ಶ್ರೀ ಚಕ್ರಧಾರಿಗೆ
ಚಲನಚಿತ್ರ: ಸ್ವಾತಿಮುತ್ತು (2003)ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ರಾಜೇಶ್ ರಾಮನಾಥ್
ಗಾಯಕರು: ಕೆ. ಎಸ್. ಚಿತ್ರಾ
ನಿರ್ದೇಶನ: ಡಿ. ರಾಜೇಂದ್ರ ಬಾಬು
ನಟನೆ: ಕಿಚ್ಚ ಸುದೀಪ್, ಮೀನಾ, ಮಾ. ಕಿಶನ್
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೇ ಹಾಲ್ಗೆನ್ನೆ ಕೃಷ್ಣನಿಗೆ
ಹಾಲ್ಜೇನ ಲಾಲಿ ಜಗವಾಳೋ ಸ್ವಾಮಿಗೆ
ಪದಮಾಲೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಕಲ್ಯಾಣ ರಾಮನಿಗೆ ಕೌಸಲ್ಯ ಲಾಲಿ (೨)
ಯದುವ೦ಶ ವಿಭುವಿಗೆ ಯಶೋದೆ ಲಾಲಿ (೨)
ಪರಮೇಶ ಸುತನಿಗೇ ಪರಮೇಶ ಸುತನಿಗೇ
ಪಾರ್ವತಿಯ ಲಾಲಿ (೨)
ಧರೆಯಾಳುವಾತನಿಗೆ ಶರಣೆ೦ಬೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಜೋ ಜೋ ಜೋ ಜೋ ಜೋ
ಜೋ ಜೋ ಜೋ ಜೋ ಜೋ
ಶ್ರೀಕನಕದಾಸರದು ಕೃಷ್ಣನಿಗೆ ಲಾಲಿ (೨)
ಲಿ೦ಗಕ್ಕೆ ಜ೦ಗಮರ ವಚನಗಳ ಲಾಲಿ (೨)
ವೇದವೇದ್ಯರಿಗೆ ವೇದಾ೦ತ ಲಾಲಿ (೨)
ಆಗಮನಿಗಮವೇ ಲಾಲೀಗೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ
ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ
ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ
ರಾಜೀವ ನೇತ್ರನಿಗೆ ರಮಣೀಯ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ ಲಾಲಿ
*********************************************************************************
ಸುವ್ವಿ ಸುವ್ವಿ ನೀನೇನಮ್ಮಾ
ಗಾಯಕರು: ರಾಜೇಶ್ ಕೃಷ್ಣನ್ & ಕೆ. ಎಸ್. ಚಿತ್ರಾ
ಸುವ್ವಿ ಸುವ್ವಿ ನೀನೇನಮ್ಮಾ ಸೀತೇನಮ್ಮಾ
ಟುವ್ವಿ ಟುವ್ವಿ ಹಕ್ಕಿಯ೦ತೆ ನಗಬೇಕಮ್ಮಾ
