Sunday, September 30, 2018

ಹೊಸಬೆಳಕು (1982)


ತೆರೆದಿದೆ ಮನೆ ಓ.. 

ಚಲನಚಿತ್ರ: ಹೊಸಬೆಳಕು (1982)
ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗಾ ರಾವ್
ಗಾಯನ: ಎಸ್.ಜಾನಕಿ, ವಾಣಿ ಜಯರಾಮ್
ನಿರ್ದೇಶನ: ದೊರೈ ಭಗವಾನ್
ನಟನೆ: ರಾಜ್ ಕುಮಾರ್, ಸರಿತಾ


ಆ ಆ ಆ ನ ನ .. ಆ ... ಆ ... ಆ ...
ತೆರೆದಿದೆ ಮನೆ ಓ ಬಾ ಅತಿಥಿ
ಆ ... ಆ ... ಆ ...
ತೆರೆದಿದೆ ಮನೆ ಓ... ಬಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ

ಆವ ರೂಪದೊಳು ಬಂದರು ಸರಿಯೇ
ಆವ ವೇಶದೊಳು ನಿಂದರು ಸರಿಯೇ
ಆವ ರೂಪದೊಳು ಬಂದರು ಸರಿಯೇ
ಆವ ವೇಶದೊಳು ನಿಂದರು ಸರಿಯೇ
ನೇಸರು ದಯದೊಳು ಬಹೆಯ ಬಾ
ತಿಂಗಳಂದದಲಿ ಬಹೆಯ ಬಾ..

ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ

ಇನ್ತಾದರು ಬಾ ಅಂತಾದರೂ ಬಾ
ಎಂತಾದರು ಬಾ ಬಾ ಬಾ
ಇನ್ತಾದರು ಬಾ ಅಂತಾದರೂ ಬಾ
ಎಂತಾದರು ಬಾ ಬಾ ಬಾ

ಬೇಸರವಿದನು ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ ..

ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
 ಹೊಸ ಬಾಳನು ತಾ ಅತಿಥಿ

ಕಡಲಾಗಿ ಬಾ.. ಬಾನಾಗಿ ಬಾ..
ಗಿರಿಯಾಗಿ ಬಾ.. ಕಾನಾಗಿ ಬಾ..
ಕಡಲಾಗಿ ಬಾನಾಗಿ ಗಿರಿಯಾಗಿ
ಕಾನಾಗಿ ತೆರೆದಿದೆ ಮನ ಓ .. ಬಾ ..
ಹೊಸ ತಾನದ.. ಹೊಸ ಗಾನದ
ಹೊಸ ತಾನದ.. ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ... ಅತಿಥಿ...

********************************************************************************

ಕಣ್ಣೀರ ಧಾರೆ ಇದೇಕೆ

ಸಾಹಿತ್ಯ: ಚಿ. ಉದಯಶಂಕರ್ 
ಗಾಯನ: ಡಾ. ರಾಜ್ ಕುಮಾರ್ 

ಆ... ಆ... ಆ... ಆ...
ಕಣ್ಣೀರ ಧಾರೆ ಇದೇಕೆ ಇದೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ಕಣ್ಣೀರ ಧಾರೆ ಇದೇಕೆ ಇದೇಕೆ

ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ವಿಧಿಯಾಟವೇನು ಬಲ್ಲವರು ಯಾರು
ಮುಂದೇನು ಎಂದು ಹೇಳುವರು ಯಾರು
ಬರುವುದು ಬರಲೆಂದು ನಗು ನಗುತ ಬಾಳದೆ
ಬರುವುದು ಬರಲೆಂದು ನಗು ನಗುತ ಬಾಳದೆ
ನಿರಾಸೆ ವಿಷಾದ ಇದೇಕೆ ಇದೇಕೆ
ನಿರಾಸೆ ವಿಷಾದ ಇದೇಕೆ ಇದೇಕೆ

ಕಣ್ಣೀರ ಧಾರೆ ಇದೇಕೆ ಇದೇಕೆ

ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ಬಾಳೆಲ್ಲ ನನಗೆ ಇರುಳಾದರೇನು
ಜೊತೆಯಾಗಿ ಎಂದೆಂದು ನೀನಿಲ್ಲವೇನು
ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಾನಿನ್ನ ಕಣ್ಣಿಂದ ನೋಡುತಿರೆ ಸೊಗಸೆಲ್ಲ
ನಿನ್ನಲ್ಲಿ ನೋವು ಇದೇಕೆ ಇದೇಕೆ
ನಿನ್ನಲ್ಲಿ ನೋವು ಇದೇಕೆ ಇದೇಕೆ

ಕಣ್ಣೀರ ಧಾರೆ ಇದೇಕೆ ಇದೇಕೆ
ನನ್ನೊಲವಿನ ಹೂವೆ ಈ ಶೋಕವೇಕೆ
ಕಣ್ಣೀರ ಧಾರೆ ಇದೇಕೆ... ಇದೇಕೆ



********************************************************************************

Thursday, September 27, 2018

ಬಬ್ರುವಾಹನ (1977)

ಈ ಸಮಯ ಆನಂದಮಯ

ಚಲನ ಚಿತ್ರ: ಬಬ್ರುವಾಹನ (1977)
ನಿರ್ದೇಶನ: ಹುಣಸೂರ್ ಕೃಷ್ಣಮೂರ್ತಿ
ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ 
ಸಂಗೀತ: ಟಿ.ಜಿ.ಲಿಂಗಪ್ಪ 
ಗಾಯನ: ರಾಜಕುಮಾರ್ & ಎಸ್. ಜಾನಕಿ
ನಟನೆ: ರಾಜ್ ಕುಮಾರ್, ಜಯಮಾಲಾ 


ಹೆಣ್ಣು: ಈ ಸಮಯ ಆನಂದಮಯ
         ನೂತನ ಬಾಳಿನ ಶುಭೋದಯ
         ಈ ಸಮಯ ಆನಂದಮಯ
ಗಂಡು:  ಚಿತ್ರ,  ಬರೀ ಆನಂದ ಮಾತ್ರ ಅಲ್ಲ,
            ಈ ಸಮಯ ಶೃಂಗಾರಮಯ
            ಈ ಸಮಯ ಶೃಂಗಾರಮಯ
            ಒಲವಿನ ಬಾಳಿನ ನವೋದಯ
ಇಬ್ಬರು: ಈ ಸಮಯ ಆನಂದಮಯ
ಹೆಣ್ಣು:  ಹೊಂಬಿಸಿಲು ಹೊಸ ಚೈತನ್ಯ ತರಲು
          ಹೊಂಬಿಸಿಲು ಹೊಸ ಚೈತನ್ಯ ತರಲು
          ಹೂದುಂಬಿ ಒಂದಾಗಿ ನಲಿದಾಡುತಿರಲು
          ಹೂದುಂಬಿ ಒಂದಾಗಿ ನಲಿದಾಡುತಿರಲು
ಗಂಡು: ನಿನ್ನಾಸೆ ಅತಿಯಾಗಿ ಬಳಿಸಾರಿ ಬರಲು
           ನಿನ್ನಾಸೆ ಅತಿಯಾಗಿ ಬಳಿಸಾರಿ ಬರಲು
           ನಾ ಪಡೆದೆ ನಿನ್ನಿಂದ ಸವಿಜೇನ ಹೊನಲು

ಇಬ್ಬರು: ಈ ಸಮಯ ಶೃಂಗಾರಮಯ
          ನೂತನ ಬಾಳಿನ ಶುಭೋದಯ
          ಈ ಸಮಯ ಆನಂದಮಯ

ಗಂಡು: ಬೆಳ್ಳಿಯ ತೆರೆಯ ಹರಡಿದೆ ಹಿಮವು
           ಬೆಳ್ಳಿಯ ತೆರೆಯ ಹರಡಿದೆ ಹಿಮವು
           ಮುತ್ತಿನ ಮಣಿಗಳ ಹೊತ್ತಿದೆ ಸುಮವು
           ಮುತ್ತಿನ ಮಣಿಗಳ ಹೊತ್ತಿದೆ ಸುಮವು
ಹೆಣ್ಣು:  ಚಳಿಯಲಿ ಸೋತಿದೆ ನನ್ನೀ ತನುವು
          ಚಳಿಯಲಿ ಸೋತಿದೆ ನನ್ನೀ ತನುವು
          ತೋಳಿನ ಆಸರೆ ಬಯಸಿದೆ ಜೀವವು

ಇಬ್ಬರು:  ಈ ಸಮಯ ಆನಂದಮಯ
            ನೂತನ ಬಾಳಿನ ಶುಭೋದಯ
            ಈ ಸಮಯ ಆನಂದಮಯ

ಹೆಣ್ಣು: ನಿನ್ನೀ ಒಲವಿಗೆ ಅರಳಲು ಒಡಲು
         ನಿನ್ನೀ ಒಲವಿಗೆ ಅರಳಲು ಒಡಲು
ಗಂಡು: ನಾಳಿನ ಭಾಗ್ಯಕೆ ಕಾದಿದೆ ಮಡಿಲು
           ನಾಳಿನ ಭಾಗ್ಯಕೆ ಕಾದಿದೆ ಮಡಿಲು
ಹೆಣ್ಣು: ಬೆರೆತಾ ಜೀವಕೆ ಹರಕೆಯ ತರಲು
         ಬೆರೆತಾ ಜೀವಕೆ ಹರಕೆಯ ತರಲು
ಗಂಡು: ಮಳೆಯನು ಸುರಿಸಿದೆ ಕಬ್ಬನೆ ಮುಗಿಲು
ಇಬ್ಬರು: ಈ ಸಮಯ ಆನಂದಮಯ/ಶೃಂಗಾರಮಯ
            ನೂತನ ಬಾಳಿನ ಶುಭೋದಯ
            ಈ ಸಮಯ ಆನಂದಮಯ

*********************************************************************************

ನಿನ್ನ ಕಣ್ಣ ನೋಟದಲ್ಲೆ

ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ  
ಗಾಯನ: ಪಿ.ಬಿ.ಶ್ರೀನಿವಾಸ್


ನಿನ್ನ ಕಣ್ಣ ನೋಟದಲ್ಲೆ ನೂರು ಆಸೆ ಕಂಡೆನು
ನಿನ್ನ ತುಟಿಯ ನಗುವಿನಲ್ಲಿ ನನ್ನೆ ಮರೆತು ಹೋದೆನು
ನಿನ್ನ ನಡುವ ಕಂಡು ತಾನೆ ಬಳ್ಳಿ ಬಳುಕಿತು
ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು
ನಿನ್ನ ನಾಟ್ಯ ಕಂಡ ನವಿಲು ಕುಣಿಯದಾಯಿತು
ಚೆಲುವಿನರಸಿ ನನ್ನ ಮನವು ಇಂದು ನಿನ್ನದಾಯಿತು
ಸೋಲನೆಂದು ಕಾಣಂಥ ವೀರ ಪಾರ್ಥನು
ನಿನ್ನ ಕಣ್ಣ ಬಾಣದಿಂದ ಸೋತುಹೋದನು
ಚೆಲುವೆ ನಿನ್ನ ಸ್ನೇಹದಲ್ಲಿ ಕರಗಿ ಹೋದೆನು
ತೋಳಿನಲ್ಲಿ ಬಳಸಿದಾಗ ನಾನೆ ನೀನಾದೆನು

*********************************************************************************

ಯಾರು ತಿಳಿಯರು

ಸಾಹಿತ್ಯ: ಹುಣಸೂರ್ ಕೃಷ್ಣಮೂರ್ತಿ 
ಗಾಯನ: ಡಾ| ರಾಜ್ ಕುಮಾರ್ & ಪಿ.ಬಿ.ಶ್ರೀನಿವಾಸ್ 

ಸಂಭಾಷಣೆ:

ಬಬ್ರುವಾಹನ: ಏನು ಪಾರ್ಥಾ, ಅಹ್ಹಹ..   ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. 
                    ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂಧಿಸಿದ ಮರುಕ್ಷಣವೆ, 
                    ನಿನ್ನ ಪುಣ್ಯವೆಲ್ಲಾ ಉರಿದುಹೋಗಿ, ಪಾಪದ ಮೂಟೆ ಹೆಗಲು ಹತ್ತಿದೆ. 
                    ಹುಮ್! ಎತ್ತು ನಿನ್ನ ಗಾಂಢೀವ, ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ. 
                    ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವಾ 
                    ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.
ಅರ್ಜುನ: ಮದಾಂಧ! ಅವರಿವರನ್ನು ಕೊಂದೆ ಎಂಬ ಅಹಂಕಾರದಿಂದ ಕೊಬ್ಬಿರುವ ಮೂರ್ಖ. 
              ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನ್ನು ಭೇಧಿಸಿ, ರಣಾಂಗಣದಲಿ ವೀರವಿಹಾರ ಮಾಡಿದ 
              ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೊ.
ಬಬ್ರುವಾಹನ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ.... 
                    ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
                    ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
                    ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
                    ಜಯವ ತಂದಿತ್ತ ಆ ಯದುನಂದನ
                    ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ ಆ ಆ ಆ ಆ ಆ
ಅರ್ಜುನ:  ಅಸಹಾಯ ಶೂರ ನಾ ಅಕ್ಷೀಣ ಬಲನೋ
              ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
              ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ...  ಉಗ್ರಪ್ರತಾಪೀ
ಬಬ್ರುವಾಹನ: ಓ ಹೊ ಓ ಹೋ ಉಗ್ರಪ್ರತಾಪಿ ಆ!
                    ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
                    ನೂಪುರಂಗಳ ಕಟ್ಟಿ ನಟಿಸಿ ತಕಥೈಎಂದು ನಾಟ್ಯ ಕಲಿಸಿದ ನಪುಂಸಕ ನೀನು
                    ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
                    ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ ಖಂಡಿಸಿದೇ ಉಳಿಸುವೆ
                    ಹೋಗೊ ಹೋಗೆಲೋ ಶಿಖಂಡಿ ಈ ಈ ಈ
ಅರ್ಜುನ: ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
              ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
              ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಬಬ್ರುವಾಹನ: ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
                    ಹೂಡು ಬಾಣಗಳ ಮಾಡುವೆ ಮಾನಭಂಗ ಆ ಆ ಆ
ಅರ್ಜುನ:  ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಬಬ್ರುವಾಹನ: ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ
ಅರ್ಜುನ:  ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಬಬ್ರುವಾಹನ:  ಅಂತಕನಿಗೆ ಅಂತಕನು ಈ ಬಬ್ರುವಾಹನ
ಅರ್ಜುನ: ಮುಚ್ಚು ಭಾಯಿ ಚಾರಿಣಿಯ ಮಗನೇ !
ಬಬ್ರುವಾಹನ: ಹೇ ಪಾರ್ಥ! ನನ್ನ ತಾಯಿ ಚಾರಿಣಿಯೋ, ಪತಿವೃತೆಯೋ ಎಂದು ನಿರ್ಧಾರಕ್ಕೋಸಕರವೇ ಈ ಯುದ್ಧ.
ಅರ್ಜುನ: ಮುಗಿಯಿತು ನಿನ್ನ ಆಯಸ್ಸು
ಬಬ್ರುವಾಹನ: ಅದನ್ನ ಮುಗಿಸೋದಕ್ಕೆ ಇಲ್ಲಿ ಯಾರಿದ್ದಾರೆ ನಿನ್ನ ಸಹಾಯಕ್ಕೆ ?
                    ಶಿಖಂಡಿನ ಮುಂದೆ ನಿಲ್ಲಿಸಿ ಭೀಷ್ಮನ ಕೊಂದ ಹಾಗೆ ನನ್ನನ ಕೊಲ್ಲೋದಿಕ್ಕೆ ಇಲ್ಲಿ ಯಾವ ಶಿಖಂಡಿನೂ ಇಲ್ಲ,
                    ಧರ್ಮರಾಯನ ಬಾಯಲ್ಲಿ ಅಬದ್ಧ ನುಡಿಸಿ ದ್ರೋಣಾಚಾರ್ಯನ ಕೊಂದ ಹಾಗೆ ನನ್ನನ ಕೊಲ್ಲಲು ಸುಳ್ಳು                                ಹೇಳೋದಿಕ್ಕೆ ಧರ್ಮರಾಯ ಇಲ್ಲಿ ಇಲ್ಲ,
                    ಹ್ಮ ಹಃ ರಥದ ಚಕ್ರ ಮುರಿದಿದ್ದಾಗ ಕವಚ ಕುಂಡಲಗಳನ್ನು ದಾನ ಪಡೆದು ಕರ್ಣನ ಕೊಲ್ಲಿಸಿದ ಹಾಗೆ ನನ್ನನ                          ಕೊಲ್ಲಸೋದಕ್ಕೆ ನಿನ್ನ ಶ್ರೀಕೃಷ್ಣ ಪರಮಾತ್ಮ ಇಲ್ಲಿ ಇಲ್ಲ,
                    ಪತಿವೃತೆಯ ಮಗನಾದ ನಾನು ಪತ್ನಿ ದ್ರೋಹಿಯಾದ ನೀನು!

