Sunday, September 9, 2018

ಬೆಳ್ಳಿ ಮೋಡ (1967)



ಬೆಳ್ಳಿ ಮೋಡದ ಅಂಚಿನಿಂದ


ಚಲನ ಚಿತ್ರ: ಬೆಳ್ಳಿ ಮೋಡ (1967)

ಸಾಹಿತ್ಯ: ಆರ್. ಎನ್. ಜಯಗೋಪಾಲ್ 
ಸಂಗೀತ: ವಿಜಯ ಭಾಸ್ಕರ್ 
ಗಾಯನ: ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ 
ನಿರ್ದೇಶನ: ಪುಟ್ಟಣ್ಣ ಕಣಗಾಲ್ 
ನಟನೆ: ಕಲ್ಪನಾ, ಕಲ್ಯಾಣ್ ಕುಮಾರ್, ಪಂಡರಿ ಭಾಯಿ 



ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ,
ಮೂಡಿಬಂದ ಆಶಾಕಿರಣ
ಗಂಡು : ಬೆಳ್ಳಿ ಮೋಡದ ಆಚೆಯಿಂದ,
ಓಡಿಬಂದ ಮಿನುಗುತಾರೆ
ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ,
ಮೂಡಿಬಂದ ಆಶಾಕಿರಣ
ಗಂಡು : ಬೆಳ್ಳಿ ಮೋಡದ ಆಚೆಯಿಂದ,
ಓಡಿಬಂದ ಮಿನುಗುತಾರೆ

ಗಂಡು : ವಿಕಸಿತ ಸುಮವೋ, ವನದೇವತೆಯೋ,
ಮನಮಂದಿರದ ಅದಿದೇವತೆಯೋ
ವಿಕಸಿತ ಸುಮವೋ, ವನದೇವತೆಯೋ,
ಮನಮಂದಿರದ ಅದಿದೇವತೆಯೋ
ಹೆಣ್ಣು : ದೇವರು ನೀವು ದಾಸಿಯು ನಾನು
ದೇವರು ನೀವು ದಾಸಿಯು ನಾನು,
ತನುಮನ ನಿಮದೆ ಇನ್ನೇನು
ಗಂಡು : ಬೆಳ್ಳಿ ಮೋಡದ ಆಚೆಯಿಂದ,
ಓಡಿಬಂದ ಮಿನುಗುತಾರೆ

ಗಂಡು : ಅಂತರಂಗ ಭಾವತರಂಗ,
ಕಲಕಲ ಹರಿವ ಪ್ರೇಮದ ಗಂಗ
ಅಂತರಂಗ ಭಾವತರಂಗ,
ಕಲಕಲ ಹರಿವ ಪ್ರೇಮದ ಗಂಗ
ಹೆಣ್ಣು : ಪ್ರೇಮದ ಗಂಗ ಜಲದಲಿ ಮಿಂದು
ಪ್ರೇಮದ ಗಂಗ ಜಲದಲಿ ಮಿಂದು,
ಪಾವನಳಾದೆ ನಾನಿಂದು

ಗಂಡು : ಬೆಳ್ಳಿ ಮೋಡದ ಆಚೆಯಿಂದ,
ಓಡಿಬಂದ ಮಿನುಗುತಾರೆ

ಹೆಣ್ಣು : ಪ್ರಣಯದ ಕಾವ್ಯ ರಚಿಸಿದೆ ನೀನು,
ಪುಟಪುಟವೆಲ್ಲ ತುಂಬಿದೆ ಜೇನು
ಪ್ರಣಯದ ಕಾವ್ಯ ರಚಿಸಿದೆ ನೀನು,
ಪುಟಪುಟವೆಲ್ಲ ತುಂಬಿದೆ ಜೇನು
ಗಂಡು : ಜೇನಿನ ದಾರೆ ಸವಿಯುವ ಬಾರೆ
ಜೇನಿನ ದಾರೆ ಸವಿಯುವ ಬಾರೆ,
ನೀನೇ ನನ್ನ ಮಿನುಗುತಾರೆ

