Thursday, August 30, 2018

ಬಂಧನ (1984)


ಈ ಬಂಧನ ಜನುಮ

ಚಲನ ಚಿತ್ರ: ಬಂಧನ (1984)
ನಿರ್ದೇಶನ: ಎಸ್.ವಿ. ರಾಜೇಂದ್ರ ಸಿಂಗ್ ಬಾಬು 
ಸಾಹಿತ್ಯ : ಆರ್.ಎನ್. ಜಯಗೋಪಾಲ್ 
ಸಂಗೀತ : ಎಂ.ರಂಗಾ ರಾವ್ 
ಗಾಯನ : ಕೆ.ಜೆ. ಯೇಸುದಾಸ್ ಮತ್ತು ಎಸ್.ಜಾನಕಿ  
ನಟನೆ: ವಿಷ್ಣುವರ್ಧನ್, ಸುಹಾಸಿನಿ, ಜೈ ಜಗದೀಶ್ 



ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ

ಈ ಬಂಧನ ಜನುಮ ಜನುಮದ ಅನುಬಂಧನ
ಈ ಬಂಧನ ಜನುಮ ಜನುಮದ ಅನುಬಂಧನ
ಈ ಪ್ರೇಮ ಸಂಗೀತ ಸಂತೋಷ ಸಂಕೇತ

ಈ ಬಂಧನ ನನ್ನ ನಿನ್ನ ಮಿಲನ ತಂದ ಹೊಸ ಜೀವನ
ಈ ಬಂಧನ ಎದೆಯ ತುಂಬಿ ಬಂದ ಒಂದು ಸುಖ ಭಾವನ

ನಿನ್ನಾ ಮಡಿಲಲ್ಲಿ  ನಾನೂ ಮಗುವಾದೇ
ನಿನ್ನಾ ಉಸಿರಲ್ಲಿ  ನಾನೂ ಉಸಿರಾದೆ
ಪ್ರೇಮದಾ ಸೌರಭ ಚೆಲ್ಲುವ ಚಂದನ

ಈ ಬಂಧನ ಜನುಮ ಜನುಮದ ಅನುಬಂಧನ

ಈ ದಾರಿಯೂ ಹೂವ ರಾಶಿ ಹಾಸಿ ನಮಗೆ ಶುಭ ಕೋರಿದೆ
ಆ ದೂರಾದ ಒಲವ ಮನೆಯು ಕೈಯ್ಯಾ ಬೀಸಿ ಬಾ ಎಂದಿದೆ
ಹೆಜ್ಜೆ ಜೊತೆಯಾಗಿ ನಿನ್ನಾನೆರಳಾಗಿ
ಪ್ರೀತಿ ಬೆಳಕಾಗಿ ದಾರಿ ಹಾಯಾಗಿ
ಸೇರುವಾ ಸುಂದರ ಪ್ರೇಮದಾ ಮಂದಿರ

ಈ ಬಂಧನ ಜನುಮ ಜನುಮದ ಅನುಬಂಧನ

*******************************************************************************

ನನ್ನ ಒಲವಿನ ಬಣ್ಣ

ಸಾಹಿತ್ಯ: ಆರ್. ಎನ್. ಜಯಗೋಪಾಲ್ 
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ & ಸಂಗಡಿಗರು 


ಬಣ್ಣ, ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ಬಣ್ಣ, ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ
ನೀ ನಕ್ಕರೆ ಹಸಿರು, ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ. ಬಣ್ಣ. ಬಣ್ಣ.

ಈ ನೀಲಿ ಮೋಹಕ ಕಣ್ಣ ಚೆಲುವಲ್ಲಿ ಬಾನಿನ ಬಣ್ಣ
ರಂಗಾದ ಕೆನ್ನೆ ತುಂಬಾ ಆ ಸಂಜೆ ಓಕುಳಿ ಬಣ್ಣ
ನೀ ತಂದೆ ಬಾಳಲ್ಲಿ ಇಂದು ನೂರೊಂದು ಕನಸಿನ ಬಣ್ಣ
ಮನಸೆಂಬ ತೋಟದಲ್ಲಿ ಹೊಸ ಪ್ರೇಮ ಹೂವಿನ ಬಣ್ಣ
ಬಾನಿನಿಂದ ಜಾರಿ ಬಂದ ಕಾಮನಬಿಲ್ಲು
ಒಲವೆಂಬ ರಂಗವಲ್ಲಿ ಹಾಕಿದೆ ಇಂದು
ನಿನ್ನ ತುಂಟ ನೋಟದಲ್ಲಿ ಮಿಂಚಿನ ಬಣ್ಣ
ಏನೋ ಮೋಡಿ ಮಾಡಿ ಇಂದು ಕಾಡಿದೆ ಎನ್ನ
ಬಣ್ಣ. ಬಣ್ಣ. ಬಣ್ಣ.

