Thursday, September 13, 2018

ನೀಲಕಂಠ (2006)



ಹೆಣ್ಣಿಗೆ ಸೀರೆ ಯಾಕೆ ಅಂದ

ಚಲನ ಚಿತ್ರ: ನೀಲಕಂಠ (2006)
ನಿರ್ದೇಶನ: ಓಂ ಸಾಯಿ ಪ್ರಕಾಶ್
ಸಾಹಿತ್ಯ & ಸಂಗೀತ : ವಿ.ರವಿಚಂದ್ರನ್  
ಗಾಯಕರು: ಶ್ರೀನಿವಾಸ,  ಸುಮಾ ಶಾಸ್ತ್ರೀ 
ನಟನೆ: ರವಿಚಂದ್ರನ್, ನಮಿತಾ, ಶ್ರೀದೇವಿಕಾ 


ಹೆಣ್ಣಿಗೆ ಸೀರೆ ಯಾಕೆ ಅಂದ ?  
ತಾನನ...ತಂದಾನಾ..ನಾನನಾ..
ಹೆಣ್ಣಿಗೆ ಸೀರೆ ಯಾಕೆ ಅಂದ?
ಆ ಅಂದ ಚಂದ ಅವಳ ಅಂದ 
ಒಳಗೆ ಅಡಗಿರೋದ್ರಿಂದ
ತಾನನ...ತಂದಾನಾ..ನಾನನಾ.

ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆ ಬೆಣ್ಣೆಯಂತೆ 
ಕರಗಿಹೋಗೊ ಆ ಹೃದಯದಂತೆ
ಹಣೆಯಲ್ಲಿ ಸಿಂಧು ಅಂದದ ಬಂದು
ಕಣ್ಣಲ್ಲಿ ಕಾಡಿಗೆಯು ರುಚಿಯಾದ ಅಡಿಗೆ
ಇಂದು ಏಕೋ ಹೃದಯಕೆ ಹೆಣ್ಣಿನ ಅಂದವೇ,
ಮದುವೆಯ ಭೋಜನವಂತೆ,
ಮದುವೆಯ ಭೋಜನವಂತೆ

ಹೆಣ್ಣಿಗೆ ಸೀರೆ ಯಾಕೆ ಅಂದ?

ಘಲ್ ಘಲ್ ಈ ಬಳೆಗಳು ನೋಡು..
ಒಳ್ಳೆಯ ಶಕುನ ನೋಡು..
ಜಲ್ ಜಲ್ ಗೆಜ್ಜೆಗಳು ನೋಡು..
ಸ್ವರಗಳ..ಸ್ವರಗಳ ಸರಿಗಮ ನೋಡು..
ಹೆಣ್ಣು ನಕ್ಕರೆ ಆ ದೀಪಾವಳಿ
ಹೆಣ್ಣು ನಡೆದರೆ ಆ ಸಂಕ್ರಾಂತಿಲಿ
ಬಂದು ಹೋಗೋ ಹಬ್ಬಗಳು ಯಾಕೆ ಬೇಕು
ಹೆಣ್ಣೇ ಕಣ್ಣಿಗೆ ಹಬ್ಬ
ಅಬ್ಬಬಬ್ಬ ಕಣ್ಣಿಗೆ ಹಬ್ಬ

ಹೆಣ್ಣಿಗೆ ಸೀರೆ ಯಾಕೆ ಅಂದ?
ಆ ಅಂದ ಚಂದ ಅವಳ ಅಂದ 
ಒಳಗೆ ಅಡಗಿರೋದ್ರಿಂದ
ತಾನನ...ತಂದಾನಾ..ನಾನನಾ

ನವಿಲೇ ನನ್ನವಳೇ ಕೇಳೇ
ಹೃದಯದ ಮಾತು ಕೇಳೇ
ಸುಳ್ಳು ಪುಳ್ಲ್ಲೂ ಎಲ್ಲ
ಹೆಣ್ಣಿಗೆ..ಹೆಣ್ಣಿಗೆ ಒಡವೆ ಬೇಕಿಲ್ಲ..
ನಗುವೇ ಅವಳ ಒಡವೆಯಂತೆ
ಸಹನೆ ಅವಳ ಜೊತೆಯಂತೆ
ಭುವಿಗೆ ಅಲಂಕಾರ ಈ ಹೆಣ್ಣು
ಹೆಣ್ಣೇ ಕಣ್ಣಿಗೆ ಹಬ್ಬ
ಅಬ್ಬಬಬ್ಬ ಕಣ್ಣಿಗೆ ಹಬ್ಬ

