ಸೈ  ಬಿಸಿಯುಸಿರ ಕದನಕೂ ಸೈ
ಬರಿ ರಾಗವಾದ್ರು ಸೈ  ತಾಳವಾದ್ರು ಸೈ
ಗಮಕವಾದ್ರು ಸೈ  ವಚನವಾದ್ರು ಸೈ
ಪ್ರೀತಿಸೆ ಸೈ  ನಾ ಸೋಲಲು ಸೈ, ನಾ ಗೆಲ್ಲಲು ಸೈ
ನಿನ್ನ ಪ್ರೀತಿ ಪರೀಕ್ಷೆಲಿ ಸಾಯಲು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಬಯಸಿ ಬಯಸಿ ಕಾದು ಪಡೆಯೊ ಸುಖವೆ ಸವಿ ಸುಖವೆ
ಬಂಧಿಸೈ ಚುಂಬಿಸೈ ಸುಖದ ನೆನಪಿರಲಿ
ಕರುಣಿಸೈ ನಿನ್ನ ಈ ???(ಉಟ್ಟ) ರೂಪ ನನಗಿರಲಿ
ಕನಸಿನ ಕಡಲ ತೀರದಲ್ಲಿ ಒಲವಿನ ದೀಪ
ನೀನೆ ಸೈ ಸ್ವೀಕರಿಸೈ ಗೆಲುವಿನ ಹೆಸರು
ನಿನ್ನ ಈ ಹೆಸರಲಿ ಈಜಾಡಿದೆ ನನ್ನುಸಿರು
ಹೊರನಾಡಲಿದ್ರು ಸೈ  ನಾಡಲಿದ್ರು ಸೈ
ವಿರಹವಿದ್ರು ಸೈ ಸನಿಹವಿದ್ರು ಸೈ
ಪ್ರೀತಿಸೆ ಸೈ
ಲೋಕದ ಪ್ರೀತಿಯ ಕಾವ್ಯಗಳಲ್ಲಿ ಕೊನೆಯ ಪುಟ ವಿರಹ
ಬದಲಿಸೈ ಬದಲಿಸೈ ಹಳೆಯ ಪರಿಹಾಸ್ಯ
ಸೃಷ್ಟಿಸೈ ಪ್ರೀತಿಗೆ ಸುಖದ ಇತಿಹಾಸ
ಋತುಗಳ ನಡುವೆ ಬೆಳೆದಿದೆ ಒಂದು ಸುಂದರ ಸ್ನೇಹ
ಆಲಿಸೈ ಪಾಲಿಸೈ ಸ್ನೇಹದ ನೇಮ
ಕಾಯುತ ಸಾಗುತ ಪಡೆವುದೆ ನಿಜ ಪ್ರೇಮ
ನಿಜ ಪ್ರೇಮವಾದ್ರು ಸೈ ಸ್ನೇಹವಾದ್ರು ಸೈ
ಸ್ನೇಹ ಪ್ರೇಮ ಪದ ಬದಲಿಯಾದ್ರು ಸೈ
ಪ್ರೀತಿಸೆ ಸೈ