*********************************************************************************

ಬರಸಿಡಿಲು ಬಡಿದಂತೆ

ರಚನೆ: ಚಿ. ಉದಯಶಂಕರ್   
ಗಾಯಕರು: ಡಾ. ರಾಜಕುಮಾರ್ 


ಬಬ್ರುವಾಹನ : ಬರಸಿಡಿಲು ಬಡಿದಂತೆ ಕಡುನುಡಿಗಳಿಂದೆನ್ನ ಒಡಲ ಬಿರಿದನು
                     ಅಯ್ಯೋ ತಡೆಯದಾದೆ, ಅಮ್ಮಾ....
                     ಪರಮ ಪಾವನೆ ನೀನು ಪಾಪಾತ್ಮಳೆಂತೆನಗೆ ಜನ್ಮವಿತ್ತೆಯಂತೆ
ಚಿತ್ರಾಂಗದೆ:  ಕುಮಾರಾ !!
ಬಬ್ರುವಾಹನ : ಅಮ್ಮಾ, ಜಾರತನದಲಿ ನೀ ಜನ್ಮವಿತ್ತೆಯಂತೆ
ಚಿತ್ರಾಂಗದೆ : ಹರಿ ಹರೀ !!
ಬಬ್ರುವಾಹನ : ಅದಕೇಳಿ ಕ್ರೋಧಾಗ್ನಿ ಇಂದೆನ್ನ ಅಂಗಾಂಗ ಉರಿದೆದ್ದು
                     ರೋಷಣದಿಂ ಶಪಥಗೈದೆ, ಶಪಥಗೈದೇ.....
                     ನುಡಿದಂತೆ ನೆಡೆದು ಪಾರ್ಥನ ಗರ್ವವಂ ತೊಡೆದು
                     ಸತ್ಯವೇನೆಂಬುದನು ತೊರೆದಿರೇನು
                     ಬೆಚ್ಚೆದೆ ಎನ್ನೆದೆಯ ಕಿಚ್ಚನು ತೋರಿ
                     ರೊಚ್ಚಿ... ನಿಂದವನ ಕೊಚ್ಚದೆ ಬಿಡೆನಮ್ಮಾ
                     ಸಚ್ಚರಿತೆ ನಿನ್ನ ಶೀಲವೇ ಹೆಚ್ಚೆಂದು ಮೆಚ್ಚಿ
                     ಜಗವೆಲ್ಲ ಕೊಂಡಾಡುವುದು ಸತ್ಯಾ...  ಸತ್ಯಾ....  ಸತ್ಯಾ....


*********************************************************************************

ಆರಾಧಿಸುವೆ

ರಚನೆ: ಚಿ. ಉದಯಶಂಕರ್   
ಗಾಯಕರು: ಡಾ. ರಾಜ್ ಕುಮಾರ್


ಆರಾಧಿಸುವೆ ಮದನಾರಿ
ಆರಾಧಿಸುವೆ ಮದನಾರಿ
ಆದರಿಸು ನೀ ದಯ ತೋರಿ
ಆರಾಧಿಸುವೆ ಮದನಾರಿ

ಅಂತರಂಗದಲ್ಲಿ ನೆಲೆಸಿರುವೆ.. ಆಆಆ
ಅಂತರಂಗದಲ್ಲಿ ನೆಲೆಸಿರುವೆ
ಆಂತರ್ಯ ತಿಳಿಯದೇ ಏಕಿರುವೇ....  
ಆಂತರ್ಯ ತಿಳಿಯದೇ ಏಕಿರುವೇ....
ಸಂತತ ನಿನ್ನ ಸಹವಾಸ ನೀಡಿ
ಸಂತತ ನಿನ್ನ ಸಹವಾಸ ನೀಡಿ
ಸಂತೋಷದಿಂದೆನ್ನ ನಲಿಸೆಂದು ಕೋರುವೆ 
ಆರಾಧಿಸುವೆ ಮದನಾರಿ


ಮೈದೋರಿ ಮುಂದೆ ಸಹಕರಿಸು
ಮೈದೋರಿ ಮುಂದೆ ಸಹಕರಿಸು
ಆಮಾರನೂರವನೇ ಪರಿಹರಿಸು 
ಮೈದೋರಿ ಮುಂದೆ ಸಹಕರಿಸು
ಆಮಾರನೂರವನೇ ಪರಿಹರಿಸು 
ಪ್ರೇಮಾಮೃತವನು...  
ಪ್ರೇಮಾಮೃತವನು... ನೀನುಣಿಸು 
ಪ್ರೇಮಾಮೃತವನು... ನೀನುಣಿಸು
ತನ್ಮಯಗೊಳಿಸು ಮೈ ಮರೆಸು
ತನ್ಮಯಗೊಳಿಸು ಮೈ ಮರೆಸು
ಚಿನ್ಮಯ ಭಾವ ತುಂಬುತ ಜೀವಾ
ಚಿನ್ಮಯ ಭಾವ ತುಂಬುತ ಜೀವಾ
ಆನಂದ ಆನಂದ ಆನಂದವಾಗಲಿ
ಆರಾಧಿಸುವೆ ಮದನಾರಿ

ಸ ನಿ ದ ಪ ಮ ಆರಾಧಿಸುವೆ ಮದನಾರಿ
ಪ ದ ನಿ ಸ ಸ ಮ ಪ ದ ನಿ ನಿ 
ಸ ನಿ ದ ಪ ಮ ಆರಾಧಿಸುವೆ ಮದನಾರಿ

ಸ ಸ ಸ ಸ ಸ ಗ ರೀ ಸ ಗ ರೀ ಸ ನಿ ದ
ನಿನಿ ರಿರಿ ಸಸ ನಿನಿ ದಪ ದ ನಿ ಸ
ರಿರಿರಿ ಗ ರಿರಿರಿ ಗ ರಿರಿ
ಗ ಮ ಗಗ ಗಾ ಮ ಗಗ
ಮ ಪ ದಪ ದನಿದನಿ ಸ ಸ ಸ
ದನಿರಿರಿ ದನಿಗಗ ರೀ ಗಗರಿ
ಗಗರಿ ಗಗರಿ ಸನದನಿ
ರಿರಿ ಸ ರಿರಿ ಸ ರಿರಿ ಸ ರಿರಿ ಸ
ನೀ ದಪ ದನಿ ಗರಿಸ
ಗರಿಸನಿದರಿಸ
ಗರಿಸನಿದರಿಸ ನಿದಪ
ಸನಿದ ಪಮರಿಸನಿ 
ರಿಸನಿದಪಸನಿ
ರಿಸನಿದಪಸನಿ ದಪಮ
ನಿದಪ ಮಗ ಸನಿದ
ಸನಿದ ಪಮ ನಿದ
ಸನಿದ ಪಮ ನಿದಪಮಪ
ಸಾಗರಿಗಾಮ ಆರಾಧಿಸುವೆ ಮದನಾರಿ
ತತಃ ಧೀಮ್ ಥಕಿಟ
ತಕಥ ಧೀಮ್ ಥಕಿಟ
ತಾ ತಃ ಧೀಮ್ ಥಕಿಟ
ತಾಕಾ ಧಿಮಿ ಥ
ತಕಥಾರಿ ಥಕಜನು ತಕಥಾರಿ ಥಕಧಿಮಿ
ತಕಥಾರಿ ಥಕಜನು ತಾಗಿದ್ತಂಗಿಡತ
ಥಕಿಟ ಧಿಕಿಟ ಧಿಮಿ ತಾಖಜಾನುತ
ಥಕಿಟ ಧಿಕಿಟ ಜನು ತಾಗಿಡದ್ತಂಗಿಡತ
ಥ ತಂಗಿಡದಂ ತಾಗದಿತ್ ತಂಗಿಡದಂ
ತರಿಗಿಡತೋಮ್ ತರಿಗಿಡತೋಮ್
ಥಕ್ ಧಿಮಿ ಥಕಜನು    ಥಕ್ ಧಿಮಿ ಥಕಜನು
ಥಕ್ ಧಿಮಿ ಥಕಜನು    ಥಕ್ ಧಿಮಿ ಥಕಜನು
ಥಕ್ ಧಿಮಿ ಥಕಜನು    ಥಕ್ ಧಿಮಿ ಥಕಜನು
ತ ದಿ ಗಿ ನ ಥೋಮ್
ತ ದಿ ಗಿ ನ ಥೋಮ್   ತ ದಿ ಗಿ ನ ಥೋಮ್
ತ ದಿ ಗಿ ನ ಥೋಮ್ 
ತ ದಿ ಗಿ ನ ಥೋಮ್   ತ ದಿ ಗಿ ನ ಥೋಮ್ 
ತ ದಿ ಗಿ ನ ಥೋಮ್ 
ತ  ದಿ  ಗಿ  ನ  ಥೋಮ್ 
ತದಿಗಿನಥೋಮ್    ತದಿಗಿನಥೋಮ್ 
ತದಿಗಿನಥೋಮ್    ತದಿಗಿನಥೋಮ್

ಆರಾಧಿಸುವೆ ಮದನಾರಿ
ಆದರಿಸು ನೀ ದಯ ತೋರಿ
ಆರಾಧಿಸುವೆ ಮದನಾರಿ


*********************************************************************************

ಭಾವಗೀತೆ



ಸಂಗೀತ: ಸಿ. ಅಶ್ವಥ್
ಸಾಹಿತ್ಯ: ''ರಾಷ್ಟ್ರಕವಿ'' ಜಿ. ಎಸ್. ಶಿವರುದ್ರಪ್ಪ 
ಗಾಯಕರು: ಸಿ. ಅಶ್ವಥ್   


ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣದ ಕಡಲಿಗೆ ಹಂಬಲಿಸಿದೆ ಮನ….ಮನಾ.......
ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣದ ಕಡಲಿಗೆ ಹಂಬಲಿಸಿದೆ ಮನ….
ಕಾಣಬಲ್ಲೆನೆ ಒಂದು ದಿನ,
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ,
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣದ ಕಡಲಿಗೆ ಹಂಬಲಿಸಿದೆ ಮನ….

ಕಾಣದ ಕಡಲಿನ ಮೊರೆತದ ಜೋಗುಳ,
ಒಳಗಿವಿಗಿಂದು ಕೇಳುತಿದೆ
ಕಾಣದ ಕಡಲಿನ ಮೊರೆತದ ಜೋಗುಳ,
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ
ಚಿಂತಿಸಿ ಸುಯ್ಯುತಿದೆ ಎಲ್ಲಿರುವುದೋ ಅದು,
ಎಂತಿರುವುದೋ ಅದು ನೋಡಬಲ್ಲೆನೇ ಒಂದು ದಿನ,
ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಸಾವಿರ ಹೊಳೆಗಳು ತುಂಬಿ ಹರಿದರೂ,
ಒಂದೇ ಸಮನಾಗಿಹುದಂತೆ
ಸಾವಿರ ಹೊಳೆಗಳು ತುಂಬಿ ಹರಿದರೂ,
ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗಶೋಭಿತ,
ಗಂಭೀರಾಂಬುಧಿ ತಾನಂತೆ ಮುನ್ನೀರಂತೆ,........
ಅಪಾರವಂತೆ..........  ಕಾಣಬಲ್ಲೆನೆ ಒಂದು ದಿನ,
ಅದರೊಳು ಕರಗಲಾರೆನೆ ಒಂದು ದಿನ

ಕಾಣದ ಕಡಲಿಗೆ ಹಂಬಲಿಸಿದೆ ಮನ…. 
ಜಟಿಲ ಕಾನನದ ಕುಟಿಲ ಪಥಗಳಲಿ,
ಹರಿವ ತೊರೆಯು ನಾನು ಎಂದಿಗಾದರು....
ಎಂದಿಗಾದರು.... ಎಂದಿಗಾದರು....
ಕಾಣದ ಕಡಲನು, ಸೇರಬಲ್ಲೆನೇನು

ಜಟಿಲ ಕಾನನದ ಕುಟಿಲ ಪಥಗಳಲಿ,
ಹರಿವ ತೊರೆಯು ನಾನು ಎಂದಿಗಾದರು....,
ಕಾಣದ ಕಡಲನು ಸೇರಬಲ್ಲೆನಾನು
ಸೇರಬಹುದೇ ನಾನು,
ಕಡಲ ನೀಲಿಯೊಳು ಕರಗಬಹುದೇ ನಾನು
ಕರಗಬಹುದೇ ನಾನು.........
ಕರಗಬಹುದೇ ನಾನು......


********************************************************************************

Monday, September 24, 2018

ರಥಸಪ್ತಮಿ (1986)



 ಚಲನ ಚಿತ್ರ: ರಥಸಪ್ತಮಿ (1986)
ನಿರ್ದೇಶನ: ಎಂ.ಎಸ್. ರಾಜಶೇಖರ್  
ಸಂಗೀತ:  ಉಪೇಂದ್ರಕುಮಾರ್ 
ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ಎಸ.ಪಿ. ಬಾಲಸುಬ್ರಹಮಣ್ಯಂ, ಎಸ್. ಜಾನಕಿ 
ನಟನೆ: ಶಿವರಾಜ್ ಕುಮಾರ್, ಆಶಾರಾಣಿ 


ಆ..... ಲಲಲ ಲಲಲ ಲಲಲ ಲಲಲ
ಸರಿಗಪ ದಪದಸ ಪದಸರಿಗಾ
ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ ||

ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಆ ಶಿಲ್ಪಿಯಾ ಹೊಂಗನಸಿನಾ
ಸೌಂದರ್ಯದಾ ಕನ್ನಿಕೆಯರೂ
ಕರವಾ ಮುಗಿದೂ ಶರಣೂ ಎಂದೂ
ಭಕುತಿಯಲೀ ಶ್ರೀಹರಿಯಾ ಸ್ತುತಿಸುತ
ಸಂಗೀತವಾ ಹಾಡಿವೆ

ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಶಿಲೆಗಳು ಸಂಗೀತವಾ
ಶಿಲೆಗಳು ಸಂಗೀತವಾ ಹಾಡಿ ..
ಆ.... ಅ ಅ ಅ ಅ ಅ ಆ..
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ .........
ಶಿಲೆಗಳು ಸಂಗೀತವಾ ಹಾಡಿವೆ ||

ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ...
ಗಾ ರಿ ಸಾ ದ ಪ ದ ಸಾ ದ ಪಾ ಗ ರಿ ಸ
ದಾ ಸರಿಗರಿಸಾ ರೀ ರೀ ಗಪದಪಗಾ

ಗಾಗಾಗಾ ಪದಸದಪಾ
ಗ ರಿ ಸ ರಿ ಸ ದ ಪ ದ ಸಾ
ಶಿಲೆಯಲೆ ಕಲೆಯನ್ನು ಸೆರೆಹಿಡಿದಾ
ಕಲೆಯನು ಶಿಲೆಯಲ್ಲಿ ಅರಳಿಸಿದಾ
ಉಳಿಯಿಂದ ಮೀಟಿ ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ..
ಉಳಿಯಿಂದ ಮೀಟಿ ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ..
ಯಾವ ರೀತಿ ಈಗ ನಾನು ಹಾಡಿ
ಹೊಗಳುದುವೋ ಕುಣಿಯುದುವೋ ಎನ್ನುತ
ಸಂಗೀತವಾ ಹಾಡಿವೆ

ಶಿಲೆಗಳು ಸಂಗೀತವಾ ಹಾಡಿವೆ ....
ಗರಿಸ ಗರಿಸ ದಸ ರಿಗರಿಗ ಸರಿಗಪ
ದಪಪ ದಪಪ ಪಗ ಗರಿರಿಸ ಸದದಾಗಾ..
ಗಗ್ಗಗಾಗಗಗ ಗಗಗಗ ಗಗಗಗ
ರಿಗಗಗ ಸರಿರಿರಿ ದಸಸಸ ದಗಗಗ
ಪಪ್ಪಪಾಪಪಪ ಪಪಪಪ ಪಪಪಪ
ದಪಪಗ ಗರಿರಿಸ ದಪಪಗ ಗರಿರಿಸ
ಸರೀರಿ ಸಗಾಗ ರಿಪಾಪ ಗದಾದ ಸಾ..
ದದದ ಸಾಸಸಸ ದದದ ಸಾಸಸಸ
ದದದ ರೀರಿರಿರಿ ದದದ ರೀರಿರಿರಿ
ಗರಿಗ ರಿಸರಿ ಸದಸ ದಪದ
ಗರಿಗಗ ರಿಸರಿರಿ ಸದಸಸ ದಪದದ ಗಾ.. ಆ........

********************************************************************************

ಆನಂದ ಸೇರಿ ಹಾಡಲು

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ


ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ
ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ
ಕೇಳೋ ಗೆಳೆಯನೆ....
ತಂಗಾಳಿ ಸುಳಿಯಲು., ಹೂಬಳ್ಳಿ ಬಳುಕಲು., ಮಂಜಲ್ಲಿ ಮಲ್ಲಿಗೆ ಇಣುಕಿರಲು,
ದುಂಬಿ ನಲಿದು ಆಡುತಿರಲು ಎಹೆ ಎಹೆ ಒಹೋ ಎಹೆ 
ಬಾನಲ್ಲಿ ಹಕ್ಕಿಯೊಂದು ಹಾರುವಾಗ ಹಾಡುವಾಗ,..

ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ
ಕೇಳೋ ಗೆಳೆಯನೆ....
ಚೆಂದದ ಹುಡುಗಿಯು ಅಂದದ ಬೆಡಗಿಯು ಬಳ್ಳಿಯ ನಡುವನು ಕುಣಿಸುತಲಿ,
ಸ್ನೇಹ ತರುವೆ ಪ್ರೀತಿ ಕೊಡುವೆ ಎಹೆ ಎಹೆ ಒಹೋ ಎಹೆ 
ಸಂಗಾತಿ ಬಾರೋ ಎಂದು ಪ್ರೇಮದಿಂದ ಕೂಗಿದಾಗ,

ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ
ಕೇಳೋ ಗೆಳೆಯನೆ....
ಆನಂದ ಸೇರಿ ಹಾಡಲು ಆನಂದ ಕೂಡಿ ಬಾಳಲು ಆನಂದ
ಹೋ ಹೋ ಹೋ ಹೋ ಹೋ ಹೋ ಹೋ ಹೋ
ಕೇಳೋ ಗೆಳೆಯನೆ....

*********************************************************************************

ಜೊತೆಯಾಗಿ ಹಿತವಾಗಿ

ಸಾಹಿತ್ಯ: ಚಿ. ಉದಯಶಂಕರ್  
ಗಾಯನ: ಎಸ್. ಜಾನಕಿ & ಎಸ್.ಪಿ.ಬಾಲು 


ಗಂಡು : ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
            ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
            ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು ನಿನ್ನ ಬಿಡಲಾರೆ ನಾನೆಂದಿಗೂ....
ಹೆಣ್ಣು:   ಜೊತೆಯಾಗಿ ಹಿತವಾಗಿ, ಸೇರಿ ನಡೆವಾ, ಸೇರಿ ನುಡಿವಾ ||೨||
           ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
           ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
           ನಿನ್ನ ಬಿಡಲಾರೆ ನಾನೆಂದಿಗೂ....
ಗಂಡು:  ಆ ಬಾನ ನೆರಳಲ್ಲಿ, ಆ ಸೂರ್ಯನೆದುರಲ್ಲಿ
           ಒಲವಿಂದ ನಾವೀಗ, ಈ ಗಂಗೆ ದಡದಲ್ಲಿ
           ಒಂದಾಗಿ ಸವಿಯಾದ ಮಾತೊಂದ ನುಡಿವ
ಹೆಣ್ಣು : ಈ ಸಂಜೆ ರಂಗಲ್ಲಿ, ಈ ತಂಪು ಗಾಳೀಲಿ
          ಜೊತೆಯಾಗಿ ನಾವೀಗ, ಶಂಕರನ ಎದುರಲ್ಲಿ
          ಇಂಪಾಗಿ ಹಿತವಾದ ಮಾತೊಂದ ನುಡಿವಾ
ಗಂಡು: ನೀನೆ ನನ್ನ ಪ್ರಾಣ,  ಹೆಣ್ಣು:  ನಮ್ಮ ಪ್ರಣಯ ಮಧುರ ಗಾನ ||೨||
ಹೆಣ್ಣು: ಜೊತೆಯಾಗಿ      ಗಂಡು:  ಹಿತವಾಗಿ
ಹೆಣ್ಣು : ಸೇರಿ ನಡೆವ     ಗಂಡು:  ಸೇರಿ ನುಡಿವಾ
ಹೆಣ್ಣು: ಕನಸಲ್ಲಿ ಕಂಡಾಸೆ, ಮನಸಲ್ಲಿ ಇರುವಾಸೆ
        ಎಲ್ಲವೂ ಒಂದೇನೇ, ನಿನ್ನನ್ನು ಪಡೆವಾಸೆ
       ಇನ್ನೇನು ಬೇಕಿಲ್ಲ, ನನ್ನಾಣೆ ನಲ್ಲ
ಗಂಡು: ಹಗಲಲ್ಲಿ ಕಂಡಾಸೆ, ಇರುಳಲ್ಲಿ ಬಂದಾಸೆ
          ಎಲ್ಲಾವೂ ಒಂದೇನೆ, ನಿನ್ನೊಡನೆ ಇರುವಾಸೆ
          ಬೇರೇನು ನಾ ಕೇಳೆ, ನಿನ್ನಾಣೆ ನಲ್ಲೆ
ಗಂಡು:  ಎಂದೂ ಹೀಗೆ ಇರುವ,   ಹೆಣ್ಣು:  ನಾವೆಂದೂ ಹೀಗೆ ನಲಿವ ||೨||
ಇಬ್ಬರು : ನಿನ್ನ ಬಿಡಲಾರೆ ನಾನೆಂದಿಗೂ  ಲಲ ಲಾ ಲಾ
ಹೆಣ್ಣು : ಜೊತೆಯಾಗಿ ಹಿತವಾಗಿ, ಸೇರಿ ನಡೆವ, ಸೇರಿ ನುಡಿವಾ ||೨||
ಗಂಡು:  ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ಹೆಣ್ಣು :  ನನ್ನ ಉಸಿರಲ್ಲಿ ನೀ ಉಸಿರಾಗಿರು
ಇಬ್ಬರು : ನಿನ್ನ ಬಿಡಲಾರೆ ನಾನೆಂದಿಗೂ....

*********************************************************************************

ಒಲವೇ ಹೂವಾಗಿ

ರಚನೆ: ಚಿ. ಉದಯಶಂಕರ್ 

ಗಾಯಕ: ಎಸ್. ಪಿ. ಬಾಲಸುಬ್ರಹ್ಮಣ್ಯಮ್ 


ಒಲವೇ... ಹೂವಾಗಿ ಬಳಿ ಬಂದೆ...ಒಲವೆ
ಹೊಸ ಆಸೆಯ ಸಾವಿರ ತೋರಿಸಿದೆಒಲವೆ ಒಲವೆ ...
ಸವಿ ಜೇನು ನೀನು.. ಹೀಗೇಕೆ ವಿಷವಾದೆ || ೩

ಒಲವೇ...

ಮೇಲೆ ಬಾನಿನಲಿ ತೇಲಿ ಹೋಗುತಿರೆ 
ಸಿಡಿಲು ಬಂದಂತೆ ಆಯ್ತೆ ಏತಕೆ
ಪ್ರೇಮ ಗಾನವನು ಸೇರಿ ಹಾಡುತಿರೆ  
ಕೊರಳು ಕುಯ್ದಂತೆ ಆಯ್ತೆ ಏತಕೆ
ಬೆಳಕನ್ನು ನೋಡುವ ಕಂಗಳ  ಬೆಳಕನೆ ಆರಿಸಿ
ಬಿರುಗಾಳಿ ಯಂತಾದೆ
ಬಿರುಗಾಳಿಯಂತಾದೆ  ಹೀಗೇಕೆ ವಿಷವಾದೆ ಒಲವೆ...
ಜೀವ ವೇದನೆಯ ರಾಗ ಹಾಡುತಿರೆ
ಬದುಕೆ ವಿಶಾದಾವಾಯ್ತೆ ಈ ದಿನ
ದೇಹ ಪ್ರಾಣಗಳು ಬೇರೆ ಆಗುತಿರೆ
ಕನಸು ಕಂಡಂತೆ ಆಯ್ತೆ ಈ ಕ್ಷಣ
ಎದೆಯಲ್ಲಿ ಬೆಳಗುವ ದೀಪವ
ರೋಷದಿ ಆರಿಸೊ ಬಿರುಗಾಳಿ ಏಕಾದೆ
ಬಿರುಗಾಳಿ ಏಕಾದೆ  ಹೀಗೇಕೆ ವಿಷವಾದೆ ಒಲವೆ..
ಹೂವಾಗಿ ಬಳಿ ಬಂದೆ ಒಲವೆ
ಹೊಸ ಆಸೆ ಸಾವಿರ ತೋರಿಸಿದೆ

ಒಲವೆ ಒಲವೆ  ಸವಿ ಜೇನು ನೀನು
ಹೀಗೇಕೆ ವಿಷವಾದೆ || ೩  ಒಲವೆ....

*********************************************************************************

ನೀ ಯಾರು ನಾ ಯಾರು

ಸಾಹಿತ್ಯ: ಚಿ. ಉದಯಶಂಕರ್ 

ಗಾಯನ: ಎಸ್. ಜಾನಕಿ ಮತ್ತು ಎಸ್.ಪಿ.ಬಾಲು 


ಶ ಶಬಬರೀ ರೀಬಬರೀ ಹೇ.. ಹೇ.. 

ನೀ ಯಾರು   ನೀ ಯಾರು ನೀ ಯಾರು ನೀ ಯಾರು 
ನಾ ಯಾರು ನಾ ಯಾರು ನಾ ಯಾರು ನಾ ಯಾರು 
ನೀ ಯಾರು   ನೀ ಯಾರು ನೀ ಯಾರು ನೀ ಯಾರು 
ನಾ ಯಾರು ನಾ ಯಾರು ನಾ ಯಾರು ನಾ ಯಾರು 
ನೀ ಯಾರೋ... ನಾ.. ಯಾರೋ ನನ್ನೇಕೆ ಹೀಗೆ ನೋಡುವೇ ... ।। 
ಯಾರನ್ನು ನೀ ಹುಡುಕುವೇ... ।।   
ಬಾರಾ.. ಶಬ ರಿಬ  ಏ ಏ ಹೇ ಹೇ 
ಹೇ..ಹೇ.ಹೇ... ಓ.... ಓ... ಓ... ಓ... 

ಆ ಸಂಜೆ ಜೊತೆಯಾಗಿ ಬಂದವನಲ್ಲ ನಿನ್ನಂದ ಕಂಡಾಗ ಸೋತವನಲ್ಲ 
ಕಣ್ಣಲ್ಲಿ ಕಣ್ಣಿಟ್ಟು ನಿಂತವನಲ್ಲ ಮುತ್ತನ್ನು ಕೆನ್ನೆಗೆ ಕೊಟ್ಟವನಲ್ಲ 
ಕನಸನ್ನು ಕಂಡಂತೆ ನೆನಪಿಂದ ನೊಂದಂತೆ 
ಆಯಾಸ ಬಂದಂತೆ ನಿನ್ನಲ್ಲಿ ಈ ಚಿಂತೆ ಹೀಗೇಕೆ.. 

ನೀ ಯಾರು   ನೀ ಯಾರು ನೀ ಯಾರು ನೀ ಯಾರು 
ನಾ ಯಾರು ನಾ ಯಾರು ನಾ ಯಾರು ನಾ ಯಾರು 
ನೀ ಯಾರು   ನೀ ಯಾರು ನೀ ಯಾರು ನೀ ಯಾರು 
ನಾ ಯಾರು ನಾ ಯಾರು ನಾ ಯಾರು ನಾ ಯಾರು... ತಾರತರಡಗ   

ಹೇ.. ಹೇ.. ಕುಲಕುಲು 
ಅನುರಾಗವೇನೆಂದು ಬಲ್ಲವನಲ್ಲ ಸಂಗಾತಿ ಇಲ್ಲೆಂದು  ನೊಂದವನಲ್ಲ 
ನನ್ನಲ್ಲಿ ನೂರಾರು ಆಸೆಗಳಿಲ್ಲ ಬಾಳಲ್ಲಿ ನನಗೆಂದು ಬೇಸರವಿಲ್ಲ 
ಹಗಲೇನು ಇರುಳೇನು ನನಗಾರ  ಭಯವೇನು 
ಬದುಕಲ್ಲಿ ಕೊರಗೇನೂ ಯಾರಲ್ಲಿ ಫಲವೇನು ನೀನು ಹೇಳು.... 

ನೀ ಯಾರು   ನೀ ಯಾರು ನೀ ಯಾರು ನೀ ಯಾರು 
ನಾ ಯಾರು ನಾ ಯಾರು ನಾ ಯಾರು ನಾ ಯಾರು...
ನೀ ಯಾರೋ... ನಾ.. ಯಾರೋ ನನ್ನೇಕೆ ಹೀಗೆ ನೋಡುವೇ ... ।। 
ಯಾರನ್ನು ನೀ ಹುಡುಕುವೇ...ಹ್ಹ ಹ್ಹ ..  ।।   . 

ಶಬ ರಿಬರಬ ರಿಫ  ಏ ಏ ಹೇ ಹೇ 



*********************************************************************************

ಒಂದು ಸಿನಿಮಾ ಕಥೆ (1992)

 ಚಲನ ಚಿತ್ರ: ಒಂದು ಸಿನಿಮಾ ಕಥೆ (1992)
ನಿರ್ದೇಶನ: ಫಣಿ ರಾಮಚಂದ್ರ 
ಸಂಗೀತ: ರಾಜನ್-ನಾಗೇಂದ್ರ 
ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ 
ನಟನೆ: ಅನಂತ್ ನಾಗ್, ಅಂಜನಾ, ಮುಖ್ಯಮಂತ್ರಿ ಚಂದ್ರು 



ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಡಿಂಡಿಮ ಬಾರಿಸುವೆ
ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಬೆಳ್ಳಿ ತೆರೆಯ ಮೊದಲ ಸಾಹಿತಿ
ಬೆಳ್ಳಾವೆಯವರಿಗೆ ವಂದಿಸುವೆ
ಬೆಳ್ಳಿ ಮೋಡದಿ ಖ್ಯಾತಿಯ ಪಡೆದ
ತ್ರಿವೇಣಿಗೆ ತಲೆ ಬಾಗಿಸುವೆ
ಬಂಗಾರದ ಮನುಷ್ಯ ರಾಮರಾಯರ
ಎಂದೂ ನಾನು ಧ್ಯಾನಿಸುವೆ
ಭೂತಯ್ಯನ ಪಾತ್ರವ ಸೃಷ್ಠಿಸಿದ
ಗೊರೂರರನ್ನು ಗೌರವಿಸುವೆ
ನಾನೂ ಅವರಂತೆ ಶಾಶ್ವತ
ಹೆಸರನು ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ
ಎಂದೂ ಬರೆಯುತ ಬಾಳುವೆ

ಕನ್ನಡ ಡಿಂಡಿಮ ಬಾರಿಸುವೆ
ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

ಚಿತ್ರಕಥೆ ಬರೆದ ಪುಟ್ಟಣ್ಣನವರು
ರಾಷ್ಟ್ರ ಖ್ಯಾತಿಯ ಪಡೆದಂತೆ
ಭಕ್ತ ಕುಂಬಾರದಿ ಹುಣಸೂರರು
ಭಕ್ತಿ ಭಾವದಿ ಮೆರೆದಂತೆ
ನಂಜುಂಡಿ ಕಲ್ಯಾಣದ ಉದಯಶಂಕರರು
ನೂತನ ದಾಖಲೆ ಬರೆದಂತೆ
ಪ್ರೇಮಲೋಕದ ಹಂಸಲೇಖರು
ಯುವಜನ ಮನವನು ಸೆಳೆದಂತೆ
ನಾನೂ ಅವರಂತೆ ಶಾಶ್ವತ ಹೆಸರನು
ಪಡೆವ ಶಕ್ತಿಯ ನೀಡೆಂದು

ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ
ಕನ್ನಡ ಡಿಂಡಿಮ ಬಾರಿಸುವೆ
ಎಂದೂ ಬರೆಯುತ ಬಾಳುವೆ
ಕನ್ನಡ ಡಿಂಡಿಮ ಬಾರಿಸುವೆ
ಎಂದೂ ಬರೆಯುತ ಬಾಳುವೆ
ಕನ್ನಡ ಹೊನ್ನುಡಿ ದೇವಿಯನು
ನಾ ಪೂಜಿಸುವೆ ಆರಾಧಿಸುವೆ

*********************************************************************************

Saturday, September 22, 2018

ಹೆಚ್.ಟು.ಓ (2002)

 ಚಲನ ಚಿತ್ರ: ಹೆಚ್.ಟು.ಓ (2002)
ನಿರ್ದೇಶನ: ಎನ್. ಲೋಕನಾಥ್ ರಾಜಾರಾಂ 
ಸಂಗೀತ: ಸಾಧು ಕೋಕಿಲ 
ಸಾಹಿತ್ಯ: ಉಪೇಂದ್ರ 
ಗಾಯನ: ಕವಿತಾ ಕೃಷ್ಣಮೂರ್ತಿ 
ನಟನೆ: ಉಪೇಂದ್ರ, ಪ್ರಿಯಾಂಕಾ, ಪ್ರಭುದೇವ 


ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ
ಹೂವೇ ನಿನ್ನೀ ನಗುವಿಗೇ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ.. {ಪಲ್ಲವಿ}

||ಹೂವೇ ಹೂವೇ||

ಆಭರಣದ ಅಂಗಡಿಗೇ
ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೇ
ಮೂಗುತಿ ಹಾಕುವೇ
ಸೀರೆಗಳ ಅಂಗಡಿಗೆ
ಹೋಗೋಣ ಬಾ ನವಿಲೇ
ಸಿಂಗಾರ ಮಾಡಲೂ
ನಿನ್ನಂತೇ ನನ್ನನೂ
ಮುಗಿಲೇ ಓ ಮುಗಿಲೇ
ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ
ನಲ್ಲ ಬರುವನೇನೇ...
ಗಾಳಿ ಈ ತಂಪನೂ
ಕದ್ದೊಯ್ದೇ ಎಲ್ಲಿಗೇ
ಕದ್ದೊಯ್ದೇ ಎಲ್ಲಿಗೇ

||ಹೂವೇ ಹೂವೇ||

ಎರವಲು ಕೊಡಿ ರೆಕ್ಕೆಗಳಾ
ಓ ನನ್ನ ಹಕ್ಕಿಗಳೇ
ನಾನೊಮ್ಮೇ ಬಾನಿಗೆ
ಹಾರಾಡಬೇಕಿದೇ
ಓಹೋ...ಗಡಿಬಿಡಿಯಾ
ಇರುವೆಗಳೇ
ಸಾಲಾಗಿ ಬನ್ನಿರೀ
ಒಬ್ಬಬ್ಬರಾಗಿಯೇ ಹೆಸರು
ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ
ನಿನ್ನ ಮೈಯಮೇಲೇ
ಚುಕ್ಕಿ ಇಟ್ಟ ರಂಗೋಲೇ...
ಬೆಳದಿಂಗಳೂಟವಾ
ಬಡಿಸೋನೇ ಚಂದ್ರಮಾ...
ಬಡಿಸು ಬಾ ಚಂದ್ರಮ

||ಹೂವೇ ಹೂವೇ||



********************************************************************************

Friday, September 21, 2018

ಚಂದ್ರಚಕೋರಿ (2003)


ಚಲನ ಚಿತ್ರ: ಚಂದ್ರಚಕೋರಿ (2003)
ನಿರ್ದೇಶನ: ಎಸ್. ನಾರಾಯಣ್ 
ಸಂಗೀತ: ಎಸ್.ಎ.ರಾಜ್‍ಕುಮಾರ್ 
ಸಾಹಿತ್ಯ: ಎಸ್.ನಾರಾಯಣ್ 
ಗಾಯಕರು: ಕೆ. ಎಸ್. ಚಿತ್ರಾ 
ನಟನೆ: ಮುರಳಿ, ಪ್ರಿಯಾ ಪೆರೇರಾ 


ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯ
ಪ್ರೀತಿ ಬಂತು, ಅದಕ್ಕೀಗ
ಅದರಿಂದ ಹೊಸರಾಗ
ಕೇಳಿದೆ ಏನಂತೀಯ
ಸುಖವಾಗಿದೆ ಹೂಂ ಅಂತೀಯ

ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯ


ಸಾವಿರ ಜನುಮ ಇದ್ದರೂ ನನಗೆ
ನಿನ್ನವಳಾಗೆ ಉಳಿದಿರುವೆ
ಪ್ರೇಮದ ಕನಸಾ ಕಾಣುವ ಕಣ್ಣಿಗೆ
ರೆಪ್ಪೆಗಳಾಗಿ ನಾನಿರುವೆ
ನಿನ್ನಂತರಂಗ ನಾನಲ್ಲವೇ
ನಿನ್ನಾಸೆಯಲ್ಲಾ ನನದಲ್ಲವೇ?
ಆ ಸಾಗರದಿ ನಾ ಮುಳುಗಿದರೂ
ಆ ಪ್ರಳಯದಲಿ ನಾ ಸಿಲುಕಿದರೂ
ನಿನ್ನ ಕೂಡುವೆ ಏನಂತೀಯಾ
ಜೊತೆ ಬಾಳುವೆ ಹೂಂ ಅಂತೀಯಾ

ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯಾ

ಗಂಗೆಯೆ ಕೇಳು, ಗಾಳಿಯೆ ಕೇಳು
ಇವನಿಗೆ ನನ್ನ ಮನಸಿಡುವೆ
ಹೃದಯವ ತೆರೆದು ಮನಸನು ಪಡೆದು
ಜನುಮದ ಪ್ರೀತಿಯ ನಾನೆರೆವೆ
ಪ್ರೀತಿಯ ಊರಾ ನಾಯಕನೇ
ಮುತ್ತಿನ ತೇರಾ ಮನ್ಮಥನೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ
ಉಸಿರಿರೋವರೆಗೂ ನಾ ಪೂಜಿಸುವೆ
ಈ ಆಸೆಗೆ ಏನಂತೀಯ ನನ್ನ ಭಾಷೆಗೆ
ಹೂಂ ಅಂತೀಯಾ

ಕುಹು ಕುಹೂ ಕೋಗಿಲೆ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತು, ಅದಕ್ಕೀಗ
ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಸುಖವಾಗಿದೆ ಹೂಂ ಏನಂತೀಯ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯ

*********************************************************************************







ಆಹಾ ಜುಮ್ತಕ ಜುಮ್

ಸಾಹಿತ್ಯ: ಎಸ್. ನಾರಾಯಣ್
ಗಾಯನ: ಕೆ. ಎಸ್. ಚಿತ್ರಾ


ಆ..ಆ...ಆ.. ಆಹಾ ಜುಮ್ತಕ ಜುಮ್ ಜುಮ್
ಜುಮ್ತಕ ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ
ಚೆಲುವನು ನುಂಗಿ ಬಂದವಳಾ
ಏನಿದು ಬಿಗುಮಾನ ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ ಯಾರದೋ ಈ ಸ್ವಪ್ನ
ನಿನ್ನಂತೆ ನಾನೂ ಆಗೋ ಇಂಗಿತ

ಆಹಾ ಜುಮ್ತಕ ಜುಮ್ ಜುಮ್ ಜುಮ್ತಕ
ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ
ಚೆಲುವನ ನುಂಗಿ ಬಂದವಳ

ಹಾರಾಡೊ ಹಕ್ಕಿಗಳೆ ನಿನ್ನೊಡನೆ ನಾ ಬರಲೇ?
ಚಿಲಿಪಿಲಿಯಾ ನಾ ಕಲಿತು ನಿನ್ನಂತೆ ಕೂಗೋ ಆಸೆ
ಗುಡುಗುಡುಗೋ ಮೋಡಗಳೆ ನಿನ್ನೊಮ್ಮೆ ಚುಂಬಿಸಲೇ?
ಹನಿಹನಿಯಾ ಜತೆ ಸೇರಿ ಧರೆಗಿಳಿವಾ ಆಸೆ ನನಗೆ
ಆಕಾಶವೇ ನಾ ಬಂದು ಚುಕ್ಕಿ ಇಡುವೆ ನಿನಗೊಂದು
ನಕ್ಷತ್ರವೇ ಬಳಿ ಬಂದು ಕದ್ದು ತರುವೆ ನನಗೊಂದು
ರವಿವರ್ಮ ನಿನ್ನಾ ಕುಂಚಾ ಎಲ್ಲಿದೇ?
ಸೌಂದರ್ಯ ಸವಿಯೋ ಸ್ಪೂರ್ತಿ ಇಲ್ಲಿದೇ

ಆಹಾ ಜುಮ್ತಕ ಜುಮ್ ಜುಮ್ ಜುಮ್ತಕ
ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ
ಚೆಲುವನು ನುಂಗಿ ಬಂದವಳಾ..

ಇಬ್ಬನಿಯೇ ಇಬ್ಬನಿಯೇ ನಿನ್ನ ಮನೆ ಎಲ್ಲಿದೆಯೇ
ಚಿಗುರೆಲೆಗೆ ಮುತ್ತಿಡಲು ನಾ ಬರಲೇ ನಿನ್ನಾ ಸೇರಿ?
ಕಿರಣಗಳೇ ಕಿರಣಗಳೇ ನಾ ನಿನ್ನ ಬಳಸಿರಲೇ
ಭೂರಮೆಯ ಸ್ಪರ್ಶಿಸಲು ನಿನ್ನೊಡನೇ ಜಾರಿ ಜಾರಿ
ವಸಂತವೆ ನೀ ಬರೆದಾ ಚಿತ್ತಾರ ನಡುವಲ್ಲಿ
ಉಲ್ಲಾಸವೇ ನಾನಿಂದು ತೇಲಾಡಿದೆ ನಾನಿಲ್ಲಿ
ಇದು ಯಾವ ಕವಿಯು ಕಂಡ ಕಲ್ಪನೆ..
ಅವನ್ಯಾರೆ ಇರಲಿ ನನ್ನಾ ವಂದನೆ..

ಆಹಾ ಜುಮ್ತಕ ಜುಮ್ ಜುಮ್ ಜುಮ್ತಕ
ಜುಮ್ ಜುಮ್ ತಂದನನಾ
ಇವಳು ಜೋಗದ ತಂಗಿ
ಚೆಲುವನು ನುಂಗಿ ಬಂದವಳಾ
ಏನಿದು ಬಿಗುಮಾನ ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ ಯಾರದೋ ಈ ಸ್ವಪ್ನ
ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನೂ ಆಗೋ ಇಂಗಿತ..  [ಗುಂಪು]

ಆಹಾ ಜುಮ್ತಕ ಜುಮ್ ಜುಮ್ ಜುಮ್ತಕ
ಜುಮ್ ಜುಮ್ ತಂದನನಾ ಆಹಾ ಜುಮ್ತಕ
ಜುಮ್ ಜುಮ್ ಜುಮ್ತಕ ಜುಮ್ ಜುಮ್ ತಂದನನಾ

*********************************************************************************

-: ಶ್ರೀ ಚಾಮುಂಡಿತಾಯಿ ಭಕ್ತಿ ಗೀತೆ :-


ಗಾಯನ: ಬಿ. ಕೆ. ಸುಮಿತ್ರಾ 

ನೋಡು ನೋಡು ಕಣ್ಣಾರೆ ನಿಂತಿಹಳು,
ನಗು ನಗುತಾ ಚಾಮುಂಡಿ ನಿಂತಿಹಳು||2||
ತಾಯಿ ಹೃದಯ ತಂದ ತುಂಬು ಮಮತೆಯಿಂದ,
ಬಾ ಇಲ್ಲಿ ಓ ಕಂದ ಎನುತಿಹಳೂ||2||
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು
||ನೋಡು ನೋಡು||

ಮೈಸೂರು ನಗರದ ಬೆಟ್ಟದ ಮೇಲೆ,
ಮಹಿಷಾಸುರಮರ್ಧಿನಿಯ ವೈಭವ ಲೀಲೆ||2||
ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ,
ಶಂಕರನ ರಾಣಿಗೀವ ಹೂಗಳ ಮಾಲೆ||2||
||ನೋಡು ನೋಡು||

ನಂಬಿರುವ ಭಕ್ತರ ರಕ್ಷೆಗಾಗಿ,
ನಂಬದಿಹ ದುಷ್ಟರ ಶಿಕ್ಷೆಗಾಗಿ||2||
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ,
ಕರುನಾಡ ಮಕ್ಕಳ ಹಿರಿ ದೈವವಾಗಿ||2||
||ನೋಡು ನೋಡು||

ಉಕ್ಕಿಬಹ ನದಿಯಲ್ಲೇ ಅವಳನಗೆ,
ಬೀಸಿಬಹ ಗಾಳಿಯಲೇ ಅವಳುಸಿರು||2||
ಹಸಿಹಸಿರು ಪೈರುಗಳೇ ಅವಳುಡುಗೆ,
ಆ ತಾಯಿ ರೂಪವೋ ಹಲವು ಬಗೆ||2||
||ನೋಡು ನೋಡು||

-ಧರ್ಮಜಾಗೃತಿ ಕರ್ನಾಟಕ

ಎಡಕಲ್ಲು ಗುಡ್ಡದ ಮೇಲೆ (1973)

 ಚಲನ ಚಿತ್ರ: ಎಡಕಲ್ಲು ಗುಡ್ಡದ ಮೇಲೆ (1973)
ಸಂಗೀತ: ಎಂ. ರಂಗರಾವ್ 
ಸಾಹಿತ್ಯ: ವಿಜಯನಾರಸಿಂಹ 
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲಾ 
ನಿರ್ದೇಶನ: ಪುಟ್ಟಣ್ಣ ಕಣಗಾಲ್ 
ನಟನೆ: ಚಂದ್ರಶೇಖರ್, ಜಯಂತಿ, ಆರತಿ 


ಸಂತೋಷ ಅ ಹಾ ಅ ಹಾ,
ಸಂಗೀತ ಒಹೊ ಒಹೊ,
ರಸಮಯ ಸಂತೋಷ,
ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ,
ಮೈ ತುಂಬಿದೇ..

ಎಯ್  ಏಳು ಸ್ವರಗಳ
ಭಾವಗೀತೆಯ ಸಂಗೀತಾ,
ಏಳು ಬಣ್ಣದ ಭೂಮಿ
ಧಮನಿಗೆ ಸಂತೋಷ
ರಾಗ ಸಂಗೀತ,
ಗೆಲುವಿನ ಯೋಗ ಸಂತೋಷ,
ರಾಗ ಸಂಗೀತ..
ಗೆಲುವಿನ ಯೋಗ ಸಂತೋಷ,

ಹಾದಿಗೆಲ್ಲಾ, ಹೂವುಚೆಲ್ಲಿ,
ಹಾದಿಗೆಲ್ಲಾ ಹೂವುಚೆಲ್ಲಿ
ಓಡಿಓಡಿ ಸಾಗುವಲ್ಲಿ
ಹಾಡಿಹಾಡಿ ಮೂಡಿಬಂತು
ಏನೋ ಮೋಡಿ..ಈ

ಸಂತೋಷ ಅಹಾ ಅಹಾ,
ಸಂಗೀತ ಎಹೆ ಎಹೆ,
ರಸಮಯ ಸಂತೋಷ
ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ,
ಮೈ ತುಂಬಿದೇ..ಎಯ್

ಜುಳು ಜುಳು ಹರಿಯುವ
ನೀರಿನ ಅಲೆಗಳ ಸಂಗೀತ,
ಸುಯಿ ಸುಯಿ ಎನ್ನುತ
ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತಾ., ನಿಸರ್ಗ ಸಂತೋಷ.,
ಸ್ವರ್ಗ ಸಂಗೀತಾ...ನಿಸರ್ಗ ಸಂತೋಷ,
ಸನ್ನೆ ಮಾಡಿ, ಒ ಕಯ್ಯ ಬೀಸಿ,
ಹ ಸನ್ನೆಮಾಡಿ ಕಯ್ಯಬೀಸಿ
ಗುಟ್ಟುಹೇಳಿ ಬೆಟ್ಟಸಾಲು
ಹಾಡಿಹಾಡಿ ಹೇಳಿಬಂತು,
ಏನೋಮೊಡೀ.

(ಪಿ. ಸುಶೀಲ)
ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ,
ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ.
ನಾದ ಸಂಗೀತಾ...ಉನ್ಮಾದ ಸಂತೋಷ,
ನಾದ ಸಂಗೀತಾ...ಉನ್ಮಾದ ಸಂತೋಷ,
ಗುಬ್ಬಿ ಹಕ್ಕಿ, ಬಾಚಿ ಬಾಚಿ, ಗುಬ್ಬಿಹಕ್ಕಿ ಬಾಚಿಬಾಚಿ
ಹಾಕಿದೆಂದು ಹೊಲದಲ್ಲಿ ಹಾಡಿಹಾಡಿ ಓಡಿಬಂತು
ಏನೋಮೊಡೀ.

(ಎಸ್. ಪಿ.) ಸಂತೋಷ ಅಹಾ ಅಹಾ,
ಸಂಗೀತ ಎಹೆ ಎಹೆ ರಸಮಯ ಸಂತೋಷ
ಸುಖಮಯ ಸಂಗೀತ, ಹೊಸ ಹೊಸ ಭಾವತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ, ಮೈ ತುಂಬಿದೇ..ಎಯ್

*********************************************************************************

ಸನ್ಯಾಸಿ ಸನ್ಯಾಸಿ

ಸಾಹಿತ್ಯ : ಆರ್. ಎನ್. ಜಯಗೋಪಾಲ್ 
ಗಾಯನ : ಎಸ್. ಜಾನಕಿ


ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ
ಕಳ್ಳ ವೇಷ ಧರಿಸಿ ಬಂದ ಕಳ್ಳ ವೇಷ ಧರಿಸಿ

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ
ಕಳ್ಳ ವೇಷ ಧರಿಸಿ ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ.....ಆಆಆಆ......

ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ತುಟಿಗಳ ಮೇಲೆ ಪಿಟಿ ಪಿಟಿ ಮಂತ್ರ
ತುಂಟಕಣ್ಣಲಿ ಬಗೆ ಬಗೆ ತಂತ್ರ
ಹಣೆಯ ಮೇಗಡೆ ಪಟ್ಟೆ ವಿಭೂತಿ
ಅಂತರಂಗದೆ ಆಷಾಡಭೂತಿ
ಮನಸು ಮಾತ್ರ ದುಂಬಿಯಂತೆ
ಹಾರಿದೆ ದೇಹ ಮಾತ್ರ ದೈವಭಕ್ತಿ
ನಟಿಸಿದೆ ಅಲ್ಲವೆ ಭಾವಾ.........

