ನೀ ಮುದ್ದಾದ ಮಾಯಾವಿ
ಚಲನಚಿತ್ರ: ರಥಾವರ (2015)
ಸಾಹಿತ್ಯ: ಕವಿರಾಜ್
ಸಂಗೀತ: ಧರ್ಮ ವಿಶ್
ಗಾಯನ: ರಾಜೇಶ್ ಕೃಷ್ಣನ್, ಸುಪ್ರಿಯಾ ಲೋಹಿತ್
ನಿರ್ದೇಶನ: ಚಂದ್ರಶೇಖರ್ ಬಂಡಿಯಪ್ಪ
ನಟನೆ: ಶ್ರೀಮುರಳಿ, ರಚಿತಾ ರಾಮ್
ನೀ ಮುದ್ದಾದ ಮಾಯಾವಿ
ನೀ ಪ್ರೀತಿಲಿ ಮೇಧಾವಿ
ಮೆಲ್ಲ ಮೆಲ್ಲ ಮತ್ತೇರಿದಂತೆ
ಯಾರೋ ನನ್ನ ಮುದ್ದಾಡಿದಂತೆ
ಹಾದಿ ಮುಳ್ಳು ಅಂಗಾಲಲ್ಲಿ ನುಗ್ಗಿ ಕೂತಂತೆ
ನನ್ನ ಜೀವ ಹೊಕ್ಕಿ ಹೀಗೆ ಕಳ್ಳ ನೀ ಕುಂತೆ
ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂದಂತೆ
ಹೇಗೋ ಏನೋ ನನ್ನ ಮನಸಿನಲ್ಲಿ ನೀ ನಿಂತೆ
ನಾನೊಂದು ಕಲ್ಲಿನಂತೆ ಬೆಳೆದೆನು
ನೀ ಸೋಕಿ ಜೀವಂತ ಆದೆನು
ಮೊಗ್ಗನ್ನು ಹೂ ಮಾಡೋ ಸೂರ್ಯನು
ನಿನ್ನಲ್ಲಿ ನಂಗೀಗ ಕಂಡೆನು
ಕೊಂದೇ ಬಿಡು ನನ್ನನು ನಿನ್ನ ಕಿರು ನೋಟದಿ
ಮಡಿದರು ನೀ ಸರಿದರು ನಂದೇನೋ ಚಡಪಡಿಕೆ
ಮುಂಗಾರಲ್ಲಿ ಭೂಮಿ ಸೀಳಿ ಮೊಳಕೆ ಬಂದಂತೆ
ಹೇಗೋ ಏನೋ ನನ್ನ ಮನಸಿ ನಲ್ಲಿ ನೀ ನಿಂತೆ
ಬಿರುಗಾಳಿ ಆಗೋ ಈ ಹುಡುಗನು
ನಂಗೀಗ ತಂಗಾಳಿ ಆದನು
ಮುಂಜಾನೆ ಕನಸಂತ ಹುಡುಗಿಯು
ನಿಜವಾಗಿ ನನ್ನ ಸ್ವಂತ ಆದಳು
ನಿನ್ನ ಸಿಹಿ ಕಾಟಕೆ ಜೀವ ಪರದಾಡಿದೆ
ಮೆರೆಸುವೇ ಮೈ ಮರೆಸುವೇ ನೀ ನನ್ನ ಅರವಳಿಕೆ
ಹಾದಿ ಮುಳ್ಳು ಅಂಗಾಲಲ್ಲಿ ನುಗ್ಗಿ ಕೂತಂತೆ
ನನ್ನ ಜೀವ ಹೊಕ್ಕಿ ಹೇಗೆ ಕಳ್ಳ ನೀ ಕುಂತೆ
ನೀ ಮುದ್ದಾದ ಮಾಯಾವಿ
ನೀ ಪ್ರೀತಿಲಿ ಮೇಧಾವಿ
ಮೆಲ್ಲ ಮೆಲ್ಲ ಮತ್ತೇರಿದಂತೆ
ಯಾರೋ ನನ್ನ ಮುದ್ದಾಡಿದಂತೆ
ಹಾಳಾದೆ ಹಾಡು ಹಗಲೇ
********************************************************************************
//ಹುಡುಗಿ ಹಿಂದೆ ಬಿದ್ದರೆ ಸಿಕ್ಕಾಪಟ್ಟೆ ತೊಂದರೆ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
ಪ್ರೀತಿ ಒಂದು ಸೂಜಿ ದಾರ
*********************************************************************************
ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ
