Thursday, August 30, 2018

ಜಾನಪದ ಗೀತೆ - ದುಡ್ಡು ಕೊಟ್ಟರ

ಜಾನಪದ ಗೀತೆಗಾಯಕರು : ಗುರುರಾಜ್ ಹೊಸಕೋಟೆ.

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ,
ತಮ್ಮಾ ಮರಳಿ ಬರುವಳೇನೋ..... (೨) 

ಒಂಬ್ಬತ್ತು ತಿಂಗಳ ಸಂಕಟ ನೀಡಿ ಹೊಟ್ಯಾಗ ಬೆಳದೆಲ್ಲೋ.....
ಹುಟ್ಟಿ ಬರುವ ಮುನ್ನ ಜೀವಕ್ಕ ಎಷ್ಟೋ ಕಷ್ಟ ಕೊಟ್ಟಿಯಲ್ಲೋ... (೨)
ಬರುವ ಕಷ್ಟಗಳ ಸಹಿಸಿದ ತಾಯಿ, ನಿನ್ನ ನಂಬಿತಲ್ಲೋ...

ತಾನು ಕರಗಿ ನಿನ್ನ ಕೋಣ ಬೆಳಸಿದಂಗ ಬೆಳಸಿ ಬಿಟ್ಟಳಲ್ಲೋ...
ಒಬ್ಬ ಮಗಾ ನೀ ಆಸರಾದಿಯಂತ, ತಾಯಿ ತಿಳಿದಿತ್ತಲ್ಲೋ,
ಜೀವ ಇಟ್ಟಿತ್ತ ನಿನ್ನ ಮ್ಯಾಲೋ... 

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಕೂಲಿ ನಾಲಿ ಮಾಡಿ ಶಾಲೆ ಕಲಿಸಿದಳು, ಜಾಣ ನಾಗಲೆಂತ....
ಚಿನ್ನದಂತ ಒಂದು ಹೆಣ್ಣ ನೋಡ್ಯಾಳು, ನಿನ್ನ ಮದುವಿಗಂತ.... (೨)
ಸಾಲ ಶೂಲ ಮಾಡಿ ಮದುವೆ ಮಾಡಿದಳು, ಬಳ್ಳಿ ಹಬ್ಬಲೆಂತ....

ಮೊಮ್ಮಕ್ಕಳನು ಎತ್ತಿ ಆಡಿಸುವ ಚಿಂತಿ ಒಳಗ ಇತ್ತ...
ಮುಪ್ಪಿನ ತಾಯಿ ಏನೇನೋ ಕನಸ ಕಟಗೊಂಡ ಕುಂತಿತ್ತ...
ಕನಸು ಕನಸಾಗೇ ಉಳಿತ.......

 ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಮಗಳಿಗಿಂತ ಹೆಚ್ಚಿನ ಪ್ರೀತಿಲಿ ಸೊಸಿನ ಕಂಡಳ್ಳಲ್ಲ...
ಸೊಕ್ಕಿನ ಸೊಸೆಯು ತಾಯಿಯ ಹಂಗ ನೋಡಿಕೊಳ್ಳಲಿಲ್ಲಾ... (೨)
ಸೋತ ಶರೀರಕ ಸುಖ ಎಂಬುವುದು ಈ ಸೊಸಿಯು ನೀಡಲಿಲ್ಲಾ...

ಉಂಡು ಬಿಟ್ಟಿರಿವು ಎಂಜಲ ಕೂಳ ತಾಯಿಗ್ಯಾಕಳಲ್ಲಾ....
ಮಗನ ಮೋಹಕ ಹಳಸಿದ ಕೂಳ ತಾಯಿ ತಿಂತಾಳಲ್ಲಾ...
ಅದನು ಯಾರಿಗೂ ಹೇಳಲಿಲ್ಲ...... 

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಉಪವಾಸ, ವನವಾಸ ಹಣ್ಣಾದ ಮುದುಕಿ ಎಷ್ಟಂತ ಇರುತಾಳು....
ಹಸಿವು ತಾಳದೆ ಮತ್ತೊಬ್ಬರಲ್ಲಿ ಬೇಡಿ ತಿಂತಾಳು.... (೨)
ಇಷ್ಟೇ ಇದ್ದದ್ದು ಸೊಕ್ಕಿನ ಸೊಸೆಯು ದೊಡ್ಡದು ಮಾಡ್ಯಾಳು....

ಅವಮಾನ ನಮಗಂತ ತನ್ನ ಮನೆಯಿಂದ ಹೊರಗ ಹಾಕ್ಯಾಳು...
ಮಗನಿಗ ಹೇಳಿದರ ನೋವು ಆ ಜೀವಕ, ಎಂದು ತಿಳಿದಾಳು...
ತಾಯಿ ನಿನ್ನಿಂದ ದೂರಾದ್ಳು.... 

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 

ಮಗ ಇದ್ದರೂ ಹಡೆದ ತಾಯಿ, ಪರದೇಶಿ ಆಗಿಹಳು....
ಅಲ್ಲಿ ಇಲ್ಲಿ ತಾ ಭಿಕ್ಷೇಯ ಬೇಡಿ, ದಿನಗಳ ಕಳೆದಾಳು... (೨)
ಬಂದ ನೋವುಗಳ ಸಹಿಸುತ ಮಗನ ಚಿಂತೆ ಮಾಡುತಾಳು...
ಕಣ್ಣು ಕಾಣಲಿಲ್ಲ, ಕಿವಿಯು ಕೇಳಲಿಲ್ಲ ಎಷ್ಟುದಿನ ಇರುತಾಳು...?
ನನ್ನ ಮಗನಿಗೆ ಚೆನ್ನಾಗಿ ಇಡು ಅಂತ ಮಾತನು ಬೇಡ್ಯಾಳು...
ತಾಯಿ ಬೀದ್ಯಾಗ ಸತ್ತಾಳು.... 

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ....
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ..... 
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ.....

No comments:

Post a Comment