Friday, September 7, 2018

ಚಂದು (2002)

ಅವಳ ಒಲವ ನಗೆ...

ಚಲನ ಚಿತ್ರ: ಚಂದು (2002)
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಸಂಗೀತ: ಗುರುಕಿರಣ್ 
ಗಾಯನ: ರಾಜೇಶ್ ಕೃಷ್ಣನ್ 
ನಿರ್ದೇಶನ: ಪಿ. ಎ. ಅರುಣ್ ಪ್ರಸಾದ್ 
ನಟನೆ: ಸುದೀಪ್, ಸೋನಿಯಾ ಅಗರವಾಲ್ 


ಅವಳ ಒಲವ ನಗೆ...
ಅವಳ ಮೊಗ ಸಿರಿಗೆ......
ಅಂದದ..ಬಿಂದಿಗೆ..
ಅವಳ ಒಲವ ನಗೆ.
ಅವಳ ಮೊಗ ಸಿರಿಗೆ.
ಅಂದದ ಬಿಂದಿಗೆ...

ಅವಳೊಂದು ಅಮೃತ ಬಿಂದು
ಬರಿ ಬಿಂಕಾನೆ ಅವಳ ಉಡುಗೆ....
ಅವಳ ಒಲವ ನಗೆ. ಅವಳ ಮೊಗ ಸಿರಿಗೆ.
ಅಂದದ ಬಿಂದಿಗೆ...

ಅದೇನೋ ಮಿಂಚು ಆ ಕಣ್ಣಲಿ

ಹೆಜ್ಜೆನ ಹಿಂಡು ಸರತಿಯಲಿ
ಓಡಾಡುತಾವೆ ಆ ತುಟಿಯಲಿ
ಆಸೆಗಳಿಗಾಸೆ ಹಾರಿಬಿಡುವ ಹಂಸೆ
ತನಗಾರು ಸಾಟಿ ಎಂದು ಎಣಿಸೋ ರತಿ.

ಅವಳ ಒಲವ ನಗೆ. ಅವಳ ಮೊಗ ಸಿರಿಗೆ.
ಅಂದದ ಬಿಂದಿಗೆ...
ಅವಳೊಂದು ಅಮೃತ ಬಿಂದು
ಬರಿ ಬಿಂಕಾನೆ ಅವಳ ಉಡುಗೆ..

ಹಾಡೋ ರಿಗಂತೂ ಅವಳೇ ಧನಿ
ಬರೆಯೋರಿಗಂತೂ ಬಾರಿ ಗಣಿ
ಆ ಗಣಿಯೆ ನನ್ನೀ ಉಸಿರ ದಣಿ
ಮೋಡಗಳ ಬಾನು ಮಳೆಯಾಗದೆನು
ಹಾಳಂತ ಪ್ರೀತಿ ಎಂದು ಹುಸಿಯಾಗದು,

ಅವಳ ಒಲವ ನಗೆ. ಅವಳ ಮೊಗ ಸಿರಿಗೆ.
ಅಂದದ ಬಿಂದಿಗೆ...
ಅವಳೊಂದು ಅಮೃತ ಬಿಂದು
ಬರಿ ಬಿಂಕಾನೆ ಅವಳ ಉಡುಗೆ,

*********************************************************************************

ಓ ರವಿಯೇ

ಸಾಹಿತ್ಯ : ಕೆ.ಕಲ್ಯಾಣ್  
ಗಾಯನ : ಗುರುಕಿರಣ್  


ಓ ರವಿಯೇ ಇದು ಎಂತ ಸ್ನೇಹ ಅರಿಯೆ
ಓ ಭುವಿಯೇ ಇದು ಎಂತ ಚೈತ್ರ ತಿಳಿಯೆ

ಜೀವ ಮಿಂಚು ಮಿಂಚು ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ ಏಕೆ ಹೀಗೆ
ನೋಡೋ ಕಣ್ಣು ಕಾವ್ಯ ಬರೆದಾಗಿದೆ
ಹಾಡೋ ಹಾರ್ಟು ರೆಪ್ಪೆ ತೆರೆದಾಗಿದೆ
ಕಾಡೊ ಲೋಕ ಕೂಡ ಸರಿದಾಗಿದೆ ಏಕೆ ಹೀಗೆ

ಓ ರವಿಯೇ ಇದು ಎಂತ ಸ್ನೇಹ ಅರಿಯೆ
ಓ ಭುವಿಯೇ ಇದು ಎಂತ ಚೈತ್ರ ತಿಳಿಯೆ

ನಿನ್ನನು ಕಂಡಾಗ ಹೊಸ ಅಲೆ
ಒಟ್ಟಿಗೆ ಇದಗ ಸಂತೊಷದ ಮಳೆ
ಕೈಗಳು ಸೋತಾಗ ಹೊಸ ಕಲೆ
ನೀ ಹತ್ತಿರ ಬಂದಾಗ ತಂಗಾಳಿ ಬೇಡ

ಜೀವ ಮಿಂಚು ಮಿಂಚು ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ ಏಕೆ ಹೀಗೆ
ನೋಡೋ ಕಣ್ಣು ಕಾವ್ಯ ಬರೆದಾಗಿದೆ
ಹಾಡೋ ಹಾರ್ಟು ರೆಪ್ಪೆ ತೆರೆದಾಗಿದೆ
ಕಾಡೊ ಲೋಕ ಕೂಡ ಸರಿದಾಗಿದೆ ಏಕೆ ಹೀಗೆ

ಓ ರವಿಯೇ ಇದು ಎಂತ ಸ್ನೇಹ ಅರಿಯೆ
ಓ ಭುವಿಯೇ ಇದು ಎಂತ ಚೈತ್ರ ತಿಳಿಯೆ

ಅಲೆಯದ ಆಲದ ಇದೆ ಇದೆ
ಮರೆಯದ ಉನ್ಮಾದ ಕೇಳೊಕೆ ಆಗದೆ
ಸುಮ್ನೆಹಾಗೆ ನಾ ನೀನಿಲ್ಲದೆ
ಒಂಟಿಯು ನಾನಲ್ಲ ನೀನಿದ್ದರೆ

ಜೀವ ಮಿಂಚು ಮಿಂಚು ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ ಏಕೆ ಹೀಗೆ
ನೋಡೋ ಕಣ್ಣು ಕಾವ್ಯ ಬರೆದಾಗಿದೆ
ಹಾಡೋ ಹಾರ್ಟು ರೆಪ್ಪೆ ತೆರೆದಾಗಿದೆ
ಕಾಡೊ ಲೋಕ ಕೂಡ ಸರಿದಾಗಿದೆ ಏಕೆ ಹೀಗೆ

ಓ ರವಿಯೇ ಇದು ಎಂತ ಸ್ನೇಹ ಅರಿಯೆ
ಓ ಭುವಿಯೇ ಇದು ಎಂತ ಚೈತ್ರ ತಿಳಿಯೆ.....

*********************************************************************************

No comments:

Post a Comment