Thursday, September 13, 2018

ಕಲಾವಿದ (1997)


ಚಲನ ಚಿತ್ರ: ಕಲಾವಿದ (1997)
ನಿರ್ದೇಶನ: ವಿ. ರವಿಚಂದ್ರನ್ 
ಸಾಹಿತ್ಯ & ಸಂಗೀತ: ಹಂಸಲೇಖ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ/ಕೆ. ಎಸ್. ಚಿತ್ರಾ 
ನಟನೆ: ವಿ. ರವಿಚಂದ್ರನ್, ರೋಜಾ, ಹೀರಾ ರಾಜಗೋಪಾಲ 


ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ
ಹೆಣ್ನವಿಲೇನವಿಲೇ 
ಬಾ ನವಿಲೇ ನವಿಲೇ
ಬಾ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ
ಹೆಣ್ಣವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ನವಿಲೇ ನವಿಲೇ

ಸೌಂದರ್ಯ ರೇಖೆಯ, ನೂರಾರು ಶಾಖೆಯ
ಸೌಂದರ್ಯ ರೇಖೆಯ, ನೂರಾರು ಶಾಖೆಯ
ಆರಂಭ ಹೇಳು ಎಲ್ಲಿದೆ, ಎಲ್ಲಿದೆ
ಈ ಅಂದ ಸಂಪೂರ್ಣ ಕಲೆಯಾಗಿದೆ
ಮಾತಾಡೊ ಬೇಲೂರ ಶಿಲೆಯಾಗಿದೆ
ಹೆಣ್ಣಾಗಿದೆ ಹೆಣ್ಣವಿಲಾಗಿದೆ

ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ
ಹೆಣ್ಣವಿಲೇ ನವಿಲೇ
ಬಾ ನವಿಲೇ ನವಿಲೇ
ಬಾರೆ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ

ನೀನಿಲ್ಲಿ ಬಂದಿರೆ, ಹೂ ನಗುವ ತಂದಿರೆ
ನೀನಿಲ್ಲಿ ಬಂದಿರೆ, ಹೂ ನಗುವ ತಂದಿರೆ
ನೋಡಲ್ಲಿ ತಾರೆ ನಾಚಿದೆ, ಮಿಂಚದೆ
ಆ ತಾರೆ ಏನಾದರೇನಾಯಿತು
ನೀ ದೂರ ಹೋಗದೆ ಇದ್ದರಾಯಿತು
ನೀನಾಯಿತು ಇನ್ನು ನಾನಾಯಿತು

ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ
ಹೆಣ್ಣವಿಲೇ ನವಿಲೇ
ಬಾ ನವಿಲೇ ನವಿಲೇ
ಬಾ ಬಾರೆ ನವಿಲೇ ನವಿಲೇ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ


*********************************************************************************

ಹೂವಾ ರೋಜಾ ಹೂವಾ

ಸಾಹಿತ್ಯ: ಹಂಸಲೇಖ  
ಗಾಯಕರು: ಮನೂ 


ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ 
ಭೂಮಿಗೆ ಹೂವೆ ಸಿಂಗಾರ ಭೂಮಿಲಿ 
ಪ್ರೀತಿಗೆ ಹೆಣ್ಣು ತಾನೆ ಸಿಂಗಾರ

ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ 

ಕಣ್ಣಲ್ಲಿ ಸೂರ್ಯಕಾಂತಿ  ತುಟಿಯಲ್ಲಿ ಚೆಂಗುಲಾಬಿ
ಮೈಯೆಲ್ಲ ಕೆಂಡಸಂಪಿಗೆ ಮಾತೆಲ್ಲ ಮಲ್ಲೆ ಜಾಜಿ
ನಗುವೆಲ್ಲ ದುಂಡು ಮಲ್ಲೆ  ಮನಸೆಲ್ಲ ರಾತ್ರಿ ರಾಣಿ
ಹೂವಿಗೆ ಜೇನು ತಾನೆ ಜೀವ ಪ್ರೀತಿಗೆ ನಾನು ತಾನೆ ಜೀವ
ಭೂಮಿಗೆ ಹೂವೆ ಸಿಂಗಾರ  ಭೂಮಿಲಿ 
ಪ್ರೀತಿಗೆ ಹೆಣ್ಣು ತಾನೆ ಸಿಂಗಾರ

ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ 

ಇರುಳಲ್ಲಿ ಮೊಗವ ಮುಚ್ಚಿ ಹಗಲೆಲ್ಲ ಮೊಗವ ಬಿಚ್ಚಿ
ನಲಿದಾವೊ ಎಲ್ಲ ಹೂವ ಮನಸಲ್ಲಿ ಪ್ರೀತಿ ಮುಚ್ಚಿ
ಮೊಗದಲ್ಲಿ ಬಿಂಕ ಬಿಚ್ಚಿ ನುಲಿದಾಳು ನನ್ನ ಹೂವ
ಹೂವಿಗೆ ಬಣ್ಣ ತಾನೆ ಅಂದ ಹೆಣ್ಣಿಗೆ ಜಂಭ ತಾನೆ ಚಂದ
ಭೂಮಿಗೆ ಹೂವೆ ಸಿಂಗಾರ ಭೂಮಿಲಿ 
ಪ್ರೀತಿಗೆ ಹೆಣ್ಣು ತಾನೆ ಸಿಂಗಾರ

ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ
ಭೂಮಿಗೆ ಹೂವೆ ಸಿಂಗಾರ ಭೂಮಿಲಿ 
ಪ್ರೀತಿಗೆ ಹೆಣ್ಣು ತಾನೆ ಸಿಂಗಾರ

ಹೂವಾ ರೋಜಾ ಹೂವಾ ಹೂವಾ ನನ್ನ ಜೀವಾ
ಹೂವಾ ಮಲ್ಲಿಗೆ ಹೂವಾ ಹೂವಾ ನನ್ನ ಜೀವಾ 

*********************************************************************************

ಪ್ರೇಮ ಪ್ರೇಮ

ಸಾಹಿತ್ಯ: ಹಂಸಲೇಖ  
ಗಾಯಕರು: ಹರಿಹರನ್, ಎಸ್. ಜಾನಕಿ 


ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಓ ತುಂಟಿಯೆ, ಗೋರಂಟಿಯೆ  
ಎಲ್ಲಿರುವೆಯೆ, ಹೇಗಿರುವೆಯೆ
ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ
ಓ ನಂಜಿಯೆ, ಕಾರಂಜಿಯೆ
ಯಾವೂರಿಗೆ, ಹೋಗಿರುವೆಯೆ
ಸಾಕಿನ್ನು ಬಾರೆ ಬಾ ಬಾರೆ ತುಂಟಾಟ
ಬೇಡಮ್ಮ ಬೇಡ ಈ ಪ್ರೀತಿ ಜೂಟಾಟ

ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಪ್ರೇಮ ಪ್ರೇಮ, ಪ್ರೇಮ ಪ್ರೇಮ

ಬಣ್ಣದ ನೀರಲ್ಲಿ ಕುಂಚದ ಕೊನೆಯಲ್ಲಿ ಹಾಳೆಯ ಎದೆಯಲ್ಲಿ
ನಿನ್ನನ್ನು ಬಿಡಿಸೋಕೆ ನೋಡಿದೆ ಮೂಡದೆ ನೀ ಗೋಜು ಮಾಡಿದೆ

ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಬಾರೇ ಪ್ರೇಮ, ತಾರೇ ಪ್ರೇಮ

ಓ ಕುಂಚವೆ, ಸಂಕೋಚವೆ ಓ ಬಣ್ಣವೆ, ಬಿನ್ನಾಣವೆ
ಸಾಕಿನ್ನು ಬಾರೆ ಬಾ ಬಾರೆ ಚೆಲ್ಲಾಟ ಕೇಳಿಸದೆ ಈ ನನ್ನ ಕೂಗಾಟ
ಮಾತಲಿ ನೀ ಮುಂದೆ ಅಲ್ಲಿಗೆ ಬಾ ಎಂದೆ ತಪ್ಪದೆ ನಾ ಬಂದೆ
ಅಲ್ಲಿಯೆ ನೀನಿರುವೆ ಎಂದರು ಎಲ್ಲರು ನೀನಿಲ್ಲೆ ಅಂದರು