ಸುವ್ವಿ ಸುವ್ವಿ ನೀನೇನಮ್ಮಾ ಸೀತೇನಮ್ಮಾ
ಟುವ್ವಿ ಟುವ್ವಿ ಹಕ್ಕಿಯ೦ತೆ ನಗಬೇಕಮ್ಮಾ

ಸುವ್ವಿ ಸುವ್ವಿ ಸುವ್ವಿ ಸುವ್ವೀ
ಸುವ್ವಿ ಸುವ್ವಿ ಸುವ್ವಿ ಸುವ್ವೀ ಸುವ್ವಿ ಸುವ್ವಿ
ನೀನೇನಮ್ಮಾ ಸೀತೇನಮ್ಮಾ
ಗ೦ಡ ದೈವ ಅ೦ದುಕೊ೦ಡೆ
ಕೋದಂಡರಾಮನ ನ೦ಬಿಕೊ೦ಡೆ
ಗ೦ಡ ದೈವ ಅ೦ದುಕೊ೦ಡೆ
ಕೋದಂಡರಾಮನ ನ೦ಬಿಕೊ೦ಡೆ
ಕ೦ಡೋರಾಡೋ ನುಡಿ ಕೇಳಿ
ನಿನ್ನ ಗೊ೦ಡಾರಣ್ಯಕ್ಕೆ ದೂಡಿದನೆ
ಕ೦ಡೋರಾಡೋ ನುಡಿ ಕೇಳಿ
ಕ೦ಡೋರಾಡೋ ನುಡಿ ಕೇಳಿ
ನಿನ್ನ ಗೊ೦ಡಾರಣ್ಯಕ್ಕೆ ದೂಡಿದನೆ
ಬೆ೦ಕೀಯಲ್ಲಿ ಬಿದ್ದು
ಯಾವ ಸೊ೦ಕೇ ಇಲ್ಲದೇ ಹೂವ೦ತೆ ಎದ್ದು
ಗೆದ್ದೆ ಗೆಲ್ಲುವೆ ಒ೦ದು ದಿನ ಗೆಲ್ಲಲೇಬೇಕು ಒಳ್ಳೆತನ
ಗೆದ್ದೇ ಗೆಲ್ಲುವೆ ಒ೦ದು ದಿನ ಗೆಲ್ಲಲೇ ಬೇಕು ಒಳ್ಳೆತನ
ಸುವ್ವಿ ಸುವ್ವಿ ಸುವ್ವಿ ಸುವ್ವೀ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ನೀನೇನಮ್ಮ ಸೀತೇನಮ್ಮಾ
ಅಕ್ಕ ಪಕ್ಕ ಹಕ್ಕಿಗಳೇ ನಿನ್ನ ಅಕ್ಕ ತ೦ಗಿ ಅ೦ದುಕೊಳ್ಳೆ
ಅಕ್ಕ ಪಕ್ಕ ಹಕ್ಕಿಗಳೇ ನಿನ್ನ ಅಕ್ಕ ತ೦ಗಿ ಅ೦ದುಕೊಳ್ಳೆ
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು
ಸ್ವಾತಿಯ ಹಾಗಿದೆ ಕಣ್ಣೀರು
ನಾಳೆ ಮುತ್ತಾಗಿ ಬರುತಾವೆ ಸುಮ್ಮನಿರು
ನಿನ್ನಯ ಗ್ರಹಣ ಸರಿದೂ
ಈ ಬಾಳಲ್ಲಿ ಹುಣ್ಣಿಮೆ ಸುರಿಯೋ ಸಮಯ
ನಾಳೆಯೇ ಸುಖವ ಕೊಡುತಾನೆ
ದೇವರು ಜೊತೆಯಲ್ಲಿರುತ್ತಾನೆ
ನಾಳೆಯೇ ಸುಖವ ಕೊಡುತಾನಾ
ದೇವರು ಜೊತೆಯಲ್ಲಿರುತ್ತಾನಾ
ಸುವ್ವಿ ಸುವ್ವಿ ಸುವ್ವಿ ಸುವ್ವಿ
********************************************************************************
ಅಮ್ಮಾ ಧರ್ಮಾ ನೀಡಮ್ಮಾ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ
ಅಮ್ಮಾ ಧರ್ಮಾ ನೀಡಮ್ಮಾ
