Saturday, September 15, 2018

ಪ್ರೇಮಲೋಕ (1987)



ಗೆಳೆಯರೆ ನನ್ನ

ಚಲನ ಚಿತ್ರ: ಪ್ರೇಮಲೋಕ (1987) 
ನಿರ್ದೇಶನ: ವಿ. ರವಿಚಂದ್ರನ್ 
ಸಂಗೀತ / ಸಾಹಿತ್ಯ : ಹಂಸಲೇಖ 
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ 
ನಟನೆ: ರವಿಚಂದ್ರನ್, ಜೂಹಿ ಚಾವ್ಲಾ 


ಬನ್ನೀ ನನ್ನ ಗೆಳೆಯರೆ ಬನ್ನೀ ನನ್ನ ಗೆಳತಿಯರೆ
ಗೆಳೆಯರೆ.. ನನ್ನ ಗೆಳತಿಯರೆ (೨)
ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ.. 
ಹೊಗೋಣ ಕಾಲೇಜಿಗೆ.. ಥ್ಯಾಂಕ್ಸ್ ಹೇಳಿ ವಯಸ್ಸಿಗೇ
ಗೆಳೆಯರೆ ನನ್ನ ಗೆಳತಿಯರೇ (೨)



ಭಯವಿಲ್ಲದಂತ ವಯ್ಸಿದು, ಬಯಾಲಜಿ ಬರೆಯಬಹುದು
ಕೆಮ್ಮು ಬಾರದಂತ ವಯ್ಸಿದು, ಕೆಮಿಸ್ಟ್ರಿ ಕಲಿಯಬಹುದು
ಮೀಸೆ ಚಿಗುರುವಂತ ವಯ್ಸಿದು, ಹಿಸ್ಟರಿ ಓದಬಹುದು
ಪ್ರೇಮ ಚಿಮ್ಮುವಂತ ವಯ್ಸಿದು, ಕಾಮರ್ಸ್ ಕೇಳಬಹುದು
ಬನ್ನಿ ಗೆಳತಿಯರೇ.. ಡ್ರಿಲ್ಲಿಂಗ್ ಮಾಡಬಹುದು
ಬನ್ನಿ ಸ್ನೇಹಿತರೇ.. ಥ್ರಿಲ್ಲಿಂಗ್ ನೋಡಬಹುದು
ನಾನು ನೀನು ಎಂಬುದಿಲ್ಲ
ಗಂಡು ಗಿಂಡು ಭೇದವಿಲ್ಲ..
ಚಿಂತೆಗಿಲ್ಲಿ ಜಾಗವಿಲ್ಲ
ಜಾಲಿ ಮಾಡಿ ಬನ್ನಿ ಎಲ್ಲ
ವಯಸು ಕಳೆದು ಹೋದ ಮೇಲೆ ದೊರಕದು
ಕೈಲಿ ಇರುವ ಪ್ರೇಮಲೋಕ ನಮ್ಮದು..
ಬ್ಯಾಂಗ್ ಬ್ಯಾಂಗ್! ಬ್ಯಾಂಗ್ ಬ್ಯಾಂಗ್!!
ಹೇಯ್! ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಾಸ್ಸಿಗೇ
ಗೆಳೆಯರೆ ನನ್ನ ಗೆಳತಿಯರೆ (೨) (ರೆ ರೆ ರೆ ರೆ ರೆ ರೆ ರೆ ರೆ)
ಕ್ಲಾಸ್‍ರೂಮಿನಲ್ಲಿ ಇದ್ದರೆ, ಕಾಮೆಂಟ್ರಿ ಕೇಳಬಹುದು
ಕ್ಲೋಕ್‍ರೂಮಿನಲ್ಲಿ ಇದ್ದರೆ, ಟೈಮ್ ಪಾಸ್ ಮಾಡಬಹುದು
ಲೈಬ್ರರಿಗೆಂದು ಹೋದರೆ, ಲವ್ ಸೀನ್ ನೋಡಬಹುದು
ಲ್ಯಾಬೋರೇಟರಿಗೆ ಹೋದರೆ, ಡಿಂಗ್-ಡಾಂಗ್ ನೋಡಬಹುದು
ಬನ್ನಿ ಗೆಳತಿಯರೇ ಡಿಸ್ಕೊ ಕುಣಿಯಬಹುದು
ಬನ್ನಿ ಸ್ನೇಹಿತರೆ.. ಜಾಲಿ ಮಾಡಬಹುದು
ಸೂರ್ಯ ಚಂದ್ರ ಜೇಬಿನಲ್ಲೆ, ತಾರೆ ಚುಕ್ಕಿ ಮುಷ್ಟಿಯಲ್ಲೆ
ಎಂಟು ದಿಕ್ಕು ನಮ್ಮ ಕೈಲಿ, ರಾಜರಂತೆ ನಾವು ಇಲ್ಲಿ
ಋತುಗಳೆಲ್ಲ ನಮ್ಮ ದಾರಿ ಕಾದಿದೆ
ವರುಷ ಪೂರ್ತಿ ಹರುಷ ನಮ್ಮದಾಗಿದೆ..
ಬ್ಯಾಂಗ್ ಬ್ಯಾಂಗ್! ಬ್ಯಾಂಗ್ ಬ್ಯಾಂಗ್!!
ಹೇಯ್! ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಸಿಗೆ
ಗೆಳೆಯರೆ ನನ್ನ ಗೆಳತಿಯರೆ (೨)
ಕಳೆಯಿತು ಆ ಬೇಸಿಗೆ.. ಅರಳಿತು ಹೂ ಮೆಲ್ಲಗೆ
ಹೊಗೋಣ ಕಾಲೇಜಿಗೆ. ಥ್ಯಾಂಕ್ಸ್ ಹೇಳಿ ವಯಸಿಗೇ
ಗೆಳೆಯರೆ ನನ್ನ ಗೆಳತಿಯರೇ (೨)

