ಶಂಕರ ಶಶಿಧರ ಗಜ
ಚಿತ್ರ: ಶಬರಿ ಮಲೇ ಸ್ವಾಮಿ ಅಯ್ಯಪ್ಪ (1990)
ಸಂಗೀತ: ಕೆ ವಿ ಮಹದೇವನ್
ಸಾಹಿತ್ಯ: ವಿಜಯ ನಾರಸಿಂಹ
ನಿರ್ದೇಶನ: ರೇಣುಕಾಶರ್ಮ
ಗಾಯಕರು: ಎಸ್ ಪಿ ಬಿ
ನಟನೆ: ಶ್ರೀನಿವಾಸ್ ಮೂರ್ತಿ, ಗೀತಾ, ಶ್ರೀಧರ್, ಸುಧಾರಾಣಿ
ಓಂ ....... ಓಂ ....... ಓಂ
ಶಂಕರ ಶಶಿಧರ ಗಜ ಚರ್ಮಮಾಂಬರ
ಶಂಕರ ಶಶಿಧರ ಗಜ ಚರ್ಮಮಾಂಬರ
ಗಂಗಾಧರ ಹರನೇ
ಸುಂದರ ಸ್ಮರಹರ ಗೌರಿ ಮನೋಹರ
ಸುಂದರ ಸ್ಮರಹರ ಗೌರಿ ಮನೋಹರ
ಜಯ ಪರಮೇಶ್ವರನೇ
ಶಂಕರ ಶಶಿಧರ ಗಜ ಚರ್ಮಮಾಂಬರ
ಶಂಕರ ಶಶಿಧರ ಗಜ ಚರ್ಮಮಾಂಬರ
ಜಯ ಪರಮೇಶ್ವರನೇ
ಜಯ ಜಯ ಶಂಕರನೇ .......
ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ.......
ಜಯ ಜಯ ಶಂಕರನೇ.......
ಜಯ ವಿಶ್ವೇಶ್ವರನೇ,.......
ಓಂ....... ಓಂ....... ಓಂ ....... ಓಂ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,
ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,
ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ
ಜಯ ಮೃತ್ಯುಂಜಯನೇ ........
ಭಕುತಿಗೆ ಬೇಗನೆ ಒಲಿಯುವ ದೇವನೇ
ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ
ಬೇಡಿದ ವರಗಳ ಆ ಕ್ಷಣ ನೀಡುವ
ಸಾಂಬ ಸದಾಶಿವನೇ
ಭಕುತಿಗೆ ಬೇಗನೆ ಒಲಿಯುವ ದೇವನೇ
ಭಕುತಿಗೆ ಬೇಗನೆ ಒಲಿಯುವ ದೇವನೇ
ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ
ಬೇಡಿದ ವರಗಳ ಆ ಕ್ಷಣ ನೀಡುವ
ಸಾಂಬ ಸದಾಶಿವನೇ
ಜಯ ಜಯ ಶಂಕರನೇ.......
ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ .......
ಜಯ ಜಯ ಶಂಕರನೇ .......
ಜಯ ವಿಶ್ವೇಶ್ವರನೇ,.......
ಋಷಿಗಳ ಹೃದಯದಿ ಮನೆಯನು ಮಾಡಿದ
ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ
ಲೋಕವ ರಕ್ಷಿಸೇ ವಿಷವನು ಕುಡಿದ
ಕರುಣಾಸಾಗರನೇ
ಋಷಿಗಳ ಹೃದಯದಿ ಮನೆಯನು ಮಾಡಿದ
ಋಷಿಗಳ ಹೃದಯದಿ ಮನೆಯನು ಮಾಡಿದ
ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ
ಲೋಕವ ರಕ್ಷಿಸೇ ವಿಷವನು ಕುಡಿದ
ಕರುಣಾಸಾಗರನೇ ಕರುಣಾಸಾಗರನೇ.......
ಶಂಕರ ಶಶಿಧರ ಗಜ ಚರ್ಮಮಾಂಬರ
ಗಂಗಾಧರ ಹರನೇ
ಸುಂದರ ಸ್ಮರಹರ ಗೌರಿ ಮನೋಹರ
ಸುಂದರ ಸ್ಮರಹರ ಗೌರಿ ಮನೋಹರ
ಜಯ ಪರಮೇಶ್ವರನೇ
ಜಯ ಜಯ ಶಂಕರನೇ .......
ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ.......
ಜಯ ಜಯ ಶಂಕರನೇ.......
ಜಯ ವಿಶ್ವೇಶ್ವರನೇ, (ಕೋರಸ್ )
ಜಯ ಜಯ ಶಂಕರನೇ.......
ಜಯ ವಿಶ್ವೇಶ್ವರನೇ.......
ಶಶಿಧರನೇ ....... ಹರನೇ ....... ಶಿವನೇ .......
ಶಶಿಧರನೇ ....... ಹರನೇ ....... ಶಿವನೇ .......
