Saturday, September 8, 2018

ಸ್ಪರ್ಶ (2000)

ಚಂದಕಿಂತ ಚಂದ

ಚಲನಚಿತ್ರ : ಸ್ಪರ್ಶ (2000)
ಸಾಹಿತ್ಯ: ಇಟಗಿ ಈರಣ್ಣ
ಗಾಯನ: ಪಂಕಜ್ ಉಧಾಸ್
ಸಂಗೀತ: ಹಂಸಲೇಖ‌
ನಿರ್ದೇಶನ: ಸುನೀಲ್ ಕುಮಾರ್ ದೇಸಾಯಿ
ನಟನೆ: ಸುದೀಪ್, ಸುಧಾರಾಣಿ, ರೇಖಾ


ಚಂದಕಿಂತ ಚಂದ ನೀನೆ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ
ಅಂದ ಚಂದವು ನೀನೆ ಎಂದೆನು
ಚೆಂದ ಅಂದ ಅಂದ ಚೆಂದ
ಚಂದುಳ್ಳಿ ಚೆಲುವೆ ಓ ನನ್ನ ಒಲವೆ

ನಗುವ ಹೂ ನಗೆ ನಗುವಾ ಆ ಬಗೆ
ನಗುವೇ ನಾಚಿತು ನಾಚಿ ನಕ್ಕಿತು
ನಗುವಾ ಈ ಬಗೆ ಬೇಕು ಹೂವಿಗೆ
ಕಲಿಸು ಹೂವಿಗೆ ನಿನ್ನ ಹೂ ನಗೆ
ನಗುವೆ ಅಂದ ನಗುವೆ ಚಂದ
ನೀ ನಗುವೆ ಚಂದ ನಿನ್ನ ನಗುವೆ ಅಂದ

ಪ್ರೇಮದ ಅರ್ಥವ ಹುಡುಕುತ ನಿಂತೆನು
ನಿನ್ನಯ ಸ್ಪರ್ಶದಿ ಅರ್ಥವ ಕಂಡೆನು
ಅರಳು ಮಲ್ಲಿಗೆ ಅರಳಿ ನಿಂತಿತು
ನನ್ನೀ ಹೃದಯದಿ ಪ್ರೇಮವು ಅರಳಿತು
ಇಲ್ಲು ನೀನೆ ಅಲ್ಲು ನೀನೆ ಎಲ್ಲೆಲ್ಲೂ ನೀನೆ,
ನನ್ನಲ್ಲೂ ನೀನೆ

ನನ್ನ ಉಸಿರಲಿ ನಿನ್ನ ಹೆಸರಿದೆ
ನಿನ್ನ ಹೆಸರಲೆ ನನ್ನ ಉಸಿರಿದೆ
ನಿನ್ನ ಹೆಸರಲೆ ಉಸಿರು ಹೋಗಲಿ
ಉಸಿರು ಉಸಿರಲಿ ಹೆಸರ ನಿಲ್ಲಲಿ
ನೀನೆ ಉಸಿರು ನೀನೆ ಹೆಸರು


********************************************************************************

ಇವಳೇ... ಅವಳು..

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕ: ಹರಿಹರನ್


ಇವಳೇ... ಅವಳು...
ಕನಸಲಿ ಬಂದವಳು..
ಅವಳೇ.. ಇವಳು...
ಮನದಲಿ ನಿಂದವಳು..

ಚೆಲುವೆ ಅಂದ ಸೆಳೆದ ವೇಳೆ
ನನ್ನ ಹೃದಯ ಪುಟದ ಮೇಲೆ
ಕವಿತೆ ಬರೆದವಳೂ.... || ಇವಳೇ... ||

ಮೆಲ್ಲ ಮೆಲ್ಲ ನಡೆಯಲು ನೀ..
ನವಿಲು ನಾಚಿ ನೋಡುತಿದೆ...
ಚೆಲ್ಲಿದಂತೆ ಚೆಲುವನು ನೀ..
ಸುಮವು ಸೆಳೆದು ಸವಿಯುತಿದೆ...
ನಿನ್ನ ನೋಡಿ ಕಲಿಯಲಿ ಲತೆ ಬಿಂಕ‌
ನಾಚಿ ನಗಲು ಅಲೆ ಅಲೆ ಸಂಗೀತ...
ನಿನ್ನ ಅಂದ ಗಂಧದಿಂದ,
ಭ್ರಮಿಸಿ ಬಂದ ಭ್ರಮರವೊಂದು
ಮಧುವ ಅರಸುತಿದೆ... || ಇವಳೇ... ||