*********************************************************************************

ಈ ನಿಂಬೆ ಹಣ್ಣಿನಂತ ಹುಡುಗಿ

ಸಂಗೀತ / ಸಾಹಿತ್ಯ : ಹಂಸಲೇಖ 
ಗಾಯಕರು: ರಮೇಶ್ ವೀರತುಂಗ 


ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು 
ಏ ಬಾಲು.. ಏ ಬಾಲು
ಇದು ರಂಬೆ ಮೇನಕೆಯ ವಂಶದ ಬೆಡಗಿ ನೋಡು 
ಈ ಮಾಲು.. ಹೊಸ ಮಾಲು ||೨||

ದಿನಾ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೊ ನಮಗೆ ಬಿತ್ತು ಇಲ್ಲಿ ಪೂರ್ತಿ ಡ್ಯೂಟಿ! ||೨||
ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು 
ಏ ಬಾಲು.. ಏ ಬಾಲು
ಈ ಬಿಸಿಲು ಕಾಲದಲಿ ಬಂತೋ ಕಾಮನ ಬಿಲ್ಲು .. 
ಆ ಹುಬ್ಬು, ಕರಿ ಹುಬ್ಬು
ಈ ಪಬ್ಲಿಕ್ ರೋಡಿನಲ್ಲಿ ಜಿಂಕೆ ಬಂದೈತಲ್ಲೊ..
ಆ ಕಣ್ಣು.. ಜಿಂಕೆ ಕಣ್ಣು
ಈ ಎಳೆ ಸಂಪಿಗೆಯ 3-Dಯಂಥ ಮೂಗೂ.. ಅಯ್ಯೋ..
ಅ ಅಹ್ ಕಳೆ ಕೊಡುವ ಈ ತೊಂಡೆ ತುಟಿಗಳ ರಂಗು.. ಅ ಮಿಂಚಿಂಗು
ದಿನಾ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ
ತಗೊ ನಮಗೆ ಬಿತ್ತು ಇಲ್ಲಿ ಪೂರ್ತಿ ಡ್ಯೂಟಿ!

ಈ ಹಗಲು ಹೊತ್ತಿನಲಿ ಚಂದ್ರ ಬಂದೈತಲ್ಲಾ..ಈ ಗಲ್ಲ.. ರಸಗುಲ್ಲಾ
ಆ ತಲೆ ಇಂದ ಉಂಗುಷ್ಟದವರೆಗೆ ಎಲ್ಲಾ ಮಾತಿಲ್ಲ ಕೊಂಕಿಲ್ಲ
ಈ ಎಳೆ ಬಿಸಿಲಿನಲಿ ಮಿನುಗುತಿರುವ ಹೆಣ್ಣೋ.. ಹಣ್ಣೋ
ಆ ಸೂರ್ಯ ಕೂಡ ಕಣ್ ಹೊಡಿತಾವ್ನಾಲ್ಲಣ್ಣೊ.. ನೋಡಣ್ಣೊ
ದಿನಾ ಬೀದಿಯಲಿ ಬಂದ್ರೇ ನೋಡು ಇಂಥ ಬ್ಯೂಟಿ
ತಗೋ ನಮಗೆ ಬಿತ್ತು ಇಲ್ಲಿ ಪೂರ್ತಿ ಡ್ಯೂಟಿ!

ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು
ಏ ಬಾಲು.. ಏ ಬಾಲು ಏ ಬಾಲು!

*********************************************************************************

ಬಾತ್‍ರೂಮಿನಲ್ಲಿ

ಸಂಗೀತ / ಸಾಹಿತ್ಯ : ಹಂಸಲೇಖ 
ಗಾಯಕರು: ವಾಣಿ ಜಯರಾಮ್ 


ಗುಂಪು: ಏಳೇಳಿ ಪ್ರೇಮಿಗಳೆ ಮೇಲೇಳಿ.. 
            ಕನಸಿನಾ ಲೋಕದ ಹೂವುಗಳೆ ಏಳಿ           
            ಹೊತ್ತೇನು ಗೊತ್ತೇನು ನಿಮಗಿಲ್ಲ ಏಳಿ.. 
            ಪ್ರೇಮದ ರೋಗಿಗಳೆ ಬೆಳಗಾಯಿತೇಳಿ
ಹೆಣ್ಣು:  ಬಾತ್‍ರೂಮಿನಲ್ಲಿ ನನ್ನ ಪ್ರಿಯನ ಕಂಡೆ
          ಮನಸ ಕದ್ದ ಶೂರನ ಕಂಡೇ
          ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ
         ಮಿಂಚು ಮಾಯಗಾರನ ಕಂಡೇ
         ಸೋಪಿನಲ್ಲೂ ನೀನೆ ಪ್ರಿಯಾ!
         ಶಾಂಪುನಲ್ಲೂ ನೀನೆ ಪ್ರಿಯಾ!
         ಪೇಸ್ಟಿನಲ್ಲೂ ನೀನೆ ಪ್ರಿಯಾ!
         ಬ್ರಶಿನಲ್ಲೂ ನೀನೆ ಪ್ರಿಯಾ!
          ಕಣ್ಣಿನಲ್ಲೂ ನೀನೆ ಪ್ರಿಯಾ! ಆಹ್!
          ಹೃದಯದಲ್ಲೂ ನೀನೆ ಪ್ರಿಯಾ ಅ ಅ!
          ಜೀವದಲ್ಲೂ ನೀನೆ ಪ್ರಿಯಾ!
         ಎಲ್ಲೆಲು ನೀನೆ ಪ್ರಿಯಾ!!
          ಬಾತ್‍ರೂಮಿನಲ್ಲಿ ನನ್ನ ಪ್ರಿಯನ ಕಂಡೆ
      