ಪ್ರೇಮ ಪ್ರೇಮ, ಪ್ರೇಮ ಪ್ರೇಮ
ಪ್ರೇಮ ಪ್ರೇಮ, ಪ್ರೇಮ ಪ್ರೇಮ

ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ
ಓ ತುಂಟಿಯೆ, ಓ ಮಳ್ಳಿಯೆ  ಓ ಕಳ್ಳಿಯೆ, ಓ ಸುಳ್ಳಿಯೆ
ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ

*********************************************************************************

ಇನಿಯಾ ಇನಿಯಾ

ಸಾಹಿತ್ಯ: ಹಂಸಲೇಖ    
ಗಾಯಕರು: ಮನೋ, ಸ್ವರ್ಣಲತಾ 


ಇನಿಯಾ ಇನಿಯಾ ಇನಿಯಾ 
ಇನಿಯಾ ಇನಿಯಾ ಇನಿಯಾ
ಒಲವಿನ ಓಲೆಯಿದು ಹೃದಯದ ಆಸೆ ಇದು
ಗೆಳೆಯ ಗೆಳೆಯ ಗೆಳೆಯ
ಹೃದಯದ ಹೂವು ಇದು ಅರಳುವ ಕಲಾವಿದು
ಹೇ ಆಯ್ ಲವ್ ಯು  ಹೇ ಆಯ್ ಲವ್ ಯು
ಹೇ ಆಯ್ ಲವ್ ಯು ಆಯ್ ಲೈವ್ ಫಾರ್ ಯು
ಆಯ್ ವಿಲ್ ಡೈ ಫಾರ್ ಯು

ನೀನೆ ಮಿಂಚು ನೀನೆ ಗುಡುಗು ನೀನಾಗು ಕೋವಿ ಕುಂಚ
ಆಯ್ ಲೈವ್ ಫಾರ್ ಯು ಆಯ್ ಬ್ರೆಥ್ ಫಾರ್ ಯು
ಆಯ್ ಲೈವ್ ಫಾರ್ ಯು ಆಯ್ ಬ್ರೆಥ್ ಫಾರ್ ಯು
ಆಯ್ ವಿಲ್ ಡೈ ಫಾರ್ ಯು 

ಪ್ರೀತಿಸುವ ಪ್ರೀತಿಸುವ ಪಂದ್ಯದಲ್ಲಿ ಇಂದು 
ನಿಂದೆ ಪ್ರಥಮ ಸ್ಥಾನ
ಸಾಧಿಸುವ ಹಾದಿಯಲಿ ಇಂದು 
ನಿಂದೆ ಸ್ಥಾನಮಾನ
ನಿನ್ನಾಸೆಯ ನಾ ಪೂರೈಸುವೆ 
ನಿನ್ನನೆಯ ನಾ ಕಾಪಾಡುವೆ

ಇನಿಯಾ ಇನಿಯಾ ಇನಿಯಾ
ಒಲವಿನ ಓಲೆಯಿದು ಹೃದಯದ ಆಸೆ ಇದು
ಹೇ ಆಯ್ ಲವ್ ಯು ಆಯ್ ಲೈವ್ ಫಾರ್ ಯು
ಆಯ್ ವಿಲ್ ಡೈ ಫಾರ್ ಯು
ಸರದಾರ ಸರದಾರ ಸುಕುಮಾರ ನೀನು ಎಲ್ಲ ಗೆಲ್ಲಬೇಕು
ಕಲೆಗಾರ ಕಲೆಗಾರ ನಿನ್ನ ಕಲೆ ನಿಲ್ಲಬೇಕು
ಹೋರಾಡುವೆ ನಾ ಈ ಪ್ರೀತಿಗೆ 
ಶರಣಾಗುವೆ ನಾ ಈ ಸ್ನೇಹಕೆ
ಒಲವೇ ನೀನು ಬರೆದ ಒಲವಿನ 
ಒಲೆಯಿದು ಬದುಕಿನ ಹಾಡು ಇದು
ಹೇ ಆಯ್ ಲವ್ ಯು  ಹೇ ಆಯ್ ಲವ್ ಯು
ಹೇ ಆಯ್ ಲವ್ ಯು ಆಯ್ ಲೈವ್ ಫಾರ್ ಯು
ಆಯ್ ವಿಲ್ ಡೈ ಫಾರ್ ಯು