ಬೇಡವೆನುತಲೆ ಬಂದೆ ಒಲಿಯುತ ಸಮಯ
ಬೇಡವೆನುತಲೆ ಬಂದೆ ಒಲಿಯುತ ಸಮಯ
ಮರೆಸಿ ನಯನ ಬೆರೆಸಿ ನಡೆಸು ಮಧುರ ವಿನಿಮಯ
ಸಾಲದಾಗಿದೆ ಹೃದಯವಿದು ತುಂಬಿಕೊಳ್ಳಲು
ನೆನಪುಗಳ ಹಬ್ಬದಂತೆಯೇ ಕಳೆಯುವೇನು
ನಿನ್ನ ಸಂಗಡ ನಿಮಿಷಗಳ
ತೋಳಿನಲ್ಲಿ ಇರಲು ನಾನು ನೋಡಬೇಡ ಜಗವನು
ಬೆರಳು ಎಣೆದಿದೆ ಕೊರಳು ಬಿಗಿದಿದೆ ಸ್ಪರ್ಶದಲ್ಲೇ
ತೋಳಿನಲ್ಲಿ ಇರಲು ನಾನು ನೋಡಬೇಡ ಜಗವನು
ಬೆರಳು ಎಣೆದಿದೆ ಕೊರಳು ಬಿಗಿದಿದೆ ಸ್ಪರ್ಶದಲ್ಲೇ
ಬರೆದು ಬಿಡಲೇ ಮರುಳು ಮನದ ಕವಿತೆಯ
ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ
ನಿನ್ನ ನೆನೆದರೆ ಆಗುವುದು ನಾನು ಕುಡಿಯುವ
ನೀರು ಸಿಹಿ ಗಾಳಿಯಂತೆಯೆ ಆವರಿಸಿ
ಮೆಲ್ಲ ಉಸಿರಲಿ ಮಾಡು ಸಹಿ
ನಡೆಯುತಿರಲು ನಿನ್ನ ಧ್ಯಾನ ಮನಸೇ ಒಂದು ಮಧುವನ
ನಡೆಯುತಿರಲು ನಿನ್ನ ಧ್ಯಾನ ಮನಸೇ ಒಂದು ಮಧುವನ
ಬರಲು ಸನಿಹಕೆ ಸಣ್ಣ ಹೆದರಿಕೆ ಇರುವ ಗೆರೆಯ
ಅಳಿಸಿಬಿಡುವ ನಿನ್ನ ಸೆಳೆತ ಅತಿಶಯ
ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದ ಪುಸ್ತಕ ಓದಲು ಕೊಡುವೆಯ
ಮರೆಯದೆ ಅದರಲಿ ಕನಸನು ಇಡುವೆಯ
ಬೇಡವೆನುತಲೆ ಬಂದೆ ಒಲಿಯುತ ಸಮಯ
ಬೇಡವೆನುತಲೆ ಬಂದೆ ಒಲಿಯುತ ಸಮಯ
ಮರೆಸಿ ನಯನ ಬೆರೆಸಿ ನಡೆಸು ಮಧುರ ವಿನಿಮಯ
********************************************************************************
ಸಾಹಿತ್ಯ: ಯೋಗರಾಜ್ ಭಟ್
ಗಾಯಕರು: ಶ್ರೀಮುರಳಿ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
ಎದೆಯ ಡೋಲು ಆಗಿದೆ ಹೋಲು
ಆದರು ಅಕ್ತಯ್ತೆ ತಾಳ ಕೇಳು
ಹುಡುಗರು ಹಾರ್ಟಿಗೂ ಹೆಲ್ಮೆಟ್ಟ ಹಾಕ್ಕೊಳೋ
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
ಎದೆಯ ಡೋಲು ಆಗಿದೆ ಹೋಲು
ಆದರು ಅಕ್ತಯ್ತೆ ತಾಳ ಕೇಳು
ಹುಡುಗರು ಹಾರ್ಟಿಗೂ ಹೆಲ್ಮೆಟ್ಟ ಹಾಕ್ಕೊಳೋ
ಆಪ್ಶನ್ ನೀಡು ದೇವರೇ
