
ಕರೆಯೋಲೆ ಕರೆವ ಓಲೆ
ಚಲನ ಚಿತ್ರ : ರಂಗಿತರಂಗ (2015)ಸಾಹಿತ್ಯ & ಸಂಗೀತ: ಅನುಪ್ ಭಂಡಾರಿ
ಗಾಯಕಿ : ಇಂಚರ ರಾವ್
ನಿರ್ದೇಶನ: ಅನೂಪ್ ಭಂಡಾರಿ
ನಟನೆ: ನಿರೂಪ್ ಭಂಡಾರಿ, ರಾಧಿಕಾ ಚೇತನ್,

ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೊಳೆ
ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೊಳೆ
ಕಲ್ಲಿನ ಕೊಳ್ಳಲಿ ಕಲರವ ನುಡಿಸಿ ಕೈಯನು ಬೀಸಿ ಕರೆದೊಳೆ
ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೊಳೆ
ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೊಳೆ
ಕನಕಾಂಗಿ ಕೈಯಲೊಂದು ಕಂಚಿನ ಕೊಡಪಾನ
ಕೆರೆ ನೀರ ಕುದಿಯೋದಕ್ಕು ಕಟುವಾದ ಕಡಿವಾಣ
ಕೆರೆದಂಡೆ ಕಡೆಯಲೆಲ್ಲು ಕುತೋನೆ ಕಡು ಜಾಣ
ಅತಿಕ್ಷಿನ ಸ್ಮ್ರಿತಿಉಳ್ಳೋಣ ಕೆಂದಾವರೆ ಲಕುಷಣ
ಕೆಂಪಾದ ಕಮಲಾ ಕಂಡು ಕೆಸರಲ್ಲೇ ಕಲೇತೊಳೆ
ಕ್ಷಣವೆಲ್ಲ ಕೃತಕ ಕಥೆಯಲಿ ಕಳೆಯೋದ ಕಲಿತೊಳೆ
ಕಲ್ಲಿನ ಕೊಳ್ಳಲಿ ಕಲರವ ನುಡಿಸಿ ಕೈಯನು ಬೀಸಿ ಕರೆದೊಳೆ
ಕಣ್ಣಿಗೆ ಕಾಣದ ಕಾಗದದಲ್ಲಿ ಕುಂಚದಿ ಕಾವ್ಯವ ಕೊರೆದೊಳೆ
ಕರೆಯೋಲೆ ಕರೆವ ಓಲೆ ಕರೆಮಾಡಿ ಕರೆದೊಳೆ
ಕರದಲ್ಲಿ ಕಲಮ ಹಿಡಿದು ಕರಿಶಾಯಿ ಬರೆದೊಳೆ
*********************************************************************************
ಈ ಸಂಜೆ ಏಕೆ ಜಾರುತಿದೆ
ಸಾಹಿತ್ಯ: ಅನೂಪ್ ಭಂಡಾರಿಗಾಯನ: ಅಭಯ್ ಜೋಧಪುರಕರ್, ಗೋಕುಲ್ ಅಭಿಷೇಕ್, ಮೋನಿಷಾ
Female: Hmm.. Na na na..
Male:
ಈ ಸಂಜೆ ಏಕೆ ಜಾರುತಿದೆ
ಸದ್ದಿಲ್ಲದಂತೆ ಸಾಗುತಿದೆ
ಬೆಳಕ ಸೆರೆಯ ತೊರೆದು
ಈ ಸಂಜೆ ಏಕೆ ಜಾರುತಿದೆ
ನೆರಳನೆ.. ಅರಿಯದ..
ಅಪರಿಚಿತ.. ದಾರಿಯಲಿ
ಇರುಳಿನ.. ಸನಿಹಕೆ
ಈ ಸಂಜೆ ಏಕೆ ಜಾರುತಿದೆ
Hmmm...
ಕಾರ್ಮೋಡ ಮಡಿಲಲ್ಲಿ ಹಸಿ ಮಲಗಿಸಲು
ಶಶಿ ಇನ್ನೂ ಬರಲಿಲ್ಲ ಭುವಿ ಬೆಳಗಿಸಲು
ಸೂರ್ಯನು ಅರಳುವಾವರೆಗೆ
ಬೆಳಕನೆ ಕಾಣದ ಧರೆಗೆ
ವಿಹಾರಿಸೋ ಈ ಹಂಬಲದೊಂದಿಗೆ
ಹತ್ತಿರ ತೀರವ ಸೇರಿ
ಕತ್ತಲೆಯ ತೇರನ್ನೆರಿ
ಬೀಸುವ ಗಾಳಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ
ಮುಸುಕನ್ನು ತೆರೆದಾಗ ಬರೋ ನಸುಕಿನಲಿ
ನಸುಕುಂಟು ಜೋಪಾನ ಕಳ್ನುಸುಕಿನಲಿ
ಸೆಳೆಯುವ ನೆನಪಿನ ಇರುಳು
ಹೋದರೆ ಶಾಶ್ವತ ಇರುಳು
ಈ ಮಾತಿನ ತಿರುಳನು ಅರಿಯದೆ
ಮುಂಗುರುಳನ್ನು ಹಿಂದೆ ತಳ್ಳಿ
ನಿಲ್ಲದಂತ ವೇಗದಲ್ಲಿ
ಹಾರುವ ಹಕ್ಕಿಯ ಜೊತೆಗೆ
ಈ ಸಂಜೆ ಏಕೆ ಜಾರುತಿದೆ...

*********************************************************************************
No comments:
Post a Comment