ಚಿಂತೆ ಯಾಕೆ
ಚಲನಚಿತ್ರ : ಯಾರೇ ನೀನು ಚೆಲುವೆ (1998)ಸಾಹಿತ್ಯ : "ನಾದಬ್ರಹ್ಮ" ಹಂಸಲೇಖ
ಸಂಗೀತ: "ನಾದಬ್ರಹ್ಮ" ಹಂಸಲೇಖ
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಿರ್ದೇಶನ: ಡಿ. ರಾಜೇಂದ್ರ ಬಾಬು
ನಟನೆ: ವಿ. ರವಿಚಂದ್ರನ್, ಸಂಗೀತಾ, ವಿಷ್ಣುವರ್ಧನ್

ಚಿಂತೆ ಯಾಕೆ ಮಾಡುತಿಯೊ ಗೆಳೆಯ,
ಎಳಯ್ಯ ಲವ್ವೇ ಹಿಗಯ್ಯ...
ಕಾದಮೇಲೆ ತಾನೆ ಪ್ರೀತಿ ಗೆಳೆಯ,
ಎಳಯ್ಯ ಕುಂತರೆ ಹ್ಯಾಗಯ್ಯ...
ಪ್ರೀತಿಗೆ ಅವಳುಂಟು, ಸ್ನೇಹಕ್ಕೆ ನಾನುಂಟು...
ಕಂಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ,
ನೂರಾರು ಲವ್ ಸ್ಟೋರಿಯ...
ಅವು ಹುಲಕಡ್ಡಿ ಆಗ್ಹೋದ್ವಯ್ಯ ,
ನಿನ್ನ ಲವ್ ಸ್ಟೋರಿ ಬೆಸ್ಟಾಯ್ತಯ್ಯ...
ಗೆಳೆಯ ಎಳಯ್ಯ, ಕುಂತರೆ ಹ್ಯಾಗಯ್ಯ..
ಚಿಂತೆ ಯಾಕೆ ಮಾಡುತಿಯೊ ಗೆಳೆಯ,
ಎಳಯ್ಯ ಲವ್ವೇ ಹಿಗಯ್ಯ...
ಪ್ರೀತಿ ಕುರುಡು ಪ್ರೀತಿನೆ ದೇವ್ರು,
ಅಂದ್ರು ಕವಿಗಳು ಸುಖವಾಗಿ...
ಸಾಕ್ಷಿ ಇಟ್ಟು ಸಾಬೀತು ಮಾಡಿದೆ,
ಗೆಳೆಯ ನೀನು ನಿಜವಾಗಿ...
ಕಾಣುತಿರುವ ದೇವರೊಡನೆ,
ಮಾತನಾಡೋ ಭಕ್ತನಂತೆ...
ಗೆಳೆಯ ನೀನಾದೆ, ಗೆಳೆಯ ನೀನಾದೆ...
ನೋಡದೇನೆ ಪ್ರೀತಿಮಾಡಿ,
ಗಿನ್ನಿಸ್ ಗೊಂದು ದಾಖಲೆ ನೀಡಿ...
ವಿರಹಿ ಯಾಕಾದೇ, ವಿರಹಿ ಯಾಕಾದೆ...
ಟೇಕಿಟೀಜಿ ಪಾಲಿಸೀ....
ಟೇಕಿಟೀಜಿ ಪಾಲಿಸಿ, ನಿನ್ನ ಚಿಂತೆಗೆ ಫಾರ್ಮಸಿ...
ಪ್ರೀತಿಗೆ ಅವಳುಂಟು, ಸ್ನೇಹಕ್ಕೆ ನಾನುಂಟು...
ಕಂಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ,
ನೂರಾರು ಲವ್ ಸ್ಟೋರಿಯ...
ಅವು ಹುಲಕಡ್ಡಿ ಆಗ್ಹೋದ್ವಯ್ಯ ,
ನಿನ್ನ ಲವ್ ಸ್ಟೋರಿ ಬೆಸ್ಟಾಯ್ತಯ್ಯ...
ಗೆಳೆಯ ಎಳಯ್ಯ, ಕುಂತರೆ ಹ್ಯಾಗಯ್ಯ..
ಚಿಂತೆ ಯಾಕೆ ಮಾಡುತಿಯೊ ಗೆಳೆಯ,
ಎಳಯ್ಯ ಲವ್ವೇ ಹಿಗಯ್ಯ...