ಮನಸ ಕದ್ದ ಶೂರನ ಕಂಡೇ
ಬಾಳ ಬೆಳಗುವಂತ ನನ್ನ ಸೂರ್ಯನ ಕಂಡೆ
ಮಿಂಚು ಮಾಯಗಾರನ ಕಂಡೇ
ಪ್ರೀತಿ ಮಾಡಬೇಕಾದರೇ, ಯಾರದೇನು ಅಪ್ಪಣೆ ದೊರೇ..
ಬಾಳಿನಲ್ಲಿ ನೀನು ಇದ್ದರೆ, ಚಿಂತೆ ಇಲ್ಲ ಬಾರೋ ದೊರೇ (೨

*********************************************************************************

ಬಾಯ್ ಫ್ರೆಂಡ್

ಸಂಗೀತ / ಸಾಹಿತ್ಯ : ಹಂಸಲೇಖ 
ಗಾಯಕರು: ಎಸ್. ಜಾನಕಿ, ರವಿಚಂದ್ರನ್ 


ಗುಂಪು: ಬಾಯ್ ಫ್ರೆಂಡ್ ಬರ್ತಾನಂತ ಬಾಯ್‍ಬಿಡಬೇಡ             
            ಸುಳ್ಳು ಹೇಳಬೇಡ ಗಾಡಿಬಿಡಬೇಡ (೨)
             ಲೈಲಾ ಮಜನು ನಾ? ಗಂಗಾ ಜಮುನ ನಾ? (೨)
            ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!  
            ಬಾಯ್ ಫ್ರೆಂಡ್ ಬರ್ತಾನಂತ ಬಾಯ್‍ಬಿಡಬೇಡ
            ಸುಳ್ಳು ಹೇಳಬೇಡ (ಹೇಯ್).. ಗಾಡಿಬಿಡಬೇಡ (೨)
ಹೆಣ್ಣು:    ಬೀದಿ ಕಾಮಣ್ಣರ ಹಾಗೇ.. ನನ್ನ ಪ್ರೇಮಿ ಅಲ್ಲಾ ಕಣೆ
            ಪ್ರೀತಿ ಮಾಡಿದ ಹೆಣ್ಣಿಗೇ... ಪ್ರಾಣಾನೆ ಕೊಡ್ತಾನ್ ಕಣೆ
            ಧೀರ ಕಣೆ.. ನನ್ನ ಶೂರಾ ಕಣೆ   ಧೀರ ಕಣೆ.. ನನ್ನ ಪ್ರಾಣಾ ಕಣೆ
ಗುಂಪು :   ಪ್ರೀತಿಯ ಮಾಡ್ತಾನೆ, ರುಚಿಯ ನೋಡ್ತಾನೆ, ಮುಂದಕ್ಕೆ ಗೊತ್ತೇನೇ?
              ಕೈಯನ್ನು ಕೊಡ್ತಾನೆ ಬೀದಿಲಿ ಬಿಡ್ತಾನೆ ಆಮೇಲೆ ಮುಂದೇನೇ?
              ಲೈಲಾ ಮಜನು ನಾ ಗಂಗಾ ಜಮುನ ನಾ.. (೨)
             ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! 
             ಬಾಯ್ ಫ್ರೆಂಡ್ ಬರ್ತಾನಂತ ಬಾಯ್‍ಬಿಡಬೇಡ..
             ಸುಳ್ಳು ಹೇಳಬೇಡ ಗಾಡಿ ಬಿಡಬೇಡ (೨)
ಹೆಣ್ಣು :   ಕೇಳೇ, ಶ್ರೀಕೃಷ್ಣನ ಹಾಗೇ.. ಸ್ತ್ರೀಲೋಲನಲ್ಲಾ ಕಣೆ
             ಕೇಳೇ, ಶ್ರೀರಾಮನ ಹಾಗೇ... ಒಂದೇ ಹೆಣ್ಣಿನ ಗಂಡು ಕಣೆ
             ಮುತ್ತು ಕಣೆ.. ನನ್ನ ಹವಳಾ ಕಣೆ     ಚಿನ್ನ ಕಣೆ.. ನನ್ನ ರನ್ನಾ ಕಣೆ
ಗುಂಪು :  ಪಕ್ಕಕ್ಕೆ ಬರ್ತಾನೆ ಗಲ್ಲಕ್ಕೆ ಕೊಡ್ತಾನೆ ಮುಂದಕ್ಕೆ ಗೊತ್ತೇನೆ?
              ಜೋಗುಳ ಹಾಡುವೆ ಜೀವಿಸೆ ಅಂತ ಅಮ್ಮನ ಮಾಡ್ತಾನೆ
              ಲೈಲಾ ಮಜನುನಾ ಗಂಗಾ ಜಮುನ ನಾ?
              ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! 
               ಬಾಯ್ ಫ್ರೆಂಡ್ ಬರ್ತಾನಂತ ಬಾಯ್‍ಬಿಡಬೇಡ..
              ರೈಲ್ ಬಿಡಬೇಡ ಚೋಳ್ ಬಿಡಬೇಡ (೨)
              ಲೈಲಾ ಮಜನು ನಾ? ಗಂಗಾ ಜಮುನ ನಾ? (೨)
              ಬಾಯ್ ಫ್ರೆಂಡ್! ಬಾಯ್ ಫ್ರೆಂಡ್! ಬಾಯ್ ಫ್ರೆಂಡ್!