ಹೆಣ್ಣು : ಬೆಳ್ಳಿ ಮೋಡದ ಅಂಚಿನಿಂದ,
ಮೂಡಿಬಂದ ಆಶಾಕಿರಣ
ಗಂಡು: ಬೆಳ್ಳಿ ಮೋಡದ ಅಂಚಿನಿಂದ,
ಮೂಡಿಬಂದ ಆಶಾಕಿರಣ
ಗಂಡು : ಬೆಳ್ಳಿ ಮೋಡದ ಆಚೆಯಿಂದ  ಓಡಿಬಂದ ಮಿನುಗುತಾರೆ
ಇಬ್ಬರು : ಹೂಂ...ಹೂಂ..ಹೂಂ..ಹೂಂ..ಹೂಂ..ಹೂಂ..ಹೂಂ..

********************************************************************************

ಮೂಡಲ ಮನೆಯ..

ಕವಿ:- ದ. ರಾ. ಬೇಂದ್ರೆ
ಗಾಯನ: ಎಸ್. ಜಾನಕಿ 

ಮೂಡಲ ಮನೆಯ (ಆಆಅ) ಮುತ್ತಿನ ನೀರಿನ... ।। (ಆಆಅ)
ಎರಕವಾ ಹೊಯ್ದ... ನುಣ್ಣನೆ ಎರಕವಾ ಹೊಯ್ದ
ಬಾಗಿಲು ತೆರೆದು ಬೆಳಕು ಹರಿದು ... ।। (ಆಆಅ)
ಜಗವೆಲ್ಲಾ ತೊಯ್ದ ದೇವನು  ಜಗವೆಲ್ಲಾ ತೊಯ್ದ ... ।। ಪ ।।

ಮೂಡಲ ಮನೆಯ (ಆಆಅ) ಮುತ್ತಿನ ನೀರಿನ... ।। (ಆಆಅ)
ಎರಕವಾ ಹೊಯ್ದ... ನುಣ್ಣನೆ ಎರಕವಾ ಹೊಯ್ದ

ಎಳೆಗಳ ಮೇಲೆ ಹೂಗಳ ಒಳಗೆ ಅಮೃತದಾ ಬಿಂದು ... ।।
ಕಂಡವು ಅಮೃತದಾ ಬಿಂದು
ಯಾರಿರಿಸಿದರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು ಈಗ ಇಲ್ಲಿಗೆ ಇದ ತಂದು    

ಮೂಡಲ ಮನೆಯ (ಆಆಅ) ಮುತ್ತಿನ ನೀರಿನ... ।। (ಆಆಅ)
ಎರಕವಾ ಹೊಯ್ದ... ನುಣ್ಣನೆ ಎರಕವಾ ಹೊಯ್ದ..       ।। ೧ ।।

ಗಿಡ ಗಂಟೆಗಳ ಕೊರಳಗಳಿಂದ ಹಕ್ಕಿಗಳ ಹಾಡು ... ।।
ಹೊರಟಿತು ಹಕ್ಕಿಗಳ ಹಾಡು
ಗಂಧರ್ವರ ಸೀಮೆಯಾಯಿತು
ಕಾಡಿನ ನಾಡು ಕ್ಷಣದೊಳು ಕಾಡಿನ ನಾಡು

ಮೂಡಲ ಮನೆಯ (ಆಆಅ) ಮುತ್ತಿನ ನೀರಿನ... ।। (ಆಆಅ)
ಎರಕವಾ ಹೊಯ್ದ... ನುಣ್ಣನೆ ಎರಕವಾ ಹೊಯ್ದ..       ।। ೨।।

********************************************************************************

ಇದೇ ನನ್ನ ಉತ್ತರ

ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಹಾಡಿದವರು: ಪಿ.ಬಿ.ಎಸ್.  