ಅಣ್ಣಾ ಸ್ವಲ್ಪ ಬಿಸಿ ಮುಟ್ಸಣ್ಣಾ....
ಬಾಳು ನರಕ ಅನ್ನೊನು ತಿರುಕ,
ಅಂದ್ರು ಗೆಳೆಯ ತಿಳಿದವರು...
ನರಕದೊಳಗೆ ಸ್ವರ್ಗಾನೇ ಕಟ್ಟಿ,
ತೋರಿಸಿದರು ನಗುವವರು...
ಗುವಿಗಿಂತ ಟಾಣಿಕ್ ಇಲ್ಲ,
ನಗುವಿನಂಥ ಮ್ಯಾಜಿಕ್ ಇಲ್ಲ...
ನಗುವ ಬಾ ಗೆಳೆಯ ಹಾ ಹಾ!
ನಗುವ ಬಾ ಗೆಳೆಯ...
ಪ್ರೀತಿ ಮಾಡಬಾರದಂತೆ,
ಮಾಡಿದರೆ ಅಳಬಾರದಂತೆ...
ನಗಿಸು ನನ್ನ ಗೆಳೆಯ..
ಏ.. ಹೆಹೇ.. ಇಳಿಸು ಎದೆ ಹೊರೆಯ....
ನಗುವ ಪಾಲಿಸಿ ಪಾಲಿಸೂ...
ನಗುವ ಪಾಲಿಸು, ನಿನ್ನ ಗುರಿಯನು ಸಾಧಿಸು...
ಪ್ರೀತಿಗೆ ಅವಳುಂಟು, ಸ್ನೇಹಕ್ಕೆ ನಾನುಂಟು...
ಕಂಡಿದ್ದೆ ಕೇಳಿದ್ದೆ ಓದಿದ್ದೆ ಮೆಚ್ಚಿದ್ದೆ,
ನೂರಾರು ಲವ್ ಸ್ಟೋರಿಯ...
ಅವು ಹುಲಕಡ್ಡಿ ಆಗ್ಹೋದ್ವಯ್ಯ ,
ನಿನ್ನ ಲವ್ ಸ್ಟೋರಿ ಬೆಸ್ಟಾಯ್ತಯ್ಯ...
ಗೆಳೆಯ ಎಳಯ್ಯ, ಏಳ್ಹೆಜ್ಜೆ ಹಾಕಯ್ಯ..
ಚಿಂತೆ ಯಾಕೆ ಮಾಡುತಿಯೋ ಗೆಳೆಯ
ಎಳಯ್ಯ... ಲವ್ವೇ ಹೀಗಯ್ಯ...
********************************************************************************
ಕುಶಲವೇ ಕ್ಷೇಮವೇ
ಸಾಹಿತ್ಯ: ಹಂಸಲೇಖ
ಗಾಯನ: ಶ್ರೀನಿವಾಸ್, ಅನುರಾಧ ಶ್ರೀರಾಮ್
[ಗಂಡು]
ಕುಶಲವೇ ಕ್ಷೇಮವೇ ಸೌಖ್ಯವೇ
ಓ ನನ್ನಾ ಪ್ರೀತಿಪಾತ್ರಳೇ
ಓದಮ್ಮಾ ನನ್ನ ಓಲೇ
ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ
ಕನಸುಗಳೇ ಹಾಡಾಗಿದೇ
ಯಾರೇ ನೀನು ಚೆಲುವೇ ಅಂದಿದೇ
[ಹೆಣ್ಣು]
ಕುಶಲವೇ ಕ್ಷೇಮವೇ ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ
ಪ್ರೇಮರೂಪವದೂ
ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
ಓ...ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ..
ಮುದ್ದಾದ ಬರಹ ಮರೆಸಿದೆ ವಿರಹ
ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ
ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ
ಓಲೆಗಳಿಗ್ಯಾರು ಈ ರಾಯಭಾರ ತಂದಾರೋ
ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ
ಯಾರೋ ನೀನು ಚೆಲುವಾ ಅಂದಿದೇ
||ಕುಶಲವೇ||
ನೂರಾರು ಪ್ರೇಮದಾಸರೂ
ಪ್ರೀತಿಸಿ ದೂರವಾದರೂ
ನಾವಿಂದು ದೂರ ಇದ್ದರೂ
ವಿರಹಗಳೆ ನಮ್ಮ ಮಿತ್ರರೂ
ನೋಡದೇ ಇದ್ದರೂ ಪ್ರೀತಿಸೋ ಇಬ್ಬರೂ
ನೋಡೋರ ಕಣ್ಣಲ್ಲೀ ಏನೇನೋ ಹಾಡೋ ಹುಚ್ಚರು
ದೂರಾನೇ ಆರಂಭ, ಸೇರೋದೇ ಅಂತಿಮ
ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು
ದೂರದಲೇ ಹಾಯಾಗಿದೇ
ಕಾಯುವುದೇ ಸುಖವಾಗಿದೇ
ಯಾರೇ ನೀನೂ ಚೆಲುವೇ ಅಂದಿದೇ..