*********************************************************************************

ಚೆಲುವೆ ಒಂದು ಕೇಳ್ತಿನಿ

ಸಂಗೀತ / ಸಾಹಿತ್ಯ : ಹಂಸಲೇಖ 
ಗಾಯಕರು: ಎಸ್.ಪಿ.ಬಿ ಮತ್ತು ಎಸ್.ಜಾನಕಿ


ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತೀಯ?
ನಿನ್ನ ಪ್ರೀತಿ ಮಾಡ್ತಿನಿ ಮನಸು ಹೃದಯ ಕೊಡ್ತೀಯ?
ಮನಸೀನ ಆಸೆ ಹೇಳಲೇನೂ....!?
ಮುದ್ದಾದ ಗೊಂಬೆ ನೀನು! ಮುತ್ತಂತ ಹೆಣ್ಣು ನೀನು! ನಾನಿನಗೆ ಜೊಡಿ ಅಲ್ಲವೆನು? ಅ ಅ ಅ ಅ ಅಹ್
ಚೆಲುವ ಒಂದು ಹೇಳ್ತಿನಿ ಇಲ್ಲ ಅಂದೇ ಕೆಳ್ತೀಯ?
ಹೆಣ್ಣು :  ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲ್ಸ ಮಾಡ್ತೀಯ?   ನಿಜವಾದ ಗಂಡೆ ಆದ್ರೆ ನೀನೂ....
            ಹೆಣ್ಣನ ಗೆಲ್ಲೊ ನೀನು.. ಮನಸನ್ನ ಕದಿಯೋ ನೀನು.. ಆಮೇಲೆ ಪ್ರೀತಿ ಅಲ್ಲವೆನೂ.....?
ಗಂಡು :  ನಿನ್ನ ಪ್ರೀತಿ ಗೆಲ್ಲೋಕೆ ಪ್ರಾಣವನ್ನೆ ಕೊಡ್ತೀನಿ
ಹೆಣ್ಣು :  ಹೌದಾ!.. ಹೈದಾ ..ಪರ್ವಾಗಿಲ್ವೇ
ಗಂಡು :  ನಿನ್ನ ಮನಸು ಕದಿಯೋಕೆ ಏಳು ಜನ್ಮ ಕಾಯ್ತೀನಿ
ಹೆಣ್ಣು :  ಹೌದಾ! ಹಾಗಂತ್ಯ?.. ಪರ್ವಾಗಿಲ್ವೆ
ಗಂಡು :  ಪ್ರೀತಿಗಾಗಿ ಲೋಕವನ್ನೆ ಜಯಿಸಬಲ್ಲೆ ನಾ
ಜಾನಕಿ :  ಹೌದ ವೀರ ಜೋಕುಮಾರ ಮಾತು ನಿಜವೆನಾ? ಆಹಹ
ಗಂಡು :  ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತಿಯ?
ಹೆಣ್ಣು :  ನಿನ್ನ ಪ್ರೀತಿ ಮಾಡ್ತಿನಿ ಹೇಳೊ ಕೆಲಸ ಮಾಡ್ತಿಯ?
ಧೈರ್ಯ ಇಲ್ಲದವರಲ್ಲಿ ಹೇಗೆ ಮನಸು ನೀಡಲೋ?
ಗಂಡು :  ಹೌದಾ.. ಅಯ್ಯೋ! ಮುಂದೇನ್ ಗತಿ!?
ಹೆಣ್ಣು : ಶೌರ್ಯ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ?
ಗಂಡು:  ಆಯ್ಯಯ್ಯೊ.. ಹೌದಾ!? ಇನ್ನೇನ್ ಗತಿ!?
ಹೆಣ್ಣು :  ವೀರನಂಥ ಶೂರನಂಥ ಪ್ರೇಮಿ ನನ್ನವನು!
           ನಿನ್ನ ಹಾಗೆ ಹೇಡಿ ಅಲ್ಲ ನನ್ನ ಮನ್ಮಥನೂ. ಓ ಹೊ..
ಗಂಡು :  ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತೀಯ?
            ನಿನ್ನ ಪ್ರೀತಿ ಮಾಡ್ತೀನಿ ಮನಸು ಹೃದಯ ಕೊಡ್ತೀಯ?
ಹೆಣ್ಣು :   ನಿಜವಾದ ಗಂಡೇ  ಆದ್ರೆ ನೀನೂ
           ಹೆಣ್ಣನ ಗೆಲ್ಲೋ ನೀನು.. ಮನಸನ್ನ ಕದಿಯೋ ನೀನು. ಆಮೆಲೆ ಪ್ರೀತಿ ಅಲ್ಲವೆನೂ?

