ಚಲನ ಚಿತ್ರ: ಕನಸುಗಾರ (2001)
ಸಂಗೀತ: ರಾಜೇಶ್ ರಾಮನಾಥ್
ಸಾಹಿತ್ಯ: ಕೆ ಕಲ್ಯಾಣ್
ನಿರ್ದೇಶನ: ಕರಣ್
ಗಾಯಕರು: ಎಸ್ .ಪಿ. ಬಾಲಸುಬ್ರಹ್ಮಣ್ಯಂ/ಕೆ. ಎಸ್. ಚಿತ್ರಾ
ನಟನೆ: ರವಿಚಂದ್ರನ್, ಪ್ರೇಮಾ, ಶಶಿಕುಮಾರ್, ಮಂಡ್ಯ ರಮೇಶ್
ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ
ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ
ಈ ಉಸಿರಿನ ಹಾಡಿನಲ್ಲಿ,
ಅನುರಾಗದ ಕಚಗುಳಿಯೊ
ಅನುರಾಗದ ಕಚಗುಳಿಯೊ
ನೆನಪೇ ನನ್ನ ಮೈ ಪುಳಕ,
ನೆನಪೇ ನನ್ನ ಮೈ ಜಳಕ
ನೆನಪೇ ನನ್ನ ಮೈ ಜಳಕ
ನೆನಪೇ ನನ್ನ ಧನಕನಕ ,
ನೆನಪೇ ಒಂದೇ ಕೊನೆತನಕ
ನೆನಪೇ ಒಂದೇ ಕೊನೆತನಕ
ಎಲ್ಲೋ ಅದು ಎಲ್ಲೋ
ಕಿವಿ ತುಂಬು ರಾಗ
ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ
ಸವಿನೆನಪಿನ ಶುಭಯೋಗ
ಸವಿನೆನಪಿನ ಶುಭಯೋಗ
ನಗೆಯ ಅಲೆಯಲ್ಲಿ,
ನಿನ್ನ ನಗೆಯಾ ಸವಿನೆನಪು
ನಿನ್ನ ನಗೆಯಾ ಸವಿನೆನಪು
ಚಿಗುರೊ ಎಲೆಯಲ್ಲಿ ,
ನಿನ್ನ ಲಜ್ಜೆಯ ಸವಿನೆನಪು
ನಿನ್ನ ಲಜ್ಜೆಯ ಸವಿನೆನಪು
ತಿಂಗಳ ಬೆಳಕಿನ ಸುಖದಲಿ ನಿನ್ನ
ಮುಖದಾ ಸವಿನೆನಪು
ಮುಖದಾ ಸವಿನೆನಪು
ರೆಪ್ಪೆ ತೆರೆಯುವಾ ನೆನಪೇ,
ಚೈತ್ರ ಮಾಸವು
ಚೈತ್ರ ಮಾಸವು
ತುಟಿಯ ತೆರೆಯುವಾ,
ನೆನಪೇ ಸುಪ್ರಭಾತವು
ನೆನಪೇ ಸುಪ್ರಭಾತವು
ಯಾರೋ ಬರೆದೂರು ನನ್ನೆದೆಯಾ ಲಾಲಿ
ಕೇಳೂ ಕ್ಷಣವೆಲ್ಲಾ ಸವಿನೆನಪಿನ ರಂಗೋಲಿ
ಚಲಿಸೋ ಮೂಡದಲಿ ನಿನ್ನ ತಳುಕಿನ ಸವಿನೆನಪು
ಊಕ್ಕೂ ಕಡಲಲ್ಲಿ ನಿನ್ನ ಆಸೆಯ ಸವಿನೆನಪು
ಗುಡಿಯಲಿ ದೇವರ ದೀಪದಲಿ, ನಿನ್ನ ಪ್ರತಿರೂಪದ ನೆನಪು
ಚೆಲುವು ತೆರೆಯುವಾ, ನೆನಪೇ ಪ್ರೇಮದರ್ಥವು
ಹೃದಯ ತೆರೆಯುವಾ, ನೆನಪೇ ಬಾಳಿಗರ್ಥವು
ಎಲ್ಲೋ ಅದು ಎಲ್ಲೋ, ಕಿವಿ ತುಂಬೊ ರಾಗ
ಕೇಳೋ ಕ್ಷಣವೆಲ್ಲಾ, ಸವಿನೆನಪಿನ ಶುಭಯೋಗ
ಈ ಕಂಗಳ ಗೂಡಿನಲ್ಲಿ ,ಹೊಸ ರಾಗದ ಚಿಲಿಪಿಲಿಯೂ
ಈ ಉಸಿರಿನ ಹಾಡಿನಲ್ಲಿ, ಅನುರಾಗದ ಕಚಗುಳಿಯೊ
ನೆನಪೇ ನನ್ನ ಮೈ ಪುಳಕ, ನೆನಪೇ ನನ್ನ ಮೈ ಜಳಕ
ನೆನಪೇ ನನ್ನ ಧನಕನಕ ನೆನಪೇ, ಒಂದೇ ಕೊನೆತನಕ