********************************************************************************
ನನ್ನ ಕಣ್ಣ ಬಾಣ ಕೊಲುವ ರೀತಿ ನೋಡಿ |ಭಯಾನಾ..... ಡಯಾನಾ
********************************************************************************
ಸೃಷ್ಟಿ ಕರ್ತ ಇಸ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಡಯಾನಾ ಡಯಾನಾ
ಸಂಗೀತ & ಸಾಹಿತ್ಯ : ಹಂಸಲೇಖ
ಗಾಯನ : ಶ್ರೀನಿವಾಸ್ & ಅನುರಾಧ ಶ್ರೀರಾಮ್
ಡಯಾನಾ ನಾನೇ ಡಯಾನಾ......
ನನ್ನ ಕಣ್ಣ ಕಾ೦ತಿ ಸುಡುವ ರೀತಿ ನೋಡಿ
ಭಯಾನಾ ಡಯಾನಾ....
ನನ್ನ ಸೂರ್ಯಕಾ೦ತಿ ರೂಪರಾಶಿ ನೋಡಿ
ನನ್ನ ಕಣ್ಣ ಕಾ೦ತಿ ಸುಡುವ ರೀತಿ ನೋಡಿ
ಭಯಾನಾ ಡಯಾನಾ....
ನನ್ನ ಸೂರ್ಯಕಾ೦ತಿ ರೂಪರಾಶಿ ನೋಡಿ
ಭಯಾನಾ....... ಡಯಾನಾ |
ಕೇವಲ ತುಟಿಗಳಲ್ಲಿ ನಿನಗೆ ಮನದಾ ಮಾತು ಇಡುವೆ ಜೊತೆಗೆ |
ಒ೦ದೇ ಜನುಮದಲ್ಲಿ ನಿನಗೆ ಏಳು ಜನುಮದೊಲವ ಕೊಡುಗೆ |
ಕೊಡುವೆ ಬಾರೋ ಪುರುಷ ವೀರಾ ಅಧರ ಅಧರಕೀಗ ಸಮರಾ ||ಡಯಾನಾ||
ಒ೦ದೇ ಜನುಮದಲ್ಲಿ ನಿನಗೆ ಏಳು ಜನುಮದೊಲವ ಕೊಡುಗೆ |
ಕೊಡುವೆ ಬಾರೋ ಪುರುಷ ವೀರಾ ಅಧರ ಅಧರಕೀಗ ಸಮರಾ ||ಡಯಾನಾ||
ನನ್ನ ಕಣ್ಣ ಬಾಣ ಕೊಲುವ ರೀತಿ ನೋಡಿ |ಭಯಾನಾ..... ಡಯಾನಾ
ಕಾಮದ ನ೦ಜು ಏರಿ ಮೈಗೆ | ಪ್ರೇಮದ ಕೋಟೆ ಮುರಿಯಬಹುದೇ
ಪ್ರೇಮದ ರಾಜ್ಯ ಗೆಲ್ಲಲೆ೦ದು ಕಾಮನ ಬಿಲ್ಲು ಹಿಡಿಯಬಹುದೇ
ಧೈರ್ಯ ಇದ್ರೆ ಹೂಡೆ ಬಾಣ ಕೊಡುವೆ ಪ್ರೀತಿ ಬದಲು ಪ್ರಾಣ ||ಡಯಾನಾ||
ಪ್ರೇಮದ ರಾಜ್ಯ ಗೆಲ್ಲಲೆ೦ದು ಕಾಮನ ಬಿಲ್ಲು ಹಿಡಿಯಬಹುದೇ
ಧೈರ್ಯ ಇದ್ರೆ ಹೂಡೆ ಬಾಣ ಕೊಡುವೆ ಪ್ರೀತಿ ಬದಲು ಪ್ರಾಣ ||ಡಯಾನಾ||
********************************************************************************
ಪ್ರಿಯಾ ಪ್ಲೀಸ್ ಲವ್
ಸಾಹಿತ್ಯ: ಹಂಸಲೇಖ