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ
ಕಳ್ಳ ವೇಷ ಧರಿಸಿ ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ.....ಆಆಆಆ......

ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ಕಡಿವಾಣವಿಲ್ಲದ ಕುದುರೆಯ ಮನಸು
ಅದರಲಿ ಆಸೆಯು ಸಾವಿರ ದಿನಸು
ದಾಡಿ ಬೆಳೆಸಿದವ ಯೋಗಿಯಲ್ಲ
ತಂಬೂರಿ ಹಿಡಿದವ ದಾಸನಲ್ಲ
ಬಿಳಿಯ ಸುಣ್ಣ ಬೆಣ್ಣೆ ಎಂದು ಆಗದು
ಇಂಥ ವೇಷ ಇಂಥ ಮೋಸ ಸಲ್ಲದು ಹೂಂ.........

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ
ಕಳ್ಳ ವೇಷ ಧರಿಸಿ ಬಂದ ಕಳ್ಳ ವೇಷ ಧರಿಸಿ...
ಆಆಆಆಆಆಆ.....ಆಆಆಆ......

ಚೈತ್ರಮಾಸಕೆ ಚಿಗುರಿನ ಆಸೆ
ಆಷಾಡಮಾಸಕೆ ಮೋಡದ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಗಶಿರಕೆ ಮಂಜಿನ ಆಸೆ
ಶ್ರಾವಣಮಾಸಕೆ ಗಾಳಿಯ ಆಸೆ
ಮಾರ್ಗಶಿರಕೆ ಮಂಜಿನ ಆಸೆ
ಸೃಷ್ಟಿಯೆಲ್ಲ ಆಸೆಯಿಂದ ತುಂಬಿದೆ
ಆಸೆಯಿಲ್ಲಿ ಅಡ್ಡದಾರಿ ಹಿಡಿದಿದೆ
ಅಲ್ಲವೇ ಅಕ್ಕಾ........

ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ
ಹುಸಿನಗೆಯ ಹೊರಸೂಸಿ ಬಂದ
ಕಳ್ಳ ವೇಷ ಧರಿಸಿ ಬಂದ ಕಳ್ಳ ವೇಷ ಧರಿಸಿ

*********************************************************************************


ವಿರಹಾ..ನೂರು ನೂರು

ಸಾಹಿತ್ಯ : ವಿಜಯನಾರಸಿಂಹ  
ಗಾಯನ : ಪಿ.ಸುಶೀಲ 
ರಾಗ : ಭೀಂಪಲಾಸ್ (ಹಿಂದುಸ್ತಾನಿ) 


ವಿರಹಾ............
ವಿರಹಾ..ನೂರು ನೂರು ತರಹ
ವಿರಹಾ..ಪ್ರೇಮ ಕಾವ್ಯದಾ ಕಹಿ ಬರಹ
ಹರೆಯ ಉಕ್ಕಿ ಕರೆವ ಹಕ್ಕಿ
ಹರೆಯ ಉಕ್ಕಿ ಕರೆವ ಹಕ್ಕಿ
ವಿರಹ ಸಹಿಸೆ ಸಹಿಸೆ ತಾನೆಂದಿದೇ....
ಅ....ಅ.................{ಪಲ್ಲವಿ}

ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೇನೊ ಕೋಲಾಹಲ..
ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ
ಪ್ರೇಮಾಂತರಂಗದಲ್ಲಿ ಏನೇನೊ ಕೋಲಾಹಲ..
ಭೃಂಗ ಸಂಗ ಬಯಸಿ ಹೂವು
ಭೃಂಗ ಸಂಗ ಬಯಸಿ ಹೂವು
ಮನದಿ ಬಾಡಿ ಬಾಡಿ ತಾನೊಂದಿದೇ...
ಅ ಅ ಅ...................{ಪಲ್ಲವಿ}

ಗಂಧರ್ವ ಲೋಕದಲ್ಲಿ.....
ಅ...ಅ.......
ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ
ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ
ಗಂಧರ್ವ ಲೋಕದಲ್ಲಿ ರೋಮಾಂಚ ರಾತ್ರಿ
ಮಧುಚಂದ್ರ ಮಂಚದಲ್ಲಿ ರಸಹೀನ ರಾತ್ರಿ
ಮಧುರ ಮನದ ಆಸೆ ಚಿಗುರ
ಮಧುರ ಮನದ ಆಸೆ ಚಿಗುರ
ಚಿವುಟಿ ಚಿವುಟಿ ಜೀವ ನೋವಾಗಿದೇ...
ಅ ಅ ಅ..................{ಪಲ್ಲವಿ}

ವಿರಹ ನೂರು ನೂರು ತರಹ
ವಿರಹಾ..ಪ್ರೇಮ ಕಾವ್ಯದಾ ಕಹಿ ಬರಹ
ವಿರಹಾ...

*********************************************************************************

ಯಾವೂರಾವಾ..

ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ 
ಸಂಗೀತ : ಎಂ.ರಂಗರಾವ್ 
ಗಾಯನ : ಎಸ್ .ಜಾನಕೀ

ಯಾವೂರಾವಾ.. ಯಾವೂರಾವಾ  ಈವ ಯಾವೂರಾವಾ
ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ ಈವ ಯಾವೂರಾವಾ
ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ಕೋಟು ಷರಾಯಿ ತೊಟ್ಟು ಪೇಟ ರುಮಾಲನಿಟ್ಟು... 
ಕೋಟು ಷರಾಯಿ ತೊಟ್ಟು ಪೇಟ ರುಮಾಲನಿಟ್ಟು... ನೀಟಾಗಿ
ನೀಟಾಗಿ ಬಲು ಶೋಕಾಗಿ ಈ ಹೈದ ಕಾಣಸ್ತವನೇ.... ಏಏಏಏ ಅಹ್ ಅಹ್ 
ಯಾವೂರಾವಾ.. ಯಾವೂರಾವಾ  ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ವಿರಾಜಪೇಟೆಯಲ್ಲಿ ವೀರಭದ್ರು ಹೋಟೆಲನಲ್ಲಿ...
ವಿರಾಜಪೇಟೆಯಲ್ಲಿ ವೀರಭದ್ರು ಹೋಟೆಲನಲ್ಲಿ...
ಇಡ್ಲಿ ಗಾತ್ರ ಚಟ್ನಿ ನುಂಗಿ ನೆಗದ ಹಂಗಿತ್ತು ಈವ ನೆಗದ ಹಂಗಿತ್ತು 
ಗೋಣಿಗೊಪ್ಪದಲ್ಲಿ ಶುಂಠಿಕೊಪ್ಪಿಲಿನಲ್ಲಿ 
ಸಿದ್ದಾಪುರದ ರಾಗಿ ಮುದ್ದೆ ಮಾದನ ಮೇಲೆ  
ಜಿದ್ದಾಜಿದ್ದಿ ಕುಸ್ತಿಯಲ್ಲಿ ಗೆದ್ದ ಹಂಗಿತ್ತು ಇವ ಗೆದ್ದ ಹಂಗಿತ್ತು 
ಅಹ್ ಯಾವೂರಾವಾ ಇವ ಯಾವೂರಾವಾ  ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ಕೊಡ್ಲಿ ಪ್ಯಾಟೆಯಲ್ಲಿ ಕೋವಿ ಫಿರಂಗಿ ಹಿಡಿದು..ಡೂಮ್..ಡೂಮ್ ಡೂಮ್  .. ಡೂಮ್     
ಕೊಡ್ಲಿ ಪ್ಯಾಟೆಯಲ್ಲಿ ಕೋವಿ ಫಿರಂಗಿ ಹಿಡಿದು
ಕೋಳಿ ಹುಂಜದ ಬ್ಯಾಟಿ ಆಡಾದಂಗಿತ್ತು  ಇವ್ ಆಡಾದಂಗಿತ್ತು 
ಶುಕ್ರಾರಾರ್ ಸಂತೆಯಲ್ಲಿ ಶನಿವೂರ್ ಸಂತೆಯಲ್ಲೋ 
ಭಾಗಮಂಡಲದ  ಜೋಗಿ ಘಟ್ಟಾದ ಮೇಲೋ
ಸುತ್ತಿ ಸುತ್ತಿ ಬೆಂಬ ಹತ್ತಿ ಬಂದಾಂಗಿತ್ತು ಇವ ಬಂದಾಂಗಿತ್ತು 
ಯಾವೂರಾವಾ ಇವ ಯಾವೂರಾವಾ  ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ಸೋಮವಾರ ಪ್ಯಾಟೆಯಲ್ಲಿ ಸಾಕಮ್ಮನ ತೋಟದಲ್ಲಿ..
ಹೊಯ್  ಸೋಮವಾರ ಪ್ಯಾಟೆಯಲ್ಲಿ ಸಾಕಮ್ಮನ ತೋಟದಲ್ಲಿ.. 
ಸಿಳ್ಳೆ ಹಾಕಿ ಗುಳ್ಳೆ ನರಿ ಓಡಾದಂಗಿತ್ತು ಈ ನರಿ ಓಡಾದಂಗಿತ್ತು  
ಕುಶಾಲನಗರದ ಕುಶಾಲ ಯಾಣ  ಕೂಡಿ 
ಮಡಿಕೇರಿ ಪ್ಯಾಟೆಯಲಿ ಮುತ್ತಯ್ಯನ ಬಂಗ್ಲೆ ಮುಂದೆ
ಆಹ್ ಮಡಿಕೇರಿ ಪ್ಯಾಟೆಯಲಿ ಮುತ್ತಯ್ಯನ ಬಂಗ್ಲೆ ಮುಂದೆ
ಮಲ್ಲಿಗೆ ಚೆಂಡೆಸೆದು ನಕ್ಕಂದಗಿತ್ತು ಕಿಸಿ ಕಿಸಿ ನಕ್ಕಂದಗಿತ್ತು ಇವ ನಕ್ಕಂದಗಿತ್ತು
ಯಾವೂರಾವಾ ಇವ ಯಾವೂರಾವಾ  ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ
ತಲಕಾವೇರಿ.... ತಲಕಾವೇರಿ ಜಾತ್ರೆಯಲ್ಲಿ ಹಣ್ಣು ಹಿಡ್ಕೊಂಡು 
ಕಣ್ಣಲ್ಲಿ ಕಣ್ಣಿಟ್ಟು ಕರೆದಂಗಿತ್ತು ನನ್ನ ಕರೆದಂಗಿತ್ತು  ಯವ್ವಿ ಯವ್ವಿ ಯವ್ವಿ 
ಅಹ್ ಯಾವೂರಾವಾ ಇವ ಯಾವೂರಾವಾ  ಏನ್ ಚಂದ ಕಾಣಸ್ತವನೇ
ಯಾವೂರಾವಾ ಈವ ಯಾವೂರಾವಾ

*********************************************************************************

ಗುಂಡಿನ ಮತ್ತೆ..

ಸಾಹಿತ್ಯ :ಎಂ.ನರೇಂದ್ರಬಾಬು 
ಸಂಗೀತ : ಎಂ.ರಂಗರಾವ್ 
ಗಾಯನ : ಎಸ್.ಪಿ.ಬಿ. 

ಗುಂಡಿನ ಮತ್ತೆ ಗಮ್ಮತ್ತು ಅಳತೆ ಮೀರಿದರೇ ಆಪತ್ತು 
ಕುಡುಕನಿಗೆ ಇರೋದು ನಿಯತ್ತು ಇದೇ ಬಾಟ್ಲಿ ಮಾತು ... ।। 
ಹೆಣ್ಣಿನ ಮತ್ತು ದ್ರೋಹಕೆ ಮೂಲ    ಹೊನ್ನಿನ ಮತ್ತು ಭೀತಿಗೆ ಮೂಲ... ।।
ಮಣ್ಣಿನ ಮತ್ತು ವೈರಕೆ ಮೂಲ       ಪದವಿಯ ಮತ್ತು ಪ್ರಾಣಕೆ ಮೂಲ....  ಆದರೆ ಮಗೂ ....
ಗುಂಡಿನ ಮತ್ತೆ ಗಮ್ಮತ್ತು...  ಡೆಫನೇಟ್ಲಿ    ಅಳತೆ ಮೀರಿದರೇ ಆಪತ್ತು 
ವಿದ್ಯೆಯ ಮತ್ತು ಗರ್ವಕೆ ಮೂಲ   ರೂಪಿನ ಮತ್ತು ಶೀಲಕೇ ಮೂಲ... ।।
ಶೌರ್ಯದ ಮತ್ತು ಸೇಡಿಗೆ ಮೂಲ  ಕೀರ್ತಿಯ ಮತ್ತು ಪತನಕೆ ಮೂಲ... ಆದರೆ ಡಿಯರ್  ಬಾಯ್
ಗುಂಡಿನ ಮತ್ತೆ ಗಮ್ಮತ್ತು...  ಡೆಫನೇಟ್ಲಿ    ಅಳತೆ ಮೀರಿದರೇ ಆಪತ್ತು
ಬಾಯಿಗೇ ಘಾಟಾದರೂ.. ಬ್ರೈನಿಗೇ..  ಸ್ವೀಟು..  ಸ್ವೀಟು
ಮಹನೀಯರ ಸ್ನೇಹಕೆ ಸುಲಭದ ರೂಟು...  ರೂಟು... ।।
ಹೇ ಭಕ್ತ  ಜನಾ... ಆಹಾ... ಭಕ್ತ ಜನಾ ಹೆಚ್ಚಾದರೂ ಏರಿದೆ ರೇಟೂ ...
ಆದರೂ ಬಾರುಗಳು  ಓಪನ್ ಡೇ ಆಯಿನ್ಡ್  ನೈಟು
ಓಪನ್ ಡೇ ಆಯಿನ್ಡ್  ನೈಟು


*********************************************************************************

ನಿಲ್ಲು ನೀಲ್ಲೇ.

ಸಾಹಿತ್ಯ :ವಿಜಯನಾರಸಿಂಹ
ಸಂಗೀತ : ಎಂ.ರಂಗರಾವ್ 
ಗಾಯನ : ಎಸ್.ಜಾನಕೀ

ನಿಲ್ಲು ನಿಲ್ಲೇ ಪತಂಗ... ಬೇಡ ಬೇಡ ಬೆಂಕಿಯ ಸಂಗ
ಬೇಡ ಬೇಡ ಬೆಂಕಿಯ ಸಂಗ  ... ಪತಂಗಾ... ಪಂತಂಗಾ...
ಕಾಣದ ಜ್ವಾಲೆ ಕಾಮದ ಲೀಲೆ... ।।
ಕಾಡುತ ಆದಿರೇ ಕಣ್ಣು ಮುಚ್ಚಾಲೆ..
ಕ್ಷಣಿಕದ  ಚಪಲಕೆ ಬಲಿಯಾಗುವೆಯಾ..  ।।
ಶ್ರೀಮತಿ ಎನಿಸಿ ಮತಿ ನೀಗುವೆಯಾ...
ಬೇಡ ಬೇಡ ಬೆಂಕಿಯ ಸಂಗಾ  ...
ಧರ್ಮದ ಸೇವಕಿ ನೀನಾಗುವೆಯೋ.. ನರಕದ ನಾಯಕಿ ನೀನೆನಿಸುವಿಯೋ.... ।।
ಕಾರ್ಕೊಟದ ವಿಷ ನೀ ಭರಿಸುವೆಯೋ.. ।।
ಅಮೃತ ವಾಹಿನಿ ನೀನಾಗುವೆಯೋ.. ।।  ಪತಂಗಾ... ಪಂತಂಗಾ...

