
ಸಾಹಿತ್ಯ & ಸಂಗೀತ : ಹಂಸಲೇಖ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ನಿರ್ದೇಶನ: ಕೆ.ವಿ. ರಾಜು
ನಟನೆ: ವಿ. ರವಿಚಂದ್ರನ್, ಪೂನಮ್ ದಿಲ್ಲೋನ್, ಭಾರತಿ
ಕುಡಿಯೋದೆ ನನ್ನ ವೀಕ್ನೆಸ್ಸು
ಆದರೆ ನ್ಯಾಯಕೆ ದುಡಿಯೋದೆ
ನನ್ನ ಬಿಸಿನೆಸ್ಸು
ಹಿರಿಯರ ಮುಂದೆ ಬಾಲಕ
ಬಡವರ ಮನೆಗೆ ಸೇವಕ
ಕುಡುಕರಿಗೆಲ್ಲ ನಾಯಕ
ಹ್ಯಾಗಿದೆ ನನ್ನ ಜಾತಕ
ಒಂದು ಪೆಗ್ಗಿನ ಕಥೆಯಿದು
ಇದರ ಒಳಗಿನ ವ್ಯಥೆ ಇದು
ದೇವ ದಾನವರ ಸೈನ್ಯವು
ಕಡಲು ಕಡೆಯುವ ಸಮಯವು

ಆಯಿತು ಲೋಕಕೆ ಮಧುಪಾನ
ಸೃಷ್ಟಿಯೆ ನೀಡಿದ ಶಾಪವಿದು
ದೇವರೇ ಮಾಡಿದ ಪಾಪವಿದು
ಇದರ ಮುಂದೆ ದೇವರು ಗುಲಾಮ
ನಾನು ಇದನು ಆಳೊ ಸಾರ್ವಭೌಮ
ಈ ಮಾತು ಸುಳ್ಳಲ್ಲ ಕುಡುಕನ ಬರವಣಿಗೆ
ಒಮ್ಮೆ ರಾತ್ರಿಯ ಮಬ್ಬಲಿ
ದೇವಲೋಕದ ಕ್ಲಬ್ಬಲಿ
ವಿಸ್ಕಿಯೊಂದಿಗೆ ಸೂರ್ಯನು
ಐಸಿನೊಂದಿಗೆ ಚಂದ್ರನು
ರಂಭೆಯ ಡಿಸ್ಕೋ ವೀಕ್ಷಿಸಲು
ಒಂದೇ ಚೇರಲಿ ಕುಳಿತಿರಲು
ಸ್ನೇಹವ ಮರೆತ ಚಂದಿರನು
ರಂಭೆಯ ಹಿಂದೆ ಓಡಿದನು
ಅವನ ಸುಡಲು ಸೂರ್ಯ ಎದ್ದು ನಿಂತ
ಪ್ರಾಣ ಭಯದಿ ಚಂದ್ರ ಅವಿತು ಕುಳಿತ
ಆದ್ದರಿಂದ ಇಬ್ಬರಿಗು ಸ್ನೇಹವೇ ಕೂಡಿಲ್ಲ
ಅವರಿಗು ಕುಡಿಯೋ ವೀಕ್ ನೆಸ್ಸು

ಕುಡಿಯದಿದ್ದರೆ ಈ ಜನ
ನಡೆಯಲಾರದೊ ಜೀವನ
ಹುಟ್ಟಿ ಸಾಯಲು ಸ್ಥಳವಿದೆ
ಹೊಟ್ಟೆ ಬಟ್ಟೆಗೆ ಬರವಿದೆ
ನಿಷೇಧ ಹೇರುವ ಸರಕಾರ
ಒಳಗೆ ಕೊಡುವುದು ಸಹಕಾರ
ಸರಕಾರದ ಈ ರೂಲ್ಸುಗಳು
ಬಲ್ಬೆ ಇಲ್ಲದ ಕಂಬಗಳು
ಬೆಳಕು ಕೊಡುವೆ ಎಂದು ಓಟು ಪಡೆವ
ನಮ್ಮ ಜನರ ಕತ್ತಲಲ್ಲಿ ಇಡುವ
ಕಿರುಚಾಡೋ ನಾಯಕರು
ಕುಡಿಯುತ ಎಲ್ಲಿಹರೊ
ಕುರ್ಚೀನೆ ಅವರ ವೀಕ್ನೆಸ್ಸು
ಕುರ್ಚಿಯ ಕಾಲನು
ಮುರಿಯೋದೆ ನನ್ನ ಬಿಸಿನೆಸ್ಸು
********************************************************************************
No comments:
Post a Comment