ಚಾಂದಿನಿ ರಾತ್ ಮೇ ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
ಚಾಂದಿನಿ ರಾತ್ ಮೇ ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
//ಹುಡುಗಿ ಹಿಂದೆ ಬಿದ್ದರೆ ಸಿಕ್ಕಾಪಟ್ಟೆ ತೊಂದರೆ
ಜೀವ ಗಿವ ನೊಂದರೆ ಬಿಟ್ಕೊ ಬೀರು ಸಿಕ್ಕರೆ //
ನಗ ನಗ್ತಾನೆ ಕುಂತವ್ಳೆ ನರಕಕ್ಕ್ ತಳ್ಳಿ ನೋಡ್ತವ್ಳೆ
ಡೇ ಅಂಡ್ ನೈಟು ಕಾಡ್ತವ್ಳೆ ಕಣ್ಣ ಮುಚ್ಚೆ ಆಡ್ತವ್ಳೆ
ಬೆನ್ನ ಮೇಲೆ ಬರೆದ ಸಾಲು ಅಳಿಸೆ ಇಲ್ಲ ಇನ್ನು
ನನ್ನ ನೋಡಿ ಅಳ್ತಾಯ್ತೆ ಪ್ರೀತಿಲಿ ಬಾನು
ಚಾಂದಿನಿ ರಾತ್ ಮೇ ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
ಡೇ ಅಂಡ್ ನೈಟು ಕಾಡ್ತವ್ಳೆ ಕಣ್ಣ ಮುಚ್ಚೆ ಆಡ್ತವ್ಳೆ
ಬೆನ್ನ ಮೇಲೆ ಬರೆದ ಸಾಲು ಅಳಿಸೆ ಇಲ್ಲ ಇನ್ನು
ನನ್ನ ನೋಡಿ ಅಳ್ತಾಯ್ತೆ ಪ್ರೀತಿಲಿ ಬಾನು
ಚಾಂದಿನಿ ರಾತ್ ಮೇ ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
ಹುಚ್ಚು ಹಿಡ್ಸೋರು ಹುಡುಗಿರೆ ಮಚ್ಚು ಹಿಡ್ಸೋರು ಹುಡುಗಿರೆ
ಸುಕ್ಕ ಒಡ್ಸೊರು ಹುಡುಗಿರೆ ಚಟ್ಟ ಏರ್ಸೋರು ಹುಡುಗಿರೆ
ಹುಡುಗಿ ಬಿಟ್ಟು ಬಾಟಲಿ ಹಿಡಿದೇ ಪ್ರೇಮ ಗಿಮಾ ಕ್ಯಾನ್ಸೆಲ್
ಕುಡ್ಕಂಡಂಗೆ ಮಲ್ಕೊಂಬಾರ್ದು ಕುಸ್ಕ ಒಂದ್ ಪಾರ್ಸೆಲ್
ಚಾಂದಿನಿ ರಾತ್ ಮೇ ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
ಸುಕ್ಕ ಒಡ್ಸೊರು ಹುಡುಗಿರೆ ಚಟ್ಟ ಏರ್ಸೋರು ಹುಡುಗಿರೆ
ಹುಡುಗಿ ಬಿಟ್ಟು ಬಾಟಲಿ ಹಿಡಿದೇ ಪ್ರೇಮ ಗಿಮಾ ಕ್ಯಾನ್ಸೆಲ್
ಕುಡ್ಕಂಡಂಗೆ ಮಲ್ಕೊಂಬಾರ್ದು ಕುಸ್ಕ ಒಂದ್ ಪಾರ್ಸೆಲ್
ಚಾಂದಿನಿ ರಾತ್ ಮೇ ಚೂರು ಕಣ್ಣಿರು ಸಾಲ ಮಾಡೋಣ
ಚಾಂದಿನಿ ಚೌಕ ಮೇ ಹಾಳಾದ್ ದಿಲ್ಲನ್ನೆ ಸೇಲು ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟಿಗೆ ಬುಲ್ಲೆಟ್ಟು ಒನ್ ಬೈ ಒನ್ನು
*********************************************************************************
ಸಾಹಿತ್ಯ: ಕೆ. ಕಲ್ಯಾಣ್