*********************************************************************************
ಗಾಯಕರು: ಕೆ.ಜೆ. ಯೇಸುದಾಸ್
ಸ್ವಾಮಿ ಅಯ್ಯಪ್ಪ
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ಕೆ.ಜೆ. ಯೇಸುದಾಸ್
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ಅಂಧಕಾರದಲ್ಲಿ ಅಲೆದಾಡುತಲಿರುವೆ
ಕಂಗಳಿದ್ದು ತಂದೆ ಏನು ಕಾಣದಿರುವೆ
ಅಂಧಕಾರದಲ್ಲಿ ಅಲೆದಾಡುತಲಿರುವೆ
ಕಂಗಳಿದ್ದು ತಂದೆ ಏನು ಕಾಣದಿರುವೆ
ಏಕೆ ಇನ್ನು ದೇವ ಕರುಣೆ ತೋರದಿರುವೆ
ಏಕೆ ಇನ್ನು ದೇವ ಕರುಣೆ ತೋರದಿರುವೆ
ಬೆಳಕಿನೆಡೆಗೆ ನನ್ನ ಬೇಗ ನೆಡೆಸು ನನ್ನ ಪ್ರಭುವೆ

ಸಿರಿಯು ಬೇಕು ಎಂದು ಕೇಳಲಾರೆನಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
ಸಿರಿಯು ಬೇಕು ಎಂದು ಕೇಳಲಾರೆನಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
ಮುಕ್ತಿಗಾಗಿ ತಂದೆ ಕಯ್ಯಚಾಚೆನಯ್ಯ
ಮುಕ್ತಿಗಾಗಿ ತಂದೆ ಕಯ್ಯಚಾಚೆನಯ್ಯ
ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ
ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
ಸಿರಿಯು ಬೇಕು ಎಂದು ಕೇಳಲಾರೆನಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
ಮುಕ್ತಿಗಾಗಿ ತಂದೆ ಕಯ್ಯಚಾಚೆನಯ್ಯ
ಮುಕ್ತಿಗಾಗಿ ತಂದೆ ಕಯ್ಯಚಾಚೆನಯ್ಯ
ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ
ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ಕಂಗಳಲ್ಲಿ ನಿನ್ನ ಚರಣ ತುಂಬಿಕೊಳಲಿ
ಮನಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
ಕಂಗಳಲ್ಲಿ ನಿನ್ನ ಚರಣ ತುಂಬಿಕೊಳಲಿ
ಮನಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
ಕಿವಿಗಳಲ್ಲಿ ನಿನ್ನ ಕೀರ್ತಿ ತುಂಬಿಕೊಳಲಿ
ಕಿವಿಗಳಲ್ಲಿ ನಿನ್ನ ಕೀರ್ತಿ ತುಂಬಿಕೊಳಲಿ
ಉಸಿರು ಉಸಿರಿನಲ್ಲೂ ನಿನ್ನ ನಾಮ ತುಂಬಿಕೊಳಲಿ
ಉಸಿರು ಉಸಿರಿನಲ್ಲೂ ನಿನ್ನ ನಾಮ ತುಂಬಿಕೊಳಲಿ
ಮನಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
ಕಂಗಳಲ್ಲಿ ನಿನ್ನ ಚರಣ ತುಂಬಿಕೊಳಲಿ
ಮನಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
ಕಿವಿಗಳಲ್ಲಿ ನಿನ್ನ ಕೀರ್ತಿ ತುಂಬಿಕೊಳಲಿ
ಕಿವಿಗಳಲ್ಲಿ ನಿನ್ನ ಕೀರ್ತಿ ತುಂಬಿಕೊಳಲಿ
ಉಸಿರು ಉಸಿರಿನಲ್ಲೂ ನಿನ್ನ ನಾಮ ತುಂಬಿಕೊಳಲಿ
ಉಸಿರು ಉಸಿರಿನಲ್ಲೂ ನಿನ್ನ ನಾಮ ತುಂಬಿಕೊಳಲಿ
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
********************************************************************************
ಮಕರದ ಮಂಜಿನಲಿ
ಸಾಹಿತ್ಯ:ಗಾಯಕರು: ಕೆ.ಜೆ. ಯೇಸುದಾಸ್
ಓ..ಓ..ಓ.. ಓ..ಓ..ಓ.. ಓ..ಓ..ಓ.. ಓ..ಓ..ಓ..
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ನಿನ್ನ ಮುಖ ಬಿಂಬವದು ಕಣ್ತುಂಬ ನೆಲೆಸಿಹುದು
ಕಾಂತಿ ಮಲೆ ಧ್ಯಾನ ಜ್ಯೋತಿ ಅಯ್ಯಪ್ಪ ಸ್ವಾಮಿ
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಜ್ಯೋತಿಯ ರೂಪದಲಿ ಭಕ್ತಿಗೆ ಬೆಳಾಕಾದೆ
ನಂದಾದೀಪದಳೋ ಮನವನೆ ನೆರೆದೆ
ಜ್ಯೋತಿಯ ರೂಪದಲಿ ಭಕ್ತಿಗೆ ಬೆಳಾಕಾದೆ
ನಂದಾದೀಪದಳೋ ಮನವನೆ ನೆರೆದೆ
ಭಕ್ತರ ಕೋರಿಕೆಯ ಅಯ್ಯಪ್ಪ ತೀರಿಸುವಾ
ಪದಗಳ ಹಾಡುತ ಸೇರೋಣಾ.. ಶಬರಿ ಮಲೈ...
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಭಕ್ತ ಸಮೂಹದ ನಾಯಕನಾ
ನಂಬಿದ ಜನಕೆಲ್ಲಾ ಭಾಗ್ಯ ತರುವವನನಾ
ಭಕ್ತ ಸಮೂಹದ ನಾಯಕನಾ
ನಂಬಿದ ಜನಕೆಲ್ಲಾ ಭಾಗ್ಯ ತರುವವನನಾ
ಇರುಮುಡಿ ಬುಟ್ಟಿಯಲಿ ಸಿರಿಸುಖ ತುಂಬುವವನಾ
ಅವನನ ನೆನೆಯುತಾ ಸೇರೋಣಾ... ಶಬರಿ ಮಲೈ ..
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ನಿನ್ನ ಮುಖ ಬಿಂಬವದು ಕಣ್ತುಂಬ ನೆಲೆಸಿಹುದು
ಕಾಂತಿ ಮಲೆ ಧ್ಯಾನ ಜ್ಯೋತಿ ಅಯ್ಯಪ್ಪ ಸ್ವಾಮಿ
ಮಕರದ ಮಂಜಿನಲಿ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಮೈಮನ ತುಂಬಿಸುವ ಶಬರಿ ಮಲೈ
ಓ.. ಓ.. ಓ.. ಓ... ಓ.. ಓ.. ಓ
********************************************************************************
********************************************************************************
ಹೆಣ್ಣು : ತನನಾನಿ ತಾನಿ ತಾನಿ ತಾನಿ ತಂದಾನ ತನ್ ತಾನಿ ತಂದಾನ
ಪಾಸಾ ನಿದಪಮ ಗಮಪಮ ಗರಿಸ (ಆಆಆ...)
ಕಣ್ಣಂದ ಮೂಗುಂದ ಮೊಗವೇನೋ ಅಂದ
ಇವನಾಡೋ ತುಂಟಾಟ ಹುಡುಗಾಟ ಚಂದ
ಕೋರಸ್ : ಇವನಾಡೋ ತುಂಟಾಟ ಹುಡುಗಾಟ ಚಂದ
********************************************************************************
ಶ್ರೀ ಹರಿ ರಕ್ಷಿಸು
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ಎಸ್.ಪಿ.ಬಿ.
