ಒಂದು ಮಳೆಬಿಲ್ಲು
ಚಲನಚಿತ್ರ: ಚಕ್ರವರ್ತಿ (2017)
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಸಂಗೀತ: ಅರ್ಜುನ್ ಜನ್ಯ
ಗಾಯನ: ಅರ್ಮಾನ್ ಮಲಿಕ್, ಶ್ರೇಯಾ ಘೋಷಾಲ್
ನಿರ್ದೇಶನ: ಚಿಂತನ್ ಎ. ವಿ.
ನಟನೆ: ದರ್ಶನ ತೂಗುದೀಪ, ದೀಪಾ ಸನ್ನಿಧಿ
ತೇಲಿ ನೂರಾರು ಮೈಲಿಯು
ಸೇರಲು ಸನಿಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದಾಗಿ ಸೇರಿವೆ ಎರಡು ಸಹ
ಏನನೋ ಮಾತಾಡಿವೆ
ಭಾವನೆ ಬಾಕಿ ಇವೆ
ಸೇರಲು ಸನಿಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದಾಗಿ ಸೇರಿವೆ ಎರಡು ಸಹ
ಏನನೋ ಮಾತಾಡಿವೆ
ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬ ಸೊಗಸಾಗಿ
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬ ಸೊಗಸಾಗಿ
ಸನ್ನೆಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಷ ಬಯಸುತಿವೆ
ಮನದ ಒಳಗೊಳಗೆ ಎಷ್ಟೊ ಆಸೆಗಳಿವೆ
ಮನದ ಒಳಗೊಳಗೆ ಎಷ್ಟೊ ಆಸೆಗಳಿವೆ
ಏನನೋ ಮಾತಾಡಿವೆ... ಯಾತಕೆ ಹೀಗಾಗಿದೆ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ಒಂದು ಮಳೆಮೋಡ
ನಾಚುತಲಿವೆ ಯಾಕೊ ಕೈಯ ಬಳೆ
ಮಂಚ ನೋಡುತಿದೆ ಬೀಳೊ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ
ದೀಪ ಮಲಗುತಿದೆ ನೋಡಿ ಈ ರಗಳೆ
ನಿಮ್ಮ ಹೊಸದಾದ ಈ ಕಥನ
ಒಮೆ ನಿಷ್ಯಭ್ದ ಒಮ್ಮೆ ಸಿಹಿಯುದ್ದ
ಮಂಚ ನೋಡುತಿದೆ ಬೀಳೊ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ
ದೀಪ ಮಲಗುತಿದೆ ನೋಡಿ ಈ ರಗಳೆ
ನಿಮ್ಮ ಹೊಸದಾದ ಈ ಕಥನ
ಒಮೆ ನಿಷ್ಯಭ್ದ ಒಮ್ಮೆ ಸಿಹಿಯುದ್ದ
ಎಲ್ಲೂ ಕೇಳಿಲ್ಲ ಈ ಮಿಥುನ
ಪ್ರೀತಿಲಿ ಈ ಜೀವ ಒಂದಾಗಿವೆ
ಏನನೋ... ಹೂ...
ಮಾತಲೆ ಮುದ್ದಾಡಿವೆ
ಪ್ರೀತಿಲಿ ಈ ಜೀವ ಒಂದಾಗಿವೆ
ಏನನೋ... ಹೂ...