ಗಾಯಕರು: ಎಸ್.ಪಿ.ಬಿ., ಚಿತ್ರಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಈ ಲೋಕ ಬೇಡ, ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಈ ಲೋಕ ಬೇಡ, ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಮತ್ತಿಗಾಗಿ ಎಲ್ಲ ಕುಡಿಯುತ್ತಾರೆ ನಲ್ಲ
ಪ್ರೀತಿಗಿಂತ ಮತ್ತೇ ಇಲ್ಲ, ಸೇವಿಸು
ಚಿನ್ನಕ್ಕಾಗಿ ಕೊಳ್ಳೆ ಹೊಡೆಯುತ್ತಾರೆ ನಲ್ಲೆ
ಹೃದಯಕಿಂತ ಹೊನ್ನೇ ಇಲ್ಲ, ಕೂಡಿಸು
ಚಿನ್ನಕ್ಕೆ ಚೋರರ ಭಯ
ಪ್ರೇಮಕ್ಕೆ ಯಾರ ಭಯ ಬಾರೆ ಬಾರೆ ಲವ್ ಮಿ ಲವ್ ಮಿ
ಚಿನ್ನಕ್ಕಾಗಿ ಕೊಳ್ಳೆ ಹೊಡೆಯುತ್ತಾರೆ ನಲ್ಲೆ
ಹೃದಯಕಿಂತ ಹೊನ್ನೇ ಇಲ್ಲ, ಕೂಡಿಸು
ಚಿನ್ನಕ್ಕೆ ಚೋರರ ಭಯ
ಪ್ರೇಮಕ್ಕೆ ಯಾರ ಭಯ ಬಾರೆ ಬಾರೆ ಲವ್ ಮಿ ಲವ್ ಮಿ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಈ ಲೋಕ ಬೇಡ, ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಬ್ರಹ್ಮದೇವ ಅರೆದ ಕಾಳಿದಾಸ ಸುರಿದ
ದೇವದಾಸ ಕುಡಿದ ಪ್ರೀತಿ ಮಧು ರಸ
ರೂಪದಲ್ಲೂ ಪ್ರೇಮ ಕುರೂಪದಲ್ಲೂ ಪ್ರೇಮ
ಈ ಪ್ರೇಮದಿಂದ ತಾನೆ ಎಲ್ಲಾ, ಸಮರಸ
ಪ್ರಾಯಕ್ಕೆ ಓಡುವ ಭಯ
ಪ್ರೇಮಕ್ಕೆ ಯಾವ ಭಯ ಬಾರೆ ಬಾರೆ ಲವ್ ಮಿ ಲವ್ ಮಿ
ದೇವದಾಸ ಕುಡಿದ ಪ್ರೀತಿ ಮಧು ರಸ
ರೂಪದಲ್ಲೂ ಪ್ರೇಮ ಕುರೂಪದಲ್ಲೂ ಪ್ರೇಮ
ಈ ಪ್ರೇಮದಿಂದ ತಾನೆ ಎಲ್ಲಾ, ಸಮರಸ
ಪ್ರಾಯಕ್ಕೆ ಓಡುವ ಭಯ
ಪ್ರೇಮಕ್ಕೆ ಯಾವ ಭಯ ಬಾರೆ ಬಾರೆ ಲವ್ ಮಿ ಲವ್ ಮಿ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಪ್ರಿಯಾ ಪ್ಲೀಸ್ ಲವ್ ಮಿ ಪ್ರಿಯಾ
ಈ ಲೋಕ ಬೇಡ, ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಈ ಲೋಕ ಬೇಡ, ಆ ಸ್ವರ್ಗ ಬೇಡ
ಈ ಪ್ರೀತಿ ಇರದ ಕ್ಷಣಗಳೇ ಬೇಡ
ಐ ಆಮ್ ಇನ್ ಲವ್ ಯು ಆರ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
ಸೃಷ್ಟಿ ಕರ್ತ ಇಸ್ ಇನ್ ಲವ್
********************************************************************************
No comments:
Post a Comment