ಶ್ರೀ ಹರಿ ರಕ್ಷಿಸು ದಯೆ ತೋರಿ ದುಷ್ಟ ದೈತ್ಯ ಕುಲ ವೈರಿ
ಮಹಿಷಿ ಸಂಹಾರಕ್ಕೆ ದಾರಿ ತೋರಿ ಶಾಂತಿಯ ನೀಡು ಮುರಾರಿ
ಶಾಂತಿಯ ನೀಡು ಮುರಾರಿ
ಮಹಿಷಿ ಸಂಹಾರಕ್ಕೆ ದಾರಿ ತೋರಿ ಶಾಂತಿಯ ನೀಡು ಮುರಾರಿ
ಶಾಂತಿಯ ನೀಡು ಮುರಾರಿ
ಶ್ರೀಹರಿ ಮಾಯೆಯ ಅವತಾರ ವಿಶ್ವಮೋಹಿನಿಯ ಸಾಕಾರ
ಶ್ರೀಹರಿ ಮಾಯೆಯ ಅವತಾರ ವಿಶ್ವಮೋಹಿನಿಯ ಸಾಕಾರ
ಸುಧಾಸುಂದರಿಯ ನೃತ್ಯ ವಿಹಾರ ಸುರಮ್ಯ ನಯಗತಿ ಮನೋಹರ
ಶ್ರೀಹರಿ ಮಾಯೆಯ ಅವತಾರ ವಿಶ್ವಮೋಹಿನಿಯ ಸಾಕಾರ
ಶ್ರೀಹರಿ ಮಾಯೆಯ ಅವತಾರ ವಿಶ್ವಮೋಹಿನಿಯ ಸಾಕಾರ
ಸುಧಾಸುಂದರಿಯ ನೃತ್ಯ ವಿಹಾರ ಸುರಮ್ಯ ನಯಗತಿ ಮನೋಹರ
ಶ್ರೀಹರಿ ಮಾಯೆಯ ಅವತಾರ ವಿಶ್ವಮೋಹಿನಿಯ ಸಾಕಾರ
ಘಲಿರು ಘಲಿರಿನ ಗೆಜ್ಜೆಯ ನಾದ ಥಳ ಥಳಿಸುವ ಈ ಸಿರಿ ಪಾದ
ಘಲಿರು ಘಲಿರಿನ ಗೆಜ್ಜೆಯ ನಾದ ಥಳ ಥಳಿಸುವ ಈ ಸಿರಿ ಪಾದ
ಲೋಕದ ಎಲ್ಲೆಡೇ ಆ ಮೋರ ಹರಿಹರ ಸರಸವೇ ಲೋಲ
ಘಲಿರು ಘಲಿರಿನ ಗೆಜ್ಜೆಯ ನಾದ ಥಳ ಥಳಿಸುವ ಈ ಸಿರಿ ಪಾದ
ಲೋಕದ ಎಲ್ಲೆಡೇ ಆ ಮೋರ ಹರಿಹರ ಸರಸವೇ ಲೋಲ
(ಆಆಆ...ಆಆಆ....ಆಆಆ..ಆಆಆಅ...ಆಆಆ...ಆಆಆ....ಆಆಆ..ಆಆಆಅ...
ಆಆಆ...ಆಆಆ....ಆಆಆ)..ಆಆಆಅ...( ಆಆಆಅ) ಆಆಆ...ಆಆಆ....
ಝಣ ಝಣ ನೂಪುರ ಝೇಂಕಾರ ಹರಿಹರ ಶಕ್ತಿಯ ಓಂಕಾರ
ಝಣ ಝಣ ನೂಪುರ ಝೇಂಕಾರ ಹರಿಹರ ಶಕ್ತಿಯ ಓಂಕಾರ
ಸುಧಾವಾಹಿನಿ ಶೃಂಗಾರ ನಿತ್ಯಾನಂದದ ಲಹರಿವಿಹಾರ
ಝಣ ಝಣ ನೂಪುರ ಝೇಂಕಾರ ಹರಿಹರ ಶಕ್ತಿಯ ಓಂಕಾರ
ಹರಿಹರ ಶಕ್ತಿಯ ಓಂಕಾರ

ಪ್ರಕೃತಿ ಪುರುಷ ಸಮಾಗಮ ಪ್ರತಿ ಪ್ರತಿ ಕ್ಷಣವೂ ಅನುಪಮಾ
ಪ್ರಪಂಚಕೆಲ್ಲಾ ಆನಂದ ಸಂಭ್ರಮ ಪೂರ್ಣ ಕಾಂತಿ ಪೂರ್ಣ ಜ್ಯೋತಿ ಪೂರ್ಣಿಮಾ
ಪ್ರಪಂಚಕೆಲ್ಲಾ ಆನಂದ ಸಂಭ್ರಮ ಪೂರ್ಣ ಕಾಂತಿ ಪೂರ್ಣ ಜ್ಯೋತಿ ಪೂರ್ಣಿಮಾ
********************************************************************************
ಪೂರ್ಣಚಂದಿರ ಬಂದ
ಸಾಹಿತ್ಯ : ಚಿ.ಉದಯಶಂಕರ
ಗಾಯಕರು: ಮಂಜುಳ ಗುರುರಾಜ
ಹೆಣ್ಣು : ಪಾಸಾ ನಿದಪಮ ಗಮಪಮ ಗರಿಸ
ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಪೂರ್ಣಚಂದಿರ ಬಂದ ಧರೆಗೇ ಮಗುವಾಗಿ
ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಪೂರ್ಣಚಂದಿರ ಬಂದ ಧರೆಗೇ ಮಗುವಾಗಿ
ಕೋರಸ್ : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಪೂರ್ಣಚಂದಿರ ಬಂದ ಧರೆಗೇ ಮಗುವಾಗಿ
ಹೆಣ್ಣು : ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ
ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ
ಕೋರಸ್ : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಪೂರ್ಣಚಂದಿರ ಬಂದ ಧರೆಗೇ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಹೆಣ್ಣು : ಪಾಸಾ ಸನಿಸನಿ ನಿದಪ ರಿಗಮಪ ರಿಸ
ಮೊಗ್ಗೆಲ್ಲಾ ಹೂವಾಯ್ತು ಮಣಿಕಂಠ ನಗಲು
ಕೋರಸ್ : ಮಣಿಕಂಠ ನಗಲು
ಹೆಣ್ಣು : ಕಂಬನಿಯು ಮುತ್ತಾಯ್ತು ಈ ಕಂದ ಅಳಲು
ಕೋರಸ್ : ಈ ಕಂದ ಅಳಲು
ಹೆಣ್ಣು : ಮೊಗ್ಗೆಲ್ಲಾ ಹೂವಾಯ್ತು ಮಣಿಕಂಠ ನಗಲು
