Friday, September 7, 2018

ಮುಕುಂದ ಮುರಾರಿ (2016)


ಮುಕುಂದ ಮುರಾರಿ

ಚಲನಚಿತ್ರ: ಮುಕುಂದ ಮುರಾರಿ (2016)
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 


ಸಂಗೀತ: ಅರ್ಜುನ್ ಜನ್ಯ 
ಗಾಯನ: ಶಂಕರ್ ಮಹಾದೇವನ್ 
ನಿರ್ದೇಶನ: ನಂದ ಕಿಶೋರ್ 
ನಟನೆ: ಉಪೇಂದ್ರ, ಸುದೀಪ್, ನಿಕಿತಾ ತುಕ್ರಾಲ್


ನೀನೆ ರಾಮ ನೀನೆ ಶಾಮ
ನೀನೆ ಅಲ್ಲಾ ನೀನೆ ಯೇಸು
ನೀನೆ ಕರ್ಮಾ ನೀನೆ ಧರ್ಮ
ನೀನೆ ಮರ್ಮ ನೀನೆ ಪ್ರೇಮ

ನಿಮ್ಮ ಜೀವದ ಮಾಲೀಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣ ಕಣ ಕಣದೊಳಗೆ ಕುಳಿತಿರುವೇ

ಮುಕುಂದಾ ಮುರಾರಿ ಮುಕುಂದಾ ಮುರಾರಿ
ಮುಕುಂದಾ ಮುರಾರಿ ಮುಕುಂದಾ ಮುರಾರಿ

ನೀನೆ ರಾಮ ನೀನೆ ಶಾಮ
ನೀನೆ ಅಲ್ಲಾ ನೀನೆ ಯೇಸು

ಗುಡಿಯ ಕಟ್ಟಿದ ಬಡವನೆದೆಯಾ ಗುಡಿಯಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನ್ನದೇ ಫಲವು ನಿನ್ನದೇ ಛಲದ ಒಡೆಯ ನಾನು
ಇದನ್ನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು
ಅಣು ಅಣು ಅಣುಒಳಗೆ ಕುಳಿತಿರುವೆ

ಮುಕುಂದಾ ಮುರಾರಿ ಮುಕುಂದಾ ಮುರಾರಿ
ಮುಕುಂದಾ ಮುರಾರಿ ಮುಕುಂದಾ ಮುರಾರಿ

ಯುಗದ ಯುಗದ ಮೃಗದ ಕಗದ ಉಸಿರಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೇ ನಾನು
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ ನೀನೆ ಗೋಡೆ ಕಟ್ಟಿದವನು
ನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ

ನಿಮ್ಮ ಜೀವದ ಮಾಲೀಕ ನಾನು

ನಿಮ್ಮ ಪಾಲಿನ ಸೇವಕ ನಾನು
ಕಣ ಕಣ ಕಣದೊಳಗೆ ನಾನಿರುವೆ

ಮುಕುಂದಾ ಮುರಾರಿ ಮುಕುಂದಾ ಮುರಾರಿ
ಮುಕುಂದಾ ಮುರಾರಿ ಮುಕುಂದಾ ಮುರಾರಿ

ನೀನೆ ರಾಮ ನೀನೆ ಶಾಮ
ನೀನೆ ಅಲ್ಲಾ ನೀನೆ ಯೇಸು


********************************************************************************

No comments:

Post a Comment