Saturday, September 15, 2018

ಓ ನನ್ನ ನಲ್ಲೆ (2000)


ಕನಸುಗಾರನ ಒಂದು

ಚಲನಚಿತ್ರ: ಓ ನನ್ನ ನಲ್ಲೆ (2000) 
ನಿರ್ದೇಶನ: ವಿ. ರವಿಚಂದ್ರನ್
ಸಾಹಿತ್ಯ: ವಿ.ರವಿಚಂದ್ರನ್ 
ಸಂಗೀತ: ವಿ.ರವಿಚಂದ್ರನ್ 
ಗಾಯಕರು : ಡಾ || ಎಸ್.ಪಿ.ಬಾಲಸುಬ್ರಮಣ್ಯಂ/
ಕೆ. ಎಸ್. ಚಿತ್ರಾ 
ನಟನೆ: ವಿ. ರವಿಚಂದ್ರನ್, ಇಶಾ ಕೊಪ್ಪಿಕರ್ 


ಕನಸುಗಾರನ ಒಂದು ಕನಸು ಕೇಳಮ್ಮ...
ಕನಸುಗಾರನ ಒಂದು ಕವನ ಕೇಳಮ್ಮ...
ಈ ನನ್ನ ಕವನವ, ಕೇಳಲು ಆ ಚಂದ್ರನು,
ಕೆಳಗಿಳಿದು ಬಂದನು, ಮೇಲ್ಹೋಗಲು ಮರೆತನು...
ಈ ಕವನಕೆ, ಆ ಚಂದಿರ,
ಬಿಳಿಹಾಳೆಯಾಗಿ ಕವಿಯ ಮನಸು ತುಂಬಿದನು....

ಕನಸುಗಾರನ ಒಂದು ಕನಸು ಕೇಳಮ್ಮ...
ಕನಸುಗಾರನ ಒಂದು ಕವನ ಕೇಳಮ್ಮ...

ಹೂವೊಂದು ಕೇಳಿತಮ್ಮ, ನಾನಿಲ್ಲದಿದ್ದರೇನು?
ನೀನಿಲ್ಲದಿದ್ದರೆ, ನಗುವೆ ಇಲ್ಲಮ್ಮ..
ಹೂವೇ ಇಲ್ಲದ ಲೋಕ ನಮಗೇಕಮ್ಮ..?
ನಗುವೇ ಇಲ್ಲದ ಲೋಕ ನಮಗೇಕಮ್ಮ...?
ಈ ಲೋಕದ ಶೃಂಗಾರವೇ, ನೀನೇ ಹೂವಮ್ಮ...
ಈ ಲೋಕಕೆ ವೈಯ್ಯಾರವೇ, ನೀನೇ ಹೂವಮ್ಮ..
ಈ ಕವನ ಕೇಳಿ ಆ ಚಂದ್ರ ಕರಗಿದನು...

ಕನಸುಗಾರನ ಒಂದು ಕನಸು ಕೇಳಮ್ಮ...
ಕನಸುಗಾರನ ಒಂದು ಕವನ ಕೇಳಮ್ಮ....
ಕನಸಿಗೆ ಇಲ್ಲ ಬೇಲಿ, ಅದು ಬರುವುದು ತೇಲಿ...
ಈ ಮನಸಿನ ಆಸೆ, ಕನಸಾಗಿ ಬರುವುದಮ್ಮ...
ನಾಳೆ ಅನ್ನುವುದೆ, ಈ ಕನಸು ಕೇಳಮ್ಮ...
ಕನಸು ಇಲ್ಲದ ಬಾಳು ನಮಗೇಕಮ್ಮ?
ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯ ಬಲ್ಲೆ...
ಕನಸೇ ಇಲ್ಲದ ದಾರಿಯಲಿ ನಾ ಹೇಗೆ ನಡೆಯಲಿ..?
ಈ ನನ್ನ ಹಾಡೆ ನನ್ನ ಕನಸು ಕೇಳಮ್ಮ....

ಕನಸುಗಾರನ ಒಂದು ಕನಸು ಕೇಳಮ್ಮ....
ಕನಸುಗಾರನ ಒಂದು ಕವನ ಕೇಳಮ್ಮ...
ಈ ನನ್ನ ಕವನವ, ಕೇಳಲು ಆ ಚಂದ್ರನು...
ಕೆಳಗಿಳಿದು ಬಂದನು, ಮೇಲ್ಹೋಗಲು ಮರೆತನು...
ಈ ಕವನಕೆ, ಆ ಚಂದಿರ,
ಬಿಳಿಹಾಳೆಯಾಗಿ ಕವಿಯ ಮನಸು ತುಂಬಿದನು...

