ಪ್ರೀತಿ ಪ್ರೀತಿ ನಿನ್ನಾ ಪ್ರೀತಿ
ಚಲನಚಿತ್ರ: ಅರಸು (2007)
ಸಾಹಿತ್ಯ : ಹಂಸಲೇಖ
ಗಾಯನ : ಕಾರ್ತಿಕ್, ಚಿತ್ರಾ
ನಿರ್ದೇಶನ: ಮಹೇಶ್ ಬಾಬು
ನಟನೆ: ಪುನೀತ್, ರಮ್ಯಾ, ಮೀರಾ ಜಾಸ್ಮಿನ್
ಗಂಡು : ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ
ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ ಹೃದಯವ ನೀ ಅರಸು
ಕಣ್ಣ್ ಗಳೆರದು ಒಂದೇ ಕನಸು ಎಲ್ಲೀ ನಿನ ಮನಸು
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ ಹೃದಯವ ನೀ ಅರಸು
ಹೆಣ್ಣು : ಆ..ಮನಸು ತುಂಬಿ ತುಳುಕಿ ಹೋದ ಧಾರೆ ನೀನಿಂದು
ಕನಸಿನಿಂದ ಮನಸಿನೆಡೆಗೆ ಹೊರಡು ನೀನಿಂದು
ಗಂಡು : ಒಂದು ಬದುಕು ಇನ್ನೊಂದು ಬೆಳಕು
ಒಂದು ಮಿಡಿತ ಮತ್ತೊಂದು ಹೃದಯ ಬಿಡಿಸಲಾಗುವುದೆ
ಮನವಾ ಮನವೇ ಮರೆಯುವುದೇ
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ ಹೃದಯವ ನೀ ಅರಸು
ಹೆಣ್ಣು : ಆ.ಆ.ಆ ಅಅ..ಆ.ಆ.ಆ ಅಅ ಆ.ಆ.ಆ ಅಅ..ಆಆ.
ಆ.ಆ.ಆ ಅಅ..ಆ.ಆ.ಆ ಅಅ ಆ.ಆ.ಆ ಅಅ..ಆಆ.
ಆ.ಆ.ಆ ಆ.ಆ.ಆ.ಆ ಆಅ ಆ.ಆ.ಆ ಆ.ಆ.ಆ.ಆ ಆಅ
ನೆನಪಿಗೊಂದು ಸಿಹಿಯ ನೋವು ನನಗು ಇರಲಿ ಬಿಡು
ಕಸಿದು ಕೊಂಡ ಕಹಿಯ ನೆನಪು ನನಗೆ ಬೇಡ ಬಿಡು
ಗಂಡು : ಒಂದು ಭಾವ ಮತ್ತೊಂದು ಕವಿತೆ
ಬೆಂಕಿ ಇರದೆ ಉರಿಯುವುದೇ ಹಣತೆ
ಬೇದ ಮಾಡುವುದೇ ಕಣ್ಣ ಕಣ್ಣೇ ಕುಕ್ಕುವುದೆ
ಪ್ರೀತಿ ಪ್ರೀತಿ ನಿನ್ನಾ ಪ್ರೀತಿ ಪ್ರೀತಿ ನಿನ್ನಾ ಆಟ ಸಾಕು ನಿಲ್ಲಿಸು
ಒಂದೇ ಒಂದೇ ಒಂದು ಒಂದೇ ಮಾತಿನಲ್ಲಿ ನಿನ್ನಾ ಆಸೆ ತಿಳಿಸು
ನನ್ನಾ ಪ್ರಶ್ನೆಗೆ ಉತ್ತರಿಸು ನಿನ್ನಾ
ಹೃದಯವ ನೀ ಅರಸು ಹೃದಯವ ನೀ ಅರಸು
ಹೃದಯವ ನೀ ಅರಸು ಹೃದಯವ ನೀ ಅರಸು
********************************************************************************
ಏಕೋ ಏನೋ ನನ್ನಲ್ಲಿ
ಸಾಹಿತ್ಯ : ರಾಮ್ ನಾರಾಯಣ್ ಗಾಯನ : ಮಹಾಲಕ್ಷ್ಮಿ ಐಯ್ಯರ್
ಹೆಣ್ಣು : ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ ಏನೀ ಹೊಸಲೋಕ
ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಹಾ..ಅ.ಅ..ಆ.ಅ.ಅ.
ಈ ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ
ನನ ಈ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ
ಈ ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ
ನನ ಈ ಜೀವನ ಹಸಿರಾಯಿತು ಇಂದೆ ಇಂದೆ
ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ
ತುಟಿಯಲ್ಲಿ ನಗೆಯೊಂದ ಚೆಲ್ಲಿ ಚೆಲ್ಲಿ
ಈ ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ
ಇಂಪಾದ ಹಾಡಲ್ಲಿ ನಾ ತೇಲಿ ಹೋದೆ
ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಹಾ..ಅ.ಅ..ಆ.ಅ.ಅ.