ಸುತ್ತಮುತ್ತ ಸುಳಿಯಲು ನೀ..
ನಿನ್ನ ಸುತ್ತ ನಾ ಇರುವೇ...
ನನ್ನ ಪುಟ್ಟ ಆಸೆಗೆ ನೀ..
ಉಸಿರು ತುಂಬಿ ಬೆಳೆಸಿರುವೆ...
ನೀನೆ.. ನನ್ನ.. ತನುಮನ ಮಿಡಿದವಳು
ನೀನೆ.. ನನ್ನ.. ಅನುದಿನ ಸೆಳೆದವಳು...
ಇಂದು ಮುಂದು ಎಂದು ಬಂದು,
ಹೃದಯ ತುಂಬ ತುಂಬಲೆಂದು
ಪ್ರೇಮ ತಂದವಳು... || ಇವಳೇ... ||

*******************************************************************************

ಬರೆಯದ ಮೌನದ ಕವಿತೆ

ಸಾಹಿತ್ಯ: ಆರ್. ಎನ್. ಜಯಗೋಪಾಲ್ 
ಗಾಯಕರು: ಪಂಕಜ್ ಉಧಾಸ್, ಕವಿತಾ ಕೃಷ್ಣಮೂರ್ತಿ, 
ಅರ್ಚನಾ ಉಡುಪ 


ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಬರೆಯದ ಮೌನದ ಕವಿತೆ ಹಾಡಾಯಿತು 
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ 

ಹೂವ ಕಂಪು ಪರರಿಗಾಗಿ ಸಕಲ ಜನ್ಮವು
ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು
ಕಾಲ ಬರೆದ ಹೊಸತು ಹಾಡು ಹಾಡಲಾರೆನು
ಮನದ ಪುಟದೀ ಬರೆದ ಗೀತೆ ಮರೆಯಲಾರೆನು
ಎಲ್ಲಿಯ ಬಂದವು ಕಾಣೆ ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ ನನ್ನ ಈ ಹೃದಯದ ಭಾವ

ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ 

ಯಾವ ಹೂವು ಯಾರ ಮುಡಿಗೊ ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ ನನ್ನ ತೋಟದೀ
ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು
ನುಡಿಸುವವನು ಸ್ವರವ ಬೆರಸಿ ಸಾಟಿ ಕಾಣೆನು
ಬಾಳಲಿ ಪಡೆದದು ಏನೋ ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ 

ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ
ನಡೆ ಎಂದಿದೆ ಗುರಿ ತೋರಿದೆ


*********************************************************************************

ಓಹೊಹೊ.ಹೋ ಚೆನ್ನೆ

ಸಾಹಿತ್ಯ: ಹಂಸಲೇಖ 
ಗಾಯಕರು: ಹರಿಹರನ್, ಕೆ. ಎಸ್. ಚಿತ್ರಾ 


ಓಹೊಹೊ.ಹೋ ಚೆನ್ನೆ ಚೆನ್ನೆ
ಓಹೊಹೊ.ಹೋ ಚೆಲುವೆ ಚೆಲುವೆ
ನೀನು ಬಂದು ನಿಂತಾಗ, 
ಚಿಮ್ಮಿ ಬಂತು ಸಂಗೀತ.
ನಿಂತು ನೀನು ನಕ್ಕಾಗ,
ನಿಂತಲ್ಲೆಲ್ಲಾ ಥಕಧಿಮಿತ.
ಓ.ಓ.ಓ ಓ.ಓ 
ನಿನ್ನ ಹಾಡಿಗಾಗಿ ಓಡಿ ಬಂದು ನಿಂತೆನಾ
ಓಹೋಹೋ ಚಿನ್ನ ಚಿನ್ನ,
ಓಹೋಹೋ ಚೆಲುವ ಚೆಲುವ.
ಅಂದು ನಿನ್ನ ಕಂಡಾಗ
ಬಂತು ಒಂದು ಹೊಸ ರಾಗ
ಇಂದು ಎದುರು ನಿಂತಾಗ,
ತಂತು ರಾಗ ಅನುರಾಗ
ಓ.ಓ.ಓ ಓ.ಓ 