ಎಲ್ಲೋ ಅದು ಎಲ್ಲೋ ಕಿವಿ ತುಂಬು ರಾಗ
ಕೇಳೋ ಕ್ಷಣವೆಲ್ಲಾ ಸವಿನೆನಪಿನ ಶುಭಯೋಗ
********************************************************************************
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆ ಗೂಡೆ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಸ್ನೇಹದ ಅಕ್ಷರಗಳಿಗೆ ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ
*********************************************************************************
ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವೇ
ಒಂದೇ ಕೊರಳಿನ ದ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಮನಸು ಮರೆತು ಹಾಡಿದರೆ ಸ್ವರಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ
ಲಾಲಾಲಾಲಲಲ... ಲಾಲಾಲಾಲಲಲ...
ಓಂ ನಮಃ ಓ ಪ್ರೇಮಾ..
ಒಂದಾಗಿದೆ ಓ ಪ್ರೇಮಾ...
ಓಂ ನಮಃ ಓ ಪ್ರೇಮಾ..
ಒಂದಾಗಿದೆ ಓ ಪ್ರೇಮಾ...
ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ
ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ ನಂಬಿದೆ ಈ ಸ್ನೇಹ
ಹುಣ್ಣಿಮೆ ಗೆಳೆತನಕೆ ಸಾಗರವೇ ಸಾಕ್ಷಿ
ಹೆಣ್ಣಿನ ಗೆಳೆತನಕೆ ಪ್ರಕೃತಿಯೇ ಸಾಕ್ಷಿ
ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ ನಂಬಿದೆ ಈ ಸ್ನೇಹ
ಕಾಮನ ಬಿಲ್ಲೇ
ಸಾಹಿತ್ಯ: ಕೆ.ಕಲ್ಯಾಣ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆಗೂಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆಗೂಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆ ಗೂಡೆ
ಸ್ನೇಹದ ಅಕ್ಷರಗಳಿಗೆ ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಪ್ರೀತಿಯ ಅರ್ಥಗಳಲ್ಲಿ ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಸಣ್ಣ ಸಣ್ಣ ಹೂಗಳಿಗೂ ಬಣ್ಣ ಬಣ್ಣ ಕನಸು ಇದೆ