ಈ ಚಂದ್ರನು ಬಾನಿಂದಲಿ ನನಗಾಗಿಯೇ ಬಂದ
ಮನ ತಂಪಾಗಲು ತಂಗಾಳಿಯ ತಂದ ತಂದ
ಅಪರೂಪದ ಅನುರಾಗದ ಆನಂದವು ನೀನಾದೆ
ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ
ನಲಿದಾಡಿತು ಈ ಮನಸು ಹೊಸಲೋಕ ಕಂಡಂತೆ
ನಿನಗಿಂದು ನಾ ಸೋತು ಹೋದೆ
ಈ ಸ್ನೇಹ ಎಲ್ಲಾಯ್ತೊ ಈ ಪ್ರೀತಿ ಹೇಗಾಯ್ತೊ ನಿನ್ನಲ್ಲಿ
ನನ್ನನ್ನು ನಾ ಮರೆತು ಹೋದೆ
ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ ಏನೀ ಹೊಸಲೋಕ
ಏಕೋ ಏನೋ ನನ್ನಲ್ಲಿ ಹೊಸ ಆಸೆ ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಹಾ..ಹಾ.ಅ.ಅ.ಆ.ಅ.ಅ ಹಾ..ಹಾ.
ಅ.ಅ.ಆ.ಅ.ಅ ಹಾ..ಹಾ.ಅ.ಅ.ಆ.ಅ.ಅ

*********************************************************************************
ನಿನ್ನ ಕಂಡ ಕ್ಷಣದಿಂದ
ಸಾಹಿತ್ಯ : ರಾಮ್ ನಾರಾಯಣ್ ಗಾಯನ : ಕುನಾಲ್ ಗುಂಜಾವಾಲ
ಟುರು ಟೂರು ಟೂರೂರು ಟೂರೂರು
ಟೂರೂರು ಟು ಟುರು ಟೂರು ಟೂರೂರು
ಟೂರೂರು ಟೂರೂರು ಟು
ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಆ ನಿಮಿಷದಿಂದ ನನಗೇನಾಯ್ತಂತ ಗೋತ್ತೇ ಇಲ್ಲ
ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ ನೀನೇ ಎಲ್ಲಾ
ನೀನೇ ನನಗೆಲ್ಲಾ ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ದ ಒನ್ ಫಾರ್ ಮಿ ಮೈ ಓನ್ಲೀ ಲವ್
ಟುರು ಟೂರು ಟೂರೂರು ಟೂರೂರು
ಟೂರೂರು ಟು ಟುರು ಟೂರು ಟೂರೂರು
ಟೂರೂರು ಟೂರೂರು ಟು
ಹಾ.ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ ನೀನೇ ಎಲ್ಲಾ
ಕಣ್ಣಲ್ಲಿ ಸೇರಿಕೊಂಡೆ ಮನಸಲ್ಲಿ ತುಂಬಿಕೊಂಡೆ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಂಡೆ ಕಂಡೆ
ಆ ಬೆಟ್ಟದ ಹೂವು ಬೇಕ ಆಕಾಶದ ತಾರೆ ಬೇಕ
ಬೇರೇನು ಬೇಕು ಕೇಳು ನೀ ಎಲ್ಲಾ ಕೊಡುವೆ ಕೊಡುವೆ
ವಾ.ಹುವ ಹೌ ಐ ವಂಡರ್ ವಾಟ್

ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತಾ ತಿಳಿದ ಮೇಲೆ ನೀನೇ ಎಲ್ಲಾ
ಯಾರೇನೇ ಅಂದರೂನು ಏನೆಲ್ಲಾ ಆದರೂನು
ಈ ನನ್ನಾ ಪ್ರೀತಿಯಾ ಬಿಡಲಾರೆ ಎಂದು ಎಂದು
ನಿಂತಲ್ಲಿ ನಿಲ್ಲಲಾರೆ ನಾ ನಿದ್ದೆ ಮಾಡಲಾರೆ
ಕಣ್ಣಳೊಗೆ ಹೊರಗೆ ನೋಡಿದರು
ಎಲ್ಲೆಲ್ಲು ನೀನೆ ನೀನೆ ವಾ.ಹುವ
ಅದು ಎಂತ ಚಂದ ನಿನ ನೋಟ
ನಾ ಸೋತೆ ಮೈ ಓನ್ಲಿ ಲವ್
ಟುರು ಟೂರು ಟೂರೂರು ಟೂರೂರು
ಟೂರೂರು ಟು ಟುರು ಟೂರು ಟೂರೂರು
ಟೂರೂರು ಟೂರೂರು ಟು
ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೇ ಎಲ್ಲಾ ನೀನೇ ನನಗೆಲ್ಲಾ
ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ
ಯು ಆರ್ ದ ಒನ್ ಫಾರ್ ಮಿ ಮೈ ಓನ್ಲೀ ಲವ್
*********************************************************************************
No comments:
Post a Comment