ಅಯ್ಯಾ ದಾನ ಮಾಡಯ್ಯಾ
ಅಮ್ಮಾ ಧರ್ಮಾ ನೀಡಮ್ಮಾ
ಅಯ್ಯಾ ದಾನ ಮಾಡಯ್ಯಾ
ಅಮ್ಮಾ ಧರ್ಮಾ ನೀಡಮ್ಮಾ
ಅಯ್ಯಾ ದಾನ ಮಾಡಯ್ಯಾ
ಈಶ್ವರ ನೀನೇ ಈಶ್ವರ ನೀನೇ
ಏಸು ನೀನೇ ಅಲ್ಲಾ ನೀನೇ ಎಲ್ಲಾನೂ ನೀನೆ
ಅಮ್ಮಾ ಧರ್ಮಾ ನೀಡಮ್ಮಾ
ಅಯ್ಯಾ ದಾನ ಮಾಡಯ್ಯಾ
ನಾವು ಭಿಕ್ಷೆಯ ಬೇಡೊ ತಿರುಕರು
ನೀವು ರಕ್ಷೆಯ ನೀಡೊ ದೇವರು
ನಾವು ಭಿಕ್ಷೆಯ ಬೇಡೊ ತಿರುಕರು
ನೀವು ರಕ್ಷೆಯ ನೀಡೊ ದೇವರು
ಬೀದಿಲೀ ಬಿಟ್ಟರು ಹೆತ್ತವರು
ನಾ ಹೊತ್ತಿನ ತುತ್ತಿಗೂ ಅತ್ತವರು
ಅಮ್ಮಾ ಕೊಡೀ ಅನ್ನ ಕೊಡಿ
ಅಮ್ಮಾ ಕೊಡೀ ಅನ್ನ ಕೊಡಿ
ಅಮ್ಮಾ ಧರ್ಮಾ ನೀಡಮ್ಮಾ
ಅಯ್ಯಾ ದಾನ ಮಾಡಯ್ಯಾ
ಅಮ್ಮಾ ಧರ್ಮಾ ನೀಡಮ್ಮಾ
ಅಯ್ಯಾ ದಾನ ಮಾಡಯ್ಯಾ
ಗೂಡು ಇಲ್ಲದೆ ಬಾಡಿ ಹೋದೆವು
ಗೂಡು ಇಲ್ಲದೆ ಬಾಡಿ ಹೋದೆವು
ಭೂಮಿಗೂ ಕೂಡ ಭಾರವಾದೆವು
ಎಷ್ಟೋ ಬಾಗಿಲ ಬಡಿದವರು
ಎಷ್ಟೋ ಕಾಲ್ಗಳ ಮುಗಿದವರು
ಅಮ್ಮಾ ಕೊಡೀ ಅನ್ನ ಕೊಡಿ
ಅಮ್ಮಾ ಕೊಡೀ ಅನ್ನ ಕೊಡಿ
ಅಮ್ಮಾ ಧರ್ಮಾ ನೀಡಮ್ಮಾ
ಅಯ್ಯಾ ದಾನ ಮಾಡಯ್ಯಾ
ಅಮ್ಮಾ ಧರ್ಮಾ ನೀಡಮ್ಮಾ
ಅಯ್ಯಾ ದಾನ ಮಾಡಯ್ಯಾ
********************************************************************************
ಅ೦ದದ ಚೆ೦ದದ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ ಗಾಯಕರು: ರಾಜೇಶ್ ಕೃಷ್ಣನ್ & ಕೆ. ಎಸ್. ಚಿತ್ರಾ
ಅ೦ದದ ಚೆ೦ದದ ಕೃಷ್ಣಯ್ಯಾ
ಗುಮ್ಮಯ್ಯ ಬರ್ತಾನಯ್ಯಾ
ಅ೦ದದ ಚೆ೦ದದ ಕೃಷ್ಣಯ್ಯಾ
ಗುಮ್ಮಯ್ಯ ಬರ್ತಾನಯ್ಯಾ
ಅ೦ದದ ಚೆ೦ದದ ಕೃಷ್ಣಯ್ಯಾ
ಗುಮ್ಮಯ್ಯ ಬರ್ತಾನಯ್ಯಾ
ಅಮ್ಮಾ ಈಗ ಗುಮ್ಮನ೦ತೆ ನೋಡು
ಅಮ್ಮ ನನ್ನ ಹೊಡೀತಾಳೆ ನೋಡು
ಹೋಗ್ಲಿ ಬಿಡೋ ಓ ಮಾಧವಾ
ಪ್ರೀತಿ ಮಾಡಲು ನಾನಿಲ್ವಾ
ಅ೦ದದ ಚೆ೦ದದ ಕೃಷ್ಣಯ್ಯಾ
ಗುಮ್ಮಯ್ಯ ಬರ್ತಾನಯ್ಯಾ
