Friday, September 21, 2018

-: ಶ್ರೀ ಚಾಮುಂಡಿತಾಯಿ ಭಕ್ತಿ ಗೀತೆ :-


ಗಾಯನ: ಬಿ. ಕೆ. ಸುಮಿತ್ರಾ 

ನೋಡು ನೋಡು ಕಣ್ಣಾರೆ ನಿಂತಿಹಳು,
ನಗು ನಗುತಾ ಚಾಮುಂಡಿ ನಿಂತಿಹಳು||2||
ತಾಯಿ ಹೃದಯ ತಂದ ತುಂಬು ಮಮತೆಯಿಂದ,
ಬಾ ಇಲ್ಲಿ ಓ ಕಂದ ಎನುತಿಹಳೂ||2||
ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು
||ನೋಡು ನೋಡು||

ಮೈಸೂರು ನಗರದ ಬೆಟ್ಟದ ಮೇಲೆ,
ಮಹಿಷಾಸುರಮರ್ಧಿನಿಯ ವೈಭವ ಲೀಲೆ||2||
ಧನುಜ ಸಂಹಾರಿಣಿ ತ್ರಿಭುವನ ಪೋಷಿಣಿ,
ಶಂಕರನ ರಾಣಿಗೀವ ಹೂಗಳ ಮಾಲೆ||2||
||ನೋಡು ನೋಡು||

ನಂಬಿರುವ ಭಕ್ತರ ರಕ್ಷೆಗಾಗಿ,
ನಂಬದಿಹ ದುಷ್ಟರ ಶಿಕ್ಷೆಗಾಗಿ||2||
ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ,
ಕರುನಾಡ ಮಕ್ಕಳ ಹಿರಿ ದೈವವಾಗಿ||2||
||ನೋಡು ನೋಡು||

ಉಕ್ಕಿಬಹ ನದಿಯಲ್ಲೇ ಅವಳನಗೆ,
ಬೀಸಿಬಹ ಗಾಳಿಯಲೇ ಅವಳುಸಿರು||2||
ಹಸಿಹಸಿರು ಪೈರುಗಳೇ ಅವಳುಡುಗೆ,
ಆ ತಾಯಿ ರೂಪವೋ ಹಲವು ಬಗೆ||2||
||ನೋಡು ನೋಡು||

-ಧರ್ಮಜಾಗೃತಿ ಕರ್ನಾಟಕ

No comments:

Post a Comment