ನೀನೆ ಮಿಂಚು ನೀನೆ ಗುಡುಗು ನೀನಾಗು ಕೋವಿ ಕುಂಚ
ಆಯ್ ಲೈವ್ ಫಾರ್ ಯು ಆಯ್ ಬ್ರೆಥ್ ಫಾರ್ ಯು
ಆಯ್ ಲೈವ್ ಫಾರ್ ಯು ಆಯ್ ಬ್ರೆಥ್ ಫಾರ್ ಯು
ಆಯ್ ವಿಲ್ ಡೈ ಫಾರ್ ಯು 

*********************************************************************************

ಒಂದು ಬೆಚ್ಚನೆ

ಸಾಹಿತ್ಯ: ಹಂಸಲೇಖ 
ಗಾಯಕರು: ಮನೋ


ಒಂದು ಬೆಚ್ಚನೆ ಗೂಡಿರಲು
ಒಂದು ಬೆಚ್ಚನೆ ಗೂಡಿರಲು,  ವೆಚ್ಚಕಿಷ್ಟು ಹೊನ್ನಿರಲು
ಒಂದು ಬೆಚ್ಚನೆ ಗೂಡಿರಲು,  ವೆಚ್ಚಕಿಷ್ಟು ಹೊನ್ನಿರಲು
ಇಚ್ಛೆ ಅರಿವ ಸತಿ ಇರಲು, ನೆಚ್ಚಿದ ಕಲೆ ಒಲಿದಿರಲು 
ಸ್ವರ್ಗಲೋಕದ ಚಿಂತೆ ಯಾಕೆ ಹೇಳಯ್ಯಾ...
ಪ್ರೇಮಲೋಕ ಒಂದೇನೆ ಸಾಕೇಳಯ್ಯಾ

ಒಂದು ಬೆಚ್ಚನೆ ಗೂಡಿರಲು,  ವೆಚ್ಚಕಿಷ್ಟು ಹೊನ್ನಿರಲು
ಇಚ್ಛೆ ಅರಿವ ಸತಿ ಇರಲು, ನೆಚ್ಚಿದ ಕಲೆ ಒಲಿದಿರಲು 
ಸ್ವರ್ಗಲೋಕದ ಚಿಂತೆ ಯಾಕೆ ಹೇಳಯ್ಯಾ...
ಪ್ರೇಮಲೋಕ ಒಂದೇನೆ ಸಾಕೇಳಯ್ಯಾ

ಸುಂದರ ಈ ಲೋಕ ನೀವಿರಲು 
ಸುಂದರ ಈ ಹಾಡು ನೀವಿರಲು
ಸುಂದರ ಈ ಪ್ರೀತಿ ನೀವಿರಲು 
ಸುಂದರ ಈ ಕನಸು ನೀವಿರಲು
ನನ್ನ ನಿಮ್ಮ ಜೀವ ಭಾವ ಒಂದೇ
ಮನಸೇ ಮನೆಯಮ್ಮಾ ಮನಸಂತೆ ಮಾತಮ್ಮಾ..
ನಿನ್ನೀ ಮನಸಲ್ಲಿ ನಾನಿರಲೇ ಹೇಳಮ್ಮಾ

ಒಂದು ಬೆಚ್ಚನೆ ಗೂಡಿರಲು,  
ವೆಚ್ಚಕಿಷ್ಟು ಹೊನ್ನಿರಲು
ಇಚ್ಛೆ ಅರಿವ ಸತಿ ಇರಲು, 
ನೆಚ್ಚಿದ ಕಲೆ ಒಲಿದಿರಲು 
ಸ್ವರ್ಗಲೋಕದ ಚಿಂತೆ ಯಾಕೆ ಹೇಳಯ್ಯಾ...
ಪ್ರೇಮಲೋಕ ಒಂದೇನೆ ಸಾಕೇಳಯ್ಯಾ
ಒಂದು ಬೆಚ್ಚನೆ ಗೂಡಿರಲು,  
ವೆಚ್ಚಕಿಷ್ಟು ಹೊನ್ನಿರಲು
ಇಚ್ಛೆ ಅರಿವ ಸತಿ ಇರಲು, 
ನೆಚ್ಚಿದ ಕಲೆ ಒಲಿದಿರಲು 