ಗಾಯಕರು: ರವೀಂದ್ರ ಸೊರಗಾವಿ
ಪ್ರೀತಿ ಒಂದು ಸೂಜಿ ದಾರ
ಹೊಲಿಯೊನ ಯಾರೋ ಸೂತ್ರಧಾರ
ಮನಸೀಗ ಗಾಳಿಯ ಪಟವಾಗಿ ಹೋಯ್ತಾ
ಬದುಕೊಂದು ಬರಿಹಾಳೆ ಪುಟವಾಗಿ ಹೋಯ್ತಾ
ವಿರಹನೆ ಪ್ರಿತಿಲಿ ದಿಟವಾಗಿ ಹೋಯ್ತಾ
ಅಳಿಸೋದೆ ದೇವರಿಗೆ ಚಟವಾಗಿ ಹೋಯ್ತಾ
ಇದು ಯಾರು ಮಾಡಿಟ್ಟ ಜಾತಕ
ಮನಸೀಗ ಗಾಳಿಯ ಪಟವಾಗಿ ಹೋಯ್ತಾ
ಬದುಕೊಂದು ಬರಿಹಾಳೆ ಪುಟವಾಗಿ ಹೋಯ್ತಾ
ವಿರಹನೆ ಪ್ರಿತಿಲಿ ದಿಟವಾಗಿ ಹೋಯ್ತಾ
ಅಳಿಸೋದೆ ದೇವರಿಗೆ ಚಟವಾಗಿ ಹೋಯ್ತಾ
ಇದು ಯಾರು ಮಾಡಿಟ್ಟ ಜಾತಕ
ದೂರಾಗುವಾಸೆ ಯಾವ ಲೆಕ್ಕ
ಕಾಲಾನೇ ಕಣ್ಣಿರ ಚಾಲಕ
ಕಾಲಾನೇ ಕಣ್ಣಿರ ಚಾಲಕ
ಹಂಚೋದು ಹೇಗೆ ಸುಖ ದುಃಖ
ಕನಸು ಕೊಟ್ಟು ಕತ್ತಿ ಮಸೆಯೋ
ನೆನೆಪು ಕೊಟ್ಟು ನೋವ ಹೊಸೆಯೋ
ಒಹ್ ದೈವ ನಿನಗೀಗ ಕ್ಷಮೆಯಿಲ್ಲ ಭೂಮಿಲಿ
ಒಹ್ ದೈವ ನಿನಗೀಗ ಕ್ಷಮೆಯಿಲ್ಲ ಭೂಮಿಲಿ
ಪ್ರೇಮಿಗಳ ಹಿಡಿ ಶಾಪ ಉಂಟು ಇಲ್ಲಿ
ಹೃದಯಾನ ಸೀಳುವ ಕಾಯಕ
ಹೃದಯಾನ ಸೀಳುವ ಕಾಯಕ
ನಿಂಗ್ಯಾಕೊ ಬೇಕೋ ಇರುಳಾಯಕ
ನೀನಾಗೆ ನೀಡುವ ಪ್ರೀತಿಯ ನೀನಾಗೆ ಕೊಲ್ಲೋದ್ಯಾವ ಲೆಕ್ಕ
ಪ್ರೀತಿ ಒಂದು ಸೂಜಿ ದಾರ
ನೀನಾಗೆ ನೀಡುವ ಪ್ರೀತಿಯ ನೀನಾಗೆ ಕೊಲ್ಲೋದ್ಯಾವ ಲೆಕ್ಕ
ಪ್ರೀತಿ ಒಂದು ಸೂಜಿ ದಾರ
ಅತ್ತ ಒಂದು ಅರಳೋ ಪ್ರೀತಿ
ಇತ್ತ ಒಂದು ನರಳೋ ಪ್ರೀತಿ
ನಗುವಾಗ ನಗಲಿಲ್ಲ ಅಳುವಾಗ ಅಳಲಿಲ್ಲ
ನಗುವಾಗ ನಗಲಿಲ್ಲ ಅಳುವಾಗ ಅಳಲಿಲ್ಲ
ಒಂದಾಗೋ ವೇಳೆಲಿ ಒಬ್ಬೊಂಟಿ ಆಯ್ತಲ್ಲಾ
ಕೊನೆ ಏನು ಅನ್ನೋದು ಬಲ್ಲೋನು
ಕೊನೆ ಏನು ಅನ್ನೋದು ಬಲ್ಲೋನು
ಕ್ಷಣ ಕ್ಷಣವೂ ಪ್ರೀತಿ ಬೆಳೆಸಿದ್ಯಾಕೆ
ಕರುಣೆಯ ಕಣ್ಣಿರದ ವಿಧಿರಾಯ ಕಣ್ಣಿರಲ್ ಬೆಂಕಿ ಹಚ್ಚಿದ್ಯಾಕೆ
ಕರುಣೆಯ ಕಣ್ಣಿರದ ವಿಧಿರಾಯ ಕಣ್ಣಿರಲ್ ಬೆಂಕಿ ಹಚ್ಚಿದ್ಯಾಕೆ
ಪ್ರೀತಿ ಒಂದು ಸೂಜಿ ದಾರ
ಹೊಲಿಯೊನ ಯಾರೋ ಸೂತ್ರಧಾರ
*********************************************************************************
No comments:
Post a Comment