ಮಾತಲೆ ಮುದ್ದಾಡಿವೆ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬ ಸೊಗಸಾಗಿ
ಏನನೋ ಮಾತಾಡಿದೆ
ಭಾವನೆ ಬಾಕಿ ಇದೆ
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬ ಸೊಗಸಾಗಿ
ಏನನೋ ಮಾತಾಡಿದೆ
ಭಾವನೆ ಬಾಕಿ ಇದೆ
********************************************************************************
ಈ ಉಸಿರಿಗೆ ಗಾಳಿಯೆ
ಸಾಹಿತ್ಯ : ಉಮೇಶ್
ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್
ಗಂಡು : ಈ ಉಸಿರಿಗೆ ಗಾಳಿಯೆ ನೀನಾಗಿರು
ನಾ ನಡೆಯುವ ದಾರಿಯೆ ನೀನಾಗಿರು
ಬೇಕೀಗ ಬೇರೆ ಏನು ಈ ಜೀವಕೆ
ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತಾ
ನಾ ನಡೆಯುವ ದಾರಿಯೆ ನೀನಾಗಿರು
ಬೇಕೀಗ ಬೇರೆ ಏನು ಈ ಜೀವಕೆ
ಈ ಪ್ರೀತಿಯನ್ನು ನೋಡಿ ಆ ಮೋಡ ಕರಗುತಾ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಹೆಣ್ಣು : ಈ ಉಸಿರಿಗೆ ಗಾಳಿಯೆ ನೀನಾಗಿರು
ಗಂಡು : ನಾ ನಡೆಯುವ ದಾರಿಯೆ ನೀನಾಗಿರು
ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಹೆಣ್ಣು : ಈ ಉಸಿರಿಗೆ ಗಾಳಿಯೆ ನೀನಾಗಿರು
ಗಂಡು : ನಾ ನಡೆಯುವ ದಾರಿಯೆ ನೀನಾಗಿರು
ಗಂಡು :ದಡ ನೀನಾಗು ಸದಾ ಕಾಲ ಅಲೆಯಂತಾಗಿ ನಾ ಸೋಕುವೆ
ಹೆಣ್ಣು :ಬಲೇ ನೀನಾಗು ಅಪಾಯಾನೆ ಇರದಂತೆ ನಾ ಬೀಳುವೆ
ಗಂಡು : ನಿನದೆ ತಗೋ ಜೀವವೇ ಬೇಕಾದರೆ
ಹೆಣ್ಣು : ಎದುರೇ ಇರು ಇಂದಿಗೂ ಅದೇ ಆಸರೆ
ಗಂಡು : ಬೇಕೀಗ ಬೇರೆ ಏನು ಈ ಜೀವಕೆ ನೂರಾರು ಸಾವಿರ ಕನಸು ನವಿಲಾಗಿ ಹಾರುತ
ಹೆಣ್ಣು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಗಂಡು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಹೆಣ್ಣು :ಬಲೇ ನೀನಾಗು ಅಪಾಯಾನೆ ಇರದಂತೆ ನಾ ಬೀಳುವೆ
ಗಂಡು : ನಿನದೆ ತಗೋ ಜೀವವೇ ಬೇಕಾದರೆ
ಹೆಣ್ಣು : ಎದುರೇ ಇರು ಇಂದಿಗೂ ಅದೇ ಆಸರೆ
ಗಂಡು : ಬೇಕೀಗ ಬೇರೆ ಏನು ಈ ಜೀವಕೆ ನೂರಾರು ಸಾವಿರ ಕನಸು ನವಿಲಾಗಿ ಹಾರುತ
ಹೆಣ್ಣು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಗಂಡು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಗಂಡು : ಈ ಉಸಿರಿಗೆ ಗಾಳಿಯೆ ನೀನಾಗಿರು
ಗಂಡು :ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯಾನೂ ದೀಪಾವಳಿ
ಹೆಣ್ಣು : ಇನ್ನು ಈ ತೋಳ ಸೆರೆಯಲ್ಲೆ ಬದುಕೆಲ್ಲ ತಾರಾವಳಿ
ಗಂಡು : ನಿನ್ನೇ ಕೂಗಿ ಕರೆವಾಸೆಯೂ ಬಿಡುವಿಲ್ಲದೆ
ಹೆಣ್ಣು : ಜೊತೆ ಸೇರಿ ನಡೆವಾಸೆಯೂ ದೂರಾಗದೆ
ಗಂಡು : ಬೇಕೀಗ ಬೇರೆ ಏನು ಈ ಜೀವಕೆ ನೀ ಸಿಕ್ಕ ಮೇಲೆ ಎಲ್ಲಾ ಸಂಪೂರ್ಣವಾಗುತ
ಹೆಣ್ಣು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಗಂಡು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಗಂಡು :ನಿನ್ನ ಈ ಕಣ್ಣ ಬೆಳಕಲ್ಲಿ ದಿನ ನಿತ್ಯಾನೂ ದೀಪಾವಳಿ
ಹೆಣ್ಣು : ಇನ್ನು ಈ ತೋಳ ಸೆರೆಯಲ್ಲೆ ಬದುಕೆಲ್ಲ ತಾರಾವಳಿ
ಗಂಡು : ನಿನ್ನೇ ಕೂಗಿ ಕರೆವಾಸೆಯೂ ಬಿಡುವಿಲ್ಲದೆ
ಹೆಣ್ಣು : ಜೊತೆ ಸೇರಿ ನಡೆವಾಸೆಯೂ ದೂರಾಗದೆ
ಗಂಡು : ಬೇಕೀಗ ಬೇರೆ ಏನು ಈ ಜೀವಕೆ ನೀ ಸಿಕ್ಕ ಮೇಲೆ ಎಲ್ಲಾ ಸಂಪೂರ್ಣವಾಗುತ
ಹೆಣ್ಣು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
ಗಂಡು : ಮತ್ತೆ ಮಳೆಯಾಗಿದೆ ಮತ್ತೆ ಮಳೆಯಾಗಿದೆ
********************************************************************************
No comments:
Post a Comment