ಇನ್ನು ತಾರೆ ಬಾರೆ ತಾರೆ ತಾರೆ ಪ್ರೇಮಧಾರೆಯ
ಓಹೊಹೊ.ಹೋ ಚೆನ್ನೆ ಚೆನ್ನೆ
ಓಹೊಹೊ.ಹೋ ಚೆಲುವೆ ಚೆಲುವೆ 

ಬಾನಿನ ಆಚೆ ಇರುವುದು ಒಂದು ಲೋಕ
ಪ್ರೀತಿ ಒಂದೇ ಅಲ್ಲಿ, ನಮಗಲ್ಲಿ,
ಯುಗ ಯುಗಗಳ ತನಕ.
ಪ್ರೇಮಕೆ ಪ್ರೇಮ ಅರಳುವ ತಾಣದಲ್ಲಿ...
ಮಳೆಯ ಬಿಲ್ಲ, ಮನೆಯ ಮಾಡಿರಲು,
ಹಾರೋಣವೆ ಅಲ್ಲಿ...

ಓ.ಓ.ಓ ಓ.ಓ 
ಓ.ಓ.ಓ ಓ.ಓ. 

ಬಾರೆ ಬಾರೆ ತೆರನೇರಿ ಲೋಕದಾಚೆ ಸಾಗೋಣ.
ಓಹೊಹೊ.ಹೋ ಚೆನ್ನೆ ಚೆನ್ನೆ
ಓಹೊಹೊ.ಹೋ ಚೆಲುವೆ ಚೆಲುವೆ. 

ಕನಸಲು ಕೂಡ ಕಾಯುವೆ ನಿನ್ನ ಪ್ರೀತಿ…
ಕನಸಿನಲ್ಲೂ ಕೂಡ ನಿನ್ನ ಪ್ರೀತಿ,
ಕನಸಾಗದೆ ಇರಲಿ.
ನೀನಿರದೇನೆ ನಾನಿರಲಾರೆ ಇಂದೆ ...
ಜನುಮ ಜನುಮದಲ್ಲೂ, ಜೊತೆಗಿರಲು,
ಈ ಜನುಮವ ಪಡೆದೆ.

ಓ.ಓ.ಓ ಓ.ಓ 
ಓ.ಓ.ಓ ಓ.ಓ 

ನಮ್ಮ ಜೀವ ಜೀವ ಒಂದೆ ಜೀವ
ನೂರು ಜನ್ಮಕೂ… 
ಓಹೊಹೊಹೋ ಚೆಲುವೆ ಚೆಲುವೆ
ಓಹೊಹೊಹೋ ಚೆಲುವ ಚೆಲುವ 
ನೀನು ಬಂದು ನಿಂತಾಗ,
ಚಿಮ್ಮಿ ಬಂತು ಸಂಗೀತ.
ನಿಂತು ನೀನು ನಕ್ಕಾಗ,
ನಿಂತಲ್ಲೆಲ್ಲಾ ಥಕಧಿಮಿತ.
ಓ.ಓ.ಓ ಓ.ಓ 

ಇನ್ನು ತಾರೆ ಬಾರೆ ತಾರೆ ತಾರೆ ಪ್ರೇಮಧಾರೆಯ
ಓಹೊಹೊ.ಹೋ ಚೆನ್ನೆ ಚೆನ್ನೆ
ಓಹೊಹೊ.ಹೋ ಚೆಲುವೆ(ಚೆಲುವ) ಚೆಲುವೆ (ಚೆಲುವ)

*********************************************************************************

No comments:

Post a Comment