*********************************************************************************

ಇದು ನನ್ನ ನಿನ್ನ ಪ್ರೇಮಗೀತೆ

ಸಾಹಿತ್ಯ / ಸಂಗೀತ: ಹಂಸಲೇಖ 
ಗಾಯಕರು: ಎಸ್. ಪಿ. ಬಿ, ಎಸ್. ಜಾನಕಿ


ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ
ಇದು ಎಷ್ಟು ಸಾರಿ ಹಾಡಿದರು ಚೆನ್ನ
ಇದು ನಿಲ್ಲಲಾರದೆಂದು  ಕೊನೆಯಾಗಲಾರದೆಂದು
ಈ ಪ್ರೇಮಲೋಕದ ಗೀತೆಯು ||ಪ||  ||ಇದು ನನ್ನ ನಿನ್ನ||
ಹೆಣ್ಣು:  ಕೇಳೊ ಸರದಾರ, ಚುಕ್ಕಿಗಳಂತೆ ಬಾನಿನಲ್ಲಿ ನಾನು ನೀನು
          ಕೇಳೊ ಹಮ್ಮೀರ, ಹಕ್ಕಿಗಳಂತೆ ಬಾಳಿನಲ್ಲಿ ನಾನು ನೀನು
ಗಂಡು : ಏಳು ಬಣ್ಣಗಳ ಕಾಮನಬಿಲ್ಲು  ನಮ್ಮದೇನೆ ಪ್ರೇಮ ತೋಟ ಮಾಡುವ
ಹೆಣ್ಣು:  ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ
          ಈ ನಮ್ಮ ಪ್ರೇಮರಾಗ ಹಾಡುವಾ  ||ಇದು ನನ್ನ ನಿನ್ನ ಪ್ರೇಮಗೀತೆ||
ಗಂಡು: ಕೇಳೇ ಸಿಂಗಾರಿ ಹೂವಲ್ಲಿ ದುಂಬಿ ಸೇರಿಕೊಳ್ಳೊ ಹೊತ್ತು ಇದು..  ಬಾ ಬಾ 
          ಕೇಳೇ ಬಂಗಾರಿ ಪ್ರೇಮಿಗಳಲ್ಲಿ ನೀಡಿಕೊಳ್ಳೋ ಮುತ್ತು ಇದು.. ಬಾ ಬಾ
ಹೆಣ್ಣು: ನನ್ನ ನಿನ್ನ ಸ್ನೇಹ ಬಂಧನವಿದು
         ಮರೆಯಲಾರದು, ಅಳಿಸಲಾಗದು ಎಂದೆಂದು
ಗಂಡು:  ಕೇಳೆನ್ನ ಗೆಳತಿ   ಇನ್ನೊಂದು ಸರತಿ
            ಜನ್ಮವನೆತ್ತಿದರೂ ನಾವೊಂದೇ   ||ಇದು ನನ್ನ ನಿನ್ನ ಪ್ರೇಮಗೀತೆ||

*********************************************************************************

ಮೋಸಗಾರನಾ?

ಸಂಗೀತ / ಸಾಹಿತ್ಯ : ಹಂಸಲೇಖ 
ಗಾಯಕರು: ಎಸ್.ಪಿ.ಬಿ 


ಏಯ್!! ಏಯ್!!!ಹೇಯ್!
ಮೋಸಗಾರನಾ? ಹೃದಯಶೂನ್ಯನಾ?
ನಿನಗೆ ಇನ್ನು ನಾ ಬೇಡವಾದೆನಾ?
ಕೇಳೆನ್ನ ಒಲವೇ, ನೀನನ್ನ ಜೀವವೆ
ನಂಬಿಕೆ ಇಲ್ಲವೇ?, ಶಂಕಿಸ ಬೇಡವೇ
ಹೇಯ್! ಬಾರೆ ಹೃದಯವೆ ಮನಸು ತೆರೆದಿದೆ
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಗೆಳತಿ, ಪ್ರೇಮಕ್ಕೆ ಈ ಗತಿ
ತರುವ ಸಂಗತಿ, ಲೋಕದ ಪದ್ಧತಿ || ಹೇಯ್! ಮೋಸಗಾರನಾ? ||

ಹೇಯ್! ಇರುಳೆಂದು ಹಗಲಲ್ಲ  ಸುಳ್ಳೆಂದು ನಿಜವಲ್ಲ
ಈ ಶಕುನಿ ಜನರೆದುರೂ ಪ್ರೀತಿಗೆ ಬೆಲೆಯಿಲ್ಲ
ಈ ಲೋಕ ಎಂದರೆ ಬರಿ ಪ್ರೀತೀಗೆ ತೊಂದರೆ
ಹೆಜ್ಜೆ ಹಿಂದಿಟ್ಟರೆ, ಗೆಲುವಿಲ್ಲ ಹೊರಗೆ ಬಾರೆ
ಕಣ್ಣೀರಿನ್ನೇಕೆ? ಕಂಗಾಲೇಕೆ? ಬಾ...
ಬಾರೆ ಹೃದಯವೆ, ಮನಸು ತೆರೆದಿದೆ, ಏಯ್
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಒಲವೇ, ನೀನೆನ್ನ ಜೀವವೇ
ನಂಬಿಕೆಯಿಲ್ಲವೇ?, ಶಂಕಿಸಬೇಡವೆ  || ಏಯ್! ಮೋಸಗಾರನಾ? ||

ಹೇಯ್! ಪ್ರೀತಿಯ ಹಾಲಿಗೆ ಹುಳಿಯಿಂಡಬಹುದೀಗ
ಭಯವೇಕೆ ಈ ಹುಳಿಗೆ? ಮೊಸರಾಗದೇನೀಗ
ಉಸಿರಾಟ ನಿಂತರೂ ನಾನಿಲ್ಲಿಂದ ಹೋಗೆನೇ
ಹೆಸರೇನೆ ಬಂದರೂ ನಾನೆಂದೂ ನಿನ್ನ ಬಿಡೆನೇ
ನಿನ್ನಾಮೇಲಾಣೆ ಮೋಸಾ ಕಾಣೆ ಬಾ....ಆಹ್!
ಬಾರೆ ಹೃದಯವೇ ಮನಸು ತೆರೆದಿದೆ..ಏಯ್!
ನಿನ್ನ ಕಾಣದೆ ಹೃದಯ ಬಿರಿದಿದೆ
ಕೇಳೆನ್ನ ಗೆಳತಿ, ಪ್ರೇಮಕ್ಕೆ ಈ ಗತಿ
ತರುವ ಸಂಗತಿ, ಲೋಕದ ಪದ್ದತಿ  || ಏಯ್! ಮೋಸಗಾರನಾ? ||