ಕಂಬನಿಯು ಮುತ್ತಾಯ್ತು ಈ ಕಂದ ಅಳಲು
ಬಿಸಿ ಗಾಳಿ ತಂಪಾಯ್ತು ಇವನಾಡುತಿರಲೂ
ಸಂತೋಷದ ಹೊನಲು ಇವನೊಡತಿರಲು
ಬಿಸಿ ಗಾಳಿ ತಂಪಾಯ್ತು ಇವನಾಡುತಿರಲೂ
ಸಂತೋಷದ ಹೊನಲು ಇವನೊಡತಿರಲು
ಕೋರಸ್ : ಪಾಸಾ ನಿದಪಮ ಗಮಪಮ ಗರಿಸ
ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಪೂರ್ಣಚಂದಿರ ಬಂದ ಧರೆಗೇ ಮಗುವಾಗಿ
ಮೊಗ್ಗೆಲ್ಲಾ ಹೂವಾಯ್ತು ಮಣಿಕಂಠ ನಗಲು
ಕೋರಸ್ : ಮಣಿಕಂಠ ನಗಲು
ಹೆಣ್ಣು : ಕಂಬನಿಯು ಮುತ್ತಾಯ್ತು ಈ ಕಂದ ಅಳಲು
ಕೋರಸ್ : ಈ ಕಂದ ಅಳಲು
ಹೆಣ್ಣು : ಮೊಗ್ಗೆಲ್ಲಾ ಹೂವಾಯ್ತು ಮಣಿಕಂಠ ನಗಲು
ಕಂಬನಿಯು ಮುತ್ತಾಯ್ತು ಈ ಕಂದ ಅಳಲು
ಬಿಸಿ ಗಾಳಿ ತಂಪಾಯ್ತು ಇವನಾಡುತಿರಲೂ
ಸಂತೋಷದ ಹೊನಲು ಇವನೊಡತಿರಲು
ಬಿಸಿ ಗಾಳಿ ತಂಪಾಯ್ತು ಇವನಾಡುತಿರಲೂ
ಸಂತೋಷದ ಹೊನಲು ಇವನೊಡತಿರಲು
ಕೋರಸ್ : ಪಾಸಾ ನಿದಪಮ ಗಮಪಮ ಗರಿಸ
ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಪೂರ್ಣಚಂದಿರ ಬಂದ ಧರೆಗೇ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಹೆಣ್ಣು : ತನನಾನಿ ತಾನಿ ತಾನಿ ತಾನಿ ತಂದಾನ ತನ್ ತಾನಿ ತಂದಾನ
ಪಾಸಾ ನಿದಪಮ ಗಮಪಮ ಗರಿಸ (ಆಆಆ...)
ಕಣ್ಣಂದ ಮೂಗುಂದ ಮೊಗವೇನೋ ಅಂದ
ಇವನಾಡೋ ತುಂಟಾಟ ಹುಡುಗಾಟ ಚಂದ
ಕೋರಸ್ : ಇವನಾಡೋ ತುಂಟಾಟ ಹುಡುಗಾಟ ಚಂದ
ಹೆಣ್ಣು : ಬರಿದಾದ ಮನೆಯಲ್ಲಿ ಬೆಳಕಾಗಿ ಬಂದ ಆನಂದ ಆನಂದ ಆನಂದ ತಂದ
ಕೋರಸ್ : ಆನಂದ ಆನಂದ ಆನಂದ ತಂದ
ಹೆಣ್ಣು : ಕಣ್ಣಂದ ಮೂಗುಂದ ಮೊಗವೇನೋ ಅಂದ
ಇವನಾಡೋ ತುಂಟಾಟ ಹುಡುಗಾಟ ಚಂದ
ಕೋರಸ್ : ಇವನಾಡೋ ತುಂಟಾಟ ಹುಡುಗಾಟ ಚಂದ
ಇವನಾಡೋ ತುಂಟಾಟ ಹುಡುಗಾಟ ಚಂದ
ಕೋರಸ್ : ಇವನಾಡೋ ತುಂಟಾಟ ಹುಡುಗಾಟ ಚಂದ
ಹೆಣ್ಣು : ಬರಿದಾದ ಮನೆಯಲ್ಲಿ ಬೆಳಕಾಗಿ ಬಂದ ಆನಂದ ಆನಂದ ಆನಂದ ತಂದ
ಕೋರಸ್ : ಆನಂದ ಆನಂದ ಆನಂದ ತಂದ
ಹೆಣ್ಣು : ಆನಂದ ತಂದ (ಹೋಯ್ ಹೋಯ್ ) ಆನಂದ ತಂದ (ಹೋಯ್ ಹೋಯ್ )
ಆನಂದ ತಂದ (ಹೋಯ್ ಹೋಯ್ ) ಆನಂದ ತಂದ
ಹೆಣ್ಣು : ಪಾಸಾ ನಿಸಪಮ ಗಮಪಮಗಮ ಗರಿಸ
ಮಾತಾಡೋ ನುಡಿಯೆಲ್ಲಾ ಬಂಗಾರದಂತೇ
ಕೋರಸ್ : ಬಂಗಾರದಂತೇ
ಹೆಣ್ಣು : ಮೈಸೋಕಿದ ನೀರು ಪನ್ನೀರಿನಂತೇ
ಕೋರಸ್ : ಪನ್ನೀರಿನಂತೇ
ಕೋರಸ್ : ಬಂಗಾರದಂತೇ
ಹೆಣ್ಣು : ಮೈಸೋಕಿದ ನೀರು ಪನ್ನೀರಿನಂತೇ
ಕೋರಸ್ : ಪನ್ನೀರಿನಂತೇ
ಹೆಣ್ಣು: ಮಾತಾಡೋ ನುಡಿಯೆಲ್ಲಾ ಬಂಗಾರದಂತೇ
ಕೋರಸ್ : ಬಂಗಾರದಂತೇ
ಹೆಣ್ಣು : ಮೈಸೋಕಿದ ನೀರು ಪನ್ನೀರಿನಂತೇ
ಕೋರಸ್ : ಪನ್ನೀರಿನಂತೇ
ಹೆಣ್ಣು : ನಡೆದಾಡೋ ನೆಲವೆಲ್ಲಾ ಕೈಲಾಸದಂತೇ
ನಡೆದಾಡೋ ನೆಲವೆಲ್ಲಾ ಕೈಲಾಸದಂತೇ
ಮಣಿಕಂಠನಿರುವಾಗ ಭೂಮಿ ಸ್ವರ್ಗದಂತೇ
ಕೋರಸ್: ಭೂಮಿ ಸ್ವರ್ಗದಂತೇ.. ಭೂಮಿ ಸ್ವರ್ಗದಂತೇ ಭೂಮಿ ಸ್ವರ್ಗದಂತೇ

ಎಲ್ಲರೂ : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಪೂರ್ಣಚಂದಿರ ಬಂದ ಧರೆಗೇ ಮಗುವಾಗಿ
ಹೆಣ್ಣು : ಹರ ತಂದ ವರವೋ ಹರಿ ತಂದ ಶಿಶುವೋ
ಅನುಗಾಲ ಮಾಡಿದ ಪೂಜಾಫಲವೋ