ಚಿಗುರು ಚಿಗುರು ಮುಂಚೇನೆ ಚೈತ್ರಕೊಂದು ಬಯಕೆ ಇದೆ
ಚುಕ್ಕಿಗಳ ಕರೆದು ಅಂತರಂಗ ತೆರೆದು ಆಸೆಗಳ ತಿಳಿಸೋಣ
ಆಸೆಗಳ ಅಳೆದು ಹೃದಯವ ತೊಳೆದು ಭಾವನೆ ಬೆಳೆಸೋಣ
ಭಾವನೆಗಳ ಮೇಲೆ ಭಾವನೆಗಳ ಬೆರೆಸಿ
ಬದುಕು ಒಂದು ಸುಂದರ ತೋಟವ ಮಾಡೋಣ
ಚಿಗುರು ಚಿಗುರು ಮುಂಚೇನೆ ಚೈತ್ರಕೊಂದು ಬಯಕೆ ಇದೆ
ಚುಕ್ಕಿಗಳ ಕರೆದು ಅಂತರಂಗ ತೆರೆದು ಆಸೆಗಳ ತಿಳಿಸೋಣ
ಆಸೆಗಳ ಅಳೆದು ಹೃದಯವ ತೊಳೆದು ಭಾವನೆ ಬೆಳೆಸೋಣ
ಭಾವನೆಗಳ ಮೇಲೆ ಭಾವನೆಗಳ ಬೆರೆಸಿ
ಬದುಕು ಒಂದು ಸುಂದರ ತೋಟವ ಮಾಡೋಣ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಕಣ್ಣಲ್ಲೆ ಒಂದು ಕಾಗದ ಬರೆಯುವೆ ಜೊತೆ ಗೂಡೆ
ಮೊದಲ ಮೊದಲ ಕುಡಿನೋಟ ತೊದಲು ಮನಸ ಕೈಯಲಿದೆ
ತೊದಲ ತೊದಲ ಒಡನಾಟ ಅದಲು ಬದಲು ಆಗಲಿದೆ
ದಿನ ಪ್ರತಿ ಘಳಿಗೆ ನಮ್ಮ ಒಳ ಹೊರಗೆ ನಿರ್ಮಲ ಮನಸು ಇದೆ
ಮನಸಿನ ಕನ್ನಡಿ ಬರೆಯುವ ಮುನ್ನುಡಿ ಬಯಸುವ ಕಣ್ಣಲಿದೆ
ನಿಮಿಷದ ಬರವಸೆಯೆ ವರುಷದ ಆನಂದ
ಬದುಕು ಒಂದು ಸುಂದರ ತೋಟವ ಮಾಡೋಣ
ತೊದಲ ತೊದಲ ಒಡನಾಟ ಅದಲು ಬದಲು ಆಗಲಿದೆ
ದಿನ ಪ್ರತಿ ಘಳಿಗೆ ನಮ್ಮ ಒಳ ಹೊರಗೆ ನಿರ್ಮಲ ಮನಸು ಇದೆ
ಮನಸಿನ ಕನ್ನಡಿ ಬರೆಯುವ ಮುನ್ನುಡಿ ಬಯಸುವ ಕಣ್ಣಲಿದೆ
ನಿಮಿಷದ ಬರವಸೆಯೆ ವರುಷದ ಆನಂದ
ಬದುಕು ಒಂದು ಸುಂದರ ತೋಟವ ಮಾಡೋಣ
ಕಾಮನ ಬಿಲ್ಲೇ ಕಾಮನ ಬಿಲ್ಲೇ ಮಾತಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಮನಸಲ್ಲೆ ಒಂದು ಮಲ್ಲಿಗೆ ಮಂಟಪವ ಮಾಡೆ
ಸ್ನೇಹದ ಅಕ್ಷರಗಳಿಗೆ ಇಲ್ಲಿ ಪ್ರೀತಿಯ ಅರ್ಥಗಳುಂಟು
ಪ್ರೀತಿಯ ಅರ್ಥಗಳಲ್ಲಿ ಸವಿ ಸ್ನೇಹದ ಕನಸುಗಳುಂಟು
ಎದೆಯ ಈ ಜೋಗದ ಸಿರಿಯ ಸಿರಿನೋಡೆ
ಎದೆಯ ಈ ಜೋಗದ ಸಿರಿಯ ಸಿರಿನೋಡೆ
*********************************************************************************
ಕೋಟಿ ಪಲ್ಲವಿ
ಸಾಹಿತ್ಯ: ಕೆ.ಕಲ್ಯಾಣ್
ಹಾಡಿದವರು: ಕೆ. ಎಸ್. ಚಿತ್ರಾ .
