Monday, September 10, 2018

ಆಪ್ತಮಿತ್ರ (2004)


ಕಣ ಕಣದೇ ಶಾರದೆ

ಚಲನಚಿತ್ರ: ಆಪ್ತಮಿತ್ರ (2004)
ನಿರ್ದೇಶನ: ಪಿ. ವಾಸು
ಸಂಗೀತ: ಗುರುಕಿರಣ್ 
ಸಾಹಿತ್ಯ: ಕವಿರಾಜ್ 
ಗಾಯನ: ಮಧು ಬಾಲಕೃಷ್ಣನ್ 
ನಟನೆ: ವಿಷ್ಣುವರ್ಧನ್, ರಮೇಶ್ ಅರವಿಂದ್, 
ಸೌಂದರ್ಯ, ಪ್ರೇಮಾ, ದ್ವಾರಕೀಶ್ 


ಆ...  ಆ... 
ಕಣ ಕಣದೇ ಶಾರದೆ
ಕಲೆತಿಹಳು ಕಾಣದೆ
ವನ ವನದಲ್ಲು ಕುಹೂ ಕುಹೂ ಗಾನ
ಝರಿ ಝರಿಯಲ್ಲು ಝುಳು ಝುಳು ಧ್ಯಾನ
ವಿಧ ವಿಧದಾ ನಾದ ಅವಳು ನುಡಿಸುತಿಹಳು
ಕಣ ಕಣದೇ ಶಾರದೆ
ಕಲೆತಿಹಳು ಕಾಣದೆ ... 
ಜನನಕು ಹಾಡು ಮರಣಕು ಹಾಡು
ಲಾಲಿ ಚರಮಗಳು
ಪ್ರತಿಯೆದೆಯಾಳ ದುರುಲಯ ತಾಳ
ಗೇತೆ ಬದುಕಿನಲೂ...
ಕೊರಳಿನಲಿ ಕೊಳಲಿನಲಿ
ಚೆಲುವಿನಲಿ ಒಲವಿನಲಿ
ಒಲಿದು ನುಲಿದು ನಲಿದು ಹರಿದು
ಬರುವುದು ಶ್ರುತಿಲಯವು
ಕಣ ಕಣದೇ ಶಾರದೆ
ಕಲೆತಿಹಳು ಕಾಣದೆ ... 
ಕುಲನೆಲದಾಚೆ ಅರಿಯುವ ಭಾಷೆ
ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರಿಲ್ಲ
ಸಪ್ತ ಸ್ವರಗಳಿಗೆ
ನಿ ಪ ಮ ಪ ನಿ
ಸ ನಿ ಪ ನಿ ಸ
ಗ ಸ ನಿ ಸ ಗ
ಮ ಪ ಮ ಪ ಗ
ನಿ ಪ ಮ ಪ ಸ ನಿ ಪ ನಿ
ಗ ಸ ನಿ ಸ ಆ... ಆ... ಆ.. 
ಕಣ ಕಣದೇ ಶಾರದೆ
ಕಲೆತಿಹಳು ಕಾಣದೆ
ವನ ವನದಲ್ಲು ಕುಹೂ ಕುಹೂ ಗಾನ
ಝರಿ ಝರಿಯಲ್ಲು ಝುಳು ಝುಳು ಧ್ಯಾನ
ವಿಧ ವಿಧದಾ ನಾದ ಅವಳು ನುಡಿಸುತಿಹಳು
ಕಣ ಕಣದೇ ಶಾರದೆ
ಕಲೆತಿಹಳು ಕಾಣದೆ ...

********************************************************************************

ಕಾಲವನ್ನು ತಡೆಯೋರು

ಸಾಹಿತ್ಯ: ಚಿ . ಉದಯಶಂಕರ್ 
ಗಾಯಕರು: ಹರಿಹರನ್, ಗುರುಕಿರಣ್ 


ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ 
ದೂರ ಮಾಡಲು ಎಂದೂ ಆಗೊಲ್ಲಾ
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ 
ದೂರ ಮಾಡಲು ಎಂದೂ ಆಗೊಲ್ಲಾ

ಊರೊಂದು ಏತಕೆ ಬೇಕು, ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೇ,ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನಾ ಹೃದಯಾ ಕಡಿಯುವ ಕಳ್ಳಾ,
ಅನ್ಯಾಯ ಒಡೆಯುವ ಕುಳ್ಳಾ
ಜೊತೆಯಾಗಿ ನಾವು ಬಂದರೆ ಒಂದಾಗಿ ನಾವು ನಿಂತರೇ
ಎದುರಲ್ಲಿ ನಿಲ್ಲೋರು ಯಾರೂ

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, 
ದೂರ ಮಾಡಲು ಎಂದೂ ಆಗೊಲ್ಲಾ 

ಏನೊಂದು ಕೆಳದು ನಮಗೆ, ಬೇರೇನೂ ಬೇಡವು ನಮಗೇ
ಈ ಸ್ನೇಹ ನಮಗೆ ದೇವರು,ಇನ್ನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ, 
ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವಾ,
ಒಂದಾಗಿ ಮುಂದೆ ಹೋಗುವಾ
ಹಾಯಾಗಿ ಜೊತೆಯಾಗಿ ನಾವು

ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, 
ದೂರ ಮಾಡಲು ಎಂದೂ ಆಗೊಲ್ಲಾ

********************************************************************************

ಅಂಕು ಡೊಂಕು


ಸಾಹಿತ್ಯ :ವಿ. ಮನೋಹರ  
ಗಾಯನ : ಎಸ್.ಪಿ.ಬಿ & ಚಿತ್ರಾ  


ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ....
ಓ..ಓ ಓ ಓ ಆ..ಅ ಅ ಅ 
ಓ..ಓ ಓ ಓ ಆ.....ಆ..ಆ....
ಲಾಯಿಲಕ್ಕುದೆ.... ಲಾಯಿಲಕ್ಕುದೆ.... 
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಅಂಕು ಡೊಂಕು ದಾರಿಬೇಡ, 
ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, 
ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be happy

ಅಂಕುಡೊಂಕು ದಾರಿಬೇಡ, 
ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, 
ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ಲಾಯಿಲಕ್ಕುದೆ.... ಲಾಯಿಲಕ್ಕುದೆ.. 
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಆಟಕುಂಟು ಲೆಕ್ಕಕಿಲ್ಲ ಅನ್ನೋ ಬಾಳು 
ಬಾಳೆ ಅಲ್ಲ ನಾಣ್ಣುಡಿ ಚಂದನ
ಬೆಂಕಿಯಲ್ಲಿ ಸರಸ ಬೇಡ, ಸ್ನೇಹದಲ್ಲಿ 
ವಿರಸ ಬೇಡ ಜಾನ್ನುಡಿ ಚಂದನ
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು
ಇರುಳು ಕಂಡ ಬಾವಿಗೆ, ಹಗಲು ಬೀಳಬಾರದು 
ಗಾದೆ ಮಾತೆ ಸೊಗಸು 
ಓ....ಓ ಓ ಓ ಆ...ಅ ಅ ಅ  
ಓ...ಓ ಓ ಓ ಆ.....ಆ..ಆ....

ಅಂಕುಡೊಂಕು ದಾರಿಬೇಡ, 
ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, 
ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be happy

ನಿ ಸ ಸಾ ಸ ಸ ಸ ನಿ ರಿ ರೀ ರಿ ರಿ ರಿ ಸಾ 
ನಿ ನಿ ಪ ಪ ಮ ಮ ಪ ಗ ಗ ಮ ದಾ ದ ದ ನಿ ದ ಪಾ ಮ ಗ ಗ..
ಲಾಯಿಲಕ್ಕುದೆ.... ಲಾಯಿಲಕ್ಕುದೆ.... 
ಲಾಯಿಲಕ್ಕುದೆ.... ಲಾಯಿಲಕ್ಕುದೆ....

ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು 
ಆಗಲಿಲ್ಲ ಕೂಸೇ ಗಾದೆಯು ಚಂದನ
ಉಂಡು ಹೋದ ಕೊಂಡು ಹೋದ 
ಮೊಂಡರಲ್ಲಿ ವ್ಯರ್ಥವಾದ ಬೋಧೆಯು ಚಂದನ
ಕಾಗೆಕೆ ಕಾಡಿಗೆ ಕೂಡಿಗೇಕೆ ಬಾಡಿಗೆ 
ಕಾಗೆಕೆ ಕಾಡಿಗೆ ಕೂಡಿಗೇಕೆ ಬಾಡಿಗೆ ಗಾದೆ ಮಾತೆ ಸೊಗಸು 
ಓ..ಓ ಓ ಓ ಆ....ಅ ಅ ಅ ಓ...ಓ ಓ ಓ ಆ.....ಆ..ಆ....

ಅಂಕುಡೊಂಕು ದಾರಿಬೇಡ, 
ಸುಂಕವಿಲ್ಲದೂರೆಬೇಡ, ಅಂಕೆ ಇಲ್ದೆ ಶಂಕೆ ಬೇಡ
ಸಂತೆಯಲ್ಲಿ ಚಿಂತೆ ಬೇಡ, 
ಅಂತೆ ಕಂತೆ ಮಾತೆ ಬೇಡ, ಕೊಂಕು ಬಿಂಕವೆಲ್ಲ ಬೇಡ
ದುಃಖಕ್ಕೆ ಹೇಳು ಊಫೀ, Everday be happy
ದುಃಖಕ್ಕೆ ಹೇಳು ಊಫೀ, Everday be happy
ಲಾಯಿಲಕ್ಕುದೆ.... ಲಾಯಿಲಕ್ಕುದೆ....  
ಲಾಯಿಲಕ್ಕುದೆ.... ಲಾಯಿಲಕ್ಕುದೆ... 


*********************************************************************************

No comments:

Post a Comment