*********************************************************************************

ನೋಡಮ್ಮ ಹುಡುಗಿ

ಸಾಹಿತ್ಯ / ಸಂಗೀತ: ಹಂಸಲೇಖ 
ಗಾಯಕರು: ಎಸ್. ಪಿ. ಬಿ, ಮತ್ತು ಲತಾ ಹಂಸಲೇಖ 


ನೋಡಮ್ಮ ಹುಡುಗಿ ಕೇಳಮ್ಮಾ ಸರಿಯಾಗಿ
ನೀನಿಲ್ಲಿ ಸೇರೋದು ಓದುವ ಸಲುವಾಗಿ
ಹುಡ್‍ಗೀರ ಕಾಲೇಜು, ನೀನಿನ್ನು ಟೀನೇಜು
ಹುಷಾರಾಗಿರಬೇಕು, ಚೆನ್ನಾಗಿ ಓದ್‍ಬೇಕು
ನಾನ್ ತುಂಬಾ ಕಟ್‍ನಿಟ್ಟು, ತಲೆ ಕೆಟ್ರೆ ಗೆಟ್‍ಔಟು
ನೆಲ ನೋಡ್ಕೋತಾ ಬರ್ಬೇಕು, ನೆಲ ನೋಡ್ಕೋತಾ ಹೋಗ್‍ಬೇಕು
go, understand? Yes sir.
ಹಲ್ಲೊ ಮೈ ಲವ್ಲಿ ಲೇಡಿ, ಹೂ ಆರ್ ಯೂ, ಹೂ ಆರ್ ಯು ||೨||
ಕನ್ನಡ ಬರೋದಿಲ್ವ? ಕಣ್ಣೆರಡೂ ಕಾಣಲ್ವಾ?
ಕನ್ನಡ್ಕದೊಳ್ಗಿಂದ ಕಾಣ್ತಿದೆ ಈ ಅಂದ
ಹೌದೇನೋ ಮನ್ಮಥ, ಬಾಯ್ಮುಚ್ಕೊಂಡ್ ಹೋಗತ್ತಾ
ಹೊಸ ಹುಡ್‍ಗೀ ಅಂತ ಬಿಡ್ತೀನಿ, ನಾಳೆ ಇಂದ ನೋಡ್ಕೋತೀನಿ
understand? Yes boss.
ಸುಂದರ ಯುವಕ, ದುಷ್ಯಂತ ರಾಜ  ಬೇಟೆಯನಾಡಲು ಬಂದ
ಎಲ್ಗೇ ಸಾರ್? ಆಂ..ಕಾಡ್ಗೆ ಸಾರ್
ಬೇಟೆಯ ಮರೆತು ಕಾಡಿನ ಸೊಗಸು ನೋಡುತ ಸವಿಯುತ ನಿಂದ
ಯಾಕೆ ಸಾರ್? ಏಯ್..ಸುಮ್ನೇ ಸಾರ್
ಕಾಡಿನ ನಡುವೆ, ಹುಣ್ಣಿಮೆಯಂಥ ಸುಂದರ ಹುಡುಗಿಯ ಕಂಡ
ಹೌದಾ ಸಾರ್? ಹೂಂ ಹೂಂ ಹೂಂ ಹೌದು ಸಾರ್
ಚೆಲುವೆಯ ನೋಡಿ, ಹತ್ತಿರ ಓಡಿ  ಹುಡುಗಿಯ ಕೈ ಹಿಡುಕೊಂಡ
ಆಮೇಲ್ ಸಾರ್? ಹೇಳಿ ಸಾರ್?
ಹತ್ತಿರ ಕರೆಯುತ್ತಾ, ತೋಳಿಂದ ಬಳಸುತ್ತ,  ಕಣ್ಣಲ್ಲೇ ನೋಡುತ್ತ, ಪ್ರೀತಿಯ ಮಾಡುತ್ತಾ
'ಯಾರೇ ನೀನು ಚೆಲುವೆ?', ಅಂದ  'ನಿನ್ನ ಅಂದ ಚೆಂದ', ಅಂದ
ಹಣೆಯಲ್ಲಿ ಬೆವರುತ್ತಾ  ತನುವೆಲ್ಲ ನಡುಗುತ್ತಾ  ನೆಲವನ್ನೇ ನೋಡುತ್ತಾ
ನುಡಿಗಳು ನಾಚುತ್ತಾ  ನಾನು ಇನ್ನು ನಿನಗೆ ಸ್ವಂತ  ಹೆಸರು ಶಕುಂತಲ ಅಂತ
ಬಂದ್ಲು ಸಾರ್, ಓಹೋ  
ಬಂದ್ಲು ಸಾರ್, ಓಹೋ    ಶಕುಂತಲ, ಓಹೋ
ಬಂದ್ಲು ಸಾರ್, ಓಹೋ    
ನೀನಾ ಶಕುಂತಲ?            ಅಲ್ಲಾ ನಾನ್ ಶಶಿಕಲ
ಯಾರನ್ನ ನೋಡ್ಬೇಕು?      ನಿಮ್ಮನ್ನೇ ನೋಡ್ಬೇಕು
ಏನ್ ಆಗ್ಬೇಕಾಗಿತ್ತು?         ಅಡ್ಮಿಟ್ ಆಗ್ಬೇಕಿತ್ತು
ಸರಿ ಈ ಕಡೆ ಕಳ್ಸಿ ಸಾರ್
ಶಟ್‍ಅಪ್ ಅಂದ್ರೆ ಬಾಯ್ಮುಚ್ಚು ಸಾರ್
ಹೋಗಮ್ಮ ಹುಡುಗಿ ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ಅಲ್ಲೆ ಹಿಂದೆ ಅಡ್ಜಸ್ಟ್ ಮಾಡ್ಕೋ
ನಿನಗ್ಯಾವುದ್ ಇಷ್ಟವೋ, ಆ ಬೆಂಚೆ ಸೆಲೆಕ್ಟ್ ಮಾಡ್ಕೋ
ಈ ಬೆಂಚೇ ಸೆಲೆಕ್ಟ್ ಮಾಡ್ಕೋ
ಬಂದ್‍ಕೂಡ್ಲೇ ಮೀಟಿಂಗಾ?  ಕಂಡ್‍ಕೂಡ್ಲೇ ಕಿಸ್ಸಿಂಗಾ?   
ಲಕ್ಷ್ಮೀ ನೀನ್ ಸ್ವಲ್ಪ್ ಒತ್ಕೋ   ಶಶಿ ನೀನ್ ಇಲ್ ಕೂತ್ಕೋ
ಪೀಟರ್ ನೀನ್ ಕೈ ಎತ್ಕೋ    ರೋಸಿ ನೀನ್ ಸೆರಗ್ ಮುಚ್ಕೋ
ಪೋಲಿ ಆಟವೆಲ್ಲ ಬಿಡಬೇಕು    ಬರಿ ಪಾಠವನ್ನು ಕಲಿಬೇಕು
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ ಲ್ಲಲ ಲಾಲಾಲ ಲಾ ಲಾ ಲಾ ಲಾಲ
ಲ್ಲಲ್ಲಲ ಲಾಲಾಲ ಲಾ ಲಾ ಲಾ ಲಾಲ ಲ