ಬಣ್ಣ, ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ

ಕರಿ ಮೋಡಕಿಂತ ಸೊಗಸು ಮುಂಗುರುಳ ಮೋಹಕ ಬಣ್ಣ
ಬಿಳಿ ದಂತಕಿಂತ ಚೆಲುವು ನಿನ್ನೊಡಲ ಕಾಂತಿಯ ಬಣ್ಣ
ನೊರೆ ಹಾಲಿಗಿಂತ ಬಿಳುಪು ಈ ನಿನ್ನ ಮನಸಿನ ಬಣ್ಣ
ಮುಂಜಾನೆ ಮಂಜಿನ ಹಾಗೆ ತಂಪಾದ ಮಾತಿನ ಬಣ್ಣ
ನೀಲಿ ಕಡಲಂತೆ ನಿನ್ನ ಪ್ರೀತಿ ಆಳವು
ಮುತ್ತು ರತ್ನ ಪಚ್ಚೆಯಂತೆ ನಿನ್ನ ಸ್ನೇಹವು
ಚೈತ್ರ ತಂದ ಚಿಗುರಿನಂತೆ ನಿನ್ನ ಪ್ರೇಮವು
ಕಾಲದಲ್ಲಿ ಮಾಸದಂತ ಗಟ್ಟಿ ಬಣ್ಣವು
ಬಣ್ಣ. ಬಣ್ಣ. ಬಣ್ಣ.

ಬಣ್ಣ, ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ

********************************************************************************

ನೂರೊಂದು ನೆನಪು

ಸಾಹಿತ್ಯ: ಆರ್.ಎನ್. ಜಯಗೋಪಾಲ್  
ಗಾಯಕರು : ಎಸ್ ಪಿ ಬಾಲಸುಬ್ರಹ್ಮಣ್ಯಂ


ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದೂ ನಗಲಮ್ಮ ಎಂದೂ
ಎಂದೆಂದೂ ಇರಲ್ಲಮ್ಮ ಈ ದಿವ್ಯ ಬಂಧ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ಒಲವೆಂಬ ಲತೆಯೂ ತಂದಂತ ಹೂವು
ಮೂಡಿಯೇರೇ ನಲಿವು ಮುಡೀಜಾರೆ ನೋವು
ಕೈಗೂಡಿದಾಗ ಕಂಡಂತ  ಕನಸು
ಅದೃಷ್ಟದಾಟ ತಂದಂತ ಸೊಗಸು
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ನೀವೆಂದು ಇರಬೇಕು ಸಂತೋಷದಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರುಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೋಷವುಂಟು
ನಿನ್ನ ಹರುಷದಲಿ ನನ್ನ ಉಸಿರಿರಲಿ
ನಿನ್ನ ಹರುಷದಲಿ ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ ಈ ಹಾಡಿನಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದೂ ನಗಲಮ್ಮ ಎಂದೂ
ಎಂದೆಂದೂ ಇರಲ್ಲಮ್ಮ ಈ ದಿವ್ಯ ಬಂಧ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಆನಂದದಿಂದ ಆನಂದದಿಂದ

*********************************************************************************

ಪ್ರೇಮದಾ ಕಾದಂಬರಿ

ಸಾಹಿತ್ಯ : ಆರ್.ಎನ್. ಜಯಗೋಪಾಲ್ 
ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ


ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ,
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ, 
ಕಥೆಯೂ ಮುಗಿದೆ ಹೋದರೂ
ಮುಗಿಯದಿರಲೀ ಬಂಧನ ......!!

ಮೊದಲ ಪುಟಕೂ , ಕೊನೆಯ ಪುಟಕೂ,
ನಡುವೆ ಏನಿತು ಅಂತರ,
ಮೊದಲ ಪುಟಕೂ , ಕೊನೆಯ ಪುಟಕೂ,
ನಡುವೆ ಏನಿತು ಅಂತರ,
ಬಂದು ಹೋಗುವ ಸ್ನೇಹ ಸಾವಿರ,
ನಿಮ್ಮ ಬಂಧ ನಿರಂತರ!!

ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ, 
ಕಥೆಯೂ ಮುಗಿದೆ ಹೋದರೂ ..
ಮುಗಿಯದಿರಲೀ ಬಂಧನ .......!

ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು,
ನನ್ನ ಕಥೆಗೆ ಅಂತ್ಯ ಬರೆದು , ಕವಿಯು ಹರಸಿದ ನನ್ನನು..
ಕೊನೆಯ ಉಸಿರಲಿ ,ಒಂದೇ ಆಸೆ, ದೈವ ಹರಸಲಿ ನಿಮ್ಮನು....

ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ,
ಕಥೆಯೂ ಮುಗಿದೆ ಹೋದರೂ ಮುಗಿಯದಿರಲೀ ಬಂಧನ,
ಮುಗಿಯದಿರಲೀ ಬಂಧನ, ಮುಗಿಯದಿರಲೀ ಬಂಧನ.......!!

*********************************************************************************

No comments:

Post a Comment