*********************************************************************************

ಸೂರ್ಯ ಒಬ್ಬ

ಸಾಹಿತ್ಯ: ಹಂಸಲೇಖ   
ಗಾಯಕರು: ಸುರೇಶ್ ಪೀಟರ್ಸ್, ಅನುರಾಧ ಶ್ರೀರಾಮ್ 


Say yes or no  Say yes or no
ಸೂರ್ಯ ಒಬ್ಬ.. ಯಾ ಯಾ   ಚಂದ್ರ ಒಬ್ಬ.. ಯಾ ಯಾ
ಒಂದೆ ಹಗಲು.. ಯಾ ಯಾ   ಒಂದೆ ಇರುಳು.. ಯಾ ಯಾ
ಹಗಲಿಗೆ ಇಬ್ಬರು ಸೂರ್ಯ ನೊ ನೊ..
ಇರುಳಿಗೆ ಇಬ್ಬರು ಚಂದ್ರ ನೊ ನೊ..
ರಾಮ ಒಬ್ಬ.. ಯಾ ಯಾ   ಕೃಷ್ಣ ಒಬ್ಬ.. ಯಾ ಯಾ
ಸೀತೆ ಸಾಧ್ವಿ.. ಯಾ ಯಾ   ರಾಧೆ ವಿರಹಿ.. ಯಾ ಯಾ
ಸೀತೆಗೆ ಸವತಿಯರಿದ್ರು.. ನೊ ನೊ
ರಾಧೆಗೆ ಮದುವೆ ಆಯ್ತ.. ನೊ ನೊ
ಇಂಡಿಯ ಒಂದೆ.. ಯಾ ಯಾ   ಎವರೆಸ್ಟ್ ಒಂದೆ.. ಯಾ ಯಾ
ಗಾಂಧಿ ಒಬ್ನೆ.. ಯಾ ಯಾ      ಬುಧ್ಧ ಒಬ್ನೆ.. ಯಾ ಯಾ
ಇಂಡಿಯನ್ಸ್ ಗೆ ಯುಧ್ಧ ಬೇಕ.. ನೊ ನೊ
ಮೇಲ್ ಬಿದ್ರೆ ಸುಮ್ನಿರ್ಬೇಕ.. ನೊ ನೊ
ಪ್ರೀತಿ ಬೇಕ.. ಯಾ ಯಾ   ದೇಷ.. ನೋ ನೋ
ಅನುರಾಗಿಯಾಗಿ ನೋಡು  ಸೋಲೆ ಸೋತು ಓಡಲು
ಸ್ನೇಹ ಬೇಕ.. ಯಾ ಯಾ  ದ್ರೋಹ.. ನೊ ನೊ
ಅಭಿನಂದನೀಯನಾಗು  ನೋವೆ ನಾಚಿ ಓಡಲು
ಆಟ ಬೇಕ.. ಯಾ ಯಾ   ಜೂಜಾಟ.. ನೊ ನೊ
ಭಾವೈಕ್ಯನಾಗಿ ಆಡು  ದೇಶ ದೇಶ ಕೂಡಲು  
ದೇವರು First.. ಯಾ ಯಾ   ದೇಶ Nextu.. ಯಾ ಯಾ
ತಾಯಿ Firstu.. ಯಾ ಯಾ   ಪ್ರೀತಿ Nextu.. ಯಾ ಯಾ
ದೇಶಕಿಂತ ಪ್ರೀತಿ ದೊಡ್ಡದ.. ನೊ ನೊ
ತಾಯಿಗಿಂತ ದೇವರು ದೊಡ್ಡದ.. ನೊ ನೊ
ಜಗವೆ ನಮ್ಮನೆ.. ಯಾ ಯಾ   ಸ್ವಂತನ.. ನೊ ನೊ
ಕೈಲಾದ ಸೇವೆ ಮಾಡು  ಬಾಳಿಗೆ ಋಣ ತೀರಲು
ಜ್ಞಾನ ಬೇಕ.. ಯಾ ಯಾ  ಅಜ್ಞಾನ.. ನೊ ನೊ
ವಿಜ್ಞಾನ ಸೂರ್ಯನಾಗು ಲೋಕ ದೀಪವಾಗಲು
ಸಿನಿಮ ಬೇಕ.. ಯಾ ಯಾ  ಅಶ್ಲೀಲ.. ನೊ ನೊ
ಸ್ವಾಭಿಮಾನಿಯಾಗು  ದಿವ್ಯ ಸಂಸ್ಕೃತಿಯಾಗಲು
Politics ಬೇಕು.. ಯಾ ಯಾ  Voting ಬೇಕು.. ಯಾ ಯಾ
Army ಬೇಕು.. ಯಾ ಯಾ  Freedom ಬೇಕು.. ಯಾ ಯಾ
Corrupt Politicians.. ನೊ ನೊ  Growing Population.. ನೊ ನೊ

*********************************************************************************

ಯಾರಿಟ್ಟರೀ ಚುಕ್ಕಿ


ಸಾಹಿತ್ಯ: ಹಂಸಲೇಖ  
ಗಾಯಕರು: ಹರಿಹರನ್, ಅನುರಾಧ ಪೌಡ್ವಾಲ್


ಯಾರಿಟ್ಟರೀ ಚುಕ್ಕಿ  ಯಾಕಿಟ್ಟರೀ ಚುಕ್ಕಿ 
ಚುಕ್ಕಿ ಗಲ್ಲದ ಚುಕ್ಕಿ ಚುಕ್ಕಿ
ಚುಕ್ಕಿ ಗಲ್ಲದ ಅಂದದಾ ಚುಕ್ಕಿ ಚುಕ್ಕಿ ಚುಕ್ಕಿ
ಹೊಸಿಲಿನ ಅಕ್ಕಿ ಚೆಲ್ಲುವ ಚುಕ್ಕಿ 

ಅಸ್ತು ದೇವತೆ ಪ್ರಥಮ ಪದಿಯಲಿ
ಈ ಮನೆಗುಡಿಯಲ್ಲಿ ಚುಕ್ಕಿಯ ತ್ರಿಪದಿ 
ದೀಪ ಬೆಳಗುವ ಉದಯ ದೇವತೆ
ಚುಕ್ಕಿಯ ತ್ರಿಪದಿ ರಸಮನೆಯಲ್ಲಿ 
ಚುಕ್ಕಿಯ ಚೌಪದಿ ತುಳಸಿವನದಲಿ
ಪಂಚಪದಿ ಪ್ರಿಯನೋಲಗದಲ್ಲಿ

ಯಾರಿಟ್ಟರೀ ಚುಕ್ಕಿ  ಯಾಕಿಟ್ಟರೀ ಚುಕ್ಕಿ    
ಹೆಣ್ಣು :  ಯಾರಿಟ್ಟರೀ ಚುಕ್ಕಿ  ಯಾಕಿಟ್ಟರೀ ಚುಕ್ಕಿ
ಗಂಡು : ಚುಕ್ಕಿ ಗಲ್ಲದ ಚುಕ್ಕಿ ಚುಕ್ಕಿ

 ಭಾವದ ಹಕ್ಕಿ ಈ ಪ್ರೀತಿ ಚುಕ್ಕಿ
ಹೃದಯ ನಡೆಸುವಳು ಪ್ರೇಮ ಸಪ್ತಪದಿ
ಕನಸನು ಹಡೆದು ತರುವಾ  ಚುಕ್ಕಿ
ಸೃಷ್ಟಿ ಬರೆದ ಭಾಮಿನಿ ಷಟ್ಪದಿ
ಏಳು ಬೀಳಿನ ಬಾಳಿನ ಸರಿಗಮ
ಶೃತಿ ಲಯ ಮೀರದೆ ಆಡುವ ಸಂಯಮ
ಸಾಧಿಸಿ ನಡೆವಳು ಶುಭ ಸಪ್ತಪದಿ

*********************************************************************************

No comments:

Post a Comment