*********************************************************************************

ಪ್ರೇಮಲೋಕದಿಂದ ತಂದ

ಸಾಹಿತ್ಯ / ಸಂಗೀತ: ಹಂಸಲೇಖ 
ಗಾಯಕರು: ಕೆ. ಜೆ. ಯೇಸುದಾಸ್, ಎಸ್. ಜಾನಕಿ, ರವಿಚಂದ್ರನ್ 


ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ 
ಪ್ರೀತಿ ಹಂಚೋಣ  ಆನಂದ ಪಡೆಯೋಣ
ಬನ್ನಿ ಪ್ರೇಮದ ಹಸ್ತ್ರ ಹೇಳೋಣ
ಜೀವನವೆಂದರೆ ಪ್ರೀತಿಯೆನ್ನೋಣ  ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||
ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಗಾಳಿ, ನೀರು , ಹೂವು, ಹಣ್ಣು, ಇರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಬರುವುದು ಹೇಗೆ? ಇರುವುದು ಹೇಗೆ?
ತಿಳಿದಿದೆ ನಮಗೆ, ಆದರೆ ಕೊನೆಗೆ
ಹೋಗುವ ಘಳಿಗೆ ತಿಳಿಯದು ನಮಗೆ  ಒಗಟಿದು ಎಲ್ಲರಿಗೆ
ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ
ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ರಾಗ ತಾಳ, ಹಾವ ಭಾವ ಸೇರದೆ ಹೋದರೇ
ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ
ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ
ಬದುಕಿನ ಜೊತೆಗೆ ಪ್ರೆಮದ ಬೆಸುಗೆ
ಇರುವುದು ಹೀಗೆ ಒಲವಿನ ತೆರೆಗೆ
ಪ್ರೀತಿಯ ಸವಿಗೆ ತೋರುವ ನಮಗೆ  ಪ್ರೇಮವು ವರತಾನೆ?
ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ  || ಪ್ರೇಮಲೋಕದಿಂದ ||
ಜೀವನವೆಂದರೆ ಪ್ರೀತಿಯೆನ್ನೋಣ  ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||

*********************************************************************************

ಯಾರಿವನೂ, ಈ ಮನ್ಮಥನೂ? 

ಸಂಗೀತ / ಸಾಹಿತ್ಯ : ಹಂಸಲೇಖ 
ಗಾಯಕರು: ಎಸ್.ಜಾನಕಿ, ರವಿಚಂದ್ರನ್ 


ಹೆಣ್ಣು : ಯಾರಿವನೂ, ಈ ಮನ್ಮಥನೂ? ..|| ವೀರರಲ್ಲಿ ವೀರ
ಗುಂಪು : ವೀರ ವೀರ
ಹೆಣ್ಣು:  ಬಂದ ನಮ್ಮ ಶೂರ     ಗುಂಪು:  ಶೂರ ಶೂರ
ಹೆಣ್ಣು:  ಹಮ್ಮೀರ...  ಯಾರಿವನು, ಹೇ ಯಾರಿವನು
          ಯಾರಿವನೂ.... ಈ ಮನ್ಮಥನೂ?
ಹೆಣ್ಣು:  ಸಿಂಹದ ಶಕ್ತಿಯಿದೆ ಹೇ ಯಾರಿದು,
         ಮಿಂಚಿನ ನೋಟವಿದೆ ಹೇ ಯಾರಿದು
         ಸಿಂಹದ ಶಕ್ತಿಯಿದೆ ಹೇ ಯಾರಿದು,
         ಮಿಂಚಿನ ನೋಟವಿದೆ ಹೇ ಯಾರಿದು
         ಹಾವಿನ ರೋಷದ, ಗುಡುಗಿನ ವೇಷದ ಸಾರಥಿ ಯಾರಿವನು
         ಚೋರರ ಪಾಲಿನ ಚಿರತೆಯ ಸೇಡಿನ ಶತ್ರುವು ಯಾರಿವನು
         ಹಾವಿನ ರೋಷದ, ಗುಡುಗಿನ ವೇಷದ ಸಾರಥಿ ಯಾರಿವನು
        ಚೋರರ ಪಾಲಿನ ಚಿರತೆಯ ಸೇಡಿನ ಶತ್ರುವು ಯಾರಿವನು....  ವೀರರಲ್ಲಿ ವೀರ
ಗುಂಪು: ವೀರ ವೀರ            ಹೆಣ್ಣು: ಬಂದನಮ್ಮ ಶೂರ
ಗುಂಪು:  ಶೂರ ಶೂರ          ಹೆಣ್ಣು: ಹಮ್ಮೀರ
ಹೆಣ್ಣು: ಬೆಂಕಿಯ ಬಿರುಸಿದೆ ಹೇ ಯಾರಿದು  ಗಾಳಿಯ ವೇಗವಿದೆ ಹೇ ಯಾರಿದು
         ಬೆಂಕಿಯ ಬಿರುಸಿದೆ ಹೇ ಯಾರಿದು  ಗಾಳಿಯ ವೇಗವಿದೆ ಹೇ ಯಾರಿದು
         ಮೋಹಕ ರೂಪದ ಸುಂದರ ದೇಹದ ಸ್ನೇಹಿತನ್ಯಾರಿವನು?
         ಹೆಣ್ಣಿನ ಹೃದಯದ ನಾಡಿಯ ಮಿಡಿಸುವ ಪ್ರೇಮಿಯು ಯಾರಿವನು?
         ಮೋಹಕ ರೂಪದ ಸುಂದರ ದೇಹದ ಸ್ನೇಹಿತನ್ಯಾರಿವನು?
         ಹೆಣ್ಣಿನ ಹೃದಯದ ನಾಡಿಯ ಮಿಡಿಸುವ ಪ್ರೇಮಿಯು ಯಾರಿವನು?... ವೀರರಲ್ಲಿ ವೀರ
ಗುಂಪು: ವೀರ ವೀರ              ಹೆಣ್ಣು: ಬಂದ ನಮ್ಮ ಶೂರ
ಗುಂಪು:  ಶೂರ ಶೂರ           ಹೆಣ್ಣು: ಹಮ್ಮೀರ
ಹೆಣ್ಣು: ಯಾರಿವನು, ಹೇಯ್ ಯಾರಿವನು