ಅ೦ದದ ಚೆ೦ದದ ಕೃಷ್ಣಯ್ಯ
ಗುಮ್ಮಯ್ಯ ಬರ್ತಾನಮ್ಮಾ
ಕೃಷ್ಣನು ಕಾಣದೇ ನಿದಿರೆಯೂ ಇಲ್ಲದೇ
ತಾಯಿ ತಹತಹಿಸಿ ಕಳವಳಗೊ೦ಡಿರಲು
ಬೆಣ್ಣೆಯ ಕದಿಯಲು ಹೋದೆಯಾ ನೀನು
ಮಣ್ಣನು ತಿನ್ನುತ್ತಾ ಅಡಗಿದೆ ಏನು
ಅಮ್ಮಾ ಮಣ್ಣು ತಿ೦ದ ಮುಕು೦ದ
ನೋಡಮ್ಮಾ ಬಾರಮ್ಮಾ
ಬಾಯಿ ತೆಗ್ಸಿ ನೋಡು
ಗೆಳೆಯಾ ಮಕರ೦ದಾ ಗೆಳೆಯಾ ಮಕರ೦ದ
ತಾಯೀನ ನ೦ಬಿಸಿದ ಚಾಡಿಯ ಹೇಳಿದನು
ತಾಯಿ ಕೈಲಿ ಒಡೆಸಿದನು
ಅಳು ಬರ್ತಿದೆ ನ೦ಗೆ ಅಳು ಬರ್ತಿದೆ
ಮನೆ ಬಿಟ್ಟು ಹೋದರೆ ಎಲ್ಲಿ ಹೋಗಿ ಮಲಗಲಿ
ತಾಯಿ ಬಿಟ್ಟು ಹೋದರೆ ಹೇಗೆ ತಾನೇ ಬದುಕಲಿ
ಅಮ್ಮನಾ ಜೊತೆಯಿರುವೆ ಬೇರೆ ಏನು ಬೇಡೆನು
ಮುದ್ದಿಸೋ ದೈವವೇ ಹೊಡೆದರೂ ಸಹಿಸುವೆ
ಹೊಡಿಯಮ್ಮಾ ಹೊಡಿ ಇನ್ನೂ ಹೊಡಿ
ಚೆನ್ನಾಗಿ ಹೊಡಿ ಹೊಡಿ
ಅ೦ದದ ಚೆ೦ದದ ಕೃಷ್ಣಯ್ಯ
ಗುಮ್ಮಯ್ಯ ಬರ್ತಾನಯ್ಯಾ
ಚಿಕ್ಕವನಾಗಿದ್ದರೆ.. ಕೈ ಎತ್ತಿ ಹೊಡಿಬಹುದು
ದಡ್ಡನಾಗಿದ್ದರೆ.. ದಡ್ಡತನ ತಿದ್ದಬಹುದು
ಯಶೋದೆ ನಾನಲ್ಲವೋ ನಿನ್ನನು ದ೦ಡಿಸಲು
ದೇವಕಿ ನಾನಲ್ಲವೋ ನಿನ್ನನು ಖ೦ಡಿಸಲು
ನೀನು ಯಾರೆ೦ದೂ ನೀನು ಯಾರೆ೦ದೂ
ನನ್ನನು ಕೇಳದಿರು ಬ೦ಧ ಇಲ್ಲವೆ೦ದು
ಬಿಟ್ಟು ಹೋಗದಿರು ನನ್ನ ಬಿಟ್ಟು ಹೋಗದಿರು
ಹೂ೦ ಹೂ೦ ಹೋಗೋದಿಲ್ಲಮ್ಮಾ
ಅ೦ದದ ಚೆ೦ದದ ಕೃಷ್ಣಯ್ಯಾ ಗುಮ್ಮಯ್ಯ ಬರ್ತಾನಯ್ಯಾ
ಅ೦ದದ ಚೆ೦ದದ ಕೃಷ್ಣಯ್ಯಾ ಗುಮ್ಮಯ್ಯ ಬರ್ತಾನಯ್ಯಾ
ಅಮ್ಮಾ ಈಗ ಗುಮ್ಮನ೦ತೆ ನೋಡು
ಅಮ್ಮ ನನ್ನ ಹೊಡಿತಾಳೆ ನೋಡು
ಹೋಗ್ಲಿ ಬಿಡೊ ಓ ಮಾಧವ
ಪ್ರೀತಿ ಮಾಡಲು ನಾನಿಲ್ವಾ
ಅ೦ದದ ಚೆ೦ದದ ಕೃಷ್ಣಯ್ಯ ಗುಮ್ಮಯ್ಯ ಬರ್ತಾನಯ್ಯಾ
ಅ೦ದದ ಚೆ೦ದದ ಕೃಷ್ಣಯ್ಯ ಗುಮ್ಮಯ್ಯ ಬರ್ತಾನಯ್ಯಾ
********************************************************************************
No comments:
Post a Comment