Tuesday, September 11, 2018

ಉಲ್ಲಾಸ ಉತ್ಸಾಹ (2009)



ಚಲನ ಚಿತ್ರ: ಉಲ್ಲಾಸ ಉತ್ಸಾಹ (2009)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಜಿವಿ ಪ್ರಕಾಶ್ ಕುಮಾರ್ 
ಗಾಯಕ: ಸೋನು ನಿಗಮ್  
ನಿರ್ದೇಶನ: ದೇವರಾಜ ಪಾಲನ್ 
ನಟನೆ: ಗಣೇಶ್, ಯಾಮಿ ಗೌತಮ್ 


ಚಲಿಸುವಾ... ಚೆಲುವೇ...
ಒಲಿಸಲೂ... ಬರುವೇ...
ನಾ ಹೇಳಲೇ ಬೇಕು ಎಂದ
ವಿಷಯವೇ ಮರತೇ
ಹೋಯ್ತಲ್ಲ ನಿನ್ಮುಂದೇ... ಚೆಲುವೇ...
ನಾ ತೋರಿಸಲೆಂದೇ ತಂದ ಹೃದಯವೇ
ಹೊರಟೇ ಹೋಯ್ತಲ್ಲ ನಿನ್ನ ಹಿಂದೆ... ಚೆಲುವೇ...

ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ
ನೀ ನಡೆವೇ... ಕಬ್ಬಿನ ಹಾಲಂತೆ
ನೀ ನುಡಿವೇ... ನನ್ನನು ಹೇಗಂತಾ
ನೀ ತಡೆವೇ... ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಹೊ...

ಚಲಿಸುವಾ ಚೆಲುವೇ... ಒಲಿಸಲೂ ಬರುವೇ...

ನೂರು ನೂರು ಬಯಕೆಗಳ ಪಾಠಶಾಲೆ ತೆರೆಯುವೆನು
ತಿಳಿಸುತಲೇ... ಕಲಿಯುವೇನೂ... ಹೋ...
ಜೋಡಿಯಾಗಿ ಹೆಸರುಗಳಾ ಗೀಚಿ ನೋಡಿ ಅಳಿಸುವೆನು
ಸನಿಹದಲೇ ಸುಳಿಯುವೆನು
ಯಾರೂ ನಮ್ಮ ಕಾಣದಲ್ಲಿ ಸೇರೋಣ
ಹಿತವಾಗಿ ಹಾರಿಕೊಂಡು ಹಾರಿ ಹೋಗೋಣ
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ ಹೊಳೆವ
ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓ ಓ ಓ..



ಚಲಿಸುವಾ ಚೆಲುವೇ... ಒಲಿಸಲೂ ಬರುವೇ...

ಕಾದು ಕೂತ ಕನಸುಗಳಾ ಕಾರುಬಾರು ನಡೆಯುತಿವೆ
ಹೃದಯದಲಿ ಹಗಲಿರುಳೂ
ಜೀವ ವೇಗ ಗರಿಗೆದರಿ ಮೂಕ ಹಾಗೆ ಚಿಗುರುತಿದೆ
ಉಸಿರುಗಳೂ ಬೆರೆತಿರಲೂ ಹೊ...
ಕಣ್ಣಲ್ಲೇ ರೂಪರೇಖೆ ಹಾಕೋಣ
ಜೊತೆಯಾಗಿ ಭಾವಲೋಕ ದೋಚಿಕೊಳ್ಳೋಣಾ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ ಹೊಳೆವ ಬಿಸಿಲಿನ ಕೋಲಂತೇ
ನೀ ನಡೆವೇ... ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ... ಕನಸೂ...
ನಿಜವಾದಂತೆ ಕನಸಾಗಿದೆ...ಓ ಓ ಓ...

ಚಲಿಸುವಾ ಚೆಲುವೇ...




********************************************************************************

No comments:

Post a Comment