ಯಾರಿಹರೋ ನಗುವ ಹೂಗಳಲಿ  
ಯಾಕಿಹುದೊ ಮೌನ ಬೆಟ್ಟದಲಿ 
ಏನದರ ಹಾಡು ಹಕ್ಕಿಯಲಿ  
ಹೇಗಿದೆ ಈ ಸೊಗಸು ಸೃಷ್ಟಿಯಲಿ
ಏನು ಹೇಳಬೇಕೋ ಕಾಣೆ ಜಾಣೆ
ಸೃಷ್ಟಿ ಬೆನ್ನಲ್ಲಿ ಅದು ಯಾರೋ ಇಹರಲ್ಲಿ
ನಾ ನಿನಲ್ಲಿ ಅದು ಏನೋ ಇದೆ ಇಲ್ಲಿ

ಒಂದು ಬೆಚ್ಚನೆ ಗೂಡಿರಲು,  
ವೆಚ್ಚಕಿಷ್ಟು ಹೊನ್ನಿರಲು
ಇಚ್ಛೆ ಅರಿವ ಸತಿ ಇರಲು, 
ನೆಚ್ಚಿದ ಕಲೆ ಒಲಿದಿರಲು 

*********************************************************************************

ಸಾವಿರಕೆ ಒಬ್ಬ

ಸಾಹಿತ್ಯ: ಹಂಸಲೇಖ  
ಗಾಯಕರು: ಎಸ್.ಜಾನಕಿ 


ಸಾವಿರಕೆ ಒಬ್ಬ ಕಲಾವಿದ
ಸಾವಿರಕೆ ಒಬ್ಬ ಕಲಾವಿದ 
ಹುಮ್ಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ 
ಅಭಿಮಾನವ ಹೋಳೆ ಮಾಡಿದ
ಸಾವಿರಕೆ ಒಬ್ಬ ಕಲಾವಿದ 
ಹುಮ್ಮನದ ಚಿತ್ರ ಕಲಾವಿದ

ಕೈಯಲಿ ಪುಟ್ಟ ಕುಂಚ, ಕಣ್ಣಲೋ ಈ ಪ್ರಪಂಚ
ಆ ಮನಸೆಲ್ಲೋ,  ಆ ತಪಸೆಲ್ಲೋ,
ಬಿಳೀ ಹಾಳೆಯಲಿ  ರಸ ವೇಳೆಯಲಿ ಈ ಚಿತ್ತಾರ...
ಆ ರವಿಗೆ ಬೆಳಕು ನೆರಳಿನ ಆಟ
ಈ ಕುಂಚಕೆ ಏಳು ಬಣ್ಣಗಳ ಕೂಟ

ಸಾವಿರಕೆ ಒಬ್ಬ ಕಲಾವಿದ 
ಹುಮ್ಮನದ ಚಿತ್ರ ಕಲಾವಿದ
ಒಳಗಣ್ಣು ತೆರೆದು ನೋಡು, 
ಸೌಂದರ್ಯ ಸೂರೇ ಮಾಡು
ಈ ಜಗವೆಲ್ಲಾ ಬರಿ ಕಲೆಯಂತೆ, 
ಈ ಕಲೆಯಲ್ಲಿ , ಈ ಬಲೆಯಲ್ಲಿ ನೀ ಸೆರೆಯಾಗು
ಈ ದೇಹಕೆ ತಪ್ಪದು ಎಂದಿಗೂ ಸಾವು ನೋವು
ಈ ಜೀವಕೆ ತಪ್ಪದೆ ತಿನಿಸು ಕಲೆಯ  ಮೇವು