ವಿನಾಶದ ಸುಲಿಗೆ ಸಿಲುಕದೇ ಬಾ... ವಿಷಾದದ ಕೂಪಕೆ ಜಾರದೇ..  ಬಾ... ಬಾ....
ವಿವೇಕದ ಗಡಿಯ ಮೀರದೇ ... ಬಾ
ವಿವಾಹ ಜೀವನ ಪೂಜೆಗೆ... ಬಾ..   ವಿವಾಹ ಜೀವನ ಪೂಜೆಗೆ... ಬಾ..
*********************************************************************************

ಪ್ರೇಮಕ್ಕೆ ಸೈ (2001)

ಸಂತೋಷ ಸಂಭ್ರಮವೇ

ಚಲನ ಚಿತ್ರ: ಪ್ರೇಮಕ್ಕೆ ಸೈ (2001)
ನಿರ್ದೇಶನ: ಎ. ಕೋದಂಡರಾಮಿ ರೆಡ್ಡಿ 
ಸಂಗೀತ : ಮಣಿಶರ್ಮಾ 
ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಮ್ 
ನಟನೆ: ರವಿಚಂದ್ರನ್, ಶಹೀನ್ ಖಾನ್, ಕಸ್ತೂರಿ


ಸಂತೋಷ ಸಂಭ್ರಮವೇ ನಮ್ಮೀ ಸಂಗೀತ
ಈ ಸಂಗೀತ ನಿನ್ನೆದೆಯಾ ತುಂಬಲಿ ಹಾಯಂತ
ನಗುವೇ ಸ್ವರ್ಗಾನಮ್ಮಾ ನಗುವೇ ಮಾರ್ಗಾನಮ್ಮಾ
ನಗುವೇ ಅಮ್ಮಾನಮ್ಮಾ ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ ಓಹೊಹೊಹೋ
ಸಂತೋಷ ಸಂಭ್ರಮವೇ ನಮ್ಮೀ ಸಂಗೀತ
ಈ ಸಂಗೀತ ನಿನ್ನೆದೆಯಾ ತುಂಬಲಿ ಹಾಯಂತ
ನಗುವೇ ಸ್ವರ್ಗಾನಮ್ಮಾ ನಗುವೇ ಮಾರ್ಗಾನಮ್ಮಾ
ನಗುವೇ ಅಮ್ಮಾನಮ್ಮಾ ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ ಓಹೊಹೊಹೋ
ನೆನ್ನೆಯ ನೆನಪುಗಳೇ ಕಣ್ ರೆಪ್ಪೆಯ ಮುಚ್ಚಿದರೆ
ನಾಳೆಯ ಕನಸುಗಳಾ ದಾರಿ ಕಾಣದಮ್ಮಾ
ಕಳೆಯಾ ವಿಷಯಗಳೇ ಪ್ರತಿ ನಿಮಿಷ ಹೆಚ್ಚಿದರೆ
ಹೊಸ ಗಾಳಿಗಳಲ್ಲಿ ಬೆಳಕು ಕಾಣದಮ್ಮಾ..
ಯಾವ ಕ್ಷಷ್ಟ ಬಂದರೇನು ಕಣ್ಣೀರಿನಿಂದ ಅದನು
ಕಾಲು ತೊಳೆದು ಕರೆಯಬಾರದು
ಹೂವು ತರ ಒಂದು ನಗುವಿದ್ದರಾಯಿತು
ಕಷ್ಟ ಒಂದು ಮಗುವಂಥದು
ಹುಣ್ಣಿಮೆ ಚಂದ್ರನ ತುಂಬಿದ ನಗುವೇ ಭೂಮಿಗೆ ಲಾಂದ್ರ ಕಣೆ
ಆ ಪ್ರೀತಿಯ ಬೆಳಕಿನ ಒಂದೇ ಕತ್ತಲು ವಿಲವಿಲ ಅಲ್ಲವೇನೆ..
ನಗುವೇ ಸ್ವರ್ಗಾನಮ್ಮಾ ನಗುವೇ ಮಾರ್ಗಾನಮ್ಮಾ
ನಗುವೇ ಅಮ್ಮಾನಮ್ಮಾ ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ ಓಹೊಹೊಹೋ
ಆಸೆಯೂ ಹೆಚ್ಚಿದರೂ ನಿರಾಸೆಯ ಹಂಚಿದರೂ
ದಿನ ನಡೆಯೋ ಜೀವನ ಕ್ಷಣ ಕೂಡ ನಿಲ್ಲದಮ್ಮಾ
ಹೃದಯವೇ ತುಂಬಿರಲಿ ಹಸಿವಿನಿಂದ ಅಳುತಿರಲಿ
ಈ ಬದುಕಿನ ಏರಿಳಿತ ತನ್ನಿಷ್ಟಕ್ಕೆ ತಾನಮ್ಮಾ
ನಿನ್ನೆ ರಾತ್ರಿ ಕನಸನು ಇಂದು ರಾತ್ರಿ ನೆನೆದು ನಿದಿರೆಯ ಮರೀಬಹುದೇ
ಎಷ್ಟು ಒಳ್ಳೆ ಕನಸಿದ್ದರೇನಾಯ್ತು ಹೇಳು ಅಲ್ಲೇ ಇದ್ದು ಬಿಡಬಹುದೇ
ಕನಸುಗಳೆಂದು ಕನಸೇನಮ್ಮಾ ತಿಳಿಯೇ ಸೇಸಮ್ಮಾ
ಈ ತಲೆಯಾ ಭಾರವಾ ಕಾಲಲಿ ಹೊಸಕಿ ಹೃದಯವ ನಗಿಸಮ್ಮಾ
ನಿನ್ನ ಕಣ್ಣಂಚಲಿ ನಗೆಯೇ ಐಶ್ವರ್ಯವು
ದಿನವೂ ಹರಿದಾಡಲಿ ಜಗವೇ ಸೌಂದರ್ಯವು
ಓಹೊ ಓಹೊ ಓಹೊ ಓಹೊಹೊಹೋ
ಸಂತೋಷ ಸಂಭ್ರಮವೇ ನಮ್ಮ ಸಂಗೀತ
ಈ ಸಂಗೀತ ಸಾಗಲಿ ಹಾಯಂತ...
*********************************************************************************

ಅಂದಾ ನಿನ್ನ ಹೆಸರಾ


ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಉದಿತನಾರಾಯಣ, ನೇಹಾ 

ಗಂಡು : ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ
           ನೀಲಾದ್ರಿ ಗಿರಿಬಾಲೇ ಸಹ್ಯಾದ್ರಿ ಸಾಲೋಳೆ 
           ನಿನ್ನ ಪ್ರೇಮಿ ನಾನೇ ಓ..ಮೈನಾ 
           ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ 
           ಈ ನಮ್ಮಾ ಸಮ್ಮಿಲಿನಾ ತಂತಂದು ಸಂಚಲನಾ 
ಹೆಣ್ಣು : ಕಾಮನ ಕಥೆ ಕಲಿಸಿ ಕೊಟ್ಟೋನೇ 
          ಕಾಮನ ಕಥೆ ಕಲಿಸಿ ಕೊಟ್ಟೋನೇ ಪ್ರಾಯದ ಲೋಕಕ್ಕೆ 
ಗಂಡು : ಬೃಹ್ಮದೇವನು ಬೇಸ್ತು ಬಿದ್ದನು ನಿನ್ನ ಚೆಂದಕೆ 
ಹೆಣ್ಣು : ಅಚ್ಚು ಮೆಚ್ಚಿನಾ ಆಹ್ ಈ ಅಚ್ಚು ಬೆಲ್ಲ ಜಾರಿ ಬಿದ್ದಿತು ಪ್ರಿಯ ಪ್ರಿಯ 
ಗಂಡು : ಕಚ್ಚಿ ತಿನ್ನಲಾ ಒಹೋ ಇದೇನೂ ಗಲ್ಲ ನನ್ನದಾಯಿತು ಪ್ರಿಯೇ 
           ಒಲವೆನ್ನೋದೊಂದು ಮಧುರ ಕಲೆ 
           ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ 
          ನೀಲಾದ್ರಿ ಗಿರಿಬಾಲೇ ಸಹ್ಯಾದ್ರಿ ಸಾಲೋಳೆ 
          ನಿನ್ನ ಪ್ರೇಮಿ ನಾನೇ ಓ..ಮೈನಾ 
ಗಂಡು : ಪ್ರೀತಿ ಒಪ್ಪಿಗೆ ನೀಡು ಎನ್ನಲೇ 
            ಪ್ರೀತಿ ಒಪ್ಪಿಗೆ ನೀಡು ಎನ್ನಲೇ ಚುಂಬನ ಶಾಸ್ತ್ರನಾ 
ಹೆಣ್ಣು : ಮೈಯ ಮುಟ್ಟುತಾ ನೀನು ಬೀಸಿದೆ ಕಂಪನ ಅಸ್ತ್ರಾನ 
ಗಂಡು : ರೋಮ ರೋಮಕೂ ಸಖಿ ತಂದಿಟ್ಟೆಯಲ್ಲೇ 
           ಸುಖ ಹೀರುವ ಗುಣ ಗುಣ 
ಹೆಣ್ಣು : ಮುತ್ತ ಮುತ್ತಲೇ ಸುಖ ಮುತ್ತಿಗೆ ಇಟ್ಟು ಚಿಟ್ಟು ಆಗಿದೆ ಮನ 
         ಅನುಭಾವ ಏನೋ ಮೃದು ಮಧುರ 
ಗಂಡು : ಅಂದಾ ನಿನ್ನ ಹೆಸರಾ         ಹೆಣ್ಣು : ಆನಂದ ನಿನ್ನೂರಾ 
ಗಂಡು : ವಯಸು ಹದಿನಾರಾ          ಹೆಣ್ಣು : ಹೌದೌದೋ ರಣಧೀರ 
ಗಂಡು : ನೀನೊಂದು ಸ್ವರಮಾಲೆ     ಹೆಣ್ಣು : ಶೃಂಗಾರ ನಿನ ಶಾಲೇ 
ಗಂಡು : ನಿನ ಪ್ರೇಮಿ ನಾನೇ ಓ...ಮೈನಾ 
*********************************************************************************

ಪ್ರೇಮದ ಲೋಕದ

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಕೃಷ್ಣಕುಮಾರ 

ಪ್ರೇಮದ ಲೋಕದ ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ 
ಹೃದಯದ ದೋಚುವ ಸೋದರರೇ ಹಾಡಿ ಪ್ರಾಯಕ್ಕೆ ಸೈ 
ಕಾಲಕ್ಕೆ ತಕ್ಕ ಹಾಗೇ ಕನಸುಗಳು ಬದಲಾಯ್ತು 
ಅಂತಸ್ತಿಗೆ ತಕ್ಕ ಹಾಗೇ ಅನುರಾಗವು ಬದಲಾಯ್ತು 
ಮನಸನು ಗುರುತಿಸಿ ಪ್ರೀತಿ ಮಾಡೋ ಯಾವತ್ತು ಸೈ ಸೈ 
ಓಓಓಓ .. ಇದು ಟ್ವೆಂಟಿ ಫಸ್ಟ್ ಸೆಂಚುರಿ ಓಓಓಓ .. ಅಯ್ಯೋ ಹುಡುಗಿರಾ ರಾಬರಿ 
ಪ್ರೇಮದ ಲೋಕದ ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ 
ಹೃದಯದ ದೋಚುವ ಸೋದರರೇ ಹಾಡಿ ಪ್ರಾಯಕ್ಕೆ ಸೈ 
 ಓಓಓಓಓಓಓ  ಓಓಓಓಓಓಓ  ಓಓಓಓಓಓಓ
ಇಂಗ್ಲಿಷ್ ಶೋಕಿಗಳೂ ಇದ್ದರೇ ನೀನೇ ಕಿಂಗೂ 
ಕಾರ್ ಬಾರು ಸೆಲ್ಯೂ ಲಾರು ಕಂಡರೇ ಡಿಂಗುಡಾಂಗೂ 
ನೋಟಿಗೆ ನೋಟು ಪ್ರಿಂಟ್ ಹಾಕು ಲಗ್ನಪತ್ರಿಕೆಯ ಪ್ರಿಂಟು 
ಯಾರಿಗೆ ತಾನೇ ಬೇಕಯ್ಯ ಬೃಹ್ಮ ಹಾಕಿದ ಗಂಟು 
ಓಓಓಓಓ ಇದು ಮಾಯಾ ಲೋಕವೋ ಓಓಓಓಓ ಇಲ್ಲಿ ಪ್ರೀತಿಯೇ ಮಾಯವೋ
ಓಓಓಓಓ ಇದು ಭೃಮೆಯಾ ಲೋಕವೋ ಓಓಓಓಓ ನಿನ ಬುದ್ದಿಯು  ಭದ್ರವೋ 
ಪ್ರೇಮದ ಲೋಕದ ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ 
ಹೃದಯದ ದೋಚುವ ಸೋದರರೇ ಹಾಡಿ ಪ್ರಾಯಕ್ಕೆ ಸೈ 
 ಓಓಓಓಓಓಓ  ಓಓಓಓಓಓಓ  ಓಓಓಓಓಓಓ 
ಗ್ರಿಟಿಂಗೂ ಮೀಟಿಂಗೂಗಳು ಪ್ರೀತಿಯ ಬೆಳೆಸೋದಿಲ್ಲ 
ಡ್ರೆಸ್ ಗಳು ಅಡ್ರೆಸ್ಸ್ ಗಳು ನಂಬಿಕೆ ಉಳಿಸೋದಿಲ್ಲಾ 
ಹೃದಯದ ಮೇಲೆ ಹೃದಯಾನ ಬೆಸುಗೆ ಹಾಕುವುದೇ ಪ್ರೀತಿ 
ಭಾವನೆಗಳಿಗೆ ತಲೆಬಾಗಿ ಬದುಕು ಬರೆಯುವುದೇ ಪ್ರೀತಿ 
ಓಓಓಓಓ ಗುರಿ ಮುಟ್ಟೋ ಮನಸಿಡು ಓಓಓಓಓ ಕೈಗೆ ಸಿಗುವಾ ಕನಸಿಡು 
ಓಓಓಓಓ ಆಂತರ್ಯ ತೆರೆದಿಡು ಓಓಓಓಓ ಸೌಂದರ್ಯ ಸವಿದಿಡು 
ಪ್ರೇಮದ ಲೋಕದ ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ 
ಹೃದಯದ ದೋಚುವ ಸೋದರರೇ ಹಾಡಿ ಪ್ರಾಯಕ್ಕೆ ಸೈ 
ಕಾಲಕ್ಕೆ ತಕ್ಕ ಹಾಗೇ ಕನಸುಗಳು ಬದಲಾಯ್ತು 
ಅಂತಸ್ತಿಗೆ ತಕ್ಕ ಹಾಗೇ ಅನುರಾಗವು ಬದಲಾಯ್ತು 
ಮನಸನು ಗುರುತಿಸಿ ಪ್ರೀತಿ ಮಾಡೋ ಯಾವತ್ತು ಸೈ ಸೈ 
ಓಓಓಓ .. ಇದು ಟ್ವೆಂಟಿ ಫಸ್ಟ್ ಸೆಂಚುರಿ ಓಓಓಓ .. ಅಯ್ಯೋ ಹುಡುಗಿರಾ ರಾಬರಿ 
ಓಓಓಓಓ ಬರಿ ಪುರಾಣ ಬಿಡುಮರಿ ಓಓಓಓಓ ಹುಡುಗೀರೂ ಚುರಮುರಿ 
*********************************************************************************

ಒಲವೇ ಶುರುವಾಯ್ತು

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಹರಿಹರನ್,  ಚಿತ್ರಾ 

ಗಂಡು : ಒಲವೇ ಶುರುವಾಯ್ತು ಒಲವೇ ಗುರುವಾಯ್ತು ಒಲುಮೆ ಗುರಿಯಾಯ್ತು .. ಓ ಓ ಓ...
ಹೆಣ್ಣು : ಒಲುಮೆ ವರವಾಯ್ತು ಹಲವು ತರವಾಯ್ತು ನಲಿವೂ ಸ್ಥಿರವಾಯ್ತು ಓಓ...
ಗಂಡು : ಒಲವೇ ಶುರುವಾಯ್ತು ಒಲವೇ ಗುರುವಾಯ್ತು ಒಲುಮೆ ಗುರಿಯಾಯ್ತು .. ಓ ಓ ಓ...
ಗಂಡು : ಕಣ್ಣಿನ ಕೋಟೆಯ ದಾಟಿ ಒಳ ಬಂತು ಪ್ರೇಮವೂ
           ಹೃದಯದ ಗದ್ದುಗೆಯಲ್ಲಿ ಪಟ್ಟಾಭಿಷೇಕವೂ
ಹೆಣ್ಣು : ಮನಸಿನ ಅಂತಃಪುರವ ಆಕ್ರಮಿಸಿ ಪ್ರೇಮವೂ
          ಕನಸಿನ ಸಭೆಗಳ ಮೇಲೆ ಸರ್ವಾಧಿಕಾರವೂ
ಗಂಡು : ಆದ ನಿತ್ಯ ನಡೆಸೋ ರಾಣಿಗೆ ಪ್ರತಿ ನಿತ್ಯ ಬಳಿಗೆ ಬರುವೇ ನಾ
ಹೆಣ್ಣು : ದಾಂಪತ್ಯ ಕಲಿಸೋ ರಾಜನೇ ದಿನ ನಿತ್ಯ ದೂರವಿರುವೇ ನಾ
ಹೆಣ್ಣು :  ಮಚ್ಚೆ ಕಣ್ಣಿನ ಇನಿಯ ಓ ಪ್ರೇಮದ ನೇಕಾರ
          ಪ್ರೇಮಕೆ ರೂಪವ ನೀಡೋ ಓ ಭಾರಿ ಕಲೆಗಾರ
ಗಂಡು : ಮೆಚ್ಚುಗೆ ಮಾತುಗಳೆಕೇ  ಬಾ ಸುಮ್ಮನೇ ಪ್ರಿತಿಸೂ
            ಪ್ರೇಮ ಎಂದರೇ ಧ್ಯಾನ ಬಾ ಮೌನದೇ ಧ್ಯಾನಿಸೂ
ಹೆಣ್ಣು : ಕಣ್ಣಲ್ಲಿ ತುಂಬಿದೆ ಮುಖ ದೂರದಲಿ ಇರುವುದೇ ಸುಖ
ಗಂಡು : ಧರೆಗಿಳಿದ ಸ್ವಪ್ನ ಸುಂದರಿ ಬಳಿ ಬಾರೇ ನನ್ನ ಶಾಯರೀ.......
ಗಂಡು : ಒಲವೇ ಶುರುವಾಯ್ತು ಒಲವೇ ಗುರುವಾಯ್ತು ಒಲುಮೆ ಗುರಿಯಾಯ್ತು .. ಓ ಓ ಓ...
ಹೆಣ್ಣು : ಒಲುಮೆ ವರವಾಯ್ತು (ತರರ ) ಹಲವು ತರವಾಯ್ತು (ತರರ ) ನಲಿವೂ ಸ್ಥಿರವಾಯ್ತು ಓಓ...
          ತುರುರೂರು (ತುರುರೂರು) ತುರುರೂರು (ತುರುರೂರು ) ತುರುರೂರು
 *********************************************************************************

ಮುಂಜಾನೆಯು ನಗುವಿಂದಲೇ

ಸಾಹಿತ್ಯ : ಕೆ.ಕಲ್ಯಾಣ 
ಗಾಯನ : ಎಸ್.ಪಿ.ಬಿ. 

