Thursday, September 13, 2018

ರಾಮಾಚಾರಿ (1991)


ನಮ್ಮೂರ ಯುವರಾಣಿ

ಚಲನ ಚಿತ್ರ: ರಾಮಾಚಾರಿ (1991)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ : ಕೆ.ಜೆ. ಯೇಸುದಾಸ್
ನಿರ್ದೇಶನ: ಡಿ. ರಾಜೇಂದ್ರ ಬಾಬು 
ನಟನೆ: ವಿ. ರವಿಚಂದ್ರನ್, ಮಾಲಾಶ್ರೀ 



ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರೂ
ಮನ ಸೇರೋ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ಒಳ್ಳೆ ದಿನ ಘಳಿಗೆಯ ಕೂಡಿಸಿ
ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ
ಕರೆದಾಗಲೆ ಮದುವೆಯೆ
ಸರಿಗಮ ಪಧನಿಸ ಊದಿಸಿ
ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ
ಅಕ್ಷತೆಯಲ್ಲೆ ಮದುವೆಯೇ
ನಿಜವಾಗಿ ನನಗೇನು ತೋಚದೆ
ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ
ಅರಿಶಿಣವೆ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ
ಸುಳ್ಯಾವುದೇ ಕೋಗಿಲೆ
ಮಾಂಗಲ್ಯದಿಂದ ನಂಟಾದರೂ
ಮನಸೆರೋ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

ನನ್ನನೊಂದು ಬೊಂಬೆಯೆಂದು ಮಾಡಿದ
ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ
ನನ್ನ ಹಾಡಿಗೆ ಬೆಲೆಯೆ
ಹಣೆಯಲಿ ಬಡತನ ಗೀಚಿದ
ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು
ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ
ಇರುಳಲ್ಲಿ ಬರಿ ಭಾವಿ ನೋಡಿದೆ
ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ
ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು
ನಾ ಯಾರಿಗೆ ಹೇಳಲೆ
ಮಾಂಗಲ್ಯದಿಂದ ನಂಟಾದರೂ
ಮನಸೇರೊ ಮದುವೇನೆ ಸುಖವೆಂದರು

ನಮ್ಮೂರ ಯುವರಾಣಿ ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ

*********************************************************************************



ಆಕಾಶದಾಗೆ ಯಾರೋ


ಸಾಹಿತ್ಯ: ಹಂಸಲೇಖ 
ಗಾಯನ: ಮನು, ಎಸ್. ಜಾನಕಿ 

F :ಆಕಾಶದಾಗೆ ಯಾರೋ ಮಾಯಗಾರನು   
ಚಿತ್ತಾರ ಮಾಡಿ ಹೋಗೋನೇ  .......   
ಈ ಭೂಮಿ ಮ್ಯಾಗೆ ಯಾರೋ ತೋಟಗಾರನು   
ಮಲೆನಾಡ ಮಾಡಿ ಹೋಗೊನೆ   
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು   
ಸಂಚಾರ ಮಾಡುವ ಬಾರಾ ಆ ಆ ಆ  ಆ ಆ
F : ಆಕಾಶದಾಗೆ ಯಾರೋ ಮಾಯಗಾರನು   
ಚಿತ್ತಾರ ಮಾಡಿ ಹೋಗೋನೇ  .......   
ಈ ಭೂಮಿ ಮ್ಯಾಗೆ ಯಾರೋ ತೋಟಗಾರನು   
ಮಲೆನಾಡ ಮಾಡಿ ಹೋಗೊನೆ

F : ಸುದ್ದಿ ಇಲ್ಲದೇ  ಮೋಡ ಶುದ್ದಿಯಾಗೋದು   
ಸದ್ದೇ ಇಲ್ಲದೆ ಗಂಧ ಗಾಳಿಯಾಗೋದು   
ತಂಟೆನೇ ಮಾಡದೆ ಹೊತ್ತಿಟ್ಟಿ ಹೋಗೋದು   
ಏನೇನು ಮಾಡದೆ ನಾವ್ಯಾಕೆ ಬಾಳೋದು
M : ಹಾರೋ ಹಕ್ಕಿನಾ ತಂದು ಕೂಡಿಹಾಕೋದು   
ಕಟ್ಟೋ ಜೇನನ್ನಾ ಸುಟ್ಟು ತಿಂದು ಹಾಕೋದು   
ನರಾ ಮನಷ್ಯಾ  ಕಲಿಯೋಲ್ಲ ಒಳ್ಳೇದು ಉಳಿಸೋಲ್ಲ   
ಅವ  ನೆಡೆಯೋ ದಾರೀಲಿ ಗರಿಕೇನೂ ಬೆಳೆಯೋಲ್ಲ
F : ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ ಎ ಎ ಎ ಎ ಎ
M : ನೀರಲೆಗಳ ತಕಧಿಮಿ ಎದೆಯೊಳಗೆ ಎ ಎ ಎ ಎ ಎ
M : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು   
ಸಂಚಾರ ಮಾಡುವ ಬಾರಾ ಆ ಆ ಆ  ಆ ಆ