ಹೆಣ್ಣಿಗೆ ಸೀರೆ ಯಾಕೆ ಅಂದ?
ಆ ಅಂದ ಚಂದ ಅವಳ ಅಂದ ಒಳಗೆ ಅಡಗಿರೋದ್ರಿಂದ
ಸೀರೆಯಲ್ಲಿ ಹೆಣ್ಣು ಬೆಣ್ಣೆ..ಆ ಬೆಣ್ಣೆಯಂತೆ 
ಕರಗಿಹೋಗೊ ಆ ಹೃದಯದಂತೆ
ತಾನನ...ತಂದಾನಾ..ನಾನನಾ

*********************************************************************************

ದೇವರು ಬರೆದ ಕತೆಯಲ್ಲಿ

ಸಾಹಿತ್ಯ: ವಿ.ರವಿಚಂದ್ರನ್  
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ನಂದಿತಾ 


ದೇವರು ಬರೆದ ಕತೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಯೇ ಮೊದಲಿಲ್ಲಿ
ಆರಾರಿರಾರೋ ಹಾಡು ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೋ ಮಾತು ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕತೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಯೇ ಮೊದಲಿಲ್ಲಿ

ನೋವಿಗೆ ಮೊದಲ ಔಷದಿ ಅಮ್ಮ ಅನ್ನೋ ಕೂಗೆ
ಕಂದನ ಮೊದಲಾ ಆಸೆಗೆ ತಾಯಿ ನಾಂದಿಯಂತೆ
ಮೊದಲಿಗೆ ಮೊದಲಿಲ್ಲಿ ಈ ತಾಯಿಯೇ ಮೊದಲಿಲ್ಲಿ
ಒಂಬತ್ತಾದರೂ ತೊಂಬತ್ತಾದರೂ ಈ ಪ್ರೀತಿ ಬದಲಾಗದು

ಗರ್ಭದಗುಡಿಯಲಿ ಭಗವಂತ ತಾನೇ ಕುಳಿತ ಸ್ವಾರ್ಥಿ ಕಣೋ
ತಾಯಿಯು ಗರ್ಭವ ಕಂದನಿಗೆ ಮೀಸಲು ಇಡುವ ನಿಸ್ವಾರ್ಥಿ ಕಣೋ
ಕರುಳನೇ ತೊಟ್ಟಿಲ್ಲ ಮಾಡಿ ಕಂದನನ್ನು ತೂಗುವಳು
ಮನಸನ್ನೇ ಮೆಟ್ಟಿಲ್ಲ ಮಾಡಿ ಕನಸನು ಜಯಿಸುವಳು
ಕೊನೆಗೆ ಕೊನೆಯಲ್ಲಿ ತಾಯಿ ಪ್ರೀತಿಗೆ ಕೊನೆಯಲ್ಲಿ
ಜೊತೆಗೆ ಇದ್ದರು ಇಲ್ಲದಿದ್ದರೂ ಈ ಪ್ರೀತಿ ಬದಲಾಗದು

ದೇವರು ಬರೆದ ಕತೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಯೇ ಮೊದಲಿಲ್ಲಿ
ಆರಾರಿರಾರೋ ಹಾಡು ಪ್ರೀತಿಗೆ ಮೊದಲ ಹಾಡು
ಅಮ್ಮ ಅನ್ನೋ ಮಾತು ಪ್ರೀತಿಗೆ ಮೊದಲ ತುತ್ತು
ದೇವರು ಬರೆದ ಕತೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆತ್ತವಳು ಬರೆದ ಕತೆಯಲ್ಲಿ ಕಂದನ ಪ್ರೀತಿಯೇ ಮೊದಲಿಲ್ಲಿ


*********************************************************************************

No comments:

Post a Comment