ಮುಂಜಾನೆಯು ನಗುವಿಂದಲೇ ಮುಸ್ಸಂಜೆಯು ನಗುವಿಂದಲೇ
ಚಿರ ಯೌವ್ವನ ನಗುವಿಂದಲೇ ಸವಿ ಜೀವನ ನಗುವಿಂದಲೇ
ರೂರುರು ರೂರುರು ರೂರುರು ರೂರುರು
ಪ್ರತಿ ಸ್ಪರ್ಶವು ಪ್ರತಿ ಹರ್ಷವೂ ಪ್ರತಿಯೊಬ್ಬರ ನಗುವಿಂದಲೇ
ಪ್ರತಿ ಕಲ್ಪನೇ ಪ್ರತಿ ಯೋಚನೆ ಪ್ರತಿ ಮನಸಿನ ನಗುವಿಂದಲೇ
ರೂರುರು ರೂರುರು ರೂರುರು ರೂರುರು
ಪ್ರತಿ ಹಗಲು ಅರಳಲಿ ಪ್ರತಿ ನಗುವಿನಿಂದ
ಪ್ರತಿ ದಿನವೂ ಉರಳಲಿ ಪ್ರತಿ ನಗುವಿನಿಂದ
ಪ್ರತಿ ಇರುಳೂ ತೆರಳಲಿ ಪ್ರತಿ ನಗುವಿನಿಂದ ಯಾ...ಅಹ್ಹಹ್
 ಪ್ರತಿ ನಗುವಿನಿಂದ ... ಪ್ರತಿ ನಗುವಿನಿಂದ ...
*********************************************************************************

ಚಮ್ಮಕು ಚಮ್ಮಕು ಅಂತ

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಎಸ್.ಪಿ.ಬಿ.  ಮಹಾಲಕ್ಷ್ಮಿ 

ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು : ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ ಸೈ ಸೈ
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು :  ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ  ಸೈ ಸೈ
ಹೆಣ್ಣು :  ಝಣಕ್ಕೂ ಝಣಕ್ಕೂ ಅಂತ ಡಿಂಡಿಮ ಬಡಿಯೋ ಯುಗಳ ಪ್ರೇಮಕೇ ಸೈ ಸೈ
ಗಂಡು : ನನಗೂ ನಿನಗೂ ಮುತ್ತುಗಳಾ ಅರ್ಚನೆ
ಹೆಣ್ಣು :  ನಡುವೆ ನಡುವೆ ಅಪ್ಪುಗೆಯಾ ಸೋಬಾನೆ
ಗಂಡು : ಮೈದೂರಿ  ನಮಗೆ ಮೈಸೂರ ಅರಮನೆ
ಹೆಣ್ಣು :  ಮನಸೇ ಅಲ್ಲಿ ಆ ಒಡೆಯರ ಹಸೆಮಣೆ
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು :   ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ  ಸೈ ಸೈ
ಹೆಣ್ಣು :  ಝಣಕ್ಕೂ ಝಣಕ್ಕೂ ಅಂತ ಡಿಂಡಿಮ ಬಡಿಯೋ ಯುಗಳ ಪ್ರೇಮಕೇ ಸೈ ಸೈ
ಗಂಡು : ಹುಡುಗಿ ನೋಡು ಬಲು ಸಿಂಪಲ್ಲೂ ಅಂದವೋ ಮೀರಾಕಲ್ಲು 
            ಹೆಚ್ಚು ಕಡಿಮೆ ಇವಳು ಸಿಂಡ್ರೆಲಾ ...... 
ಹೆಣ್ಣು : ಹುಡುಗ ನನ್ನದೆಯ ಟೆಂಪಲೂ ಹೃದಯವದು ಸ್ಯಾಂಡಲ್ಲು 
           ಜಗಕೆ ಇವನ ಲವ್ವೆ ಫಾರ್ಮುಲಾ 
ಗಂಡು : ನೋಬೆಲ್ಲಾಗಲೀ ಆಸ್ಕರಾಗಲಿ ಇವಳ ಮುಂದೆ ಎಷ್ಟು 
ಹೆಣ್ಣು : ಅಪ್ಪ ತಡಿಯಲಿ ಅಮ್ಮ ತಡಿಯಲಿ ಪ್ರೀತಿಯೊಂದೇ ನಮ್ಮ ಎವರೆಷ್ಟು 
ಗಂಡು : ಬರೆಯೋ ಹಾಗೇ ಬದುಕೋದೇ ಲಕ್ಷಣ 
ಹೆಣ್ಣು : ಬದುಕೋ ಹಾಗೇ ಪ್ರೀತಿಸುವುದೇ ನಮ್ಮ ಲಕ್ಷಣ 
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು :   ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ  ಸೈ ಸೈ
ಹೆಣ್ಣು :  ಝಣಕ್ಕೂ ಝಣಕ್ಕೂ ಅಂತ ಡಿಂಡಿಮ ಬಡಿಯೋ ಯುಗಳ ಪ್ರೇಮಕೇ ಸೈ ಸೈ
ಹೆಣ್ಣು : ಚೆಲುವ ನಿನ್ನೆದೆಯ ಪ್ರತಿ ಕನಸು ನಯಾಗರದ ಸಿಹಿ ಫಾಲ್ಸು 
          ಮಾಯಾ ಪ್ರೇಮಲೋಕ ನಮಗಿದು 
ಗಂಡು : ಚೆಲುವೇ ಪ್ರೀತಿಯ ರೂಪು ಪ್ರತಿ ಸಂಜೆಯ ಯುರೋಪೂ 
           ಯುಗಳ ಗೀತೆಗಳಿಗೆ ಯುಗವಿದೂ 
ಹೆಣ್ಣು : ವಯಸು ಎನ್ನುವ ಚೈನಾ ಗೇಟನೂ ದಾಟಿ ನಿಂತಿತು  ಅಂದ 
ಗಂಡು : ಹೃದಯ ಹೃದಯಕೆ ಹೌರಾ ಬ್ರಿಡ್ಜ್ಯನೂ ಕಟ್ಟಿ ಕುಂತಿದೆ ಆನಂದ 
ಹೆಣ್ಣು : ಜಗವೇ ... ಜಗವೇ ... ಪ್ರೇಮಿಗಳಾ ಆಸ್ತಿಯೂ 
ಗಂಡು : ಪ್ರೀತಿಸೋ ಮನಸೇ ನಮ್ಮ ಕನ್ನಡ ಕವಿಗಳ ಸ್ಫೂರ್ತಿಯೂ 
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು :   ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ  ಸೈ ಸೈ
ಹೆಣ್ಣು :  ಝಣಕ್ಕೂ ಝಣಕ್ಕೂ ಅಂತ ಡಿಂಡಿಮ ಬಡಿಯೋ ಯುಗಳ ಪ್ರೇಮಕೇ ಸೈ ಸೈ
ಗಂಡು : ನನಗೂ ನಿನಗೂ ಮುತ್ತುಗಳಾ ಅರ್ಚನೆ
ಹೆಣ್ಣು :  ನಡುವೆ ನಡುವೆ ಅಪ್ಪುಗೆಯಾ ಸೋಬಾನೆ
ಗಂಡು : ಮೈದೂರಿ  ನಮಗೆ ಮೈಸೂರ ಅರಮನೆ
ಹೆಣ್ಣು :  ಮನಸೇ ಅಲ್ಲಿ ಆ ಒಡೆಯರ ಹಸೆಮಣೆ
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
*********************************************************************************

ಚಂಚಲ ಚಂಚಲ ಚಂಚಲ 

ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಕೆ.ಮುರುಳೀಧರ, ನಂದಿತಾ 

ಗಂಡು : ಚಂಚಲ ಚಂಚಲ ಚಂಚಲ ನಿನ್ನ ಚಕ್ಕುಲಿ ಮನಸು ಚಂಚಲ
            ನಿನ್ನ ರವಿಕೆ ಅಂಚಲೇ ರತ್ನನ್ ಪದವಿದೆ
            ಝರಿ ನೆರಿಗೆ ಅಂಚಲಿ ಜೋಗದ ಜೋರಿದೇ
ಹೆಣ್ಣು : ಚಂಚಲ ಚಂಚಲ ಚಂಚಲ ನಿನ್ನ ಚೋರಿ ಚಲುವು ಚಂಚಲ
          ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ
          ಆ ಮಿಂಚಿನ ಒಳಗೆ ಸಾವಿರ ಸಂಚಿದೆ
ಗಂಡು : ರೆಪ್ಪೆಯೊಳಗೇ ಚಪ್ಪಾಳೆ     ಹೆಣ್ಣು : ಎದೆಯ ಒಳಗೇ ತಿಪ್ಪಾಲೇ
ಗಂಡು : ಕನಸಾ ಚುಕ್ಕಿ ಚುಕ್ಕಿಲೇ      ಹೆಣ್ಣು : ರೆಕ್ಕೆ ಬಿಚ್ಚಿ ರಂಗೋಲೆ... ಓಓಓಓಓ
ಗಂಡು : ಚಂಚಲ ಚಂಚಲ ಚಂಚಲ ನಿನ್ನ ಚಕ್ಕುಲಿ ಮನಸು ಚಂಚಲ
            ನಿನ್ನ ರವಿಕೆ ಅಂಚಲೇ ರತ್ನನ್ ಪದವಿದೆ
ಹೆಣ್ಣು :  ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ
ಗಂಡು : ಮುಂಜಾನೇಲಿ ಸೂರ್ಯನ ಚಳಿ ಆಗಿತ್ತು
          ಇಡೀ ರಾತ್ರೀಲಿ ಇಂಥಾ ಕಂಬಳಿ ಬೇಕಿತ್ತು
          ಹೊದಿಸೋಕೆ ನಾನ್ ಕೊಟ್ಟೇ ಊರೇ ನಕ್ಕಿತು
          ನಾನೇ ಆ ಸೂರ್ಯ ಕಾಂತಿ ಯಾರಿಗೇ ಗೊತ್ತಿತ್ತು
ಹೆಣ್ಣು : ಕವಿರಾಯ ಕವಿರಾಯ ಕಿವಿ ಹಿಂಡ್ತಿಯಾ
          ಆ ಸೂರ್ಯನ ಚಳಿ ನಾನೇ ಅಲ್ಲವೆನಯ್ಯಾ
ಗಂಡು : ಮಹಾರಾಯ್ತಿ ಸಾಕು ನಿಲ್ಲಿಸೇ ನಿನ್ನ ಪಂಚಾಯ್ತಿ
            ಪಂಚೆಗೂ ನೀನ್ ಸೀರೆಗೂ ಒಂದೇ ಅಂಚು ಗೆಳತೀ ಹೋ ....
ಹೆಣ್ಣು : ಚಂಚಲ ಚಂಚಲ ಚಂಚಲ ನಿನ್ನ ಚೋರಿ ಚಲುವು ಚಂಚಲ
          ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ
ಗಂಡು : ಆ.. ನಿನ್ನ ರವಿಕೆ ಅಂಚಲೇ ರತ್ನನ್ ಪದವಿದೆ 
ಹೆಣ್ಣು : ಮುಸ್ಸಂಜೆಯಲಿ ಚಂದ್ರಂಗ್ ಬಾಯಾರಿ ಹೋಗಿತ್ತು 
          ನೀ ಕುಡಿದಿಟ್ಟ ಒಸಿ ಮಜ್ಜಿಗೆ ಬೇಕಿತ್ತು 
          ಕುಡಿಸೋಕೆ ನಾನ್ ಹೋದ್ರೇ ಲೋಕವೇ ನಕ್ಕಿತು 
          ನಾನೇ ಆ ಚಂದ್ರ ಮಂಚ ಯಾರಿಗೇ ಗೊತ್ತಿತು   
ಗಂಡು : ರತಿರಾಣಿ ರತಿರಾಣಿ ಕಥೆ ಕಟ್ತಿಯಾ 
           ಆ ಚಂದ್ರನ ಹಸಿವೂ ನಾನೇ ಮರೆತು ಹೋದೆಯಾ 
ಹೆಣ್ಣು : ಮಹರಾಯ ಸಾಕ್ ಕಣಯ್ಯಾ ಕೈ ನೀಡಯ್ಯಾ 
          ನೀನ್ ಉಸಿರಾ ಏರಿಳಿದ್ದ ನಾನೇನಯ್ಯ 
ಗಂಡು : ಚಂಚಲ ಚಂಚಲ ಚಂಚಲ ನಿನ್ನ ಚಕ್ಕುಲಿ ಮನಸು ಚಂಚಲ
            ನಿನ್ನ ರವಿಕೆ ಅಂಚಲೇ ರತ್ನನ್ ಪದವಿದೆ
            ಝರಿ ನೆರಿಗೆ ಅಂಚಲಿ ಜೋಗದ ಜೋರಿದೇ
ಹೆಣ್ಣು : ಚಂಚಲ ಚಂಚಲ ಚಂಚಲ ನಿನ್ನ ಚೋರಿ ಚಲುವು ಚಂಚಲ
          ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ
          ಆ ಮಿಂಚಿನ ಒಳಗೆ ಸಾವಿರ ಸಂಚಿದೆ
ಗಂಡು : ರೆಪ್ಪೆಯೊಳಗೇ ಚಪ್ಪಾಳೆ     ಹೆಣ್ಣು : ಎದೆಯ ಒಳಗೇ ತಿಪ್ಪಾಲೇ
ಗಂಡು : ಕನಸಾ ಚುಕ್ಕಿ ಚುಕ್ಕಿಲೇ ಹೋಯ್     ಹೆಣ್ಣು : ರೆಕ್ಕೆ ಬಿಚ್ಚಿ ರಂಗೋಲೆ... ಓಯ್ ಓಯ್ ಓಯ್
*********************************************************************************

ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ 

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ರಾಜೇಶ್ 

ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ
ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ
ಕಾರು ಬಾರು ಸೆಲ್ಯೂ ಲಾರು ಕಂಡಮೇಲೆ ನೀನ್ ಯಾರು ಗೀರು ಅನ್ನುತ್ತಾಳೋ
ಟಿಸ್ಸು ಪುಸ್ಸು ಇಂಗ್ಲೀಷು ಇದ್ರೆ ಸಾಕು ಕಿಸ್ಸು ಕೊಟ್ಟು ಬೀಳುತ್ತಾಳೋ
ಈ ನಮ್ಮ ಪ್ರೀತಿ ಪ್ರೇಮ  ಅಯ್ ಲವ್ ಯೂ ನಲ್ಲಿ  ಇಲ್ಲಮ್ಮ
ಹೃದಯಗಳ ಭಾವನೆ ಎಂದೂ ಗ್ರೀಟಿಂಗ್ ಕಾರ್ಡಲ್ ಇಲ್ಲಮ್ಮ....
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ
ಮಾರ್ನಿಂಗ್ ಷೋ ಇವಿನಿಂಗ್ ಷೋ ದಿವಸಕ್ಕೊಮ್ಮೆ ನೀ ತೋರಿಸು 
ವೀಕ್ ಒಳಗೇ ಬಿಳ್ತಾರೇ ಅದೇ ಹುಡುಗೀರ್ ವೀಕನೆಸೂ 
ರೀಲ್ ಬಿಟ್ಟೂ ರಿಯಲ್ ಅಂತಾ ಹೀರೊ ತರಹ ಮಾತಾಡ್ಸು 
ತಕ್ಷಣವೇ ಸ್ಟಾರ್ಟು ಕಣೋ ಪ್ರೀತಿ ಬಿಸಿನೆಸ್ಸು 
ಕಾಗದ ಸೆಂಟಿಗೇ ಅಂಟಿಕೊಂಡ ಕೂಡಲೇ ಮಲ್ಲೆಯಾ ಹೂವೂ ಆಗದು 
ಎಂ.ಜಿ.ರೋಡು ಕೆ.ಜಿ.ರೋಡು ಬುದ್ಧಿಮೆತ್ತಿಕೊಂಡು ಸೆಂಟಿಮೆಂಟಲಾಗಬಾರದು 
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ
ಪರ್ಸುಗಳೂ ತುಂಬಿದ್ರೆ ಪರ್ಸನಲ್ಲಾಗೆ ಸಿಕ್ತಾರೇ
ಪರ್ಸನಾಲ್ಟಿ ಡಲ್ ಇದ್ರೂ ದಿಲ್ಲು ಕೊಡ್ತಾರೇ 
ವಿರಹಗಳು ವಿರಸಗಳು ಎಲ್ಲಾ ದುಡ್ಡಿನ ಹಂಗಾಮ 
ಮುಂದುವರೆಯೋ ಈ ಏಜಲ್ಲಿ ಬೇಕಾ ಈ ಕರ್ಮಾ 
ಲವ್ವಿಗೂ ಲೈಫಿಗೂ ಕೂಗುವಷ್ಟೇ ಅಂತಾರಾ ಆಗದು ಒಂದು ಸೇರದೂ     
ಪ್ರಾಣವಾ ಹಿಂಡುವಾ ಅಮರ ಪ್ರೇಮ ಕಥೆಗಳು ಮತ್ತೇ ಮತ್ತೇ ಹೆಚ್ಚಿಸಬಾರದು 
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ
*********************************************************************************