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ಇದ ಬೆಳ್ಳಿ ಹಬ್ಬದ ನಗುವಿನಲಿ
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ಇದ ಬೆಳ್ಳಿ ಹಬ್ಬದ ನಗುವಿನಲಿ
ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವೇ
ಒಂದೇ ಕೊರಳಿನ ದ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಮನಸು ಮರೆತು ಹಾಡಿದರೆ ಸ್ವರಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ
ಕೋಗಿಲೆಗಳ ಗುಂಪಲ್ಲಿ ಹುಟ್ಟು ಗುಬ್ಬಿಯ ಮಾತುಗಳು
ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳು ಜನ್ಮಗಳು
ಧಮನಿ ಧಮನಿಗೆ ಸರಿಗಮಪದನಿಯ ಮಿಟೋ ತಂತಿಗಳು
ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳು ಜನ್ಮಗಳು
ಧಮನಿ ಧಮನಿಗೆ ಸರಿಗಮಪದನಿಯ ಮಿಟೋ ತಂತಿಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ನೂರು ನೂರು ತಿರುವುಗಳು ಬದುಕಿನ ದಾರಿಗೆ
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ನೀತಿ ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿ ನಿಮಿಷವೂ ಸ್ಫೂರ್ತಿ ದೇವರೇ ನಮಗಿಲ್ಲಿ
ಏಳು ಸ್ವರಗಳೆ ನಮ್ಮ ಏಳು ಲೋಕಗಳು
ಸ್ವರಗಳ ತೊಟ್ಟಿಲ ತೂಗುವ ಕೈಯಲ್ಲಿ ಉಂಗುರ ನಾವುಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ನೀತಿ ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿ ನಿಮಿಷವೂ ಸ್ಫೂರ್ತಿ ದೇವರೇ ನಮಗಿಲ್ಲಿ
ಏಳು ಸ್ವರಗಳೆ ನಮ್ಮ ಏಳು ಲೋಕಗಳು
ಸ್ವರಗಳ ತೊಟ್ಟಿಲ ತೂಗುವ ಕೈಯಲ್ಲಿ ಉಂಗುರ ನಾವುಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಈ ಯೌವ್ವನ ತುಂಬಿದ ಬದುಕಿನಲಿ
ದಿನ ಬೆಳ್ಳಿ ಹಬ್ಬದ ನಗುವಿನಲಿ
ಒಂದೇ ಇಬ್ಬನಿ ಒಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದ್ವನಿಗೆ ಕೋಟಿ ಹೃದಯದ ಸ್ಪರ್ಶವಿದೆ
ಲಾಲಾಲಾಲಲಲ... ಲಾಲಾಲಾಲಲಲ...
*********************************************************************************
ಓಂ ನಮಃ ಓ
ಸಾಹಿತ್ಯ: ಕೆ.ಕಲ್ಯಾಣ್
ಗಾಯಕ ರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್
ಓಂ ನಮಃ ಓ ಪ್ರೇಮಾ.. ಒಂದಾಗಿಸೆ ಓ ಪ್ರೇಮಾ
ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ
ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ
ಪ್ರೀತಿಗಾಗಿ ನಮ್ಮ ಧೀರನ್ ಧೀರನ್
ಅಂದುಕೊಳ್ಳದೆ ಆಗಿ ಹೋಗುವ
ಅಂದುಕೊಳ್ಳದೆ ಆಗಿ ಹೋಗುವ
ಬಾಳಿಗಾಗಿಯೇ ಜನನ ಮರಣ ..
ಓಂ ನಮಃ ಓ ಪ್ರೇಮಾ..
ಒಂದಾಗಿದೆ ಓ ಪ್ರೇಮಾ...
ಕಪ್ಪೆ ಚಿಪ್ಪಿನೊಳಗೆ ಸ್ವಾತಿ ಕಣ್ಣ ಚಿಪ್ಪಿನೊಳಗೆ ಪ್ರೀತಿ
ಮುತ್ತು ಗೊತ್ತೇ ಆಗದೆ ಮನಸು ತೆರೆಯಿತು
ಜೇನಗೂಡಿನಲ್ಲಿ ಜೇನು ಮುತ್ತು
ಮುತ್ತು ಗೊತ್ತೇ ಆಗದೆ ಮನಸು ತೆರೆಯಿತು
ಜೇನಗೂಡಿನಲ್ಲಿ ಜೇನು ಮುತ್ತು
ಎದೆಯ ಗೂಡಿನಲ್ಲಿ ಪ್ರಾಣ ಇತ್ತು
ಅತ್ತು ಕರೆಯದೆ ಸೊಗಸು ಬರೆಯಿತು
ಪರಿಚಯವಿಲ್ಲದೆ ಹೋದರು ಕರೆಯುವುದಿ ಈ ಪ್ರೇಮಾ
ಅತಿಶಯದ ಆರಂಭವೇ ನಮ್ಮ ಈ ಪ್ರೇಮಾ
ಅತ್ತು ಕರೆಯದೆ ಸೊಗಸು ಬರೆಯಿತು
ಪರಿಚಯವಿಲ್ಲದೆ ಹೋದರು ಕರೆಯುವುದಿ ಈ ಪ್ರೇಮಾ
ಅತಿಶಯದ ಆರಂಭವೇ ನಮ್ಮ ಈ ಪ್ರೇಮಾ
ಓಂ ನಮಃ ಓ ಪ್ರೇಮಾ..