ಇದೇ ನನ್ನ ಉತ್ತರ.. ಇದೇ ನನ್ನ ಉತ್ತರ
ನಿನ್ನ ಒಗಟಿಗೆ ಉತ್ತರ ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ...(ಹೂಂ ಹೂಂ) ಇದೇ ನನ್ನ ಉತ್ತರ
ಬಳಸಿ ನಿಂತ ಬಳ್ಳಿಗೆ ಮರವು ಕೊಡುವಾ ಉತ್ತರ
ಬಳಸಿ ನಿಂತ ಬಳ್ಳಿಗೆ ಮರವು ಕೊಡುವಾ ಉತ್ತರ
ಅರಳಿ ನಿಂತ ಹೂವಿಗೆ ದುಂಬಿ ಕೊಡುವಾ ಉತ್ತರ (ಹೂಂ ಹೂಂ)
ನಿನ್ನ ಒಗಟಿಗೆ ಉತ್ತರ ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ....  ಇದೇ ನನ್ನ ಉತ್ತರ
ಕುಲಕಿ ನಡೆವ ಹೆಜ್ಜೆಗೆ ಗೆಜ್ಜೆ ಕೊಡುವ ಉತ್ತರ
ಕುಲಕಿ ನಡೆವ ಹೆಜ್ಜೆಗೆ ಗೆಜ್ಜೆ ಕೊಡುವ ಉತ್ತರ
ತನ್ನ ಮಿಡಿವ ಬೆರಳಿಗೆ ವೀಣೆ ಕೊಡುವ ಉತ್ತರ (ಅಹ್ಹಹ್ಹಹ್ಹಹ್ಹ)
ನಿನ್ನ ಒಗಟಿಗೆ ಉತ್ತರ ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ ... ಇದೇ ನನ್ನ ಉತ್ತರ
ಹುಡುಕಿ ಬಂದ  ಜೀವನದಿಗೆ ಕಡಲು ಕೊಡುವ ಉತ್ತರ
ಹುಡುಕಿ ಬಂದ  ಜೀವನದಿಗೆ ಕಡಲು ಕೊಡುವ ಉತ್ತರ
ಮನವ ಸೆಳೆದಾ ನಲ್ಲೆಗೆ ಇನಿಯ ಕೊಡುವ ಉತ್ತರ (ಆಂ.. )
ನಿನ್ನ ಒಗಟಿಗೆ ಉತ್ತರ ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ ... ಇದೇ ನನ್ನ ಉತ್ತರ
ಇದೇ ನನ್ನ ಉತ್ತರ ನಿನ್ನ ಒಗಟಿಗೆ ಉತ್ತರ ಕೊಡುವೇ ಬಾರೇ ಹತ್ತಿರ
ಕೊಡುವೇ ಬಾರೇ ಹತ್ತಿರ ... ಇದೇ ನನ್ನ ಉತ್ತರ