Wednesday, September 19, 2018

ಕನಸುಗಾರ (2001)

ಎಲ್ಲೋ ಅದು ಎಲ್ಲೋ

ಚಲನ ಚಿತ್ರ: ಕನಸುಗಾರ (2001)
ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ ಕಲ್ಯಾಣ್ 
ನಿರ್ದೇಶನ: ಕರಣ್ 
ಗಾಯಕರು: ಎಸ್ .ಪಿ. ಬಾಲಸುಬ್ರಹ್ಮಣ್ಯಂ/ಕೆ. ಎಸ್. ಚಿತ್ರಾ 
ನಟನೆ: ರವಿಚಂದ್ರನ್, ಪ್ರೇಮಾ, ಶಶಿಕುಮಾರ್, ಮಂಡ್ಯ ರಮೇಶ್ 


ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 
ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

ಈ ಕಂಗಳ  ಗೂಡಿನಲ್ಲಿ,
ಹೊಸ ರಾಗದ ಚಿಲಿಪಿಲಿಯೂ  
ಈ ಉಸಿರಿನ ಹಾಡಿನಲ್ಲಿ,
ಅನುರಾಗದ ಕಚಗುಳಿಯೊ 
ನೆನಪೇ ನನ್ನ ಮೈ ಪುಳಕ,
ನೆನಪೇ ನನ್ನ ಮೈ ಜಳಕ 
ನೆನಪೇ ನನ್ನ ಧನಕನಕ ,
ನೆನಪೇ ಒಂದೇ ಕೊನೆತನಕ 

ಎಲ್ಲೋ ಅದು ಎಲ್ಲೋ
ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ
ಸವಿನೆನಪಿನ ಶುಭಯೋಗ 

ನಗೆಯ ಅಲೆಯಲ್ಲಿ,
ನಿನ್ನ ನಗೆಯಾ ಸವಿನೆನಪು 
ಚಿಗುರೊ ಎಲೆಯಲ್ಲಿ ,
ನಿನ್ನ ಲಜ್ಜೆಯ ಸವಿನೆನಪು 
ತಿಂಗಳ ಬೆಳಕಿನ ಸುಖದಲಿ ನಿನ್ನ
ಮುಖದಾ ಸವಿನೆನಪು 
ರೆಪ್ಪೆ ತೆರೆಯುವಾ ನೆನಪೇ,
ಚೈತ್ರ ಮಾಸವು
ತುಟಿಯ ತೆರೆಯುವಾ,
ನೆನಪೇ ಸುಪ್ರಭಾತವು 

ಯಾರೋ ಬರೆದೂರು ನನ್ನೆದೆಯಾ ಲಾಲಿ 
ಕೇಳೂ ಕ್ಷಣವೆಲ್ಲಾ ಸವಿನೆನಪಿನ ರಂಗೋಲಿ 

ಚಲಿಸೋ ಮೂಡದಲಿ ನಿನ್ನ ತಳುಕಿನ ಸವಿನೆನಪು 
ಊಕ್ಕೂ ಕಡಲಲ್ಲಿ ನಿನ್ನ ಆಸೆಯ ಸವಿನೆನಪು 
ಗುಡಿಯಲಿ ದೇವರ ದೀಪದಲಿ, ನಿನ್ನ ಪ್ರತಿರೂಪದ ನೆನಪು 
ಚೆಲುವು ತೆರೆಯುವಾ, ನೆನಪೇ ಪ್ರೇಮದರ್ಥವು 
ಹೃದಯ ತೆರೆಯುವಾ, ನೆನಪೇ ಬಾಳಿಗರ್ಥವು 

ಎಲ್ಲೋ ಅದು ಎಲ್ಲೋ, ಕಿವಿ ತುಂಬೊ  ರಾಗ
ಕೇಳೋ ಕ್ಷಣವೆಲ್ಲಾ, ಸವಿನೆನಪಿನ ಶುಭಯೋಗ 

ಈ ಕಂಗಳ  ಗೂಡಿನಲ್ಲಿ ,ಹೊಸ ರಾಗದ ಚಿಲಿಪಿಲಿಯೂ  
ಈ ಉಸಿರಿನ ಹಾಡಿನಲ್ಲಿ, ಅನುರಾಗದ ಕಚಗುಳಿಯೊ 
ನೆನಪೇ ನನ್ನ ಮೈ ಪುಳಕ, ನೆನಪೇ ನನ್ನ ಮೈ ಜಳಕ 
ನೆನಪೇ ನನ್ನ ಧನಕನಕ ನೆನಪೇ, ಒಂದೇ ಕೊನೆತನಕ 

ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ 

********************************************************************************

ಕಾಮನ ಬಿಲ್ಲೇ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ


ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆಗೂಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆ ಗೂಡೆ
ಸ್ನೇಹದ ಅಕ್ಷರಗಳಿಗೆ ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ

ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ

ಸಣ್ಣ ಸಣ್ಣ ಹೂಗಳಿಗೂ ಬಣ್ಣ ಬಣ್ಣ ಕನಸು ಇದೆ
ಚಿಗುರು ಚಿಗುರು ಮುಂಚೇನೆ ಚೈತ್ರಕೊಂದು ಬಯಕೆ ಇದೆ
ಚುಕ್ಕಿಗಳ ಕರೆದು ಅಂತರಂಗ ತೆರೆದು ಆಸೆಗಳ ತಿಳಿಸೋಣ
ಆಸೆಗಳ ಅಳೆದು ಹೃದಯವ ತೊಳೆದು ಭಾವನೆ ಬೆಳೆಸೋಣ
ಭಾವನೆಗಳ ಮೇಲೆ ಭಾವನೆಗಳ ಬೆರೆಸಿ
ಬದುಕು ಒಂದು ಸುಂದರ ತೋಟವ ಮಾಡೋಣ

ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆ ಗೂಡೆ

ಮೊದಲ ಮೊದಲ ಕುಡಿನೋಟ ತೊದಲು ಮನಸ ಕೈಯಲಿದೆ
ತೊದಲ ತೊದಲ ಒಡನಾಟ ಅದಲು ಬದಲು ಆಗಲಿದೆ
ದಿನ ಪ್ರತಿ ಘಳಿಗೆ ನಮ್ಮ ಒಳ ಹೊರಗೆ ನಿರ್ಮಲ ಮನಸು ಇದೆ
ಮನಸಿನ ಕನ್ನಡಿ ಬರೆಯುವ ಮುನ್ನುಡಿ ಬಯಸುವ ಕಣ್ಣಲಿದೆ
ನಿಮಿಷದ ಬರವಸೆಯೆ ವರುಷದ ಆನಂದ
ಬದುಕು ಒಂದು ಸುಂದರ ತೋಟವ ಮಾಡೋಣ

ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ

ಸ್ನೇಹದ ಅಕ್ಷರಗಳಿಗೆ ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ

*********************************************************************************

ಕೋಟಿ ಪಲ್ಲವಿ

ಸಾಹಿತ್ಯ: ಕೆ.ಕಲ್ಯಾಣ್  
ಹಾಡಿದವರು: ಕೆ. ಎಸ್. ಚಿತ್ರಾ  .


ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ಇದ ಬೆಳ್ಳಿ ಹಬ್ಬದ ನಗುವಿನಲಿ

ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವೇ
ಒಂದೇ ಕೊರಳಿನ ದ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು

ಮನಸು ಮರೆತು ಹಾಡಿದರೆ ಸ್ವರಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ 
ಕೋಗಿಲೆಗಳ ಗುಂಪಲ್ಲಿ ಹುಟ್ಟು ಗುಬ್ಬಿಯ ಮಾತುಗಳು
ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳು ಜನ್ಮಗಳು
ಧಮನಿ ಧಮನಿಗೆ ಸರಿಗಮಪದನಿಯ ಮಿಟೋ ತಂತಿಗಳು

ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು

ನೂರು ನೂರು ತಿರುವುಗಳು ಬದುಕಿನ ದಾರಿಗೆ
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ನೀತಿ ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿ ನಿಮಿಷವೂ ಸ್ಫೂರ್ತಿ ದೇವರೇ ನಮಗಿಲ್ಲಿ
ಏಳು ಸ್ವರಗಳೆ ನಮ್ಮ ಏಳು ಲೋಕಗಳು
ಸ್ವರಗಳ ತೊಟ್ಟಿಲ ತೂಗುವ ಕೈಯಲ್ಲಿ ಉಂಗುರ ನಾವುಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು

ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ

ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ
ಲಾಲಾಲಾಲಲಲ...  ಲಾಲಾಲಾಲಲಲ... 

*********************************************************************************

ಓಂ ನಮಃ ಓ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯಕ ರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ 


ಓಂ ನಮಃ ಓ ಪ್ರೇಮಾ.. ಒಂದಾಗಿಸೆ ಓ ಪ್ರೇಮಾ
ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ  
ಪ್ರೀತಿಗಾಗಿ ನಮ್ಮ ಧೀರನ್ ಧೀರನ್
ಅಂದುಕೊಳ್ಳದೆ ಆಗಿ ಹೋಗುವ 
ಬಾಳಿಗಾಗಿಯೇ ಜನನ ಮರಣ ..

ಓಂ ನಮಃ ಓ ಪ್ರೇಮಾ..
ಒಂದಾಗಿದೆ  ಓ ಪ್ರೇಮಾ...

ಕಪ್ಪೆ ಚಿಪ್ಪಿನೊಳಗೆ ಸ್ವಾತಿ  ಕಣ್ಣ ಚಿಪ್ಪಿನೊಳಗೆ ಪ್ರೀತಿ
ಮುತ್ತು ಗೊತ್ತೇ ಆಗದೆ ಮನಸು ತೆರೆಯಿತು
ಜೇನಗೂಡಿನಲ್ಲಿ ಜೇನು ಮುತ್ತು 
ಎದೆಯ ಗೂಡಿನಲ್ಲಿ ಪ್ರಾಣ ಇತ್ತು
ಅತ್ತು ಕರೆಯದೆ ಸೊಗಸು ಬರೆಯಿತು
ಪರಿಚಯವಿಲ್ಲದೆ ಹೋದರು ಕರೆಯುವುದಿ ಈ ಪ್ರೇಮಾ
ಅತಿಶಯದ ಆರಂಭವೇ ನಮ್ಮ ಈ ಪ್ರೇಮಾ

ಓಂ ನಮಃ ಓ ಪ್ರೇಮಾ..
ಒಂದಾಗಿದೆ  ಓ ಪ್ರೇಮಾ...

ಓ.. ಗಾಳಿಯೊಳಗೆ ತೇಲಿ ಬಂದ ಗಂಧ 
ಆಸೆಯೊಳಗೆ ಹಂಚಿ ಕೊಡುವ ಚೆಂದ 
ನಿದ್ದೆ ಇಲ್ಲದೆ ಕನಸು ಕಲಿಸಿತು 
ಹರೆಯದೊಳಗೆ ಅವಿತುಕೊಂಡ ಅಂದ  
ಪ್ರಣಯದೊಳಗೆ ಕವಿತೆಯಾಗೋ ಬಂಧ 
ಸದ್ದೇ ಇಲ್ಲದೆ ವಯಸು ಮರೆಸಿತು 
ಯುಗಳ ಗೀತೆಯ ಹಿಂದಿದೆ ಯುಗಳ ಈ ಪ್ರೇಮ 
ಮುಂದಿನ ಜನ್ಮಕೂ ಮುಂದಿನ ಕಣ್ಣು ಮುಂದಿನ ಪ್ರೇಮ 
ಅಪರೂಪದ ಆರಂಭವೇ ನಮ್ಮ ಈ ಪ್ರೇಮಾ ... 

ಓಂ ನಮಃ ಓ ಪ್ರೇಮಾ..
ಒಂದಾಗಿಸೆ ಓ ಪ್ರೇಮಾ

ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ  
ಪ್ರೀತಿಗಾಗಿ ನಮ್ಮ ಧೀರನ್ ಧೀರನ್
ಅಂದುಕೊಳ್ಳದೆ ಆಗಿ ಹೋಗುವ 
ಬಾಳಿಗಾಗಿಯೇ ಜನನ ಮರಣ .. 

********************************************************************************

ಸೂರ್ಯನ ಗೆಳೆತನಕೆ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ


ಓ.....ಓ..ಓ..ಓ.ಓ.  
ಲಾ.ಲ.ಲಾ.ಲ.ಲಾ... 
ಲಾ.ಲ.ಲಾ.ಲ.ಲಾ...

ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ  ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ ನಂಬಿದೆ ಈ ಸ್ನೇಹ

ಹುಣ್ಣಿಮೆ ಗೆಳೆತನಕೆ ಸಾಗರವೇ ಸಾಕ್ಷಿ
ಹೆಣ್ಣಿನ ಗೆಳೆತನಕೆ ಪ್ರಕೃತಿಯೇ ಸಾಕ್ಷಿ

ದಿಕ್ಕುಗಳ ಎಣಿಸಿ ಚುಕ್ಕಿಗಳ ಗುಣಿಸಿ 
ಎದ್ದುಬಂದ ಆಸೆಯಿದು
ಋತುಗಳ ಕುಣಿಸಿ ಮಿಂಚುಗಳ ತಣಿಸಿ 
ಎದ್ದುಬಂದ ಸೆಳೆತವಿದು
ಪಾತ್ರವಿರದ ಕಥೆಯಲ್ಲಿ ಕೈಯ ಹಿಡಿದು ಜೊತೆಯಲ್ಲಿ 
ನಡೆಯೋ ಬಂಧವಿದು
ಸೂತ್ರವಿರದ ಬದುಕಲ್ಲಿ ಮನಸು ಹಿಡಿದು ಕ್ಷಣದಲ್ಲಿ 
ನಡೆಸೋ ಸತ್ಯವಿದು
ಕನಸುಗಳಲೇ ಬದುಕನು ನೋಡು 
ಬದುಕಿನ ಕನಸಾಗಿ ಬರುವೆ
ಬದುಕಲಿ ಬರಿ ಕನಸನೆ ನೋಡು
ಕನಸಲಿ ಬದುಕಾಗಿ ಇರುವೆ
ಹೂವಿನ ಗೆಳೆತನಕೆ ಪರಿಮಳವೇ ಸಾಕ್ಷಿ
ಚೈತ್ರದ ಗೆಳೆತನಕೆ ಕೋಗಿಲೆಯೇ ಸಾಕ್ಷಿ

ಭೂಮಿಗೊಂದು ಕಣ್ಣ ಬಾನಿಗೊಂದು ಬಣ್ಣ 
ಕಟ್ಟಿಬಿಟ್ಟ ಮಾಯೆ ಇದು
ಹಗಲಿಗೆ ಹೆಗಲ ಇರುಳಿಗೆ ಮಡಿಲ 
ತೋರಿಕೊಟ್ಟ ಸನಿಹವಿದು
ಗುರುತು ಇರದ ಗುಂಡಿಗೆಯ ಗುರುತು ಮಾಡಿ 
ಸ್ವಾಗತಿಸೋ ನಿತ್ಯವಸಂತವಿದು
ಬಯಸೇ ಇರದ ಭಾಗ್ಯವನು ಬಾಗಿಲು ತೆರೆದು 
ಆದರಿಸೋ ನಿತ್ಯಸಂದೇಶವಿದು
ಅಣುಅಣುವಲು ಅಮೃತವರ್ಷಿಣಿ ಗೆಲ್ಲುವ 
ಸಮಯಕೆ ಕಾದಿರುವೆ
ಕ್ಷಣಕ್ಷಣದಲು ಅಂತರಗಂಗೆಯ ಹರಿಸಲು 
ಹೃದಯಕೆ ಸೋತಿರುವೆ

ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ  ನಂಬಿದೆ ಈ ಸ್ನೇಹ

*********************************************************************************