M : ಆಕಾಶದಾಗೆ ಯಾರೋ ಮಾಯಗಾರನು   
ಚಿತ್ತಾರ ಮಾಡಿ ಹೋಗೋನೇ  .......     
ಈ ಭೂಮಿ ಮ್ಯಾಗೆ ಯಾರೋ ತೋಟಗಾರನು     
ಮಲೆನಾಡ ಮಾಡಿ ಹೋಗೊನೆ

M : ಕಾಡು ಸುತ್ತುವ ಆಸೆ ರಾಣೀಗೇಕಮ್ಮ   
ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮ     
ಏಳೋದು ಬೀಳೋದು ಬಡವರ ಪಾಡಮ್ಮಾ     
ನೀವ್ಯಾಕೆ ಹಾಡಿರಿ ಈ ಹಳ್ಳಿ ಹಾಡಮ್ಮಾ
 F : ಇಲ್ಲಿ ಬೀಸುವ ಗಾಳಿ ಊರಲ್ಯಾಕಿಲ್ಲ     
ಇಲ್ಲಿ ಸಿಕ್ಕುವಾ ಪಾಠ ಶ್ಯಾಲೆಲ್ಯಾಕಿಲ್ಲ   
ಬಂಗಾರ ಸಿಂಗಾರ ಸಾಕಾಗಿ ಹೋಯಿತು ,   
ಅರಮನೆ ಆನಂದ ಬೇಸತ್ತುಹೋಯಿತು
M : ಕೆಳಗಿಳಿಸುವ ಮನಸಿನ ಭಾರಗಳ ಆ ಆ ಆ ಆ ಆ ಆ
F : ಜಿಗಿಜಿಗಿಯುವ ಚಿಂತೆಯ ಗುಡ್ಡಗಳ ಆ ಆ ಆ ಆ ಆ ಆ
M / F : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು         
ಸಂಚಾರ ಮಾಡುವ ಬಾರಾ ಆ ಆ ಆ  ಆ ಆ

F : ಆಕಾಶದಾಗೆ ಯಾರೋ ಮಾಯಗಾರನು   
ಚಿತ್ತಾರ ಮಾಡಿ ಹೋಗೋನೇ  .......
M: ಈ ಭೂಮಿ ಮ್ಯಾಗೆ ಯಾರೋ ತೋಟಗಾರನು   
ಮಲೆನಾಡ ಮಾಡಿ ಹೋಗೊನೆ
M / F : ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು         
ಸಂಚಾರ ಮಾಡುವ ಬಾರಾ ಆ ಆ ಆ  ಆ ಆ


********************************************************************************

ಯಾರಿವಳು ಯಾರಿವಳು

ಸಾಹಿತ್ಯ: ಹಂಸಲೇಖ 
ಗಾಯಕರು: ಮನು 


ಯಾರಿವಳು ಯಾರಿವಳು
ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ  ತೋಟದಲ್ಲಿ
ಘಮ್ಮನೆಂದು ಅರಳಿದಳು
ಮಾತಿನಲ್ಲಿ ಹೇಳಿದರೆ
ತಾಳಕೆ ಸಿಗದು, ಹಾಡಲಿ ಕೇಳು ಅಂದದ ಸಾಲು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು,
ಹಾಡಲಿ ಕೇಳು ಅಂದದ ಸಾಲು

ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು

ಶ್ರೀಗಂದ ಈ ಗೊಂಬೆ ಇವಳಿಗೇಕೆ ಗಂಧವೋ
ಬಂಗಾರ ಈ ಹೆಣ್ಣು ಇವಳಿಗೇಕೆ ಒಡವೆಯೋ
ತಾರೆಗೇ, ಈ ತಾರೆಗೇ, ಈ ತಾರೆಗೇಕೆ ಮಿನುಗು ದೀಪವೋ
ಈ ಬೆಳಕಿಗೇಕೆ ಬಿರಿಸು ಬಾಣವೋ .......
ಕೆನ್ನೆ ಮೇಲೆ ಸೇಬಿದೆ, ಅಲ್ಲೇ ಗಿಳಿಯ ಮೂಗಿದೆ
ತೊಂಡೆ ಹಣ್ಣು ತುಟಿಯಲಿ, ದಾಳಿಂಬೆ ಕಾಳು ಬಾಯಲಿ
ಏನಿದು ಏನು ಮೋಜಿದು ಏನಿದೇನು ಮೋಜಿದು

ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು

ದಯಮಾಡಿ ಮುಗಿಲಾಚೆ ಸ್ವಲ್ಪ ನೋಡಿ ಎಲ್ಲರೂ
ಸಾಲಾಗಿ ಮುಕ್ಕೋಟಿ ದೇವರುಗಳು ನಿಂತರು
ದೇವತೆ ಈ ದೇವತೆ ಈ ದೇವತೆಯ ಚೆಲುವ ನೋಡಲು
ಈ ಮಾಯಗಾತಿ ನಗುವ ಕಲಿಯಲು .....
ನೋಡಲಿವಳು ಹುಣ್ಣಿಮೆ, ಬಿರಿಯಲಿವಳು ನೈದಿಲೆ
ಚಿಗುರು ಮಾವು ಬಯಸಿದೆ, ಒಳಗೆ ಕುಹೂ ದನಿಯಿದೆ
ಏನಿದು ಏನು ಮೋಜಿದು ಏನಿದೇನು ಮೋಜಿದು

ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು,
ಹಾಡಲಿ ಕೇಳು ಅಂದದ ಸಾಲು
ಮಾತಿನಲ್ಲಿ ಹೇಳಿದರೆ ತಾಳಕೆ ಸಿಗದು,
ಹಾಡಲಿ ಕೇಳು ಅಂದದ ಸಾಲು

ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು
ರಾಮನಳ್ಳಿ ತೋಟದಲ್ಲಿ ಘಮ್ಮನೆಂದು ಅರಳಿದಳು

********************************************************************************

ರಾಮಾಚಾರಿ ಹಾಡುವಾ

ಸಾಹಿತ್ಯ: ಹಂಸಲೇಖ 
ಗಾಯನ : ಕೆ.ಜೆ. ಯೇಸುದಾಸ್


ಓ..ಓಓಓ... ಆ...ಆಆಆಅ
ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
ಬೆಳಕು ನೀನೇ  ಭೂಮಿಗೆ ಉಸಿರು ಹೆತ್ತತಾಯಿಗೆ
ನಗುವೇ ನಿನ್ನ ಭಾಷೆಯು ಅಳುವ ನಿನ್ನಾ ಆಜ್ಞೆಯು
ದಂತದಾ ಬೊಂಬೆಯೇ....

ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ

ಓದುವುದು ಬರೆಯಲ್ಲಿಲ್ಲ ಆ ಶಿವ ನನಗೆ 
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ 
ಕೇಳುಗರ ಗುಂಡಿಗೆಯ ತಾಳಕೆ ನಾನು 
ಹಾಡುವೆನು ಬದಲಿಗೆ ನಾ ಕೇಳೆನು ಏನು 
ಮನೆಯೇ ನನ್ನಾ ಶಾಲೆಯೇ ಪದವೇ ನನ್ನಾ ಪಾಠವು 
ಗುರುವೇ ನನ್ನಾ ಅಮ್ಮನು ನನಗೆ ನಾನೇ ಗುಮ್ಮನು 
ಊರಿನಾ ಗಿಣಿಯು ನಾ..

ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ
ದೇವರಿಗೆ ನಾನು ದಿನ ಮುಗಿಯುವವುದಿಲ್ಲಾ 
ಅಮ್ಮನನ ಜಪಿಸುವುದ ಮರೆಯುವುದಿಲ್ಲಾ 
ಮಗನ ವಿನಃ ಅಮ್ಮನಿಗೆ ಲೋಕವೇ ಇಲ್ಲಾ 
ಅವಳ ಮುಖ ನೋಡಿದರೆ ಹಸಿಯುವುದಿಲ್ಲಾ 
ನನಗೆ ಗಾಯ ಆದರೇ  ಅವಳು ಅತ್ತು ಕರೆವಳು 
ನನಗೆ ನಗು ಬಂದರೆ ಅವಳು ನೋವಾ ಮರೆವಳು 
ಅವಳಿಗೆ ಕರುವು ನಾ ..

ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ 

ಬೆಳಕು ನೀನೇ  ಭೂಮಿಗೆ ಉಸಿರು ಹೆತ್ತತಾಯಿಗೆ
ನಗುವೇ ನಿನ್ನ ಭಾಷೆಯು ಅಳುವ ನಿನ್ನಾ ಆಜ್ಞೆಯು
ದಂತದಾ ಬೊಂಬೆಯೇ....

ರಾಮಾಚಾರಿ ಹಾಡುವಾ ಲಾಲಿ ಹಾಡು ಕೇಳವ್ವಾ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವಾ

********************************************************************************

No comments:

Post a Comment