ಕೋರಸ್ : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಕೋರಸ್ : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಪೂರ್ಣಚಂದಿರ ಬಂದ ಧರೆಗೇ ಮಗುವಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
ಹೆಣ್ಣು : ಪೂರ್ಣಚಂದಿರ ಬಂದ ಧರೆಗೇ ನಮಗಾಗಿ
********************************************************************************
ನೀ ನಮ್ಮ ಗೆಲುವಾಗಿ ಬಾ
ಸಾಹಿತ್ಯ : ಚಿ.ಉದಯಶಂಕರ
ಗಾಯಕರು: ಬಿ.ಆರ್.ಛಾಯ
ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ
ಗುರು ಕುಲಕೆ ವರವಾಗಿ ಗುರಿ ತೋರೋ ಗುರುವಾಗಿ
ದೊರೆ ನೀನು ಎಂದೆಂದೂ ಕರುಣಾಳು ಬಾ ಬಂಧು
ನೀ ನಮ್ಮ ಗೆಲುವಾಗಿ ಬಾ ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ
ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ
ಕ್ಷಣ ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ
ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ
ಕ್ಷಣ ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ
ಕ್ಷಣ ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ
ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ
ಕ್ಷಣ ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ
ದಯೆ ಇರಲಿ ನಮ್ಮಲ್ಲಿ ಗತಿ ನೀನೇ ಹಾದಿಯಲಿ
ನೀ ನಮ್ಮ ಗೆಲುವಾಗಿ ಬಾ ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ
ನಿಧಿಯಾಗಿ ವಿಧಿಯಾಗಿ ಸುಧೆ ತುಂಬು ಒಲವಾಗಿ
ಹಿರಿಯಾದ ಸಿರಿ ನೀನು ಈ ಬಾಳ ಸವಿಜೇನು
ನಿಧಿಯಾಗಿ ವಿಧಿಯಾಗಿ ಸುಧೆ ತುಂಬು ಒಲವಾಗಿ
ಹಿರಿಯಾದ ಸಿರಿ ನೀನು ಈ ಬಾಳ ಸವಿಜೇನು
ದಯೆ ಇರಲಿ ನಮ್ಮಲ್ಲಿ ಗತಿ ನೀನೇ ಹಾದಿಯಲಿ
ನೀ ನಮ್ಮ ಗೆಲುವಾಗಿ ಬಾ ಗಜಮುಖನೇ
ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ
ಗುರು ಕುಲಕೆ ವರವಾಗಿ ಗುರಿ ತೋರೋ ಗುರುವಾಗಿ
ನೀ ನಮ್ಮ ಗೆಲುವಾಗಿ ಬಾ ನೀ ನಮ್ಮ ಗೆಲುವಾಗಿ ಬಾ
ನೀ ನಮ್ಮ ಗೆಲುವಾಗಿ ಬಾ
********************************************************************************
ದೇವರೇ ನೀನು ನಿಜವಪ್ಪ
ಸಾಹಿತ್ಯ : ಚಿ.ಉದಯಶಂಕರ
ಗಾಯಕರು: ಬಿ,ಆರ್.ಛಾಯ
ದೇವರೇ ನೀನು ನಿಜವಪ್ಪ ಬಾಲಕನಾಗಿಹೆ ಅಯ್ಯಪ್ಪ
ದೇವರೇ ನೀನು ನಿಜವಪ್ಪ ಬಾಲಕನಾಗಿಹೆ ಅಯ್ಯಪ್ಪ
ದೇವರೇ ನೀನು ನಿಜವಪ್ಪ ಬಾಲಕನಾಗಿಹೆ ಅಯ್ಯಪ್ಪ
ನಿನ್ನ ಮಾಯೆಗೇ ಕೊನೆಯಿಲ್ಲ ಈ ನಿನ್ನ ದಯವೇ ಎಣೆಯಿಲ್ಲಾ
ನಿನ್ನ ಮಾಯೆಗೇ ಕೊನೆಯಿಲ್ಲ ಈ ನಿನ್ನ ದಯವೇ ಎಣೆಯಿಲ್ಲಾ
ದೇವರೇ ನೀನು ನಿಜವಪ್ಪ ಬಾಲಕನಾಗಿಹೆ ಅಯ್ಯಪ್ಪ.....
ಕಣ್ಣಿಗೆ ದೃಷ್ಟಿಯ ನೀ ತಂದೇ ಈ ಬಾಳಿಗೆ ದೀಪ ನೀನಾದೇ
ಕಣ್ಣಿಗೆ ದೃಷ್ಟಿಯ ನೀ ತಂದೇ ಈ ಬಾಳಿಗೆ ದೀಪ ನೀನಾದೇ
ಮಾತಿನ ಚೇತನ ನಿನ್ನಿಂದ...
ಕಣ್ಣಿಗೆ ದೃಷ್ಟಿಯ ನೀ ತಂದೇ ಈ ಬಾಳಿಗೆ ದೀಪ ನೀನಾದೇ
ಮಾತಿನ ಚೇತನ ನಿನ್ನಿಂದ...