********************************************************************************

ಮುದ್ದಿನ ಗಿಣಿಯೇ ಬಾರೋ

ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಹಾಡಿದವರು: ಪಿ.ಸುಶೀಲಾ 


ಮುದ್ದಿನ ಗಿಣಿಯೇ ಬಾರೋ ಮುತ್ತನು ತರುವೇ ಬಾರೋ
ಹೆಗಲನೇರಿ ಆಡಿ ಕುಣಿವ ಕೂಸು ಮರಿ ಯಾರೋ ಈ ತುಂಟ ಮರಿ ಯಾರೋ
ಮುದ್ದಿನ ಗಿಣಿಯೇ ಬಾರೋ ಮುತ್ತನು ತರುವೇ ಬಾರೋ
ಹೆಗಲನೇರಿ ಆಡಿ ಕುಣಿವ ಕೂಸು ಮರಿ ಯಾರೋ ಈ ತುಂಟ ಮರಿ ಯಾರೋ
ಆಆಆ...ಆಆಆ.... ಆಆಆ... ಲ್ಲಲ್ಲಲ್ಲ
ಅಕ್ಕಿಯ ಕೊಟ್ಟು ಕೊಳ್ಳಲಿಲ್ಲ ಉಪ್ಪನು ಕೊಟ್ಟು ಕೊಳ್ಳಲಿಲ್ಲ
ಅಕ್ಕಿಯ ಕೊಟ್ಟು ಕೊಳ್ಳಲಿಲ್ಲ ನಿನ್ನ  ಉಪ್ಪನು ಕೊಟ್ಟು ಕೊಳ್ಳಲಿಲ್ಲ
ಬೆಳ್ಳಿಯ ಮೋಡದ ಚಿನ್ನದ ರಾಶಿ ಸುರಿದುಕೊಳ್ಳಲೇ ಇಲ್ಲ
ನಿನಗಾಗಿ ನಿನ್ನ ತಾಯಿ ತನ್ನ ಜೀವ ತೆತ್ತಳಲ್ಲ
ಇದಕ್ಕಿಂತ ಬೆಲೆಯೇ ಇಲ್ಲ ತಾಯಿಗಿಂತ ಮಿಗಿಲಾದ ದೇವರಿಲ್ಲಾ
ತಾಯಿಗಿಂತ ಮಿಗಿಲಾದ ದೇವರಿಲ್ಲಾ
ಮುದ್ದಿನ ಗಿಣಿಯೇ ಬಾರೋ ಮುತ್ತನು ತರುವೇ ಬಾರೋ
ಹೆಗಲನೇರಿ ಆಡಿ ಕುಣಿವ ಕೂಸು ಮರಿ ಯಾರೋ ಈ ತುಂಟ ಮರಿ ಯಾರೋ
ಆಆಆ...ಆಆಆ.... ಆಆಆ... ಲ್ಲಲ್ಲಲ್ಲ
ಊರಿಂದ ಭಾವ ಬರ್ತಾರೆ ಏರೋಪ್ಲೇನು ತರ್ತಾರೆ
ಊರಿಂದ ಭಾವ ಬರ್ತಾರೆ ಏರೋಪ್ಲೇನು ತರ್ತಾರೆ
ಓಡೋಡಿ ಬಂದು ಹತ್ತಿರ ನಿಂದು ಕೆನ್ನೆಗೆ ಮುತ್ತು ಕೊಡ್ತಾರೆ...
ಕೆನ್ನೆಗೆ ಮುತ್ತು ಕೊಡ್ತಾರೆ...( ಮುತ್ತು... ಯಾರಿಗಮ್ಮಣ್ಣಿ..  ಗಿರಿಗೆ ಅಲ್ಲ ನಿನಗೇ )
ನಿನ ಆಟಪಾಠ ನೋಡಿ ನಿನ್ನೊಡನೆ ಕೂಡಿ ಆಡಿ
ನಿನಗೊಂದು ಹಾಡ ಹಾಡಿ ಗಿರಿಯಂಥ ಕೂಸಿಲ್ಲ ಎನ್ನುತ್ತಾರೆ
ನಮ್ಮ ಗಿರಿಯಂಥ ಕೂಸಿಲ್ಲ ಎನ್ನುತ್ತಾರೆ
ಮುದ್ದಿನ ಗಿಣಿಯೇ ಬಾರೋ ಮುತ್ತನು ತರುವೇ ಬಾರೋ
ಹೆಗಲನೇರಿ ಆಡಿ ಕುಣಿವ ಕೂಸು ಮರಿ ಯಾರೋ ಈ ತುಂಟ ಮರಿ ಯಾರೋ
ಆಆಆ...ಆಆಆ.... ಆಆಆ... ಉಂ.. ಉಂ.. ಉಂ.. ಉಂ.. ಉಂ.. ಉಂ..
********************************************************************************