*********************************************************************************

 ಏ ಗಂಗೂ

ಸಂಗೀತ / ಸಾಹಿತ್ಯ : ಹಂಸಲೇಖ 
ಗಾಯಕರು: ಎಸ.ಪಿ.ಬಿ. ಎಸ್.ಜಾನಕಿ, ರವಿಚಂದ್ರನ್ 


ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೋ

ಏ ರಂಗು ಇದೇನು ಶೋಕಿ ಬಂತೇ ನಿಂಗು
ಏ ರಂಗು ಇದೇನು ಶೋಕಿ ಬಂತೇ ನಿಂಗು
ಸಂತೆಗ್ ಹೋಗಬೇಕೇ  ನೀ ಸಂತೆ ತರಬೇಕೇ
ಸಂತೆಗ್ ಹೋಗಬೇಕೇ  ನೀ ಸಂತೆ ತರಬೇಕೇ
ಪ್ಯಾಟೇ ಸುತ್ತಬೇಕೆ ನೀ ಕ್ವಾಟೆ ಹತ್ತಬೇಕೆ 

ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
ಏ ರಂಗು ಇದೇನು ಶೋಕಿ ಬಂತೇ ನಿಂಗು 

ಇದೇ ನೋಡು ಕ್ಲಚ್ಚು, ಇದೇ ಲೈಟು ಸ್ವಿಚ್ಚು 
ಇದೇ ಸ್ಟಾರ್ಟು ಸ್ವಿಚ್ಚು ಇದೇ ಒಳಗೆ ಚುಚ್ಚು 
ಮ್ಯಾಲೆ ಹತ್ತಿ ಕೂರು ಇರೋದ್ ನಾಲ್ಕ್ ಗ್ಯಾರೂ 
ಮೊದಲು ಮೇಲೆ ಎತ್ತು ಆಮೇಲೆ ಕೆಳಗೆ ಒತ್ತು  
ಕೋಡು ಆಕ್ಸಿಲೇಟರ್ ಈಗ 
ಅಯ್ಯೋ ಮಜಾ ಐತಿ, ಗಾಡಿ ಓಟ ಐತೇ  
ಸುಮ್ನೇ ಹಿಡಿಯಬೇಡಾ ಮಜಾ ಕೆಡಿಸಬೇಡಾ 
ಮುತ್ತ ಗಿತ್ತು ಬೇಡಾ ತಕರಾರ್ ಮಾಡಬೇಡಾ 
ಡ್ಯಾಶ್ ಆಯ್ತು ನೋಡು ಈಗ... 

ಏ ರಂಗು ಇದೇನು ಶೋಕಿ ಬಂತೇ ನಿಂಗು 
ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೋ 
ಮೋಟಾರ್ ಬೈಕ್ ನಾನು ಈ ಬ್ರೇಕು ನಡೆಯೇ ನೀನು

ನಿಜ ಹೇಳಲೇನು ನೀ ನಡೆಸಿದಂತೆ ನಾನು
ಸರಿ ಏನು ನನ್ನ ರೈಡು
ರೈಡು ಅಂದರೇ ಲೈಫು ಲೈಫಿಗೆ ನೀನೇ ವೈಫು
ಕೇಳೇ ನನ್ನ ವೈಫು ನೀನೇ ನನ್ನ ಲೈಫು ಸರಿಯೇನೆ ನನ್ನ ಲವ್ವರ್
ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
ಮೇಲೆ ಹತ್ತಬೇಕೋ ಕೈಲಿ ಹಿಡಿಯಬೇಕೋ
ಜೋಲಿ ಹೊಡೆಯದಂಗೆ ಸವಾರಿ ಮಾಡಬೇಕೋ

ಏ ರಂಗು ಇದೇನು ಶೋಕಿ ಬಂತೇ ನಿಂಗು
ಏ ರಂಗು ಇದೇನು ಶೋಕಿ ಬಂತೇ ನಿಂಗು
ಸಂತೆಗ್ ಹೋಗಬೇಕೇ  ನೀ ಸಂತೆ ತರಬೇಕೇ
ಸಂತೆಗ್ ಹೋಗಬೇಕೇ  ನೀ ಸಂತೆ ತರಬೇಕೇ
ಪ್ಯಾಟೇ ಸುತ್ತಬೇಕೆ ನೀ ಕ್ವಾಟೆ ಹತ್ತಬೇಕೆ 
ಏ ಗಂಗೂ ಈ ಬೈಕು ಕಲಿಸಿಕೊಡು ನಂಗೂ
ಏ ರಂಗು ಇದೇನು ಶೋಕಿ ಬಂತೇ ನಿಂಗು 
*********************************************************************************

No comments:

Post a Comment