ಮಾತಿನ ಚೇತನ ನಿನ್ನಿಂದ ಈ ಉಸಿರಲಿ ನೀನೇ ಆನಂದ
ದೇವರೇ ನೀನು ನಿಜವಪ್ಪ ಬಾಲಕನಾಗಿಹೆ ಅಯ್ಯಪ್ಪ
ನಿನ್ನ ಮಾಯೆಗೇ ಕೊನೆಯಿಲ್ಲ ಈ ನಿನ್ನ ದಯವೇ ಎಣೆಯಿಲ್ಲಾ
ದೇವರೇ ನೀನು ನಿಜವಪ್ಪ ಬಾಲಕನಾಗಿಹೆ ಅಯ್ಯಪ್ಪ.....
ಮೂಗನೂ ಹಾಡಲು ಪದ ತಂದೇ ಈ ಕುರುಡನ ಸ್ವರ್ಗವ ನೋಡೆಂದೇ
ಮೂಗನೂ ಹಾಡಲು ಪದ ತಂದೇ ಈ ಕುರುಡನ ಸ್ವರ್ಗವ ನೋಡೆಂದೇ
ಎಲ್ಲವೂ ನಿನ್ನದೇ ಈ ಲೀಲೆ...
ಎಲ್ಲವೂ ನಿನ್ನದೇ ಈ ಲೀಲೆ ಆ ದೇವರೇ ಕಂಡೇ ನಿನ್ನಲ್ಲೇ
ದೇವರೇ ನೀನು ನಿಜವಪ್ಪ ಬಾಲಕನಾಗಿಹೆ ಅಯ್ಯಪ್ಪ
ನಿನ್ನ ಮಾಯೆಗೇ ಕೊನೆಯಿಲ್ಲ ಈ ನಿನ್ನ ದಯವೇ ಎಣೆಯಿಲ್ಲಾ
ದೇವರೇ ನೀನು ನಿಜವಪ್ಪ ಬಾಲಕನಾಗಿಹೆ ಅಯ್ಯಪ್ಪ.....
ಶರಣಂ ಶರಣಂ ಸ್ವಾಮಿ ಶರಣಂ ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ ಶರಣಂ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
********************************************************************************
ಸ್ವಾಮಿ ಅಯ್ಯಪ್ಪ
ಸಾಹಿತ್ಯ : ಚಿ.ಉದಯಶಂಕರ
ಗಾಯಕರು: ಎಸ್.ಪಿ.ಬಿ.
ಕೋರಸ್ : ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಗಂಡು : ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಗಂಡು : ತಲೆ ಮೇಲೆ ನಿನ್ನ ಇರುಮುಡಿಯು ಇರಲು ಮನದಲ್ಲಿ ನೋಡು ಆಸೆ ತುಂಬಿರಲು
ಸ್ವಾಮಿ ಅಯ್ಯಪ್ಪ ಶರಣು ಎನುತಲಿರಲು ಕಲ್ಲು ಮುಳ್ಳೆಲ್ಲಾ ಕಾಲ್ಗೆ ಹೂವುಗಳೂ
ಏರಿ ಮೇಲೆ ಅಲ್ಲಿ ಕುಣಿಯುವರು ಎಲ್ಲಾ ಆನಂದದಿಂದ ಹಾಡದವರಿಲ್ಲಾ
ಸ್ವಾಮಿ ತಿಂದಕ ತೋಮ್ (ಅಯ್ಯಪ್ಪ ತಿಂದಕ ತೋಮ್)
ಅಯ್ಯಪ್ಪ ತಿಂದಕ ತೋಮ್ (ಸ್ವಾಮಿ ತಿಂದಕ ತೋಮ್)
ಸ್ವಾಮಿ ತಿಂದಕ ತೋಮ್ ತೋಮ್ (ಅಯ್ಯಪ್ಪ ತಿಂದಕ ತೋಮ್ ತೋಮ್)
ಅಯ್ಯಪ್ಪ ತಿಂದಕ ತೋಮ್ ತೋಮ್ (ಸ್ವಾಮಿ ತಿಂದಕ ತೋಮ್ ತೋಮ್)
ಏರಿ ಮೇಲೆ ಅಲ್ಲಿ ಕುಣಿಯುವರು ಎಲ್ಲಾ ಆನಂದದಿಂದ ಹಾಡದವರಿಲ್ಲಾ
ಎಂದೆಂದೂ ಅಲ್ಲಿ ಜಾತಿ ಮಾತಿಲ್ಲ ಸ್ವಾಮಿ ಎದುರಲ್ಲಿ ಒಂದೇ ಜನರೆಲ್ಲಾ
ಕೋರಸ್ : ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ

ಗಂಡು : ಕಂಡಾಗ ಅಳುದಾ ನದಿಯನ್ನು ಕಣ್ಣು ನೀರಲ್ಲಿ ಇಡಲು ಈ ಕಾಲ್ಗಳನ್ನೂ
ನೋವೆಲ್ಲ ಮರೆತು ಸಂತೋಷವೇನೊ ಶರಣೆಂಬ ಕೂಗೇ ಇಲ್ಲ ಬೇರೇನೂ
ಕರಿಮಲೆಯ ಮೇಲೆ ನಡೆವಾಗ ನೀನು ಎಲ್ಲೆಲ್ಲೂ ಬೀಸೋ ತಂಗಾಳಿ ಏನೂ
ಬಲು ಕಠಿಣವಾದ ಆ ಬೆಟ್ಟವನ್ನು ಏರಿ ಇಳಿವಾಗ ಆ ತೃಪ್ತಿಯೇನೂ
ಕೋರಸ್ : ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ನೋವೆಲ್ಲ ಮರೆತು ಸಂತೋಷವೇನೊ ಶರಣೆಂಬ ಕೂಗೇ ಇಲ್ಲ ಬೇರೇನೂ
ಕರಿಮಲೆಯ ಮೇಲೆ ನಡೆವಾಗ ನೀನು ಎಲ್ಲೆಲ್ಲೂ ಬೀಸೋ ತಂಗಾಳಿ ಏನೂ
ಬಲು ಕಠಿಣವಾದ ಆ ಬೆಟ್ಟವನ್ನು ಏರಿ ಇಳಿವಾಗ ಆ ತೃಪ್ತಿಯೇನೂ
ಕೋರಸ್ : ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಗಂಡು : ಪಂಪೆಯಲಿ ಸ್ನಾನ ದೇವರ ಧ್ಯಾನ
ಪಂಪೆಯಲಿ ಸ್ನಾನ ದೇವರ ಧ್ಯಾನ ನೀಗುವುದೂ ಎಲ್ಲ ಆಯಾಸವನ್ನ
ನದಿಯಲ್ಲಿ ಬಿಡುವ ಹಣತೆಗಳ ಸಾಲು ನೋಡುವುದೇ ಭಾಗ್ಯ ತೇಲಾಡುತಿರಲೂ
ಮೊದಲ ಸಲ ಗಿರಿಗೆ ಬರುವ ಜನರೆಲ್ಲಾ ಶಬರಿ ಪೀಠಕೆ ನಮಿಸಿ ನಡೆಯುವರೆಲ್ಲಾ
ಶರಂಗುತ್ತಿಯಾ ಲಿಲ್ಲ ಲಂಬನ್ನು ಎಸೆದು ನಡೆಯುವರು ಮುಂದೆ ಸ್ವಾಮಿಯ ನೆನೆದು

