Thursday, August 30, 2018

ಸಂಪತ್ತಿಗೆ ಸವಾಲ್ (1974)

ಚಲನಚಿತ್ರ: ಸಂಪತ್ತಿಗೆ ಸವಾಲ್ (1974)
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನೀವಾಸ್ ಮತು ಎಸ್. ಜಾನಕಿ
ನಿರ್ದೇಶನ: ಎ. ವಿ. ಶೇಷಗಿರಿ ರಾವ್ 
ನಟರು: ಡಾ. ರಾಜಕುಮಾರ್, ಮಂಜುಳ 



ರಾಜಾ ಮುದ್ದು ರಾಜಾ,
ನೂಕುವಂತ ಕೋಪ ನನ್ನಲೇಕೆ
ಸರಸದ ವೇಳೆ ದೂರ ನಿಲ್ಲಬೇಕೆ ಕೋಪವೇಕೆ
ನಿನಗಾಗಿ ಬಂದೆ ಒಲವನ್ನು ತಂದೆ,
ನನದೆಲ್ಲ ನಿಂದೇ,

ರಾಜಾ ನನ್ನ ರಾಜಾ... ಮುದ್ದು ರಾಜಾ

ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ,
ರಾಜ ನನ್ನ ರಾಜ  ಆಸೆ ಬಾರದೇನು,
ನಾನಂದವಿಲ್ಲವೇನು, ಮನಸಿನ್ನು ಕಲ್ಲೇನು
ರಾಜ ಬೇಡ ರಾಜಾ,
ನೂಕುವಂತ ಕೋಪ ನನ್ನಲೇಕೆ,
ಮುದ್ದು ರಾಜಾ...

ಹಣದ ಸೊಕ್ಕಿನಿಂದ, ಮೆರೆದಾಡೋ ನಿನ್ನ ಚೆಂದ,
ಬಲ್ಲೇ... ನಾ ಬಲ್ಲೇ.....
ಬೆಂಕಿಯಂತೆ ನಾನು, ತಣ್ಣೀರಿನಂತೆ ನೀನು,
ನೀ ನನ್ನ ಜೊತೆಯೇನು ನಿಲ್ಲೇ, ದೂರ ನಿಲ್ಲೇ
ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ
ನಲ್ಲಾ ನನ್ನ ನಲ್ಲ...
ತಂದೆ ಮಾತ ತಳ್ಳಿ, ನಾ ಓಡಿ ಬಂದೆನಲ್ಲ,
ನಿನ್ನಾಣೆ ಸುಳ್ಳಲ್ಲ ರಾಜಾ ಮುದ್ದು ರಾಜಾ


No comments:

Post a Comment