ಒಂದಾಗಿದೆ ಓ ಪ್ರೇಮಾ...
ಓ.. ಗಾಳಿಯೊಳಗೆ ತೇಲಿ ಬಂದ ಗಂಧ
ಆಸೆಯೊಳಗೆ ಹಂಚಿ ಕೊಡುವ ಚೆಂದ
ನಿದ್ದೆ ಇಲ್ಲದೆ ಕನಸು ಕಲಿಸಿತು
ಹರೆಯದೊಳಗೆ ಅವಿತುಕೊಂಡ ಅಂದ
ಪ್ರಣಯದೊಳಗೆ ಕವಿತೆಯಾಗೋ ಬಂಧ
ಸದ್ದೇ ಇಲ್ಲದೆ ವಯಸು ಮರೆಸಿತು
ಯುಗಳ ಗೀತೆಯ ಹಿಂದಿದೆ ಯುಗಳ ಈ ಪ್ರೇಮ
ಮುಂದಿನ ಜನ್ಮಕೂ ಮುಂದಿನ ಕಣ್ಣು ಮುಂದಿನ ಪ್ರೇಮ
ಅಪರೂಪದ ಆರಂಭವೇ ನಮ್ಮ ಈ ಪ್ರೇಮಾ ...
ಓಂ ನಮಃ ಓ ಪ್ರೇಮಾ..
ಒಂದಾಗಿಸೆ ಓ ಪ್ರೇಮಾ
ಒಂದಾಗಿಸೆ ಓ ಪ್ರೇಮಾ
ಒಂದು ಮೋಡದ ಒಳಗೆ ಎಷ್ಟು ಹನಿ ಇದೆ ಹೇಳು
ಒಂದು ಹೃದಯದ ಒಳಗೆ ಎಷ್ಟು ಕನಸಿದೆ ಹೇಳು
ಅದು ಲೆಕ್ಕವಿಲ್ಲದ ದುಃಖವಿಲ್ಲದ
ಪ್ರೀತಿಗಾಗಿ ನಮ್ಮ ಧೀರನ್ ಧೀರನ್
ಅಂದುಕೊಳ್ಳದೆ ಆಗಿ ಹೋಗುವ
ಅಂದುಕೊಳ್ಳದೆ ಆಗಿ ಹೋಗುವ
ಬಾಳಿಗಾಗಿಯೇ ಜನನ ಮರಣ ..
********************************************************************************
ಸೂರ್ಯನ ಗೆಳೆತನಕೆ
ಸಾಹಿತ್ಯ: ಕೆ.ಕಲ್ಯಾಣ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ
ಓ.....ಓ..ಓ..ಓ.ಓ.
ಲಾ.ಲ.ಲಾ.ಲ.ಲಾ...
ಲಾ.ಲ.ಲಾ.ಲ.ಲಾ...
ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ ನಂಬಿದೆ ಈ ಸ್ನೇಹ
ಹುಣ್ಣಿಮೆ ಗೆಳೆತನಕೆ ಸಾಗರವೇ ಸಾಕ್ಷಿ
ಹೆಣ್ಣಿನ ಗೆಳೆತನಕೆ ಪ್ರಕೃತಿಯೇ ಸಾಕ್ಷಿ
ದಿಕ್ಕುಗಳ ಎಣಿಸಿ ಚುಕ್ಕಿಗಳ ಗುಣಿಸಿ
ಎದ್ದುಬಂದ ಆಸೆಯಿದು
ಋತುಗಳ ಕುಣಿಸಿ ಮಿಂಚುಗಳ ತಣಿಸಿ
ಋತುಗಳ ಕುಣಿಸಿ ಮಿಂಚುಗಳ ತಣಿಸಿ
ಎದ್ದುಬಂದ ಸೆಳೆತವಿದು
ಪಾತ್ರವಿರದ ಕಥೆಯಲ್ಲಿ ಕೈಯ ಹಿಡಿದು ಜೊತೆಯಲ್ಲಿ
ಪಾತ್ರವಿರದ ಕಥೆಯಲ್ಲಿ ಕೈಯ ಹಿಡಿದು ಜೊತೆಯಲ್ಲಿ
ನಡೆಯೋ ಬಂಧವಿದು
ಸೂತ್ರವಿರದ ಬದುಕಲ್ಲಿ ಮನಸು ಹಿಡಿದು ಕ್ಷಣದಲ್ಲಿ
ಸೂತ್ರವಿರದ ಬದುಕಲ್ಲಿ ಮನಸು ಹಿಡಿದು ಕ್ಷಣದಲ್ಲಿ
ನಡೆಸೋ ಸತ್ಯವಿದು
ಕನಸುಗಳಲೇ ಬದುಕನು ನೋಡು
ಕನಸುಗಳಲೇ ಬದುಕನು ನೋಡು
ಬದುಕಿನ ಕನಸಾಗಿ ಬರುವೆ
ಬದುಕಲಿ ಬರಿ ಕನಸನೆ ನೋಡು
ಬದುಕಲಿ ಬರಿ ಕನಸನೆ ನೋಡು
ಕನಸಲಿ ಬದುಕಾಗಿ ಇರುವೆ
ಹೂವಿನ ಗೆಳೆತನಕೆ ಪರಿಮಳವೇ ಸಾಕ್ಷಿ
ಚೈತ್ರದ ಗೆಳೆತನಕೆ ಕೋಗಿಲೆಯೇ ಸಾಕ್ಷಿ
ಚೈತ್ರದ ಗೆಳೆತನಕೆ ಕೋಗಿಲೆಯೇ ಸಾಕ್ಷಿ
ಭೂಮಿಗೊಂದು ಕಣ್ಣ ಬಾನಿಗೊಂದು ಬಣ್ಣ
ಕಟ್ಟಿಬಿಟ್ಟ ಮಾಯೆ ಇದು
ಹಗಲಿಗೆ ಹೆಗಲ ಇರುಳಿಗೆ ಮಡಿಲ
ಹಗಲಿಗೆ ಹೆಗಲ ಇರುಳಿಗೆ ಮಡಿಲ
ತೋರಿಕೊಟ್ಟ ಸನಿಹವಿದು
ಗುರುತು ಇರದ ಗುಂಡಿಗೆಯ ಗುರುತು ಮಾಡಿ
ಗುರುತು ಇರದ ಗುಂಡಿಗೆಯ ಗುರುತು ಮಾಡಿ
ಸ್ವಾಗತಿಸೋ ನಿತ್ಯವಸಂತವಿದು
ಬಯಸೇ ಇರದ ಭಾಗ್ಯವನು ಬಾಗಿಲು ತೆರೆದು
ಬಯಸೇ ಇರದ ಭಾಗ್ಯವನು ಬಾಗಿಲು ತೆರೆದು
ಆದರಿಸೋ ನಿತ್ಯಸಂದೇಶವಿದು
ಅಣುಅಣುವಲು ಅಮೃತವರ್ಷಿಣಿ ಗೆಲ್ಲುವ
ಅಣುಅಣುವಲು ಅಮೃತವರ್ಷಿಣಿ ಗೆಲ್ಲುವ
ಸಮಯಕೆ ಕಾದಿರುವೆ
ಕ್ಷಣಕ್ಷಣದಲು ಅಂತರಗಂಗೆಯ ಹರಿಸಲು
ಕ್ಷಣಕ್ಷಣದಲು ಅಂತರಗಂಗೆಯ ಹರಿಸಲು
ಹೃದಯಕೆ ಸೋತಿರುವೆ
ಸೂರ್ಯನ ಗೆಳೆತನಕೆ ಕಿರಣಗಳೇ ಸಾಕ್ಷಿ
ಚಂದ್ರನ ಗೆಳೆತನಕೆ ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ ನಂಬಿದೆ ಈ ಸ್ನೇಹ
*********************************************************************************
No comments:
Post a Comment