ಒಡೆಯಿತು ಒಲವಿನ ಕನ್ನಡಿ

ಸಾಹಿತ್ಯ: ಆರ್.ಎನ್.ಜಯಗೋಪಾಲ್ 
ಹಾಡಿದವರು: ಪಿ.ಬಿ.ಶ್ರೀನಿವಾಸ 


ಒಡೆಯಿತು ಒಲವಿನ ಕನ್ನಡಿ ಬರೆಯಿತು ಶೋಕದ ಮುನ್ನಡಿ
ಒಡೆಯಿತು ಒಲವಿನ ಕನ್ನಡಿ ಬರೆಯಿತು ಶೋಕದ ಮುನ್ನಡಿ
ಒಡೆಯಿತು ಒಲವಿನ ಕನ್ನಡಿ
ಕಾಮನ ಬಿಲ್ಲನು ಹಿಡಿಯಲು ಹೋದೆ
ನಿಜವನು ತಿಳಿಯದೆ ವಂಚಿತಳಾದೆ
ಹಾಲಾಹಲವ ಹಾಲೆಂದು ತಿಳಿದೇ
ಹಗಲುಗನಸಿಗೆ ನೀ ಮರುಳಾದೆ
ಒಡೆಯಿತು ಒಲವಿನ ಕನ್ನಡಿ
ಬೆಳ್ಳಿಯ ಮೋಡದ ಮಿನುಗುತಾರೆ
ನಿನ್ನಯ ಪ್ರೇಮವ ಅರಿತವರಾರೆ
ರಾಮನ ಜಾನಕಿ ಕೃಷ್ಣನ ರಾಧೇ
ರಾಮನ ಜಾನಕಿ ಕೃಷ್ಣನ ರಾಧೇ
ಆಗಲು ಬಯಸಿ ನಿರಾಶಳಾದೆ
ಒಡೆಯಿತು ಒಲವಿನ ಕನ್ನಡಿ ಬರೆಯಿತು ಶೋಕದ ಮುನ್ನಡಿ
ಒಡೆಯಿತು ಒಲವಿನ ಕನ್ನಡಿ
********************************************************************************

ಇದೀಗ ನೀ ದೂರಾದೇ

ಸಾಹಿತ್ಯ: ಆರ್.ಎನ್.ಜಯಗೋಪಾಲ್ 

ಹಾಡಿದವರು: ಪಿ.ಸುಶೀಲಾ, ಪಿ.ಬಿ.ಶ್ರೀನಿವಾಸ್ 


ಹೆಣ್ಣು : ಇದೀಗ ನೀ ದೂರಾದೇ.. ಇದೀಗ ನೀ ದೂರಾದೇ
          ಸುಹಾಸಿನಿ ಹೆಣ್ಣಾದೇ.. ನಡೆ ಮುಂದೇ ನಿನ್ನ ಸುಖ ಬೇರೆ ಮುಖ
          ನಡೆ ಮುಂದೇ ನಿನ್ನ ಸುಖ ಬೇರೆ ಮುಖ
ಗಂಡು : ಇದೀಗ ನೀ ದೂರಾದೇ.. ಇದೀಗ ನೀ ದೂರಾದೇ
          ಸುಹಾಸಿನಿ ಹೆಣ್ಣಾದೇ..
ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ
               ನಡೆ ಮುಂದೇ ನಿನ್ನ ಸುಖ ಬೇರೆ ಮುಖ  
ಹೆಣ್ಣು : ತವರಿನ ಋಣ ತೀರಿತಿಲ್ಲೇ  ಹರಿಯಿತು ಹೋಳೆ ಬಾಳಲಿ
          ಅರಳಿತು ಹೊಸಬಾಳ ಲೀಲೆ
ಗಂಡು : ಅರಿಶಿನ ಹಸಿ ಆರುವಲ್ಲಿ ಕಾದಿದೆ ಹೊಣೆ ಸಾಲು ಸಾಲೇ
            ಮಾವನ ಮನೆ ಕೀರ್ತಿ ಮಾಲೆ
ಇಬ್ಬರು : ಹಾಲು ಹೊಳೆ ಜೇನು ಮಳೆ ಸುಖ ಸಂಸಾರ ಸಂಭ್ರಮ
ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ
               ನಡೆ ಮುಂದೇ ನಿನ್ನ ಸುಖ ಬೇರೆ ಮುಖ  
ಹೆಣ್ಣು : ಓಓಓಓ... ಒಣ ಶಂಕೆ ಜೋಕ ಕಾಣದು ಕಡೆತನಕ
        ಒಣ ಶಂಕೆ ಜೋಕ ಕಾಣದು ಕಡೆತನಕ
       ತೋರೆ ನೀ ಒಳವೇದನೆ ಮರೆತೇ ಮನೆ ಸರಿ ಸುಮ್ಮನೇ
       ಮನೆಯ ಸುಖಿ ಕುಲ ಹಣತೆ ಕಾವಲತೆ
ಕೋರಸ್ : ನಡೆ ಮುಂದೇ ನಿನ್ನ ಸುಖ ಬೇರೆ ಮುಖ
               ನಡೆ ಮುಂದೇ ನಿನ್ನ ಸುಖ ಬೇರೆ ಮುಖ  
*********************************************************************************

No comments:

Post a Comment