ಕನಸುಗಾರನ ಒಂದು ಕನಸು ಕೇಳಮ್ಮ...
ಕನಸುಗಾರನ ಒಂದು ಕವನ ಕೇಳಮ್ಮ....

*********************************************************************************

ಈ ಪ್ರೀತೀಗೆ

ಸಾಹಿತ್ಯ : ವಿ.ರವಿಚಂದ್ರನ್ 
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸುಮಾ ಶಾಸ್ತ್ರೀ 


ಈ ಪ್ರೀತೀಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ
ಕನಸಿನಲ್ಲಿ ಬಂದ ನನ್ನ ನಲ್ಲೆ
ಕಣ್ಣು ತೆರೆಯುವಾಗ ಎಲ್ಲಿ ಹಾರಿ ಹೋಗುವೆ ಓ ನನ್ನ ನಲ್ಲೆ

ಈ ಪ್ರೇಮ ಈ ಕನಸು ಮನಸಿಂದ ಆರಂಭ
ಭುವಿಯಲ್ಲಿ ಹಾರೋದು ಪ್ರೀತಿ ಕನಸು ಒಂದೆ
ನಾನಿನ್ನ ನೀನನ್ನ ಪ್ರೀತಿಯ ಕನಸು
ಭುವಿಯಲ್ಲಿ ಹಾರೋಣ ಪ್ರೀತ್ಸೋಣ ಬಾ ಬಾ
ಪ್ರೀತೀಗೆ ಕನಸೊಂದೆ ಜೊತೆಯು ಕೇಳಮ್ಮ
ಈ ಕನಸಿಗೆ ಮನಸೊಂದೆ ಜೊತೆಯು ಕೇಳಮ್ಮ
ಮನಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸಿನ ಮನೆಗೆ ಬಲಗಾಲಿಟ್ಟು ಒಳಗೆ ಬಾರಮ್ಮ
ನಾ ಯಾರೊ ನೀ ಯಾರೊ ನಾವ್ ಸೇರಿದ್ದು ಯಾಕೊ
ಈ ಪ್ರೇಮಾನೆ ಸ್ವರ್ಗ ಅಂತ ಹೇಳೋದಕ್ಕೊ
ಈ ಪ್ರೀತಿ ಈ ಕನಸು ಯಾವಾಗಲೂ ಮೌನ
ನೀ ಮೌನ ನಾ ಮೌನ ಇನ್ನೇನು ಕೇಳಮ್ಮ
ಪ್ರೀತಿಯಲ್ಲಿ ಹಾರಾಡುವುದು ಮನಸು ಕೇಳಮ್ಮ
ಮನಸಿನಲ್ಲಿ ಹಾರಾಡುವುದು ಕನಸು ಕೇಳಮ್ಮ
ಮನಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸಿನ ಮನೆಗೆ ಬಲಗಾಲಿಟ್ಟು ಒಳಗೆ ಬಾರಮ್ಮ

*********************************************************************************

ದುಡ್ಡೇ ದೊಡ್ಡಪ್ಪ ಅಂದ 

ಸಾಹಿತ್ಯ : ರವಿಚಂದ್ರನ್  
ಹಾಡಿರುವವರು : ಎಲ್.ಎನ್. ಶಾಸ್ತ್ರೀ 


ಮನಿ ಮನಿ ಎಲ್ಲಾ ಮನಿ   
ಮನಿ ಮನಿ ಎಲ್ಲಾ ಮನಿ
ಮನಿ ಮನಿ ಎಲ್ಲಾ ಮನಿ   
ಮನಿ ಮನಿ ಎಲ್ಲಾ ಮನಿ

ಅಹ ಅಹ ಅಹ ಅಹ

ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ
ದುಡ್ಡಿಲ್ದೇ ಏನು ಇಲ್ಲ ಅಂದ ನರಸಿಂಹಪ್ಪ 
ದುಡ್ಡಿದ್ದರೇ ಎಲ್ಲ ಇದ್ದಂಗೆ ಅಂದ ಅರಸಪ್ಪಾ 
ದುಡ್ಡಿಗಾಗಿ ಹೆಣ ಕೂಡಾ ಬಾಯ್ ಬಿಡತಪ್ಪಾ... 

ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ 

ಆಹಾ... ಒಂದು ಒಟೀಗೆ ಒಂದು ಗಾಂಧಿ ನೋಟಪ್ಪಾ
ಆಹಾಆ.. ಒಂದಿ ಸೀಟಿಗೆ ಕಂತೆ ಕಂತೆ ನೋಟಪ್ಪ
ಗಾಂಧಿ ಫೋಟೋ ನೋಟಲ್ಲಿ ಯಾಕೆ ಹಾಕಿದರೇನು ಗೊತ್ತೇನಪ್ಪಾ
ಮೋಸ ಈ ಲಂಚ ಎಲ್ಲಾ ತೊಲಗಲಿ ಅಂತಪ್ಪಾ

ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ 

ಓಹೋಊಊ ದುಡ್ಡಿಗಾಗಿ ದಿನ ಪರದಾಟ ನೋಡಪ್ಪಾ
ಓಹೋಹೋ ದುಡ್ಡಿಗಾಗಿ ಜನ ಸಾಯುತಾರೆ ನೋಡಪ್ಪಾ
ದುಡ್ಡಿನ ಪರದಾಟ ನಿಲಸೋಕೆ ಏನ್ ಮಾಡಬೇಕು ಗೊತ್ತೇನಪ್ಪಾ
ಬಡವ ಸಾಹುಕಾರ ಬೇಧ ಭಾವ ಇರಬಾರದಪ್ಪ

ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ಗುಂಡಪ್ಪ
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ ದೇವಪ್ಪ
ದುಡ್ಡಿಲ್ದೇ ಏನು ಇಲ್ಲ ಅಂದ ನರಸಿಂಹಪ್ಪ 
ದುಡ್ಡಿದ್ದರೇ ಎಲ್ಲ ಇದ್ದಂಗೆ ಅಂದ ಅರಸಪ್ಪಾ 
ದುಡ್ಡಿಗಾಗಿ ಹೆಣ ಕೂಡಾ ಬಾಯ್ ಬಿಡತಪ್ಪಾ... 

*********************************************************************************

ಓ ನನ್ನ ನಲ್ಲೆ 

ಸಾಹಿತ್ಯ : ರವಿಚಂದ್ರನ್  
ಹಾಡಿರುವವರು : ಎಸ್.ಪಿ.ಬಿ.


ಓ ನನ್ನ ನಲ್ಲೇ  ಪ್ರೀತಿಯ ನಲ್ಲೆ
ಬರೆದ ಓಲೆ ಓದಿ ಹೇಳಲೇ ಪ್ರೇಮದೋಲೆ
ಹೂವ ನೋಡಿ ದುಂಬಿ ಯಾಕೆ ನಗುವುದು ಹೇಳು
ಪ್ರೇಮ ಪ್ರೇಮ ಪ್ರೇಮ

ದುಂಬಿ ಹೂವ ಜೇನ ಹೀರಿ ನಾನು ನಿನ್ನ ಪ್ರೀತಿಸುವೆ
ಎಂದು ಹೇಳಿ ನಾಚಿ ಹೋಯಿತು...  
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಮುತ್ತಲ್ಲೇ ಹೂವು ಮೈ ಮರೆತು ಮುಳುಗಿತು ಪ್ರೀತಿಯಲಿ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ

ಓ ಒಹೋ ಒಹೋ ಓ  ನನ್ನ ನಲ್ಲೇ
ಓ ಒಹೋ ಒಹೋ ಓ ಪ್ರೀತಿಯ ನಲ್ಲೆ
ಓ ಒಹೋ ಒಹೋ ಓ ಬರೆದ ಓಲೆ
ಓ ಒಹೋ ಒಹೋ ಓ ಓದಿ ಹೇಳಲೇ ಪ್ರೇಮದೋಲೆ
ವಾಹ್ ರೇ ವಾಹ್ ವಾಹ್ ವಾಹ್ ವಾಹ್ ಓಲೆ ಏ ಹೇ ಹೇ 

ಸೂರ್ಯ ನೋಡಿ ತಾವರೆ ಯಾಕೆ ನಗುವುದು ಹೇಳು
ಪ್ರೇಮ..  ಪ್ರೇಮ.. ಪ್ರೇಮ.. ಪ್ರೇಮ..    
ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ..
ಸೂರ್ಯನ್ನೇ ನೋಡಲು ಕಾಯುವ ತಾವರೆ
ಅವನು ಇಲ್ಲದೆ ಎಂದು ಬಾಗಿ ತೆರೆಯದು
ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ..
ಅವನೇ ನನ್ನ ಜೀವ ಅನ್ನುವ ಪತಿವೃತೆ
ಅವನು ಮತ್ತೇ ಬರುವ ವರೆಗೂ ಮೌನವೃತೆ
ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ.. ಪ್ರೇಮ..