ಗಂಡು : ಕಡಲಲೆಯ ಹಾಗೇ ಬರುತಿರುವ ಜನರು ಭಕ್ತಿಯೇ ಅಲ್ಲಿ ಎಲ್ಲರ ಉಸಿರೂ
ಹದಿನೆಂಟು ಮೆಟ್ಟಿಲ ಏರುತ್ತಲಿರಲು ಎಲ್ಲರೆದೆಯಲ್ಲಿ ಹರುಷದ ಹೊನಲು
ತುಪ್ಪದ ಅಭಿಷೇಕ ಗಂಧದ ಅಭಿಷೇಕ ಧರ್ಮಶಾಸ್ತ್ರನಿಗೆ ಹಲವು ಅಭಿಷೇಕ
ಕೋಟಿ ಕಂಗಳಿಗೆ ಅದು ದೇವಲೋಕ ನಿಜವಾಗಿ ಅಂದೇ ಬದುಕಿದ್ದು ಸ್ವಾರ್ಥಕ
ಕೋರಸ್ : ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಾ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಶರಣಂ ಅಯ್ಯಪ್ಪ ತಂದೇ ಶರಣಂ ಅಯ್ಯಪ್ಪ
ಗಂಡು : ಓಂ ಓಂ ಅಯ್ಯಪ್ಪ (ಓ ಗುರುನಾಥ ಅಯ್ಯಪ್ಪ )
ಕೋರಸ್ : ಓಂ ಓಂ ಅಯ್ಯಪ್ಪ (ಓ ಗುರುನಾಥ ಅಯ್ಯಪ್ಪ )
ಓಂ ಓಂ ಅಯ್ಯಪ್ಪ (ಓ ಗುರುನಾಥ ಅಯ್ಯಪ್ಪ )

ಗಂಡು : ವರುಷಕ್ಕೆ ಒಮ್ಮೆ ದೇವರಿಗೆ ಇಡುವಾ ಒಡವೆಗಳು ಇರುವಾ ಪೆಟ್ಟಿಗೆಯು ಬರುವಾ
ಆ ದೃಶ್ಯವನ್ನು ಕಾಣುವುದೇ ಭಾಗ್ಯ ನೂರು ಜನುಮಗಳು ತಂದಿರುವ ಪುಣ್ಯ
ಅಲಂಕಾರವೆಲ್ಲಾ ಮುಗಿದಾದ ಮೇಲೆ ಕರ್ಪುರದಿಂದ ಬೆಳಗುವ ವೇಳೆ
ಬಾನಲ್ಲಿ ಮೂಡಿ ಬರುವುದು ಜ್ಯೋತಿ ಬೆಳಗುವುದು ಬೆಳಗುವುದು ಆನಂದ ಜ್ಯೋತಿ
ಬೆಳಗುವುದು ಬೆಳಗುವುದು ಆನಂದ ಜ್ಯೋತಿ
ಕೋರಸ್ : ಸ್ವಾಮಿಯೇ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಆ ದೃಶ್ಯವನ್ನು ಕಾಣುವುದೇ ಭಾಗ್ಯ ನೂರು ಜನುಮಗಳು ತಂದಿರುವ ಪುಣ್ಯ
ಅಲಂಕಾರವೆಲ್ಲಾ ಮುಗಿದಾದ ಮೇಲೆ ಕರ್ಪುರದಿಂದ ಬೆಳಗುವ ವೇಳೆ
ಬಾನಲ್ಲಿ ಮೂಡಿ ಬರುವುದು ಜ್ಯೋತಿ ಬೆಳಗುವುದು ಬೆಳಗುವುದು ಆನಂದ ಜ್ಯೋತಿ
ಬೆಳಗುವುದು ಬೆಳಗುವುದು ಆನಂದ ಜ್ಯೋತಿ
ಕೋರಸ್ : ಸ್ವಾಮಿಯೇ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
ಸ್ವಾಮಿಯೇ..... ಅಯ್ಯಪ್ಪ ಶರಣಂ ಅಯ್ಯಪ್ಪ
********************************************************************************
ಲೋಕವಿರಂ ಮಹಾ
ಸಾಹಿತ್ಯ:
ಗಾಯಕರು: ಕೆ.ಜೆ.ಏಸುದಾಸ್
ಲೋಕವಿರಂ ಮಹಾ ಪೂಜ್ಯಮ್ ಸರ್ವರಕ್ಷಾಕರಂ ವಿಭೂಮ್
ಪಾರ್ವತೀ ಹೃದಯಾನದಂ ಶಾಸ್ತರಂ ಪ್ರಾಣಾಮಾಯಾಮಮಮಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಪಾರ್ವತೀ ಹೃದಯಾನದಂ ಶಾಸ್ತರಂ ಪ್ರಾಣಾಮಾಯಾಮಮಮಂ
ಸ್ವಾಮಿಯೇ ಶರಣಂ ಅಯ್ಯಪ್ಪ
ವಿಪ್ರ ಪೂಜ್ಯಮ್ ವಿಶ್ವವಂದ್ಯಮ್ ವಿಷ್ಣು ಶಂಭೋ ಪ್ರಿಯಂ ಸುತಂ
ಕ್ಷಿಪ್ರ ಪ್ರಸಾದ ನಿರತಮ್ ಶಾಸ್ತರಂ ಪ್ರಾಣಾಮಾಯಾಮಮಮಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಕ್ಷಿಪ್ರ ಪ್ರಸಾದ ನಿರತಮ್ ಶಾಸ್ತರಂ ಪ್ರಾಣಾಮಾಯಾಮಮಮಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಮತ್ತ ಮಾತಂಗ ಗಮನಂ ಕಾರುಣ್ಯ ಮೃತಕೂರಿತಮ್
ಸರ್ವ ವಿಘ್ನಹರಂ ದೇವಂ ಶಾಸ್ತರಂ ಪ್ರಾಣಾಮಾಯಾಮಮಮಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಸರ್ವ ವಿಘ್ನಹರಂ ದೇವಂ ಶಾಸ್ತರಂ ಪ್ರಾಣಾಮಾಯಾಮಮಮಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಅಸ್ಮತ್ ಕುಲೇಶ್ವರಂ ದೇವಂ ಆಸ್ಮಾತ ಶತ್ರು ವಿನಾಶನಂ
ಅಸ್ಮ್ ಇಷ್ಟ ಪ್ರದಾತಾರಂ ಶಾಸ್ತರಂ ಪ್ರಾಣಾಮಾಯಾಮಮಮಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಪಾಂಡೇಶವಂ ತಿಲಕಂ ಕೆರಳೇ ಕೇಳಿ ವಿಘ್ರಂ