ಸಾವಿರಕೆ ಒಬ್ಬ ಕಲಾವಿದ 
ಹುಮ್ಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ 
ಅಭಿಮಾನವ ಹೋಳೆ  ಮಾಡಿದ

*********************************************************************************

ಅಂದಗಾರ ಅಳಿಮಯ್ಯ

ಸಾಹಿತ್ಯ: ಹಂಸಲೇಖ  
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸ್ವರ್ಣಲತಾ 


ಅಂದಗಾರ ಅಳಿಮಯ್ಯ...
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..೩

ನಿನ್ನ ಅಂದ ನೋಡೋಕೆ ಕಣ್ಣಯಾಕಯ್ಯಾ
ನನ್ನ ಮಗಳ ನೀಡೋಕೆ ಚಿಂತೆಯಾಕಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಕನಸಿನಲ್ಲೇ ತೆಲಾಡೋ ಓ ಮಾವಯ್ಯಾ 
ನಿನ್ನ ಕನಸೋ ಕಾಣಳೋ ಈ ಹೆಣ್ಣಯ್ಯಾ 
ಸುಂದರ ಈ ಲೋಕ ನೀವಿರಲು ಸುಂದರ ಈ ಹಾಡು ನೀವಿರಲು
ಸುಂದರ ಈ ಪ್ರೀತಿ ನೀವಿರಲು  ಸುಂದರ ಈ ಕನಸು ನೀವಿರಲು
ನನ್ನ ನಿಮ್ಮ ಜೀವ ಭಾವ ಒಂದೇ ಮನಸೇ ಮನೆಯಮ್ಮಾ,
ಮನಸಂತೆ ಮಾತಮ್ಮಾ ನಿಮ್ಮಿ ಮನಸಲ್ಲಿ ನಾನಿರಲೇ ಹೇಳಮ್ಮಾ

ಅಂದಗಾರ ಅಳಿಮಯ್ಯ, ನಮ್ಮ ಮನೆಯೇ ನಿಂದಯ್ಯಾ
ಚಂದಮಾಮ ಚೆಲುವಯ್ಯ ನಮ್ಮ ಮನಸು ನಿಂದಯ್ಯಾ
ನಿನ್ನ ಜೊತೆಗೆ ಬಾಳೋದೆ ಪುಣ್ಯಾನಯ್ಯ
ನಿನ್ನ ಸೇವೆ ಮಾಡೋದೇ ಭಾಗ್ಯನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ

ಅಂದಗಾರ ಅಳಿಮಯ್ಯ, ನಮ್ಮ ಮನೆಯೇ ನಿಂದಯ್ಯಾ
ಯಾರಿಹರೋ ನಗುವ ಹೂಗಳಲಿ,  ಯಾಕಿಹುದೋ ಮೌನ ಬೆಟ್ಟದಲಿ
ಏನದರ ಹಾಡು ಹಕ್ಕಿಯಲಿ, ಹೇಗಿದೆ ಈ ಸೊಗಸು ಸೃಷ್ಟಿಯಲಿ 
ಏನು ಹೇಳಬೇಕೋ ಕಾಣೆ ಜಾಣೆ
ಸೃಷ್ಟಿ ಬೆನ್ನಲ್ಲಿ ಅದು ಯಾರೋ ಇಹರಿಲ್ಲಿ
ನನ್ನ ನಿನ್ನಲ್ಲಿ ಅದು ಏನೋ ಇದೆ ಇಲ್ಲಿ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ 

ಕನಸಿನಲ್ಲೇ ತೆಲಾಡೋ ಓ ಮಾವಯ್ಯಾ 
ನಿನ್ನ ಕನಸೋ ಕಾಣಳೋ ಈ ಹೆಣ್ಣಯ್ಯಾ 
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ನಿನ್ನ ಅಂದ ನೋಡೋಕೆ ಕಣ್ಣಯಾಕಯ್ಯಾ
ನನ್ನ ಮಗಳ ನೀಡೋಕೆ ಚಿಂತೆಯಾಕಯ್ಯಾ


*********************************************************************************

No comments:

Post a Comment