ಓ ಒಹೋ ಒಹೋ ಓ ನನ್ನ ನಲ್ಲೇ
ಓ ಒಹೋ ಒಹೋ ಓ ನಿನ್ನ ಓಲೆ
ಓ ಒಹೋ ಒಹೋ ಮರೆಯಲಾರೆ
ಓ ಒಹೋ ಒಹೋ ನಾ ನಿನ್ನ ಮರೆಯಲಾರೆ
ವಾಹ್ ರೇ ವಾಹ್ ವಾಹ್ ವಾಹ್ ವಾಹ್ ನಲ್ಲೆಯಾ ಓಲೆ  ಹೇ ಹೇ 

*********************************************************************************

ರಂಗು ರಂಗಿನ ಹಳ್ಳಿ 

ಸಾಹಿತ್ಯ : ರವಿಚಂದ್ರನ್  
ಹಾಡಿರುವವರು : ಎಸ್.ಪಿ.ಬಿ., ಚಿತ್ರಾ 


ರಂಗು ರಂಗಿನ ಹಳ್ಳಿ ರಂಗು ಬಾರೆ
ನಂಗೆ ನಗುನಾ ಹಳ್ಳಿ ನಗುವ ತಾರೆ
ನಿನ್ನ ಹಣೆಯಲ್ಲಿ ನಾನು ಚಂದಿರ ಕಣೇ
ನಿನ್ನ ನಗುವಿನಲ್ಲಿ ನಾನು ತಾರೆ ಕಣೇ
ನಿನ್ನ ಎದೆಯ ಢವ ಢವ ನಾನು ಕಣೇ
ಗಂಗೂ ಗಂಗಿನ ಹಳ್ಳಿ ಗಂಗೂ ಬಾರೋ
ನಂಗೆ ಭತ್ತ ತತ್ತಿ ನಿಂಗೂ ತಾರೋ
ನಿನ್ನ ಮಾತಿನ ಅಕ್ಷರ ನಾನು ಕಣೋ
ನಿನ್ನ ಹೆಜ್ಜೆಯ ಗುರುತು ನಾನು ಕಣೋ
ನಿನ್ನ ಎದೆಯ ಢವ ಢವ ನಾನು ಕಣೋ
ರಂಗು ನಿನ್  ಘಲ ಘಲ ನಾನಮ್ಮಾ
ಘಲ ಘಲ ಅನ್ನುತಾ ಈಗ ಬಾರಮ್ಮಾ
ಗಂಗೂ ನಿನ್ ಹಾಡಿಗೆ ಪಲ್ಲವಿ ನಾನಯ್ಯಾ
ನೀನ ಹಾಕೋ ತಾಳಕೆ ಕುಣಿವೆನಯ್ಯಾ
ತೇಲಾಡುವೆ ನಿನ್ನ ಉಸಿರಲ್ಲಿ ತೂಗಾಡುವೆ ನಿನ್ನ ಮಡಿಲಲ್ಲಿ
ಎಂತಯ್ಯಾ ಈ ಪ್ರೇಮಾ...
ಗಂಗೂ ಗಂಗಿನ ಹಳ್ಳಿ ಗಂಗೂ ಬಾರೋ
ನಂಗೆ ಭತ್ತ ತತ್ತಿ ನಿಂಗೂ ತಾರೋ
ನಿನ್ನ ಮಾತಿನ ಅಕ್ಷರ ನಾನು ಕಣೋ
ನಿನ್ನ ಹೆಜ್ಜೆಯ ಗುರುತು ನಾನು ಕಣೋ
ನಿನ್ನ ಎದೆಯ ಢವ ಢವ ನಾನು ಕಣೋ
ರಂಗು ಇಲ್ಲದ ಬಾಳಿಗೆ ರಂಗೆ ಇಲ್ಲಮ್ಮಾ
ಹೇ ರಾಂಗು ಮಾಡದೇ ಬೇಗ ಬಾರಮ್ಮಾ
ಗಂಗೂ ಇಲ್ಲದ ಬಾಳಿಗೆ ಗುಂಗೇ ಇಲ್ಲಯ್ಯಾ
ರೈಟು ಹೇಳುವೆ ಬೇಗ ಬಾರಯ್ಯಾ
ಈ ನನ್ನ ಹಾಡಿಗೆ ರಾಗ ನೀನಮ್ಮಾ
ಈ ನಮ್ಮ ಜೋಡಿಗೆ ನಾಂದಿ ಹಾಡಮ್ಮಾ
ಅಂತ್ಯ ಇಲ್ಲದ ಪ್ರೇಮಾ...
ರಂಗು ರಂಗಿನ ಹಳ್ಳಿ ರಂಗು ಬಾರೆ
ನಂಗೆ ನಗುನಾ ಹಳ್ಳಿ ನಗುವ ತಾರೆ
ನಿನ್ನ ಹಣೆಯಲ್ಲಿ ನಾನು ಚಂದಿರ ಕಣೇ
ನಿನ್ನ ನಗುವಿನಲ್ಲಿ ನಾನು ತಾರೆ ಕಣೇ
ನಿನ್ನ ಎದೆಯ ಢವ ಢವ ನಾನು ಕಣೇ
*********************************************************************************

No comments:

Post a Comment