ಆರತತ್ತ್ರಾಣಂ ಪರಂ ದೇವಂ ಪ್ರಾಣಾಮಾಯಾಮಮಮಂ
ಸ್ವಾಮಿಯೇ ಶರಣಂ ಅಯ್ಯಪ್ಪ
ಪಂಚರತ್ನಖ್ಯೆಮೆದ್ದೆದೋ ನಿತ್ಯಂ ಶುದ್ಧ ಪಹತೇನಃ
ತಸ್ಯ ಪ್ರಸನ್ನೋ ಭಗವಾನ್ ಶಾಸ್ತವಸತಿ ಮಾನಸೆ
ಸ್ವಾಮಿಯೇ ಶರಣಂ ಅಯ್ಯಪ್ಪ
********************************************************************************
ಶರಣಂ ಅಯ್ಯಪ್ಪ
ಸಾಹಿತ್ಯ:
ಗಾಯಕರು: ಕೆ.ಜೆ.ಏಸುದಾಸ್
ಗಾಯಕರು: ಕೆ.ಜೆ.ಏಸುದಾಸ್
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಹರಿವರಾಸನಂ ಸ್ವಾಮಿ ವಿಶ್ವಮೋಹನಂ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಹರಿವರಾಸನಂ ಸ್ವಾಮಿ ವಿಶ್ವಮೋಹನಂ
ಹರಿದದೀಶ್ವರಂ ಆರಾಧ್ಯಪಾದುಕಂ
ಅರಿವಿಮರ್ಧನಂ ಸ್ವಾಮಿ ನಿತ್ಯನರ್ತನಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ಅರಿವಿಮರ್ಧನಂ ಸ್ವಾಮಿ ನಿತ್ಯನರ್ತನಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ಶರಣಕೀರ್ತನಂ ಸ್ವಾಮಿ ಶಕ್ತಮಾನಸಂ
ಭರಣಲೋಲುಪಂ ಸ್ವಾಮಿ ನರ್ತನಾಲಸಂ
ಅರುಣಭಾಸುರಮ್ ಸ್ವಾಮಿ ಭೂತನಾಯಕಂ
ಭರಣಲೋಲುಪಂ ಸ್ವಾಮಿ ನರ್ತನಾಲಸಂ
ಅರುಣಭಾಸುರಮ್ ಸ್ವಾಮಿ ಭೂತನಾಯಕಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
ಪ್ರಣಯಸತ್ಯಕಂ ಸ್ವಾಮಿ ಪ್ರಾಣನಾಯಕಂ
ಪ್ರಣತಕಲ್ಪಕಂ ಸ್ವಾಮಿ ಸುಪ್ರಭಾಂಜಿತಮ್
ಪ್ರಣವಮನ್ಧಿರಮ್ ಸ್ವಾಮಿ ಕೀರ್ತನಪ್ರಿಯಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ತುರುಗವಾಹನಂ ಸ್ವಾಮಿ ಸುಂದರಾನನಂ
ವರಗಧಾಯುಧಂ ಸ್ವಾಮಿ ವೇದವರ್ಣಿತಂ
ಗುರುಕೃಪಾಕರಂ ಸ್ವಾಮಿ ಕೀರ್ತನಪ್ರಿಯಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
ತ್ರಿಭುವನಾರ್ಚಿತಂ ಸ್ವಾಮಿ ದೇವತಾತ್ಮಕಂ
ತ್ರಿನಯನಂ ಪ್ರಭುಂ ಸ್ವಾಮಿ ದಿವ್ಯದೆಶಿಕಂ
ತ್ರಿದಶಪೂಜಿತಂ ಸ್ವಾಮಿ ಚಿಂತಿತಪ್ರದಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ಭವಭಯಾಪಹಂ ಸ್ವಾಮಿ ಭಾವುಕಾವಹಂ
ಭುವನಮೋಹನಂ ಸ್ವಾಮಿ ಭೂತಿಭುಶಣಂ
ಧವಳವಾಹನಂ ಸ್ವಾಮಿ ದಿವ್ಯವಾರಣಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
ಕಾಲಮ್ರುಧುಸ್ಮಿತಂ ಸ್ವಾಮಿ ಸುಂಧರಾನನಂ
ಕಲಭಕೊಮಳಂ ಸ್ವಾಮಿ ಗಾತ್ರಮೊಹನಂ
ಕಳಭಕೇಸರಿ ಸ್ವಾಮಿ ವಾಜಿವಾಹನಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
(ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ)
ಶ್ರೀತಜನಪ್ರಿಯಂ ಸ್ವಾಮಿ ಚಿಂತಿತಪ್ರಧಂ
ಶ್ರುತಿವಿಭೂಷಣಂ ಸ್ವಾಮಿ ಸಾಧುಜೀವನಂ
ಶೃತಿ ಮನೋಹರಂ ಸ್ವಾಮಿ ಗೀತ ಲಾಲಸಂ
ಹರಿಹರಾತ್ಮಜಂ ಸ್ವಾಮಿ ದೇವಮಶ್ರಯೇ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
********************************************************************************
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
ಶರಣಂ ಅಯಪ್ಪ ಸ್ವಾಮೀ ಶರಣಂ ಅಯ್ಯಪ್ಪ
********************************************************************************
No comments:
Post a Comment